ದೇವರ ಪ್ರತಿರೂಪ
ದೇವರ ಪ್ರತಿರೂಪ
ಧರೆಯಲ್ಲಿನ ದೇವರ ಸ್ವರೂಪ ಮುದ್ದು ಚಿನ್ನರು
ಆಟ ತುಂಟಾಟ ಹುಡುಗಾಟವೇ ಸುಮಾರು
ನಗುವಲ್ಲಿಯೇ ಮೋಡಿ ಮಾಡುವ ಜಾದುಗಾರ
ಎಲ್ಲರ ಆನಂದದ ಕಡಲಲ್ಲಿ ತೇಲುವಂತೆ ಮಾಡುವ ಸೊಗಸುಗಾರ
ಅಮ್ಮನ ಅಕ್ಕರೆ ಎಂಬ ಸಕ್ಕರೆ ಪ್ರೀತಿ ಮಗುವಿಗೆ ಆಸರೆ
ಅಪ್ಪ ಅಜ್ಜಿ ತಂದ ಉಡುಗರೆಯ ಕಂಡು ಮೊಗದಲ್ಲಿ ಹರ್ಷಧಾರೆ
ಇದ ನೋಡುವ ಕಣ್ಣುಗಳಿಗೆ ಹಬ್ಬದ ರಸಧಾರೆ
ನಾಚಿತು ಮನಸೋತ್ತಿತು ಮಗುವಿನ ನಗೆಗೆ ಆಗಸದ ದ್ರುವತಾರೆ
ಪುಟ್ಟ ಪುಟ್ಟ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು
ದ್ವೇಷ ಅಸೂಯೆ ಬಲುದೂರ ಬಿಟ್ಟು
ಪ್ರೀತಿಯೆಂಬ ಹೂಗಿಡವ ಮನದಲ್ಲಿ ನೆಟ್ಟು
ಇದುವೇ ಆ ಮುಗ್ಧ ಮಗುವಿನ ಯಶಸ್ಸಿನ ಗುಟ್ಟು
ಕಂದಾ ನೀನೆಂದು ಹತ್ತಿರ ನನ್ನ ಹತ್ತಿರ
ನಿನ್ನೊಳಗಿನ ದೇವರ ಸ್ವರೂಪದ ಸದಾ ಹೊಳೆಯೋ ದಿನಕರ
ಮುಗ್ಧತೆ ಸಹನೆಯ ಪ್ರತ್ಯುತ್ತರ
ಜಗವೇ ನಿನ್ನ ಕಂಡು ಬೆರಗಾಗಲಿ ಮುದ್ದು ಬಂಗಾರ