Shridevi Patil

Classics Inspirational Others

4.5  

Shridevi Patil

Classics Inspirational Others

ಅಪನಂಬಿಕೆ

ಅಪನಂಬಿಕೆ

2 mins
585



ರಕ್ತ ಸಂಬಂದಕ್ಕಿಂತ ಮೀರಿದ ಬಾಂಧವ್ಯ ಗೆಳೆತನ. ಪರಿಚಯ ಇಲ್ಲದವರು ಪರಿಚಿತರಾಗಿ , ಆತ್ಮೀಯತೆ ಹೆಚ್ಚಿ , ಎರಡು ದೇಹ ಒಂದು ಜೀವ ಎನ್ನುವ ರೀತಿಯಲ್ಲಿ ಗೆಳೆತನ ಬೆಸುಗೆ ಆಗುತ್ತದೆ . ಗೆಳೆತನದಲ್ಲಿ ಮೋಸ , ಕಪಟ , ವಂಚನೆ ಎನ್ನುವುದು ಹತ್ತಿರಕ್ಕೂ ಸುಳಿಯಬಾರದು . ಒಳಗೊಂದು ಹೊರಗೊಂದು ಮಾಡದೇ , ಹೃದಯದಿಂದ ಒಂದೇ ತರನಾಗಿ ಆ ಸ್ನೇಹಕ್ಕೆ ಬೆಲೆ ಕೊಟ್ಟು , ಗೆಳೆಯಂದಿರಿಬ್ಬರು ಸಹ ಸ್ನೇಹ ಪ್ರೀತಿಯಿಂದ , ಆತ್ಮವಿಶ್ವಾಸದಿಂದ ಇರಬೇಕು.


ಅಸೂಯೆ ಎಂಬ ಪದ ಮಧ್ಯ ಬರದಂತೆ ನೋಡಿಕೊಳ್ಳಬೇಕು . ದ್ವೇಷದ ಬಿರುಕು ಮೂಡದಂತೆ ಎಚ್ಚರ ವಹಿಸಬೇಕು .


ಯಾವಾಗ ನಂಬಿಕೆಯ ಕೊಂಡಿ ಸಡಿಲವಾಗುವುದೋ , ಅಪನಂಬಿಕೆಯ ಹೊಗೆಯಾಡಲು ಶುರುವು ಆಗುವುದೋ , ಮಾತುಗಳ ಅರ್ಥ ಬದಲಾದಂತೆ ಅನಿಸಲು ಶುರುವಾಗುವುದೋ ಆಗ ಗೆಳೆತನದ ಗಟ್ಟಿತನ , ಆತ್ಮೀಯತೆ ಕಮ್ಮಿಯಾಗುತ್ತದೆ. ಮೊದಲಿನ ಸ್ನೇಹದ ಬಂಧವೂ ಕಳಚುತ್ತದೆ. ಕೆಲವೊಮ್ಮೆ ಆ ಗೆಳೆತನ ಮುರಿಯಲೂ ಬಹುದು. ಒಮ್ಮೆ ಮಾಡಿದ ಆ ಚೆಂದದ ಗೆಳೆತನ ಮುರಿದರೆ , ಮನಸ್ಸೇ ಮುರಿದಂತೇ.



ಅನ್ವಿತಾ ಮತ್ತು ಅಕ್ಷರಾ ಅಕ್ಕ ಪಕ್ಕದ ಮನೆಯವರು . ಚಿಕ್ಕಂದಿನಿಂದಲೂ ಅಂದರೆ ಮೂರ್ನಾಲ್ಕು ವರ್ಷದವರಿದ್ದಾಗಿನಿಂದಲೂ ಗೆಳತಿಯರು . ಬಹಳ ಆತ್ಮೀಯರು. ಯಾವುದೇ ವಸ್ತುವಿಗೂ ಜಗಳಾಡಿದವರಲ್ಲ , ಕಿತ್ತಾಡಿದವರಲ್ಲ , ಇಬ್ಬರೂ ಮಕ್ಕಳು ಮನೆಯಲ್ಲಿ ಎಷ್ಟು ಅಚ್ಚುಮೆಚ್ಚು ಆಗಿದ್ದರೋ ಅಷ್ಟೇ ಕೇರಿಯಲ್ಲಿಯೂ , ಶಾಲೆಯಲ್ಲಿಯೂ ಅಚ್ಚು ಮೆಚ್ಚಿನ ಮಕ್ಕಳಾಗಿದ್ದರು.

