Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 9

ಇಷ್ಟ ದೇವತೆ ಭಾಗ 9

2 mins
200



ಗಿರಿಜೆಯು ಆ ರಾತ್ರಿ ಅದೆಷ್ಟು ಒದ್ದಾಡಿದಳೋ, ಯಾವ್ಯಾವ ದೇವರನ್ನು ನೆನೆದಳೋ ಗೊತ್ತಿಲ್ಲ. ಬೆಳಕು ಹರಿಯುವುದನ್ನೇ ಕಾಯುತ್ತಿದ್ದ ಗಿರಿಜೆ ಬೆಳಗಾದ ಕೂಡಲೇ ಕೋಣೆ ಬಿಟ್ಟು ಓಡಿ ಹೋಗಬೇಕೆಂದು ಕೊಂಡಿದ್ದಳು. ಸೂರ್ಯ ಬಂದು ಬೆಳಕು ಹರಡಿದ್ದ. ಅವಳು ಎದ್ದು ಹೊರಗಡೆ ಬಂದಳು. ಅತ್ತೆ ನೇರವಾಗಿ ಸ್ನಾನದ ಕೋಣೆಗೆ ಕಳುಹಿಸಿದಳು. ಸ್ನಾನ ಮುಗಿಸಿ,ದೇವರಿಗೆ ನಮಸ್ಕರಿಸಿ ಅವಳು ಅತ್ತೆ ಹತ್ತಿರ ಬಂದು ಅತ್ತೆವ್ವಾ, ಏನು ಮಾಡಲಿ ಎಂದಳು.


ಗಿರಿಜೆ ಗಂಡನ ಮನೆಗೆ ಬರುವಾಗ ಅವಳ ಅವ್ವ ಒಂದಿಷ್ಟು ಕಿವಿಮಾತು ಹೇಳಿ ಕಳಿಸಿದ್ದಳು. ಏನೇ ಕೆಲಸ ಮಾಡಿದರೂ ಸಹ ಅತ್ತೆಯನ್ನು ಒಂದು ಮಾತು ಕೇಳಿಯೇ ಮಾಡಬೇಕು ಅಂತ ಹೇಳಿದ್ದಳು ಕಮಲವ್ವ. ಆ ಪ್ರಕಾರ ಅವಳು ತನ್ನ ಅತ್ತೆಯನ್ನು ಕೇಳಿದಾಗ ಅವಳ ಅತ್ತೆ, ಸರಿ ಎಲ್ಲರಿಗೂ ಚಾ ಮಾಡ್ಕೊಂಡು ಬಾ, ಹಾ ಸಕ್ಕರೆ ತುಸು ಜಾಸ್ತಿ ಹಾಕು, ಎಮ್ಮಿ ಹಾಲು ಚೋಲೋ ಅದಾವು ಸಲ್ಪ ನೋಡಿ ಹಾಕು.


ಆತ್ರಿ ಅತ್ತೆವ್ವಾ ಮಾಡ್ತನಿ ಅಂತ ಅಡುಗೆ ಮನಿಗೆ ಹೋದಳು. ಅದ್ರ ಎಷ್ಟ ಮಂದಿ ಅದಾರ ಅಂತ ಗೊತ್ತಿರಲಿಲ್ಲ ಅಕಿಗೆ . ಮಾಡಿದ್ದ ಚಾ ದಾಗ ಅವಳಿಗೆ ಉಳಿಯಲಿಲ್ಲ. ಆದರೆ ಅತ್ತೆ ಮಾಡಿಕೊಂಡು ಕುಡಿ ಅನ್ನಲಿಲ್ಲ ಅಂತ ಹೆದರಿ ತನಗೆ ಅಂತ ಚಾ ಮಾಡಿಕೊಳ್ಳಲಿಲ್ಲ. ಆಗ ತವರಿನ ನೆನಪು ಆಗಿ, ಕಣ್ಣು ಒದ್ದೆಯಾದವು. ಕಿಟಕಿಯಲ್ಲಿ ನೋಡುತ್ತಾ ನಿಂತಿರುವಾಗ , ಅತ್ತೆ ಬಂದು ನೋಡು ಗಿರಿಜೆ, ನಮ್ಮನಿಯಾಗ ಕೆಲಸ ಬಾಳ ಇರ್ತಾವು. ಹಂಗ ಹೋಗರು ಬರರು ಇರ್ತಾರ. ಯಾರರ ಬಂದ ಕೂಡಲೇ ಹೊರಗ ಹೋಗಿ ನಿಲ್ಲಬೇಡ, ನಾ ಹೇಳಿದಾಗ ಬರಬೇಕು, ನಾ ಹೇಳಿದಂಗ ಕೇಳ್ಕೊಂಡ್ ಇರಬೇಕು. ಹಾ ಇನ್ನೊಂದ ಮಾತು, ದಿನ ಮುಂಜಾನೆ ಲ್ವಗು ಏಳಬೇಕು. ಸೂರ್ಯ ನೆತ್ತಿ ಮ್ಯಾಲ್ ಬಂದಾದ ಮ್ಯಾಲ್ ಎದ್ದರ ಆಜು ಭಾಜು ಮಂದಿ ನಾಕ್ ತರ ಮಾತಾಡ್ತಾರ. ಅದಕ್ಕ ನಾ ಏಳೋ ಮುಂಚಿನ ಏಳು, ಎದ್ದು ಜಳಕ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು, ದೇವರ ಪೂಜೆ ಮಾಡಿ, ಅಡುಗಿ ಮನಿಗೆ ಬರಬೇಕು. ಅಷ್ಟೊತ್ತಿಗೆ ಆ ಕೆಲಸದಕಿ ಸುಂದ್ರಿ ಕಸ ಹೋಡದು ,ಬಾಂಡೆ ತಿಕ್ಕಿಟ್ಟು ಹೋಗಿರ್ತಾಳ. ನೀನು ಚಾ ಮಾಡಿ ಎಲ್ಲಾರಿಗೂ ಕೊಡು, ಅಷ್ಟೊತ್ತಿಗೆ ನಾ ಬಂದು ಮುಂದಿದ್ದು ಹೇಳತನಿ.


