Vadiraja Mysore Srinivasa

Drama Classics Fantasy

4.0  

Vadiraja Mysore Srinivasa

Drama Classics Fantasy

ಶಿವಾನಂದ

ಶಿವಾನಂದ

11 mins
1.0K


ರಸ್ತೆಯಿಂದ ಜಿಗಿದ ಕಾರು ಪ್ರಪಾತದಕಡೆಗೆ ಸ್ಲೋಮೋಷನ್ ನಲ್ಲಿ ಉರುಳುತ್ತಾ. ಜೋರಾದ ಶಬ್ದದಿಂದ ಸಿಡಿದು ಬೆಂಕಿಯ ಉಂಡೆಯಾಗಿ ಪ್ರಜ್ವಲಿಸಿತು. ಕಾರಿನ ಕಿಡಕಿಯಿಂದ ಬೆಂಕಿಯಿಂದ ಹೊತ್ತಿ ಉರಿಯುತಿದ್ದ ಮುಖವೊಂದು ಕಾಣಿಸಿತು.

ಕಿಟಾರನೆ ಕಿರುಚಿಕೊಂಡು ಲೀಸಾ ದಢಕ್ಕನೆ ಎದ್ದು ಕುಳಿತಳು. ಆತಂಕ ತುಂಬಿದ ಮುಖದಲ್ಲಿ ಬೆವರು ಸುರಿಯುತಿತ್ತು. ಜೋರಾಗಿ ನಿಟ್ಟುಸಿರು ಬಿಡುತ್ತ, ಟೇಬಲ್ ಮೇಲಿದ್ದ ಸುಂದರ ಯುವಕನ ಭಾವಚಿತ್ರದ ಕಡಗೆ ನೋಡಿದಳು. ಪಕ್ಕದಲ್ಲೇ ಇದ್ದ ಬ್ರೈಡಲ್ ಡ್ರೆಸ್ ಹಾಕಿಕೊಂಡು ನಗುತ್ತಾ ನಿಂತಿದ್ದ ತನ್ನ ಚಿತ್ರವನ್ನ ನೋಡುತ್ತಿದ್ದಂತೆ ಕಣ್ಣು ಮಂಜಾಯಿತು. ನಿಧಾನವಾಗಿ ಎದ್ದು ಟೇಬಲ್ ಮೇಲಿದ್ದ ಲೆಟರ್ ಅನ್ನು ಮತ್ತೊಮ್ಮೆ ಓದಿ ದಿಕ್ಕು ತೋಚದಾದವಳಂತೆ ಅಲ್ಲೇ ನಿಂತಳು.

"ಯಾಕೆ ಮಗು? ಮುಖ ಬಾಡಿಹೋಗಿದೆ? ರಾತ್ರಿಯೆಲ್ಲಾ ನಿದ್ದೆ ಮಾಡ್ಲಿಲ್ವಾ?"

ಮೇರಿ ಹಿಂದಿನಿಂದ ಕಟ್ಟಿಕೊಂಡ ಲೀಸಾಳ ಮುಖವನ್ನು ಬೊಗಸೆಯಲ್ಲಿ ಹಿಡಿದು ನೋಡುತ್ತಾ ಕೇಳಿದಳು.

ಮಾತನಾಡದೆ ಲೀಸಾ ತಾಯಿಯ ಎದೆಗೊರಗಿ ಅಳತೊಡಗಿದದಳು. ಮೇರಿ ಮಗಳ ತಲೆಎತ್ತಿ ಗಾಬರಿಯಿಂದ ಕೇಳಿದಳು.

"ಏನಾಯಿತು ಮಗಳೇ?”

“ನನಗೆ ಏನೂ ಅರ್ಥವಾಗ್ತಾ ಇಲ್ಲ. ಏನ್ ಮಾಡ್ಬೇಕು ಅಂತಾನೂ ಗೊತ್ತಾಗ್ತಾ ಇಲ್ಲ ಮಮ್ಮಿ. ಹೀಗೂ ನಡೆಯೋದಿಕ್ಕೆ ಸಾಧ್ಯನಾ ಅಂತ ತಲೆ ಕೆಟ್ಟುಹೋಗ್ತಾ ಇದೆ." ಮೇರಿಯ ಕೈಗೆ ಲೆಟರ್ ಕೊಟ್ಟಳು.

