ಬಂಗಾರಿಗೇಕೆ ಬಂಗಾರ
ಬಂಗಾರಿಗೇಕೆ ಬಂಗಾರ
ಬಂಗಾರ ಕೊಡಿಸಿ
ಬಂಗಾರ ಕೊಡಿಸಿ
ಎನ್ನುತ್ತಿದ್ದ ನನ್ನ ಮಾತಿಗೆ
ಒಂದು ದಿನವೂ ಉತ್ತರ
ಕೊಡದಿರೋ ನಮ್ಮೊರು
ಒಂದಿನ ಅದೇನು ಪ್ರೀತಿ ಉಕ್ಕಿತ್ತೋ ನಾಕಾಣೆ
ಕೇಳೇ ನನ್ನ ಸಿಂಗಾರಿ
ನೀನೇ ನನ್ನ ಬಂಗಾರಿ
ಬಂಗಾರಿಗೇಕೆ ಬಂಗಾರ
ನೀನೇ ನನ್ನ ಭದ್ರಾವತಿ ಬಂಗಾರ
ನೀನೇ ನನ್ನ 24 ಕ್ಯಾರೆಟ್ ಬಂಗಾರ
ಎಂದುಬಿಡುವುದೇ?