Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Romance Classics Fantasy

5  

JAISHREE HALLUR

Romance Classics Fantasy

ಜೋಳಿಗೆ ತುಂಬಾ ಹೋಳಿಗೆ?

ಜೋಳಿಗೆ ತುಂಬಾ ಹೋಳಿಗೆ?

1 min
473


ಜಗಲಿಯಲ್ಲಿ ಎಲೆ ಹಾಕಿಟ್ಟು, ತುಪ್ಪ

ತರಲೆಂದು ಒಳಹೋದವಳನ್ನೇ

ನೋಡುತ್ತಾ ಕುಳಿತನಲ್ಲಾ ಜಂಗಮಾ!


ಬಗಲಿಗೇರಿಸಿದ್ದ ಜೋಳಿಗೆಯಲ್ಲಿ

ಬಚ್ಚಿಟ್ಟ ರೊಟ್ಟಿ ತನ್ನ ಇರವನ್ನೇ

ಮರೆಸಿತ್ತು, ಎಲೆಯೊಳಗಿನ ಹೋಳಿಗೆ.


ಹಸಿದ ಜಂಗಮಗೆ ಉಣಬಡಿಸಿದಳು

ತುಸುವೆ ತುಪ್ಪವ ಸುರಿದು ಹೋಳಿಗೆಗೆ

ಬಾಯಲ್ಲಿ ನೀರೂರಿಸಿತ್ತು ಭಕ್ಷ್ಯಗಳೆಲ್ಲ.


ನಾರಿಯ ಕೈಬಳೆಯ ನಿನಾದಕ್ಕೆ ಮಣಿದು

ದಾರಿ ಮರೆತು ಬಂದವಗೆ ಮೃಷ್ಟಾನ್ನವಿತ್ತು

ನೀರುಣಿಸಿ ತಣಿಸಿ ಅಥಿತಿ ಸತ್ಕಾರವಿತ್ತಳು.


ನಗುಮೊಗದ ಸೌಮ್ಯ ಸನ್ನಾಸಿಯ ಕಂಡು

ಮೋಹಗೊಂಡಳು ನೀರೆ ಬರಿದೆ ದಿಟ್ಟಿಸಿ,

ಆಹುತಿಯಾದವು ನೋಟಗಳು ಪದೆ ಪದೆ.


ಊರುಕೇರಿಯನರಿಯೆ, ನೆಂಟರಿಲ್ಲೆನಗೆ

ಅಲೆಮಾರಿ ನಾನಮ್ಮೀ, ಬಲಿಯಾಗದಿರು

ಒಲವಬಲೆಯಲಿ ಹಲವು ರಗಳೆಯುಂಟು


ಎಲವೋ ಜಂಗಮಾ, ಕಂಗಳಿವು ಮಿಂದು

ಸೋತಿವೆಯೀಗ, ಹೃದಯ ಹಾಡುತಿದೆ

ನೀನೊಟ್ಟಿಗಿರುವೆಯಾದರೆ ಊರೇಕೆ?


ಒಲವಕಲೆ ಹೇಳಿಕೊಡುವವರಿಲ್ಲಿಲ್ಲ

ತಂತಾನೆ ತನನವಾಡಿಸುವುದು ನಲ್ಲಾ

ನೋಟ ಸಾಕಿತ್ತು ಹೃದಯ ಮೀಟಲು.


ಅಬಲೆ ನೀರೆ, ನಾ ಬಲ್ಲೆ ನಿನ್ನ ಇಂಗಿತವ

ಪ್ರಬಲವಾಗುವ ಮುನ್ನ ಆ ನಿನ್ನ ಒಲವು

ಅಗಲಿಹೋಗುವೆ ನಾನು ದಾರಿ ಬಿಡು.


ದೊರೆಯೆ, ಹರಿಯೆ ಬಂದರೂ ಬಿಡೆ ನಿನ್ನ

ಮರೆತು ಜೀವಿಸಲಾರೆ, ಕರುಣೆ ತೋರು

ತ್ಯಜಿಸಿ ಬಿಡು ನಿನ್ನ ಬ್ರಹ್ಮಚರ್ಯವನ್ನು.


ಶಿವ ಶಿವಾ! ಜಗತ್ಜಂಗಮ ನಾನು ಸನ್ಯಾಸಿ

ಭಗವಂತನಲ್ಲಿ ನೆಲೆಕಂಡವ, ಕೂಡಲಾರೆ, 

ಮಾಡಲಾರೆ ಸಂಸಾರ, ತಿಳಿದುಕೋ ನೀರೆ


ಘೋರ ಅನ್ಯಾಯವಿದು ಜಂಗಮಾ

ಮನ ಹತೋಟಿತಪ್ಪಿದರೆ ಬದುಕಲಹುದೇ

ಕಲೆತ ಹೃದಯ ಸಂಬಂಧ ಮರೆಯಲಾರೆ


ಜೀವ ಕ್ಷಣಿಕ, ಮೋಹ ಕ್ಷಣಿಕ, ಎಲ್ಲವೂ

ಅವನದೇ ಮಾಯೆ, ನಾವದರ ಗೊಂಬೆ

ಒಮ್ಮೆ ಇದ್ದುಬಿಡು ಸಂಸಾರದಲೆಯೊಡನೆ.


ಲಜ್ಜೆಗೆಟ್ಟು ಅಂಗಲಾಚಿದವಳನ್ನೇ ದಿಟ್ಟಿಸಿ, 

ಹೆಜ್ಜೆ ಸರಿಸಿದವನ ಮನ ಕೊಂಚ ಸಡಿಲು,

ನಿಶ್ಚಯಿಸಿ ಮೋಹದ ಮೋಡಿಗೊಳಗಾದ


ಕಣ್ಣಗಲ ಕಾಡಿಗೆ, ಮೂಗನತ್ತಿಗೆ, ಸೋತು

ಮನದಂಗಳಕೆ ಬಂದವಳ ತಬ್ಬಿದನಂತೂ

ಜೋಳಿಗೆ ತುಂಬಾ ಹೋಳಿಗೆಯ ಘಮ.



Rate this content
Log in

Similar kannada poem from Romance