Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Children Stories Thriller Children

4  

JAISHREE HALLUR

Children Stories Thriller Children

ಮಕ್ಕಳಾಗಿದ್ದ ದಿನಗಳಲ್ಲಿ..

ಮಕ್ಕಳಾಗಿದ್ದ ದಿನಗಳಲ್ಲಿ..

1 min
254



ಮಕ್ಕಳಾಗಿದ್ದ ದಿನಗಳಲ್ಲಿ.. 

ದಿನಗಳು ಕಳೆದವು...., 

 *ಹೇಗೆ ಕಳೆದವು* ...?

ಗೊತ್ತಾಗಲೇ ಇಲ್ಲ...

ಬದುಕಿನ ಓಟದಲ್ಲಿ *ಉರುಳಿದವು ವರ್ಷಗಳು* 

ಗೊತ್ತಾಗಲೇ ಇಲ್ಲ...


ಹೆಗಲೇರಿ ಆಡುತ್ತಿದ್ದ ಮಕ್ಕಳು 

 *ಹೆಗಲವರೆಗೆ ಬೆಳೆದದ್ದು* ಗೊತ್ತಾಗಲೇ ಇಲ್ಲ...

ಬಾಡಿಗೆಯ ಪುಟ್ಟ ಮನೆಯಿಂದ

 *ಸ್ವಂತ ಗೂಡಿನೊಳ ಹೊಕ್ಕದ್ದು* 

ಗೊತ್ತಾಗಲೇ ಇಲ್ಲ...


ಸೈಕಲ್ನಲ್ಲಿ ' ಏರಿ' ಏರಿ ಏದುಸಿರು 

ಬಿಡುತ್ತಿದ್ದ ನಾವು

ಯಾವಾಗ *ಕಾರಿನಲ್ಲಿ ನುಸುಳಿದೆವೋ* ಗೊತ್ತಾಗಲೇ ಇಲ್ಲ...

ಅಮ್ಮ- ಅಪ್ಪನ ಹೊರೆಯಾಗಿದ್ದ ನಾವು

 *ಮಕ್ಕಳ ಹೊರೆ ಯಾವಾಗ ಹೊತ್ತೆವೋ* ಗೊತ್ತಾಗಲೇ ಇಲ್ಲ...


ಗಂಟೆಗಟ್ಟಲೇ ಮಲಗಿ ಗೊರಕೆ ಹೊಡೆಯುತ್ತಿದ್ದ

ನಮ್ಮ *ನಿದ್ರೆ ಯಾವಾಗ ಹಾರಿತೋ* 

ಗೊತ್ತಾಗಲೇ ಇಲ್ಲ...

ದಟ್ಟ ಕರಿ ಕೂದಲಿನಲ್ಲಿ ಬೆರಳಾಡಿಸಿ ಸುಖಿಸಿದ ಕ್ಷಣಗಳು ಮನದಲ್ಲಿ ಹಸಿರಾಗಿರುವ ಮೊದಲೇ...,

ನಮ್ಮ *ಕೂದಲು ಬಿಳಿಯಾಗತೊಡಗಿದ್ದು* ಗೊತ್ತಾಗಲೇ ಇಲ್ಲ...


ಕೈಯಲ್ಲಿ ಅರ್ಜಿ ಹಿಡಿದು ಕಚೇರಿ, ಕಚೇರಿ ಅಲೆದ ನಮಗೆ

 *ನಿವೃತ್ತಿಯ* ಗಳಿಗೆ ಬಂದುದು ಗೊತ್ತಾಗಲೇ ಇಲ್ಲ...


ಮಕ್ಕಳು, ಮಕ್ಕಳೆಂದು ಹಲುಬುತ್ತ ಗಳಿಸಿ ಉಳಿಸುವಲ್ಲಿ

ಆ *ಮಕ್ಕಳೇ ದೂರವಾದದ್ದು* ಗೊತ್ತಾಗಲೇ ಇಲ್ಲ...


ನಾವು, ನಮ್ಮವರೆಂದು ಎದೆಯುಬ್ಬಿಸಿ ಮೆರೆದ ನಮಗೆ

ಅವರೆಲ್ಲ ದೂರಾಗಿ , *ಒಂಟಿಯಾದುದು* ಗೊತ್ತಾಗಲೇ ಇಲ್ಲ...


ನಮಗಾಗಿ ಏನಾದರೂ ಮಾಡಬೇಕೆಂದಾಗ

 *ದೇಹ ಸಹಕರಿಸುವದನ್ನು ನಿಲ್ಲಿಸಿದ್ದು* ಗೊತ್ತಾಗಲೇ ಇಲ್ಲ...


ಹೀಗೆ ಗೊತ್ತಾಗುವ ಮುನ್ನವೇ *ಗತಿಸುವ ಬದುಕಿನ* ಬಗೆಗೆ ಒಂದು ಬೆರಗಿನ *ನೋಟವಿರಲಿ* ...!

ಜೊತೆಯಲಿರುವವರನ್ನು *ನೋಯಿಸದ* *ಮುದ ನೀಡುವ* ಮನಸಿರಲಿ...!



Rate this content
Log in