Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅರಿಶಿನದ ನೀರು

ಅರಿಶಿನದ ನೀರು

1 min
145


ಸುನಿಲ್ ನ ಮದುವೆಯ ಹಿಂದಿನ ದಿನ ದೇವರ ಸಮಾರಾಧನೆ. ಹಳದಿ ನೀರಿನ ಸ್ನಾನ ದ ಸಂಭ್ರಮ. ತನಗೆ ಈ ರೀತಿಯ ಮದುವೆಯಲ್ಲಿ ಆಸಕ್ತಿ ಇಲ್ಲ ಎಂದು ಗಲಾಟೆ ಮಾಡುತ್ತಾ ಇದ್ದ ಅವನನ್ನು ಅರಿಶಿನದ ನೀರಿನ ಸ್ನಾನಕ್ಕೆ ಅವನ ಅಮ್ಮ ಬಲವಂತವಾಗಿ ತಂದು ಕೂರಿಸಿ, ಅವನ ಮೇಲೆ ಹಳದಿ ನೀರನ್ನು ಮುತ್ತೈದೆಯರಿಂದ ಹಾಕಿಸುತ್ತಾ ಹೋದರು. ಮೊದ ಮೊದಲು ಮುಖ ಸಿಂಗರಿಸಿಕೊಂಡು ಕುಳಿತಿದ್ದ. ಹಳದಿ ನೀರಿನ ಸ್ನಾನ ದ ಕೊನೆಯ ಹಂತದಲ್ಲಿ ಅವನ ಮುಖದಲ್ಲಿ ನಗು ಮೂಡಿತ್ತು. ಮುಂದೆ ಅವನು ಉತ್ಸಾಹ ಉಲ್ಲಾಸಗಳಿಂದ ಮದುವೆಯ ಮುಂದಿನ ಶಾಸ್ತ್ರಗಳಲ್ಲಿ ನಗುನಗುತ್ತಾ ಪಾಲ್ಗೊಂಡಿದ್ದನ್ನು ನೋಡುತ್ತಾ ಇದ್ದ ಅವನ ಅಮ್ಮ, ತಮ್ಮ ಮಗನಿಗೆ, 

"ನೋಡಿದೆಯಾ ಸುನಿಲ್, ಹಳದಿ ನೀರು ಮೈಮೇಲೆ ಬಿದ್ದ ಕೂಡಲೇ ನಿನಗೆ ಮದುಮಗನ ಕಳೆ ಬಂದು ಎಷ್ಟು ಉತ್ಸಾಹವನ್ನು ತಂದುಕೊಟ್ಟಿತು? ಇದಕ್ಕಾಗಿಯೇ ನಮ್ಮ ಹಿಂದಿನವರು ಈ ಅರಿಶಿನದ ಶಾಸ್ತ್ರ ಮಾಡಿರುವುದು ಗೊತ್ತಾಯಿತಾ?'" ಎಂದು ಹೇಳಿದಾಗ, ಸುನಿಲ್ ಅಮ್ಮನ ಮಾತಿಗೆ ಮುಗುಳ್ನಕ್ಕ.


Rate this content
Log in

Similar kannada story from Abstract