Vijaya Bharathi

Abstract Classics Others

3  

Vijaya Bharathi

Abstract Classics Others

ಕನಸಿನ ಕಡಲು

ಕನಸಿನ ಕಡಲು

1 min
210


ಕೆಳ ಮಧ್ಯಮ ಕುಟುಂಬದಲ್ಲಿ ಕಷ್ಟಗಳನ್ನೇ ನುಂಗುತ್ತಾ ಬೆಳೆದ ಸ್ವಪ್ನ ಕಷ್ಟ ಪಟ್ಟು ಎಸ್.ಎಸ್.ಎಲ್.ಸಿ. ಯನ್ನು

ಡಿಸ್ಟಿಂಕ್ಷನ್ ನಲ್ಲಿ ಪಾಸ್ ಮಾಡಿದಾಗ, ಅವಳು ತನ್ನ ಮುಂದಿನ ಜೀವನದ ಕನಸು ಕಾಣಲು ಪ್ರಾರಂಭಿಸಿದಳು. ಕೂಲಿ ಕಾರ್ಮಿಕನಾದ ತಂದೆ ಮತ್ತು ಮನೆಗೆಲಸ ಮಾಡುವ ತಾಯಿಗೆ ತಮ್ಮ ಮಗಳನ್ನು ಮುಂದೆ ಓದಿಸಿ ದೊಡ್ಡ ಆಫೀಸರ್ ಮಾಡಿಸಬೇಕೆಂಬ ಕನಸುಗಳನ್ನು ಕಾಣತೊಡಗಿದರು.

ಸರ್ಕಾರದ ಅನುದಾನಗಳ ಸದುಪಯೋಗ ಪಡಿಸಿಕೊಂಡು ಸ್ವಪ್ನ ಕಾಲೇಜಿಗೆ ಸೇರಿ,ಅಲ್ಲಿಯೂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿ ಬಿ.ಎ.ಪದವೀಧರಳಾದಾಗ , ಆ ತಂದೆ ತಾಯಿಗಳ

ಸಂತೋಷಕ್ಕೆ ಪಾರವೇ ಇರಲಿಲ್ಲ.ಮಗಳು ಇನ್ನಾದರೂ ಉದ್ಯೋಗ ಹಿಡಿದರೆ ತಮ್ಮ ಕಷ್ಟಗಳು ಕೊನೆಗಾಣುತ್ತವೆ ಎಂದು ಅವರಿಬ್ಬರೂ ಕನಸು ಕಾಣತೊಡಗಿದರೆ, ಸ್ವಪ್ನ

ತಾನು ಸ್ನಾತಕೋತ್ತರ ಪದವಿ ಪಡೆದು, ಮುಂದೆ ಪಿ.ಹೆಚ್.ಡಿ. ಮಾಡಬೇಕೆಂಬ ಮಹತ್ತರವಾದ ಕನಸುಗಳನ್ನು ಕಾಣುತ್ತಿದ್ದಳು. ಮಗಳ ಕನಸಿಗೆ ತಂದೆ ತಾಯಿ ತಮ್ಮ ಕನಸನ್ನು ಒಳಗೇ ಹುದುಗಿಸಿಟ್ಟು ಕೊಂಡು, ಮಗಳ ಕನಸನ್ನು ಪೋಷಿಸುತ್ತಾ ಹೋಗಿ, ಅವಳಿಗಾಗಿ ದುಡಿಯುತ್ತಾ ದುಡಿಯುತ್ತಾ ಸೋತು ಹೋದರು.

ಅಂತೂ ಇಂತೂ ಮಗಳು ಎಂ.ಎ. ಪದವಿ ಪಡೆದು ಕಾಲೇಜಿನಲ್ಲಿ ಅಧ್ಯಾಪಕಿಯಾದಾಗ, ಆ ತಂದೆ ತಾಯಿಯರು ಸ್ವಲ್ಪ ನೆಮ್ಮದಿ ಕಂಡರು. ಆದರೆ ಸ್ವಪ್ನಳ ಕನಸುಗಳು ಮಾತ್ರ ಕೋಟಿಗಟ್ಟಲೆ ಬೆಳೆಯುತ್ತಾ ಹೋಯಿತು. ಉದ್ಯೋಗ ದೊರೆತ ನಂತರ ತನ್ನ ಬಾಳ ಸಂಗಾತಿಯ ಕನಸುಗಳನ್ನು ಕಾಣುತ್ತಾ ಹೋದಳು. ಅವಳ ಕನಸಿನ ರಾಜಕುಮಾರ ನನ್ನು ಅರಸುತ್ತಾ ಅರಸುತ್ತಾ ಕಡೆಗೂ ಅವಳ ಕನಸಿನ ರಾಜಕುಮಾರ ಸಿಕ್ಕಾಗ, ತನ್ನ ಜೀವನವನ್ನು ತಾನು ನೋಡಿಕೊಂಡು

ತನ್ನ ರಾಜಕುಮಾರ ನ ಜೊತೆ ಹೊರಟೇ ಬಿಟ್ಟಾಗ, ಮಗಳ ಕನಸುಗಳಲ್ಲಿ ತಮ್ಮ ಕನಸುಗಳನ್ನು ಮರೆತ

ಆ ತಂದೆ ತಾಯಿಯರು ತಮ್ಮ ಬಡತನದ ಬದುಕಿನಲ್ಲಿಯೇ ಮುಂದೆ ಸಾಗಿಸುತ್ತಾ, ಅದರಲ್ಲೇ ತಮ್ಮ ಜೀವನದ ಸಾರ್ಥಕತೆ ಪಡೆದುಕೊಂಡರು.



Rate this content
Log in

Similar kannada story from Abstract