Vijaya Bharathi

Abstract Drama Others

4  

Vijaya Bharathi

Abstract Drama Others

ಚಳಿಯ ಬಿಸಿ

ಚಳಿಯ ಬಿಸಿ

2 mins
504


ನಾನ್ ಸ್ಟಾಪ್ ನವೆಂಬರ್ 3 

ಬಿಗಿನರ್ 


ದಿನ ಒಂಭತ್ತು 


ವಿಷಯ : ಚಳಿಗಾಲ


ದೆಹಲಿಯಿಂದ ಹಿಮಾಲಯದ ತಪ್ಪಲಿನಲ್ಲಿರುವ ಬೇಸ್ ಕ್ಯಾಂಪ್ಗೆ ತುರ್ತು ವರ್ಗಾವಣೆಯಾದಾಗ , ನಿಖಿಲಗೆ ಒಂದು ರೀತಿ ಚಿಂತೆಯಾಯಿತು. ತಾನು ಇರುವುದು ಸೈನ್ಯದಲ್ಲೆಂದು ತಿಳಿದಿದ್ದರೂ, ಅಲ್ಲಿಗೆ ಹೋಗುವುದಕ್ಕೆ ಮನಸ್ಸು ಒಂದು ಕ್ಷಣ ಹಿಂಜರಿಯಿತು. ಭಾರತದ ಬಾರ್ಡರ್ ಅದು. ವಿಪರೀತ ಚಳಿ, ಮೈ ಹೆಪ್ಪುಗಟ್ಟಿಸುವಷ್ಟು ಕೊರೆತ. ಜೊತೆಗೆ ಹಿಮಾಲಯದ ಕಡೆಯಿಂದ ಅನವರತವೂ ಬೀಸುವ ಕುಳಿರ್ಗಾಳಿ. ಆದರೂ ಸೈನಿಕ ವೃತ್ತಿಯಲ್ಲಿರುವವರು "ನೊ" ಎನ್ನುವಹಾಗೇ ಇರಲಿಲ್ಲ. ಚೀನಾ ಬಾರ್ಡರ್ ನಲ್ಲಿರುವ ಆ ಕ್ಯಾಂಪ್ ಯಾವಾಗಲೂ ಅಪಾಯ ಸೂಚಕವೇ. ಏನು ಮಾಡುವುದು? ಯೋಧನಾದವನು ಹಿಂಜರಿಯಲಾದೀತೆ? 


ಮನೆಯಲ್ಲಿ ಚಿಕ್ಕ ವಯಸ್ಸಿನ ಮಡದಿ ನೀತು ಮತ್ತು ಐದು ವರ್ಷದ ಮಗ ಚಿಂಟು ವನ್ನು ಬಿಟ್ಟು ಹೋಗಬೇಕೆಂಬುದು ಇನ್ನೂ ಬೇಸರದ ಸಂಗತಿ. 

ತನ್ನ ವರ್ಗಾವಣೆಯ ವಿಷಯವನ್ನು ಮನಸ್ಸಿಲ್ಲದ ಮನಸ್ಸಿನಿಂದ ಹೆಂಡತಿಗೆ ತಿಳಿಸಿದಾಗ, ಅವಳ ಮುಖವೂ ಸೂರ್ಯನಿರದ ತಾವರೆಯಂತೆ ಮುದುಡಿ ಹೋಯಿತು. ಏನು ಅದೃಷ್ಟವೋ? ಮಿಲಿಟರಿ ಸರ್ವೀಸ್ ನಲ್ಲಿರುವ ನಿಖಿಲ್ ನನ್ನು ಮದುವೆಯಾದಗಲಿಂದ, ಅವನು ದೆಹಲಿಯಲ್ಲೇ ಇದ್ದುದ್ದರಿಂದ, ಇದು ಗಂಡ ಹೆಂಡತಿಯರ ನಡುವಿನ ಮೊದಲ ಅಗಲಿಕೆಯಾಗಿತ್ತು. 


ಆದರೂ ನೀತು ಏನನ್ನೂ ಹೇಳುವಂತಿಲ್ಲ. ಯೋಧನ ಹೆಂಡತಿ, ತುಂಬಾ ಧೈರ್ಯವಂತಳಾಗಿ ಜೀವನವನ್ನು ಎದುರಿಸಬೇಕಾಗಿರುವುದು ಅನಿವಾರ್ಯವಾಗಿತ್ತು. 

ಸರಿ, ಇನ್ನೊಡೆರಡು ದಿನಗಳಲ್ಲಿ ನಿಖಿಲ್ ಹೊರಡಬೇಕಾಗಿತ್ತು. ನೀತು ದುಗುಡ ತುಂಬಿಕೊಂಡೆ ಗಂಡನ ಸಾಮಾನುಗಳನ್ನು ಪ್ಯಾಕಿಂಗ್ ಮಾಡುತ್ತಿದ್ದಳು. 

