Vijaya Bharathi.A.S.

Abstract Classics Thriller

4  

Vijaya Bharathi.A.S.

Abstract Classics Thriller

ಗಗನ ಯಾನ

ಗಗನ ಯಾನ

1 min
347


ಅಂದು ಬಾನುವಿನ ಕನಸು ನನಸಾಗುತ್ತಿರುವ ಶುಭ ಘಳಿಗೆ. ತನ್ನ ಚಿಕ್ಕ ವಯಸ್ಸಿನಿಂದಲೂ ಕಾಣುತ್ತಿದ್ದ ಅವಳ ಕನಸು ನನಸಾಗುವ ದಿನ. ಪೈಲೆಟ್ ಡ್ರೆಸ್ ಧರಿಸಿ, ಸೂಟ್ ಕೇಸ್ ತಳ್ಳಿಕೊಂಡು, ವಿಮಾನ ನಿಲ್ದಾಣ ದಲ್ಲಿ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದ ಅವಳಿಗೆ, ತಾನು ಇದುವರೆಗೂ ನಡೆದು ಬಂದ ಹೆಜ್ಜೆಯ ಗುರುತುಗಳನ್ನು ನೆನಪು ಮಾಡಿಕೊಳ್ಳುತ್ತಾ

ಮುಂದೆ ಸಾಗುತ್ತಿದ್ದಳು. ತನ್ನ ಕನಸು ನನಸು ಮಾಡಿ ಕೊಳ್ಳಲು ಅವಳು ಅನುಭವಿಸಿದ ಕಷ್ಟ ಗಳು ಅವಳೊಬ್ಬಳಿಗೇ ಗೊತ್ತಿತ್ತು. 


ಮನೆಯವರೆಲ್ಲರ ವಿರೋಧವನ್ನು ಎದುರಿಸಿ,ಬಾನು 

ಪೈಲೆಟ್ ತರಬೇತಿಗೆ ಸೇರಿ, ಆ ಕೋರ್ಸ್ ಗಾಗಿ ಲಕ್ಷಾಂತರ ರೂಪಾಯಿ ಗಳ ಸಾಲ ಮಾಡಿಕೊಂಡು, ಅಲ್ಲಿಯ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಿ ಕಡೆಗೂ" ಫಸ್ಟ್ ಆಫೀಸರ್ ಬಾನು "ಎನಿಸಿಕೊಂಡು, ಇಂದು ತನ್ನ ಮೊದಲ ವಿಮಾನ ಹಾರಾಟ ಕ್ಕಾಗಿ ವಿಮಾನದ ಕಾಕ್ ಪೆಟ್ ನಲ್ಲಿ ಕುಳಿತು ಕೊಳ್ಳಬೇಕಾಗಿದೆ. ಅವಳ ಹೃದಯದಲ್ಲಿ ಭಾವಗಳ ಸಂಗಮ.ತಾನು ತನ್ನ ಚಿಕ್ಕ ವಯಸ್ಸಿನಿಂದಲೂ ಮನೆಯ ಅಂಗಳದಲ್ಲಿ ನಿಂತು ಅಂತರಿಕ್ಷದಲ್ಲಿ ಹಾರಾಡುತ್ತಿದ್ದ ವಿಮಾನಗಳನ್ನು ನೋಡಿ, ತಾನೂ ಸಹ ಹೀಗೆ ಅಂತರಿಕ್ಷದಲ್ಲಿ ಹಾರಾಡುತ್ತಿರಬೇಕು ಎಂದು ಆಸೆ ಪಡುತ್ತಾ ಇದ್ದ ತನ್ನ ಆ ಮಹದಾಸೆ ಇಂದು ಪೂರೈಸುತ್ತಾ ಇದೆ ಎನ್ನುವ ಸಂಭ್ರಮ ಒಂದು ಕಡೆ, ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಬಗ್ಗೆ ಆತಂಕ ಮತ್ತೊಂದು ಕಡೆ, ನಾನಾ ರೀತಿಯ ಭಾವ ಸಂಘರ್ಷ ಗಳು . 

ಕಡೆಗೂ ವಿಮಾನದ ಕಾಕ್ ಪೆಟ್ ನಲ್ಲಿ ಕುಳಿತು, ಅದನ್ನು ಪುಶ್ ಮಾಡುತ್ತಾ, ನಿಧಾನವಾಗಿ ಅಂತರಿಕ್ಷದಲ್ಲಿ ಏರಿಸಿದಾಗ, ಅವಳಿಗೇನೋ ಖುಶಿಯೆನಿಸಿತು. ಮೋಡಗಳ ನಡುವಿನ

ಗಗನ ಯಾನದಲ್ಲಿ ಸುತ್ತಲೂ ಕಣ್ಣಾಡಿಸುತ್ತಾ, ವಿಮಾನವನ್ನು ಚಾಲಿಸುತ್ತಿದ್ದ ಅವಳಿಗೆ ಕಡೆಗೂ ತನ್ನ ಗುರಿ ಯನ್ನು ಸಾಧಿಸಿದ ಬಗ್ಗೆ ಹೆಮ್ಮೆ ಎನಿಸಿತು.


Rate this content
Log in

Similar kannada story from Abstract