shristi Jat

Drama Classics Inspirational

4.0  

shristi Jat

Drama Classics Inspirational

ಮ್ಯಾಜಿಕ್

ಮ್ಯಾಜಿಕ್

1 min
192


ಮ್ಯಾಜಿಕ್ ಅಂದರೆ ನನ್ನ ಪ್ರಕಾರ ಎರಡು ಪ್ರಕಾರ ಒಂದು ಕಪ್ಪು ಮ್ಯಾಜಿಕ್ ಮತ್ತು ಬಿಳಿ ಮ್ಯಾಜಿಕ್ ಕಪ್ಪು ಮ್ಯಾಜಿಕ್ ಅಂದರೆ ಯಾರು ಇನ್ನೋಬ್ಬರ ಸಂತೋಷ ಬೆಳವಣಿಗೆ,ಒಳ್ಳೆತನ ,ಸುಂದರತನ ಇತ್ಯಾದಿ ಕಂಡು ತಾಳಲಾಗದೆ ಅವರನ್ನು ಹಾಳುಮಾಡುವ ಉದ್ದೇಶದಿಂದ ಮಾಟಮಂತ್ರಕ್ಕಿಳಿದು ಅವರ ದಾರಿಯಲ್ಲಿ ಮುಳ್ಕು ಹಾಕುವುದು. ಕಪಟೀಯ ಮತ್ತು ಕ್ರೂರ ಕೆಲಸವನ್ನು ಮಾಡುವುದು.ಇನ್ನೋಬ್ಬರ ಕಲೆ,ಗುರಿಗಳನ್ನು ಕದ್ದು ಒಗ್ಗರಣೆ ಹಾಕಿ ತಮ್ಮ ಹೆಸರಿಡುವುದು.ಅಲ್ಲದೆ ಯಶಸ್ವಿಗೋಸ್ಕರ ಮತ್ತು ಹೆಸರು ಮಾಡುವುದಕ್ಕಾಗಿ ಸಾವಿರ ಸುಳ್ಳುಗಳನ್ನು ಬಳಸಿಕೊಂಡು ತಾನು ಒಳ್ಳೆಯವನೆಂಬ ಮುಖವಾಡ ಧರಿಸಿಕೊಂಡು ಜನರನ್ನು ಮುರ್ಖರನ್ನಾಗಿ ಮಾಡುವುದು ಇನ್ನೊಬ್ಬರಿಗೆ ತೆಗಳುತ್ತಾ ತಾವು ಮಾಡುವ ದುಷ್ಟ ಕಾರ್ಯಗಳಲ್ಲಿ ಜನರನ್ನು ತೋಡಗಿಸಿಕೊಳ್ಳುವುದು ಮತ್ತು ಅವರಿಗೆ ತಪ್ಪು ದಾರಿಯನ್ನು ತೋರಿಸುವುದು ತಪ್ಪೆ ಸರಿ ಎಂದು ಸಾರುವುದು.ಅದು ನೀಜ "ತೂತ ಇದ್ದಕಡೆನೆ ಸಾರಿಸಿ ಮುಚ್ಚಲು ಸಾಧ್ಯ" ಹಾಗೆಯೇ   " ಕೆಟ್ಟ ಗುಣ ಇರೋದಕ್ಕೆ ಒಳ್ಳೆಯತನದ ಮುಖವಾಡ ಹಾಕಿಕೊಂಡು ತಿರುಗಲು ಸಾಧ್ಯ"      

ಬಿಳಿಯ ಮ್ಯಾಜಿಕ್ ಅಂದರೆ ಯಾರು ತಮ್ಮ ವ್ಯಕ್ತಿತ್ವದಿಂದ ಇನ್ಪೋಬ್ಬರನ್ನು ಆಕರ್ಷಿಸಿಸುತ್ತಾರೆ.ಯಾವ ವ್ಯಕ್ತಿ ತನ್ನ ಕಲೆಯಿಂದ ಬೆರಗುಮೂಡಿಸಿ ಇನ್ನೋಬ್ಬರಿಗೆ ಮಾದರಿ ಆಗಿರುತ್ತಾನೆ ಅದು "ಬಿಳಿ ಮ್ಯಾಜಿಕ್" ಯಾವ ವ್ಯಕ್ತಿಯ ಆದರ್ಶಗಳನ್ನು ಪಾಲಿಸಿದ ಮೇಲೆ ಅವನು ಒಂದು ಉನ್ನತ ಮಟ್ಟಕ್ಕೆ ತಲುಪುತ್ತಾನೋ ಅಂತಹ ವ್ಯಕ್ತಿಯ ಮೋಡಿಯು ಬಿಳಿ ಮ್ಯಾಜಿಕ್ ಆಗುತ್ತದೆ.   "ಈ ಸೃಷ್ಠಿಯೇ ಒಂದು ಮ್ಯಾಜಿಕ್ ಅದನ್ನು ಕಾಪಾಡಿಕೊಳ್ಳಲು ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವವನೆ ಮಾಂತ್ರಿಕ"


Rate this content
Log in

Similar kannada story from Drama