Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ದೃಷ್ಟಿ ದೋಷ

ದೃಷ್ಟಿ ದೋಷ

1 min
372


ಗೃಹಪ್ರವೇಶಕ್ಕೆ ಹೊಸಮನೆ ಮದುವಣಗಿತ್ತಿಯಂತೆ ಅಲಂಕೃತ ಗೊಂಡಿತ್ತು. ಮೂವತ್ತರ ಹರೆಯದಲ್ಲೇ ಅತ್ಯಂತ ಸುಂದರವಾದ ಮನೆಯನ್ನು ಕಟ್ಟಿಸಿದ್ದ ಸುಮೇರುವನ್ನು ಎಲ್ಲರೂ ಹೊಗಳಿದ್ದೇ ಹೊಗಳಿದ್ದು.

ಮನೆಯ ಅಂದ ಚೆಂದವನ್ನು ನೋಡಿ ಬಂದವರು ಬಾಯಿಯಲ್ಲಿ ಸುಮೇರುವಿನ ಹೊಗಳಿಕೆಯೇ ಕೇಳಿಬರುತ್ತಿರುವುದನ್ನು ಗಮನಿಸುತ್ತಾ ಇದ್ದ ಅವನ ಅಜ್ಜಿ ತನ್ನ ಮೊಮ್ಮಗನಿಗೆ ದೃಷ್ಟಿಯಾಗುತ್ತದೇನೋ ಅಂತ ಅಂದು ಕೊಂಡು ಅವನ ಮುಖಕ್ಕೆ ಓಕುಳಿ ನೀರನ್ನು ನಿವಾಳಿಸಿ, ಬೂದುಗುಂಬಳ ಕಾಯಿ ಯನ್ನು ಮನೆಯ ಮುಂದೆ ಒಡೆಯ ಬೇಕೆಂದು ತನ್ನ ಸೊಸೆ ಗೆ ಆದೇಶ ನೀಡಿದರು. ಐಟಿ ಕಂಪನಿ ಯಲ್ಲಿ ಕೆಲಸ ಮಾಡುತಿದ್ದ ಸುಮೇರು, ಅಜ್ಜಿ ಯ ಈ ಮೂಢನಂಬಿಕೆ ಯನ್ನು ತಳ್ಳಿ ಹಾಕಿದ. ಅಜ್ಜಿಗೆ ಬೇಸರವಾದರೂ ಸುಮ್ಮನಾಗದೆ ವಿಧಿಯಿರಲಿಲ್ಲ.  ಸುಮೇರು ತನ್ನ ಹೊಸ ಮನೆಯಲ್ಲಿ ವಾಸಮಾಡಲು ಪ್ರಾರಂಭಿಸಿದ . ಚಿಕ್ಕ ವಯಸ್ಸಿನ ಮಗ ಸೊಸೆ ಹೊಸಮನೆಯಲ್ಲಿ ನೆಮ್ಮದಿ ಯಾಗಿರಲಿ ಎಂದು ಕೊಂಡ ಸುಮೇರು ವಿನ ತಂದೆ ತಾಯಿ ತಮ್ಮ ಮಗ ಸೊಸೆಗೆ ಆ ಮನೆಯಲ್ಲಿ ವಾಸಿಸಲು ಹೇಳಿದರು. ಅದರಂತೆಯೇ ಸುಮೇರು ತನ್ನ ಹೆಂಡತಿ ಸೀಮೆ ಜೊತೆ ಹೊಸಮನೆಯಲ್ಲಿ ವಾಸಿಸಲು ಶುರುಮಾಡಿದ.

ಎರಡು ತಿಂಗಳು ನೆಮ್ಮದಿಯಾಗಿ ಕಳೆಯಿತು. ನಂತರ ಸುಮೇರುವಿಗೆ ಸಣ್ಣ ಅಪಘಾತ ದೊಡ್ಡ ಪ್ರಮಾಣಕ್ಕೆ ತಿರುಗಿ ಎರಡು ತಿಂಗಳು ಮಲಗಿದ. ನಂತರ ಅವನ ಹೆಂಡತಿಗೆ ಅಬಾರ್ಷನ್ ಆಗಿ ಮಗುಹೋಯಿತು. ಒಟ್ಟಿನಲ್ಲಿ ಒಂದಾದ ನಂತರ ‌ಮತ್ತೊಂದು ಸಮಸ್ಯೆ ಗಳು ಅವರಿಬ್ಬರನ್ನು ಕಾಡುತ್ತಿದ್ದಾಗ, ಸುಮೇರು ವಿನ ತಂದೆ ಮಗ ಸೊಸೆ ಇಬ್ಜರ ಜಾತಕ ತೋರಿಸಿದಾಗ, ಜ್ಯೋತಿಷಿಗಳು 

ಅವರಿಬ್ಬರ ಜಾತಕಗಳನ್ನು ನೋಡಿ,ಇಬ್ಬರೂ ಮೇಲೂ ದೃಷ್ಟಿ ದೋಷವಾಗಿದೆ ಎಂದು ಹೇಳಿ

ಮನೆಯಲ್ಲಿ ಬೂದುಗುಂಬಳ ಕಾಯಿಯನ್ನು ಕಟ್ಟಿ, ದುರ್ಗಾ ಹೋಮ ಮಾಡುವಂತೆ ಹೇಳಿದರು.

ಅದರಂತೆಯೇ ಸುಮೇರುವಿನ ತಂದೆ ಅವರ ಮಗನ ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮತ್ತು ದುರ್ಗಾ ಹೋಮವನ್ನು ಮಾಡಿಸಿದರು.

ಆ ದೇವಿಯ ದಯೆಯಿಂದ ನಂತರ ಸುಮೇರುವಿಗೆ ಬಂದಿದ್ದ ಕಷ್ಟಗಳು ಕರಗಿ, ಆ ಮನೆಯಲ್ಲಿ ನೆಮ್ಮದಿ ಉಂಟಾಯಿತು. ವರ್ಷ ಕಳೆಯುವುದರೊಳಗೆ

ಸೀಮಾ ಒಂದು ಹೆಣ್ಣು ಮಗುವಿನ ತಾಯಿ ಆದಳು.


Rate this content
Log in

Similar kannada story from Abstract