ಲೆಟರ್ ಓದಿದ ಮೇರಿ, ಟೇಬಲ್ ಮೇಲಿಟ್ಟು ನಿಟ್ಟುಸಿರು ಬಿಡುತ್ತ, ಲೀಸಾಳ ಕಡೆ ತಿರುಗಿ,

"ಲೀಸಾ, ದಯವಿಟ್ಟು ಈ ಮುದುಕಿಯ ಮಾತನ್ನು ಕೇಳು. ಆನಂದ್ ನ ಕಥೆ ಮುಗಿದು 8 ವರ್ಷಗಳಾದವು. ಜೀವನ ಅಮೂಲ್ಯವಾದದ್ದು. ಬ್ರಿಯಾನ್ ಬಹಳ ಒಳ್ಳೆ ವ್ಯಕ್ತಿ, ವರ್ಷಗಳಿಂದ ನಿನಗಾಗಿ ಕಾಯ್ತಾ ಇದಾನೆ. ಈ ಲೆಟರ್ ನ ಮರೆತುಬಿಟ್ಟು ಅವನನ್ನ ಮದುವೆ ಆಗು.”

ಬ್ರಿಯಾನ್ನ ಹೆಸರನ್ನು ಇಗ್ನೋರ್ ಮಾಡುತ್ತಾ ಹೇಳಿದಳು: “ಮಮ್ಮಿ ಆರತಿ ನನ್ನ ಬಹಳ ವರ್ಷಗಳ ಫ್ರೆಂಡ್. ನಿನಗೂ ಚೆನ್ನಾಗಿ ಗೊತ್ತು. ಹಾಗೆಲ್ಲ ನಿಜಾಂಶ ಇಲ್ಲದೆ ಬರೆಯೊಳಲ್ಲ."

"ಹಾಗಿದ್ದರೆ, ಏನ್ಮಾಡ್ಬೇಕು ಅಂದ್ಕೊಂಡಿದೀಯ?"

"ಗೊತ್ತಿಲ್ಲ ಮಮ್ಮಿ. ನನ್ನ ಪ್ರಶ್ನೆಗಳಿಗೆ ಉತ್ತರ ಇಂಡಿಯಾ ದಲ್ಲಿ ಸಿಗುತ್ತೆ ಅಂತ ನನಗನ್ನಿಸ್ತಿದೆ. ಆನಂದ್ ಗೆ ಆಕ್ಸಿಡೆಂಟ್ ಆದಾಗ ನಾನು ಅಲ್ಲಿರಲಿಲ್ಲ ಅವನ ಡೆಡ್ ಬಾಡಿ ಕೂಡ.........." ಕಣ್ಣಿಂದ ಬರುತಿದ್ದ ನೀರನ್ನು ಒರೆಸಿಕೊಳ್ಳುವ ಪ್ರಯತ್ನವನ್ನು ಮಾಡದೆ... ನಡುಗುವ ಧ್ವನಿಯೆಲ್ಲಿ...."ನೋಡ್ಲಿಲ್ಲ. ನಾವು ಮದುವೆ ಆಗಿರಿವುದನ್ನ ಖುದ್ದಾಗಿ ತಂದೆ ತಾಯಿ ಸಮಾನರಾದ ಗುರುಗಳಿಗೆ ಹೇಳ್ಬೇಕು...ನಂಗೆ ಇನ್ಯಾರು ಇಲ್ಲ ಅಂತ ಹೋದ ಆನಂದ್ ಮತ್ತೆ ಬರಲೇಇಲ್ಲ. ಅವನನ್ನ ಮರೆಯೆಕ್ಕೇ ಸಾಧ್ಯ ಇಲ್ಲ.”

ಅಸಹಾಯಕಳಾದ ಧ್ವನಿಯಲ್ಲಿ ಹೇಳಿದಳು ಮೇರಿ. "ಸರಿ ಮಗಳೇ. ನಿನ್ನ ಇಷ್ಟದಂತೆ ಮಾಡು. ಗಾಡ್ ಬ್ಲೆಸ್ ಯು. ಯಾವುದಕ್ಕೂ ಒಂದು ಸಾರಿ ಬ್ರಿಯಾನ್ ನ ಸಹಾಯ ಕೇಳಬಹುದಲ್ವಾ?"

"ಬೇಡ ಮಮ್ಮಿ. ಈ ವಿಷ್ಯ ನಮ್ಮಿಬ್ಬರಲ್ಲೇ ಇರಲಿ. ಸಮಯ ಬಂದಾಗ ಬ್ರಿಯಾನ್ಗೆ ನಾನೇ ಹೇಳ್ತಿನಿ."

