shristi Jat

Classics Inspirational Others

4.0  

shristi Jat

Classics Inspirational Others

ಹಬ್ಬ

ಹಬ್ಬ

1 min
182


ನಮ್ಮ ಭಾರತ ವಿವಿಧ ಭಾಷೆಗಳಿಂದ ಕೂಡಿದ ವಿವಿಧ ಜಾತಿ ವಿವಿಧ ಆಚರಣೆಗಳಿಂದ ಕೂಡಿದ ನಾಡು."ಹಬ್ಬದ ಇನ್ನೊಂದು ಹೆಸರೇ ಸಂಭ್ರಮ" ವಿವಿಧತೆಯಲ್ಲಿ ಏಕತೆ ತೋರುವ ಹಾಗೆ ಮಾಡುವುದೆ ಹಬ್ಬ. ಹಬ್ಬದ ಸಮಯದಲ್ಲಿ ಯಾವುದೇ ಮತ, ಭಾಷೆ ನೊಡುವದಿಲ್ಲ ಎಲ್ಲಾ ಭಾಷೆಯ ಮತ್ತು ಎಲ್ಲಾ ಧರ್ಮದ ಸ್ನೆಹಿತರನ್ನು ಆಹ್ವಾನಿಸುತ್ತೆವೆ.ಹಬ್ಬ ಜನರನ್ನು ಒಗ್ಗೂಡಿಸುವ ಮತ್ತು ಭಾಂದವ್ಯ ಬೆಸೆಯುವ ಸಂಕೇತವಾಗಿದೆ.ನಮ್ಮ ಭಾರತದಲ್ಲಿ ಸೂಮಾರು ೫೦ ಹಬ್ಬಗಳಿವೆ ಎಲ್ಲಾ ರಾಜ್ಯಗಳ ಆಚರಣೆಗಳನ್ನು ಹಿಡಿದುಕೊಂಡು ನೋಡಿದರೆ ಅಂದಾಜಿನ ಲೆಕ್ಕ ಪ್ರತಿಯೊಂದು ಹಬ್ಬಕ್ಕೆ ಅದರದೆ ಆದ ವಿಶೆಷತೆಯಿದೆ ನಮ್ಮ ಪೂರ್ವಜರು ಆಯಾ ಕಾಲದ ಸೋಗಸ್ಸನ್ನು ಸವಿಯಲು ಹಬ್ಬಗಳನ್ನು ಆಚರಿಸುತ್ತಿದ್ದರು.ಸಂಕ್ರಾಂತಿ ಕಬ್ಬು ಮತ್ತು ಎಳ್ಳನ್ನು ಸವಿಯಲು, ಯುಗಾದಿಗೆ ನಾವು ಹೊಸ ವರ್ಷ ಅಂತಾನೂ ಕರೆಯುತ್ತೆವೆ.ಯಾಕೆಂದರೆ ಹೊಸದಾಗಿ ಚಿಗುರುವ ಮರ ಅಂದು ಬೇವು ಮಾಡಿ ಕುಡಿಯುತ್ತೆವೆ ಎಲ್ಲಾ ಹಣ್ಣುಗಳ ಮಿಶ್ರಣಮಾಡಿ ಬೇವಿನ ಚಿಗುರು ಮತ್ತು ಬೆಲ್ಲ ಸೆರಿಸಿ ಕುಡಿಯುತ್ತೆವೆ.ಇದರರ್ಥ ಕಹಿಯನ್ನು ಮರೆತು ಸಿಹಿಯಾಗು ಹೊಸದಾಗಿ ಮತ್ತೆ ನಮ್ಮ ಜೀವನ ಚಿಗುರಲಿ.ದಿಪಾವಳಿಗೆ ಬೆಳಕಿನ ಮಹತ್ವದ ತಿಳಿಸುವ ಬಗ್ಗೆ ಕರಕುಲಗಳನ್ನು ಸವೆಯುತ್ತೆವೆ.ದಸರಾ ಹಬ್ಬ ವಿನಾಶವನ್ನು ಸಂಹಾರ ಮಾಡುವುದರ ಬಗ್ಗೆ ಹೋಳಿಗೆ ಸವಿಯುವುದು ಹಿಂದೂ ಧರ್ಮದ ಹಬ್ಬಗಳಿಗೆ ಅದರದೆ ಆದ ವಿಶೆಷತೆಯಿದೆ.ಆಯಾ ಕಾಲದಲ್ಲಿ ಬೇಳೆಯುವ ಫಸಲನ್ನು ಆಹಾರದ ಮುಖಾಂತರ ಸೆವನೆ ಮಾಡಲು ಹಬ್ಬಗಳನ್ನು ಮಾಡಿದ್ದಾರೆಂದು ಆರೋಗ್ಯದ ದೃಷ್ಟಿಕೋನ ಇಟ್ಟುಕೊಂಡು ಆಚರಣೆ ಮಾಡಿದ್ದಾರೆಂದು ಎಂದು ಕೆಲವು ಕವಿಗಳು ಹೆಳಿದ್ದಾರೆ.ಪೊಂಗಲ್,ಓನಮ್, ಹೋಳಿ ಮುಂತಾದವು ಆಚರಣೆಯ ಅಂಶಗಳಿವೆ.ಹಿದೂ ಅಷ್ಟೆ ಅಲ್ಲ ಮುಸ್ಲ್ಮಾನ್ ಹಬ್ಬಗಳಾದ ರಂಜಾನ್,ಬಕ್ರಿದ್,ಈದ್ ಮಿಲಾದ್ ಅದರದ್ದೆ ಆದ ಇತಿಹಾಸ ಮತ್ತು ನಂಬಿಕೆಗಳಿವೆ.ಹೇಗೆಂದರೆ ರಂಜಾನ್ ಹಬ್ಬಕ್ಕೆ ಒಂದು ತಿಂಗಳಿಂದ ರೊಜಾ ಅಂದರೆ ಉಪವಾಸ ಮಾಡುತ್ತಾರೆ ರಾತ್ರಿ ಅಷ್ಟೆ ಆಹಾರ ಸೇವನೆ ಮಾಡುತ್ತಾರೆ. ಮುಸ್ಲೀಮ್ ಧರ್ಮ ನೀರು ಹಾನಿಮಾಡಬಾರದೆಂದು ಹೇಳುತ್ತದೆ. ಕ್ರಿಶ್ಚಿಯನ್ ಜನರು ಕ್ರೀಸ್ ಮಾಸ,ಗುಡ್ ಫ್ರೈಡೇ ಆಚರಿಸುತ್ತಾರೆ."ಹಬ್ಬ ಎಂದರೆ ಮನೆಯ ತುಂಬಾ ಖುಷಿಯ ವಾತಾವರಣ ಹೊಸಬಟ್ಟೆಗಳ ಸಂಕಿರ್ಣ ಪ್ರಾರ್ಥನೆಯ ಸಮ್ಮೇಳನ" ಪ್ರಾರ್ಥಿಸುವ ರೀತಿ ಬೇರೆ ಆದರೆ ಪ್ರಾರ್ಥನೆ ಒಂದೇ.


Rate this content
Log in

Similar kannada story from Classics