ಅಂದಂಗ ಗಿರಿಜೆ ನಿಂಗ ರೊಟ್ಟಿ ಮಾಡಾಕ ಬರತತೋ ಇಲ್ಲೊ ಅಂದಾಗ ಹೆದರಿ ನಿಂತಳು. ಅತಾತು ಎರಡ್ ದಿನ ನಾ ಮಾಡಿ ಕಲಸ್ತನಿ ಕಲಕೋ ಅಂತ ಹೊರಗ ನಡೆದಳು ಅವಳ ಅತ್ತೆ.


ಹಂಗೂ ಹಿಂಗೂ ಮೊದಲ ದಿನದ ಹಗಲು ಕಳೆದು ಮತ್ತೆ ರಾತ್ರಿಯಾಗುತ್ತಿದ್ದಂತೆ ಅವಳಿಗೆ ಹೆದರಿಕೆ ಶುರುವಾಯಿತು. ಅತ್ತೆಗೆ ಹೇಳಲು ಭಯ, ಏನಂತಾ ಹೇಳಬೇಕು , ಗಂಡ ಮತ್ತೆ ನಿನ್ನೆ ತರ ಮಾಡಿದರೆ ಅಂತ ಭಯ ಅವಳಿಗೆ. ಭಯದಲ್ಲೇ ಅವಳು ಸಾಗಿದಾಗ ಗಂಡ ಅವಳ ಆಗಮನಕ್ಕಾಗಿ ಕಾಯುತ್ತಿರುವಂತೆ ಕಂಡಾಗ ಅವಳು ಅಯ್ಯೋ,ಇವರಿನ್ನೂ ಮಲಗಿಲ್ಲವೇ ಅಂತ ಅಂದುಕೊಳ್ಳುತ್ತ ಮೆಲ್ಲಗೆ ಬಂದಳು. ಬಾ ಬಾ ಇಲ್ಲೇ ಬಾ ಅಂತ ಗಂಡ ಕರೆದಾಗ ಹೆದರುತ್ತ ಹೋದಳು. ಆ ರಾತ್ರಿಯೂ ಮೊದಲ ರಾತ್ರಿಯೇ ಆಗಿತ್ತು.


ಒಂದು ವಾರ ಕಳೆಯುವುದರೊಳಗಾಗಿ, ಅವಳು ಗಂಡನಿಗೂ ಹೊಂದಿಕೊಂಡ್ಲು, ಇತ್ತ ಅತ್ತೆ ಮಾವನ ಜೊತೆಯೂ ಹೊಂದಿಕೊಂಡಳು.


ಅನಿವಾರ್ಯತೆ ಅನ್ನುವುದು ಎಲ್ಲವನ್ನು ಬಹು ಬೇಗ ಕಲಿಸಿಬಿಡುತ್ತದೆ. ಇಲ್ಲಿ ಅವಳಿಗೂ ಸಹ ಅಲ್ಲಿಯೇ ಇರಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ಹೊಂದಿಕೊಳ್ಳಲೇ ಬೇಕಾಗಿತ್ತು.. ಹೆಣ್ಣು ಯಾವಾಗಲೂ ಪ್ರತಿಯೊಂದಕ್ಕೂ ಬಹು ಬೇಗ ಹೊಂದಿಕೊಂಡು ಬಿಡುತ್ತಾಳೆ. ಈ ಗುಣ ಎಲ್ಲ ಹೆಣ್ಣು ಮಕ್ಕಳಲ್ಲಿ ಸಹಜವಾಗಿ ನೈಸರ್ಗಿಕವಾಗಿ ಬಂದಿರುತ್ತದೆ.


ಅವಳು ಆ ಮನೆಯಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಹೇಗಿದ್ದಳು ಅಂತ ಮುಂದಿನ ಭಾಗದಲ್ಲಿ ನೋಡೋಣ...


Rate this content
Log in

Similar kannada story from Classics