ಗ್ಲಾಸಗೌನ ಪ್ರಖ್ಯಾತ ಹಾಸ್ಪಿಟಲ್ ನಲ್ಲಿ ಲೀಸಾ ಗೈನೋಕಾಲೊಜಿಸ್ಟ್ ಆಗಿ ಕೆಲಸ ಮಾಡುತಿದ್ದಳು. ಬ್ರಿಯಾನ್ ಅವಳ ಬಾಸ್ ಹಾಗು ಮನಸ್ಸಿನಲ್ಲೇ ಅವಳನ್ನ ಪ್ರೀತುಸುತಿದ್ದ ಸ್ನೇಹಿತ ಕೂಡ. ನಿಜ ಹೇಳಿದ್ರೆ ಸರಿಯಿರಲ್ಲ, ಬೇರೇ ಏನಾದ್ರೂ ಹೇಳ್ಬೇಕು ಅಂತ ತನ್ನ ಮನಸಿನಲ್ಲೇ ಯೋಚಿಸುತ್ತಾ ಕೆಫೆಟೇರಿಯ ದಲ್ಲಿ ಕಾಫಿ ಕುಡಿಯುತಿದ್ದವಳಿಗೆ, ಬ್ರಿಯಾನ್ ತನ್ನ ಮುಂದೆ ಕುಳಿತಿದ್ದೂ ಕೊಡ ಗೊತ್ತಾಗಲಿಲ್ಲ.

ಬ್ರಿಯಾನ್ ಲೀಸಾಳನ್ನೇ ನೋಡುತ್ತಾ ಆಲೋಚಿಸಿದ. ಯಾರು ತಾನೇ ಹೇಳಲಿಕ್ಕೆ ಸಾಧ್ಯ ಈ ಬೆಡಗಿಗೆ 38 ವರ್ಷ ಎಂದು? ಮುಗ್ಧವಾದ ಮುಖ, ಗುಳಿ ಬೀಳುವ ಕೆನ್ನೆಗಳು, ಕಪ್ಪಾದ ಭುಜದವರೆಗೆ ಇಳಿದುರುವ ಗುಂಗರು ಕೂದಲುಗಳು; ಹಾ... ಈ ಸ್ವಪ್ನ ಸುಂದರಿ ನನ್ನ ಜೀವನ ಸಂಗಾತಿಯಾದರೆ ನಾನೇ ಧನ್ಯ.

 "ಸಾರಿ ಬ್ರಿಯಾನ್, ನೀವು ಬಂದದ್ದೇ ಗೊತ್ತಾಗಲಿಲ್ಲ. ಸ್ವಲ್ಪ ಅರ್ಜೆಂಟ್ ಆಗಿ ಮಾತಾಡ್ಬೇಕಿತ್ತು. ಹಾಸ್ಪಿಟಲ್ ಒಳಗೆ ಬೇಡ ಅಂತ ನಿಮಗೆ ಫೋನ್ ಮಾಡಿ ಇಲ್ಲೀಗೆ ಬರಕ್ಕೆ ಹೇಳಿದೆ. ಸಾರಿ ನಿಮಗೆ ತೊಂದರೆ ಆಯಿತು”

"ನೋ ನೋ ನೋ ಹಾಗೆಲ್ಲ ಯಾಕ್ ಮಾತಾಡ್ತೀಯಾ ಲೀಸಾ? ನಾಲಕ್ಕು ಗೋಡೆಯೊಳಗೆ ಮಾತ್ರ ನಾನು ಮ್ಯಾನೇಜಿಂಗ್ ಡೈರೆಕ್ಟರ್. ಹೊರಗಡೆ? ನಿನ್ನ ಹಿತೈಷೀ ಹಾಗು ಸ್ನೇಹಿತ. ಹೇಳು ನನ್ನಿಂದ ಏನಾಗ್ಬೇಕಿತ್ತು?"

ಬ್ರಿಯಾನ್ ಕಡೆಗೊಮ್ಮೆ ನೋಡಿ ಅನುಮಾನಾಸ್ಪದವಾಗಿ ನುಡಿದಳು "ನನಗೆ………. 4 ವಾರ ರಜೆ ಬೇಕಿತ್ತು, ಅರ್ಜೆಂಟ್ ಆಗಿ ಇಂಡಿಯಾಗೆ ಹೋಗ್ಬೇಕಾಗಿದೆ."

