"ನೀವು ಕೆಲಸ ಪ್ರಾರಂಭಿಸುವ ಮೊದಲು ಭಯಾನಕ ಕ್ಷಣ ಯಾವಾಗಲೂ ಇರುತ್ತದೆ. ಅದರ ನಂತರ, ವಿಷಯಗಳು ಉತ್ತಮಗೊಳ್ಳಬಹುದು”
-ಸ್ಟೀಫನ್ ಕಿಂಗ್
ಬರವಣಿಗೆ ಒಂದು ಸ್ನಾಯು ಇದ್ದಂತೆ. ಅದನ್ನು ಬಲಗೊಳಿಸಲು ವ್ಯಾಯಾಮದ ಅಗತ್ಯವಿದೆ. ನೀವು ಸ್ವಲ್ಪ ಶಕ್ತಿಯನ್ನು ಪಡೆಯುತ್ತೀರಿ, ಆದರೆ ನೀವು ಬರೆಯುವುದನ್ನು ನಿಲ್ಲಿಸಿದರೆ ನಿಮ್ಮ ಬರವಣಿಗೆಯ ಆಸಕ್ತಿಯು ಬೇಗನೆ ಕಣ್ಮರೆಯಾಗುತ್ತದೆ. ಆದ್ದರಿಂದ, ಇದು ನಿಮ್ಮ ಬರವಣಿಗೆಯ ಫ್ರಿಕ್ವೆನ್ಸಿಯನ್ನು ಹೆಚ್ಚಿಸುವ ಸಮಯವಾಗಿದೆ.
ಸ್ಟೋರಿಮಿರರ್, ನಾನ್ ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ನ 3ನೇ ಆವೃತ್ತಿಯನ್ನು ಘೋಷಿಸಲು ಹರ್ಷಪಡುತ್ತದೆ . ನಮ್ಮ ಈ ಸವಾಲು ನಿಮ್ಮೊಳಗಿನ ಸೃಜನಶೀಲ ಬರಹಗಾರನನ್ನು ಜಾಗೃತಗೊಳಿಸುವ ಗುರಿ ಹೊಂದಿದೆ.
ನಾನ್-ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ ವಿಭಿನ್ನವಾಗಿದೆ ಮತ್ತು ಈ ಬಾರಿ ಈ ಸ್ಪರ್ಧೆಯು ಮೂರು ವಿಭಿನ್ನ ಹಂತಗಳೊಂದಿಗೆ ದೊಡ್ಡದಾಗಿದೆ.
ನೀವು ಒಂದು, ಎರಡು ಅಥವಾ ಎಲ್ಲಾ ಮೂರು ಹಂತಗಳಲ್ಲೂ ಭಾಗವಹಿಸಬಹುದು.
ಎರಡು ಅಥವಾ ಹೆಚ್ಚಿನ ಹಂತಗಳ ಸವಾಲಿನಲ್ಲಿ ಭಾಗವಹಿಸುವುದು ಮತ್ತು ಪೂರ್ಣಗೊಳಿಸುವುದು, ನಿಮ್ಮನ್ನು ನಮ್ಮ ಮೆಗಾ ಬಹುಮಾನಕ್ಕೆ ಅರ್ಹರನ್ನಾಗಿ ಮಾಡುತ್ತದೆ.
ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಆರಂಭಿಕ (Beginner) - http://sm-s.in/TbGvSWf
ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಮಧ್ಯಂತರ (Intermediate) - http://sm-s.in/njoMHwF
ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಅಡ್ವಾನ್ಸ್ (Advance) - http://sm-s.in/zRS6IM7
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ನಾವು ನಿಮಗೆ 30 ದಿನಗಳವರೆಗೆ 30 ವಿಭಿನ್ನ ಪ್ರಾಂಪ್ಟ್ಗಳನ್ನು ಒದಗಿಸುತ್ತಿದ್ದೇವೆ. ಪ್ರತಿಯೊಂದು ಹಂತವು ವಿಭಿನ್ನ ಪ್ರಾಂಪ್ಟ್ಗಳನ್ನು ಹೊಂದಿದೆ. ನೀವು ನೀಡಲಾಗಿರುವ ಪ್ರಾಂಪ್ಟ್ ಅನ್ನು ಬಳಸಿಕೊಳ್ಳಬೇಕು. ಹಾಗೂ ಪ್ರಾಂಪ್ಟ್ ಅನ್ನು ಕೇಂದ್ರೀಕರಿಸುವ ಕಥೆಯನ್ನು ರಚಿಸಬೇಕಾಗುತ್ತದೆ. ಈ ಥೀಮ್, ದಿನದ ಪ್ರಾಂಪ್ಟ್ ಬಗ್ಗೆ ಇರುವುದರಿಂದ, ನಿಮ್ಮ ಕಥೆಯನ್ನು ಯಾವುದೇ ಶೈಲಿ, ಯಾವುದೇ ಪ್ರಬೇಧ, ಅಥವಾ ನೀವು ಇಷ್ಟಪಡುವ ಯಾವುದೇ ಪ್ರಕಾರದಲ್ಲಿ ರಚಿಸಬಹುದು. ಆರಂಭಿಕ ಹಂತಕ್ಕೆ, ನೀಡಲಾಗಿರುವ ಪ್ರಾಂಪ್ಟ್ಗಳು ಪದಗಳಲ್ಲಿವೆ. ಆದ್ದರಿಂದ, ನೀಡಿರುವ ಪ್ರಾಂಪ್ಟ್ನಲ್ಲಿ ನಿಮ್ಮ ಸ್ವಂತ ಕಥೆಯನ್ನು ರಚಿಸಿ.