ಅನ್ವಿತ ಉತ್ತರ ಕರ್ನಾಟಕದ ಭಾಗದವಳು , ಅಕ್ಷರಾ ದಕ್ಷಿಣ ಕರ್ನಾಟಕದ ಭಾಗದವಳು. ಇಬ್ಬರ ಮನೆಯವರೂ ಸಹ ಮೊದಲಿನಿಂದ ಪರಿಚಯದವರೂ ಅಲ್ಲ , ಯಾವುದೇ ರಕ್ತ ಸಂಬಂಧ ಸಹ ಇರಲಿಲ್ಲ. ಆದರೆ ಒಂದೇ ಅಪಾರ್ಟ್ಮೆಂಟ್ ನಲ್ಲಿ ಇದ್ದರೆನ್ನುವುದು ಮಾತ್ರ ಆ ಸ್ನೇಹದ ಬೆಸುಗೆ ಬೆಸೆಯಲು ಕಾರಣವಾಗಿತ್ತು. ಹುಟ್ಟುತ್ತ ರಕ್ತ ಸಂಬಂಧದ ಮಾತ್ರ ತಿಳಿಯುವ ನಾವು , ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ರಕ್ತ ಸಂಬಂಧ ಮೀರಿದ ಒಂದು ಬಂಧಕ್ಕೆ ಸೋತು ಹೋಗುತ್ತೇವೆ . ಆ ಬಂಧವೆ ಗೆಳೆತನ. ಇಲ್ಲಿ ಅನ್ವಿತ ಮತ್ತು ಅಕ್ಷರಾ ಸಹ ಆ ಗೆಳೆತನದ ಬಂಧದಲ್ಲಿ ಸೆರೆಯಾಗಿದ್ದರು. ಇಬ್ಬರ ಮನೆಯಲ್ಲಿಯೂ ಸಹ ತೀರ ಶ್ರೀಮಂತಿಕೆ ಇರಲಿಲ್ಲ. ದುಡಿಮೆ ಮತ್ತು ಅದಕ್ಕೆ ತಕ್ಕ ಪುಟ್ಟ ಮನೆ ಜೊತೆಗೆ ಅಷ್ಟೇ ಚೆಂದದ ಪುಟ್ಟ ಜೀವನ ಅವರಿಬ್ಬರದೂ ಆಗಿತ್ತು.



ಹೀಗೆ ಅನ್ವಿತ ಮತ್ತು ಅಕ್ಷರಾ ಇಬ್ಬರೂ ತುಂಬಾ ಕ್ಲೋಸಾಗಿ ಇದ್ದರು. ಒಂದೇ ತರದ ಬಟ್ಟೆ , ಒಂದೇ ತರದ ಶೂ , ಒಂದೇ ತರದ ಬ್ಯಾಗ್ ಹೀಗೆ ಇಬ್ಬರೂ ಚಿಕ್ಕಂದಿನಿಂದಲೂ ದೊಡ್ಡವರಾಗುವವರೆಗೆ ಸೇಮ್ ಟೂ ಸೇಮ್ ವಸ್ತುಗಳನ್ನು ಕೊಳ್ಳುತ್ತಿದ್ದರು.


ಈ ಇಬ್ಬರು ಗೆಳತಿಯರಿಗೆ ಒಂದೇ ಹುಡುಗನನ್ನು ಮದುವೆಯಾಗುವಂತೆ ಎಲ್ಲರೂ ರೇಗಿಸುತ್ತಿದ್ದರು . ಅಷ್ಟೊಂದು ಅನ್ಯೋನ್ಯತೆಯಿಂದ ಇದ್ದ ಗೆಳತಿಯರು ಒಂದು ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿದರು.


ಇಬ್ಬರ ನಡುವೆ ಮತ್ತೊಬ್ಬ ಗೆಳತಿಯ ಆಗಮನವಾಗಿದ್ದೆ ತಡ, ಅದ್ಯಾವ ದೃಷ್ಟಿ ತಾಗಿತೋ ಇಬ್ಬರು ಮಾತಿನ ಮದ್ಯ ಅಪನಂಬಿಕೆಯ ಪರದೆ ಎಳೆದುಕೊಂಡಿದ್ದರು. ಬಾಲ್ಯದಿಂದ ಬೆಸೆದ ಗೆಳೆತನ ಮಾಯವಾಗುವತ್ತ ಹೊರಟಿತು.


ನಂಬಿಕೆ ಕಳೆದುಕೊಂಡ ಗೆಳೆತನಕ್ಕೆ ಆಯಸ್ಸು ಕಮ್ಮಿನೇ ಅಲ್ವಾ, ಹಾಗೆಯೇ ಅನ್ವಿತಾ ಮತ್ತು ಅಕ್ಷರಾ ಇಬ್ಬರು ಸಹ ತಮ್ಮ ಸ್ನೇಹವನ್ನು ಅಪನಂಬಿಕೆಯ ಹೆಸರಲ್ಲಿ ಮುರಿದುಕೊಂಡಿದ್ದರು.


Rate this content
Log in

Similar kannada story from Classics