Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prabhakar Tamragouri

Romance Classics

3.5  

Prabhakar Tamragouri

Romance Classics

ಜೀವ ತುಂಬಬೇಕು

ಜೀವ ತುಂಬಬೇಕು

1 min
113


ಹೊರಗೆ ಬಟಾ ಬಯಲು 

ಒಳಗೆ ಚಳಿಯ ಕನಲಿತ್ತು 

ಕದಡಿದ ಮನಕ್ಕಂಜದೇ

ಬಾನಂಗಳದ ನಕ್ಷತ್ರಗಳೆಡೆಗೆ 

ಬೊಟ್ಟು ತೋರಿಸಿ 

ಲೆಕ್ಕ ಹೇಳಿದವಳು ನೀನು 

ತಾರೆಗಳ ಊರಿನಿಂದ ಹೊರಟ ಚೆಂಬೆಳಕು 

ನಿನ್ನ ಕೋಣೆಯ ತನಕ ತಲುಪಲಿಲ್ಲ 

ಬೆಣ್ಣೆಯಂಥಾ ಕೈತುಂಬಾ 

ಮದರಂಗಿಯ ಚುಕ್ಕೆ ಇಟ್ಟು

ಬೇರು ಬಿಡುವ ಬಣ್ಣದ ಕೆಳಗೆ 

ನಾಳೆಗಳ ಗಂಟು ಕಟ್ಟಿದವಳು 


ಹರಡಿಕೊಂಡ ರಾಶಿ ರಾಶಿ ಕನಸುಗಳು 

ನಿನ್ನ ಬೆರಳ ತುದಿಯಲ್ಲಿ ಜೀವ ತಿಂಬಲಿಲ್ಲ 

ಸುಕ್ಕುಗಟ್ಟಿದ ಹಾಳೆಯ ತುಂಬಾ 

ಊರ ತೇರಿನ ಚಿತ್ರ ಬಿಡಿಸಿ 

ರಂಗು ರಂಗಿನ ಬಣ್ಣ ತುಂಬಿ 

ನನ್ನ ಕಣ್ಣುಗಳಲ್ಲಿ 

ಹಬ್ಬದ ಭಾಷ್ಯ ಬರೆದವಳು 

ನಿನ್ನ ಕಣ್ಣಂಚಿನಲ್ಲಿ ಹೊರಟ 

ನೋವುಗಳ ಮೆರವಣಿಗೆಗೆ 

ಮನಸ್ಸಿನ ಸ್ವಾಗತವಿರಲಿಲ್ಲ 

ಹಿತ್ತಲ ಬಿದಿರ ಕಡ್ಡಿಗಳನ್ನು ಪೋಣಿಸಿ 

ಆಕಾಶಬುಟ್ಟಿ ಕಟ್ಟಿ ನನ್ನ ಕಣ್ಣಲ್ಲಿ 

ದೀಪಗಳ ತೊಟ್ಟಿಲು ಕಟ್ಟಿದವಳು ನೀನು 


ಹೊಸ ಮಳೆ ಬಿದ್ದ ನೆಲದಲ್ಲಿ 

ಅವಿತಿದ್ದ ಹಳೆಯ ಗರಿಕೆಯ ಬುಡದಲ್ಲಿ 

ಜೀವರಸದ ಆಸೆ ಕಂಡವಳು 

ನೀನು ಹರಿಸಿದ 

ಬೆವರ ಹನಿಗಳು ಜೀವಸೆಲೆಯಾಗಲಿಲ್ಲ 

ಹರಿಯುವ ನದಿಯ ತಟದಲ್ಲಿ 

ಅರಳಿದ ಗುಲಾಬಿ ನೀನು 

ಹೂವಿನೆಸಳಿನ ಗಂಧ ನೀನು 

ನಿನ್ನ ಅಂತರಂಗದ ಕನಸುಗಳಿಗೆ 

ಅಳಿಸಿ ಹೋದ ಚಿತ್ರಗಳಿಗೆಲ್ಲಾ 

ನಾನು ಜೀವ ತುಂಬಬೇಕು .


Rate this content
Log in

Similar kannada poem from Romance