ನೀವು ಏನೇ ಮಾಡಿದರೂ ಬರೆಯುವುದನ್ನು ನಿಲ್ಲಿಸಬೇಡಿ.
ಆರಂಭಿಕ ಹಂತದ ಪ್ರಾಂಪ್ಟ್ಸ್ :
Prompts for Beginners Level -
ಭಾಷೆ : ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ಮರಾಠಿ, ಓಡಿಯಾ, ಬೆಂಗಾಲಿ, ತಮಿಳು, ತೆಲುಗು, ಮಲೆಯಾಳಂ
ವಿಭಾಗ : ಕಥೆ
ನಿಯಮಗಳು :
ಎಲ್ಲಾ ವಿಷಯಗಳ ಮೇಲಿನ ಎಲ್ಲಾ ಸಲ್ಲಿಕೆಗಳು ಮತ್ತು ಅವುಗಳ ಸರಾಸರಿ ಎಡಿಟೋರಿಯಲ್ ಸ್ಕೋರ್ ಅನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
ನೀಡಲಾಗಿರುವ ಪ್ರಾಂಪ್ಟಗಳಿಗೆ ಮಾತ್ರವೇ ನೀವು ಬರೆಯಬೇಕು.
ಸ್ಪರ್ಧಿಗಳು ತಮ್ಮ ಸ್ವಂತ (ಸ್ವರಾಚಿತ ) ವಿಷಯ/ಕಥೆಯನ್ನು ಸಲ್ಲಿಸಬೇಕು.
ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯ ಮೂಲಕ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಮಾಡಿದ ಯಾವುದೇ ಸಲ್ಲಿಕೆ ಪ್ರವೇಶಕ್ಕೆ ಅರ್ಹವಾಗಿರುವುದಿಲ್ಲ.
ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.
ನಿಮ್ಮ ಭಾಗವಹಿಸುವಿಕೆಯ ಪ್ರಮಾಣಪತ್ರಗಳು ನಿಮ್ಮ ಪ್ರೊಫೈಲ್ನಲ್ಲಿ ಪ್ರಮಾಣಪತ್ರ ವಿಭಾಗದ ಅಡಿಯಲ್ಲಿ ಲಭ್ಯವಿರುತ್ತದೆ.
ಬಹುಮಾನಗಳು :
ಎಲ್ಲ ಸ್ಪರ್ಧಿಗಳಿಗೂ ''ಭಾಗವಹಿಸುವಿಕೆ ಪ್ರಮಾಣಪತ್ರ''ವನ್ನು ನೀಡಲಾಗುತ್ತದೆ.
ಎಲ್ಲ ಭಾಷೆಯ ಇ-ಬುಕ್ ಸಂಕಲನದಲ್ಲಿ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗುವುದು.
ಎಲ್ಲಾ ವಿಜೇತರಿಗೆ ವಿಜೇತ ಪ್ರಮಾಣಪತ್ರಗಳನ್ನು ನೀಡಲಾಗುವುದು.
ಮೆಗಾ ಬಹುಮಾನಗಳು :
ನೀವು ಏಳಕ್ಕಿಂತ ಹೆಚ್ಚಿನ ಎಡಿಟೋರಿಯಲ್ ಸರಾಸರಿ ಸ್ಕೋರಿನೊಂದಿಗೆ, ಮೂರರಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಹಂತಗಳನ್ನು ಪೂರ್ಣಗೊಳಿಸಿದರೆ, ಆಗ ನೀವು ವಿಜೇತ ಟ್ರೋಫಿಯ ಜೊತೆ StoryMirror ನಿಂದ ಉಚಿತ ಪುಸ್ತಕ ಪ್ರಕಾಶನದ ಒಪ್ಪಂದಕ್ಕೆ ಅರ್ಹರಾಗುತ್ತೀರಿ.
ಸಲ್ಲಿಕೆಯ ಅವಧಿ : 2021ರ ನವೆಂಬರ್ 1ರಿಂದ ನವೆಂಬರ್ 30.
ಫಲಿತಾಂಶ : 2022ರ ಜನೆವರಿ 20.
ಫೀಡಬ್ಯಾಕ್ ಮತ್ತು ಪ್ರಶ್ನೆಗಳಿಗಾಗಿ :
ಇ -ಮೇಲ್ : neha@storymirror.com
ದೂರವಾಣಿ ಸಂಖ್ಯೆ : 022-49240082 / 9372458287 (ಸೋಮವಾರದಿಂದ ಶನಿವಾರದವರೆಗೆ 10am - 7pm)
ವಾಟ್ಸಾಪ್ : +91 84528 04735
ಸೂಚನೆ : ನಾನ್ -ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ ಅನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿದೆ. ನೀವು ಒಂದು, ಎರಡು ಅಥವಾ ಎಲ್ಲಾ ಮೂರು ಹಂತಗಳಲ್ಲೂ ಭಾಗವಹಿಸಬಹುದು.
ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಆರಂಭಿಕ (Beginner) - http://sm-s.in/TbGvSWf
ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಮಧ್ಯಂತರ (Intermediate) - http://sm-s.in/njoMHwF
ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಅಡ್ವಾನ್ಸ್ (Advance) - http://sm-s.in/zRS6IM7