ಅಲ್ಲಿಯ ಚಳಿಯನ್ನು ತಡೆಯಲು ಎಷ್ಟು ಬಗೆಯ ಜರ್ಕಿನ್ ಗಳಿಟ್ಟುಕೊಂಡರೂ ಸಾಲದೆಂಬಂತಿತ್ತು. ಎಲ್ಲವನ್ನೂ ಪ್ಯಾಕ್ ಮಾಡಿದಾಗ, ನೀತುವಿನ ಕಣ್ಣಿನಲ್ಲಿ ವಿರಹ ವೇದನೆ ಕಣ್ಣೀರಾಗಿ ಜಿನುಗಿದಾಗ, ಅಲ್ಲೇ ಹತ್ತಿರದಲ್ಲಿದ್ದ, ನಿಖಿಲ್ ಅವಳ ಬಳಿಗೆ ಬಂದು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ತನ್ನೆದೆಗೆ ಒರಗಿಸಿಕೊಂಡು,ಅವಳ ಕಣ್ಣೀರನ್ನು ತನ್ನ ತುಟಿಯಿಂದ ಒರಸತೊಡಗಿದಾಗ, ನೀತು ಅವನಿಗೆ ಸಂಪೂಣವಾಗಿ ಸೋತು ಹೋದಳು. ನಂತರ ಅವಳು 

"ನಿಖಿ, ಅಲ್ಲಿ ತುಂಬಾ ಚಳಿ ಕಣೋ ಹೇಗಿರುತ್ತೀಯೋ?" ಅವನಿಗೊರಗಿಕೊಂಡೆ ಕೇಳಿದಾಗ,

". ಅಲ್ಲಿಯ ಚಳಿಗೆ ಬಿಸಿ ಕಾಯಿಸಿಕೊಳ್ಳುವಾಗ, ನಿನ್ನ ಅಂದ ಚಂದಗಳನ್ನು ಒಂದೊಂದೇ ನೆನಪಿಸಿಕೊಳ್ಳುತ್ತಾ,

ಬಿಸಿಯಾಗುತ್ತೇನೆ. ಒ .ಕೆ. ನಾ? ಎಲ್ಲಿ ನೀನು ಈಗ ನಗುತ್ತ ನನ್ನನ್ನು ಬೀಳ್ಕೊಡಬೇಕು.ಯೋಧನ ಹೆಂಡತಿ ನೀನು, ಕಣ್ಣಲ್ಲಿ ನೀರು ಊಡಲೇ ಬಾರದು." 


ಹೆಂಡತಿಯನ್ನು ಬಗೆ ಬಗೆಯಾಗಿ ರಮಿಸುತ್ತಾ ಸಮಾಧಾನ ಮಾಡುತ್ತಿದ್ದಾಗ, ಅವನ ಪುಟ್ಟ ಮಗ ಚಿಂಟು ತನ್ನ ಕೈನಲ್ಲಿ ಒಂದು ಮಂಕಿ ಕ್ಯಾಪ್ ಹಿಡಿದು ಕೊಂಡು ಬಂದು,

"ಪಪ್ಪ,ಪಪ್ಪ, ಅಲ್ಲಿ ನಿನಗೆ ತುಂಬಾ ಚಳಿಯಾದರೆ, ಈ ಮಂಕಿ ಕ್ಯಾಪ್ ಹಾಕಿಕೊಂಡುಬಿಡು. ಚಳಿ ಓಡಿ ಹೋಗುತ್ತದೆ. ತೊಗೊ ಪಪ್ಪ", 

ಚಿಂಟು ತಂದುಕೊಟ್ಟ ಮಂಕಿ ಕ್ಯಾಪ್ ತೆಗೆದುಕೊಂಡು ಅವನನ್ನು ಎತ್ತಿ ಮನಸಾರೆ ಮುದ್ದಾಡಿದ. 


ಕೊನೆಗೂ ಹೆಂಡತಿ ಮತ್ತು ಮಗನಿಗೆ ಟಾಟ ಮಾಡಿ ನಿಖಿಲ್ ಹೊರಟ. ಇಂಡಿಯ ಚೀನ ಬಾರ್ಡರ್ ನಲ್ಲಿರುವ ಒಂದು ಕ್ಯಾಂಪ್ ಗೆ ಅವನು ಹೋದಾಗ, ಮೈ ಥರಗುಟ್ಟಿಸುವ ಚಳಿಯಿಂದ ನಡುಗಿಹೋದ. ಸುತ್ತಲೂ ಹಿಮಾಲಯಪರ್ವತ ಶ್ರೇಣಿ, ಭರೋ ಎಂದು ಒಂದೆ ಸಮನೆ ಬೀಸುತ್ತಿರುವ ಶೀತಗಾಳಿ. ರಾತ್ರಿಯ ವೇಳೆ ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿರುವಾಗ, ಆ ಜ್ವಾಲೆಯಲ್ಲಿ ನೀತುವಿನ ಮುಖ ಮುಂದೆ ಬರುತ್ತಿದ್ದಾಗ, ಅಂತಹ ಕೊರೆಯುವ ಚಳಿಯಲ್ಲೂ ಅವನ ಮೈ ಕಾವೇರುತ್ತಿತ್ತು. ಹೆಂಡತಿಯ ನೆನಪುಗಳಿಂದ ಬಿಸಿಯಾಗುತ್ತಿದ್ದ ನಿಖಿಲ್ ಗೆ ದೂರದಲ್ಲಿ ಶತ್ರುಗಳ ಬಾಂಬ್ ಸಿಡಿಯಲು ಪ್ರಾರಂಭವಾದಾಗ ಅವನಿಗೆ ಹಿಡಿದಿದ್ದ ಚಳಿ ಬಿಟ್ಟು ಹೋಯಿತು. ತಕ್ಷಣ ಕಾರ್ಯತತ್ಪರನಾದ.  



Rate this content
Log in