Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

JAISHREE HALLUR

Children Stories Action Inspirational

4  

JAISHREE HALLUR

Children Stories Action Inspirational

ಸಂಭ್ರಮೆ????..ಎಲ್ಲಿದೆ?😢😢😢😢

ಸಂಭ್ರಮೆ????..ಎಲ್ಲಿದೆ?😢😢😢😢

1 min
364


ಸುಬೆಳಗಿನಲ್ಲೊಂದು ಸಂಭ್ರಮದ ನಗೆ

ಸೊಲ್ಲೆತ್ತಿದ ಬಗೆ...

ಬಗಲಿಗೇರಿಸಿದ ಶಾಲೆಚೀಲಕಿಂತ,

ಹಗಲುಗನಸಿನ ಚಿತ್ರೀಕರಣದ್ದೇ ಧಗೆ..

ಮೊಬಾಯಿಲಾದ ಮೆಟ್ಟಿನ ಬಗೆ..


ಪರದೆಮೇಲೆ ತನ್ನದೇ ಚಿತ್ತಾಕರ್ಷತೆಯ

ಊಹಾಪೋಹಗಳ ಮೆರೆವ ಈ ಬಾಲ್ಯ

ಊಹಾತೀತದ ಪ್ರತೀಕ...

ಹರೆಯ ಬರುವತನಕ ..ಚೆಲ್ಲುಚೆಲ್ಲಾಟ.

ಬರೆವ ಭರದಲ್ಲಿ ಕಲಿಕೆಗಳ ಹುಡುಕಾಟ, ಮಿಡುಕಾಟ.


ಕಾಡಿದೆ ಅಂದಿನ ಸಂಭ್ರಮದ ನಗೆ..

ಇಂದಿನ ಆಧುನಿಕ ಮಕ್ಕಳಲ್ಲಿ ಕಾಣದಾಗಿದೆ..ಈ ಬಗೆ..

ಪಿಚ್ಚೆನಿಸುವ ಜೀವನದ ಬಗೆ..

ಸ್ವಚ್ಛವಲ್ಲದ ದಳ್ಳುರಿಯ ಹೊಗೆ..

ನಶೆಗುಳಿಗೆಗಳ ನುಂಗಿ ಇಂಗುತಿವೆ..


ಕರ್ಪೂರ ಕರಗಲು ಛೂರು ಬಿಸಿ ಸಾಕು

ಅರ್ಚಕನ ತಟ್ಟೆಯಲ್ಲಿ ಕಾಸಿನ ಸದ್ದಿಗೆ.

ಮೇಲ್ಛಾವಣಿ ಅದುರಿದರೂ ಲೆಕ್ಕಿಸದೆ

ಪಾದದಡಿಯ ನೆಲ ಕುಸಿದರೂ ಸರಿಯೇ, ಅವನತಿಯೇ ಬೇಕೇನು?

ಸರೀಕರದೇ ವೇದವಾಕ್ಯವಾದೀತೇನು?


ಸಲುಹಿದವರ ಹಿಮ್ಮೆಟ್ಟಿ, ಬಲ್ಲಿದವರ

ನುಡಿಗಳ ಹೆಡೆಮುರಿಕಟ್ಟಿ, ತನ್ನದೇ ಹಾದಿಯಲಿ, ತಪ್ಪೆಂದು ಅರಿತರೂ 

ಪಾಶವಿನಾಶದೆಡೆಯಲಿ ಸಾಗುವ

ಈ ಜಗದ ನಿಯಮಕೆ ಯಾರು ಹೊಣೆ?


ಹೆತ್ತಮ್ಮ ವಿಷವುಣಿಸಲಿಲ್ಲ, ಇಬ್ಬಗೆಯಲಿಲ್ಲ..

ಸೊತ್ತನ್ನು ತಾ ಬಾಚದ ತಂದೆಯಲ್ಲಿ

ಎಲ್ಲೆ ಮೀರಿದ ಪ್ರೀತಿಯಿತ್ತು..

ಅಲ್ಲೇ ಇತ್ತು ಅಂದಿನ ಮುಗ್ದ ಬದುಕು.

ಹಲ್ಲೆಗೊಳಗಾಗಿದೆ ಇಂದು ಸಂಭ್ರಮದ 

ಪ್ರತಿ ಕಂದಮ್ಮಗಳ ಕನಸಿನ ಸರಕು..


ಯಾಕೆ ಬೇಕಿತ್ತು ಇಂತಹ ರೇಜಿಗೆ?

ಸಾಕಿತ್ತಲ್ಲವೇ? ಅವ್ವ ಕೊಟ್ಟ ಬುತ್ತೀ?

ಅಪ್ಪ ಕೊಟ್ಟ ಸೂರಿನ ಚಾಳು, ಗುರುವೊಂದಿಗಿನ ಅರಿವಿನೆಸಳು?

ಅರಗಿಸಲು ಬೇಕಿತ್ತೊಂದಿಷ್ಟು ಒಂದು ಸಣ್ಣ ನಿಷ್ಟೆಯ ಓದಿನ ಆದಿನ.


ಅದರೊಂದಿಗೆ ಕಾಣಬಹುದಿತ್ತು 

ಸಂಭ್ರಮದ ಬೆಳಕಿನ ಮುಂಜಾನೆ..

ನಾಳೆಗಳ ಇಂದುಗಳನು ನಮ್ಮದಾಗಿಸಿ

ನಗೆಗಳ ಹಬ್ಬ ಸೃಷ್ಟಿಸಬಹುದಿತ್ತು..


ಈಗ..? ಈಗ...ಸರಳುಗಳ ಹಿಂದಿನ

ಕತ್ತಲಲಿ ಕರಗಿ, ಬೆರಳುಗಳಿಗೆ ಅಳುವುದನು ಕಲಿಸುತ್ತ ಜೈಲಿನಲ್ಲಿ

ಕಾಲಕಳೆವಂತಾಯಿತೇ ರಾಗಿಣೀ..?


(ಬದುಕಿನ ಸಂಭ್ರಮ ನಿಮ್ಮ ಕೈಯಲ್ಲಿದೆ. ಅದನ್ನು ಹಾಳುಗೆಡುವಬೇಡಿ ಮಕ್ಕಳೇ...)


Rate this content
Log in