"ಇಂಡಿಯಾಗ? ಅದೇನು ಈವಾಗ? ಆನಂದ್ ಹೋದ ನಂತರ ಅಲ್ಲಿನ ಎಲ್ಲ ಸಂಬಂಧಗಳು ಕಡೆದು ಹೋಯಿತು ಅಂತ ಅಂದುಕೊಡಿದ್ದೆ." ಆಶ್ಚರ್ಯದಿಂದ ಕೇಳಿದ.

"ಇಲ್ಲ ಬ್ರಿಯಾನ್." ದೂರದಲ್ಲಿ ಕಾಣುತಿದ್ದ ಹಾಸ್ಪಿಟಲ್ ಬಿಲ್ಡಿಂಗ್ ನೋಡುತ್ತಾ ಹೇಳಿದಳು. “ಆನಂದ ಪ್ರಾಪರ್ಟಿ ಗೆ ಸಂಬಂಧ ಪಟ್ಟಂತೆ ಕೆಲವು ಪೇಪರ್ ಗಳಿಗೆ ನನ್ನ ಸಿಗ್ನೇಚರ್ ಬೇಕಂತೆ. ಲೀಗಲೀ ಐ ಆಮ್...ಹಿಸ್ ವೈಫ್ ಯು ಸೀ... ಆನಂದ್ನಫ್ಯಾಮಿಲಿ ಗೆ ಅಷ್ಟಾದ್ರೂ ಮಾಡ್ಬೇಕಲ್ವಾ?"

"ಒಹ್? ಇಷ್ಟುವರ್ಷ ಆದ್ಮೇಲೂ? ಹಾಸ್ಪಿಟಲ್ನ ನಾವು ಹೇಗೋ ಮ್ಯಾನೇಜ್ ಮಾಡ್ತಿವೆ. ಆದರೇ ನನಗ್ಯಾಕೋ ನೀನು ನಿಜ ಹೇಳ್ತಿದ್ಯಾ ಅಂತ ಅನ್ನಿಸ್ತಿಲ್ಲ. ಹೌದ?

ಅವನ ಮಾತು ತನಗೆ ಇಷ್ಟವಾಗಲಿಲ್ಲವೆಂಬಂತೆ ಮುಖವನ್ನು ತಿರುಗಿಸಿಕೊಳುತ್ತಾ ಹೇಳಿದಳು. "ಯಾಕೆ ಬ್ರಿಯಾನ್, ನನ್ನಮಾತು ಸುಳ್ಳು ಅಂತ ಅನ್ನಿಸ್ತಾ ಇದೀಯಾ? ಸಮಯ ಬಂದಾಗ, ಎಲ್ಲಾನೂ ಹೇಳ್ತಿನಿ."

ಬ್ರಿಯಾನ್ ತನ್ನ ಮುಖದಲ್ಲಾಗುತ್ತಿದ್ದ ಬದಲಾವಣೆಗಳನ್ನು ತೋರಿಸದೆ, ಲೀಸಾಳ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ. "ಸರಿ ನಿನಗೆ ತಿಳಿದಂತೆ ಮಾಡು. ಆದರೇ ಕಾಲ್ ಮೀ ವೆನ್ ಯು ನೀಡ್ ಓಕೆ?"

"ಖಂಡಿತ. ನಿನ್ನಬಿಟ್ರೆ ನನಗ್ತಾನೇ ಯಾರ್ ಇದಾರೆ?” ಹಾಸ್ಪಿಟಲ್ ಕಡೆ ಸರ ಸರನೆ ನಡೆದಳು.

ಲೀಸಾ ಹೋಗುತ್ತಿದ್ದಂತೇ, ಬ್ರಿಯಾನ್ ಮೊಬೈಲ್ ತೆಗೆದು ಲಾಂಗ್ ಡಿಸ್ಟೆನ್ಸ್ ಕಾಲ್ ಮಾಡಿದ. ಯಾವ ಪ್ರತಿಕ್ರಿಯೆಯೂ ಇಲ್ಲದ ಕಾರಣ ಬೇಸತ್ತು ಗಡಿಯಾರದ ಕಡೆ ನೋಡಿ ತಲೆಯಾಡಿಸಿದ.

ಏರೋಪ್ಲೇನ್ನಲ್ಲಿ ಲೀಸಾ ಗೆ ಅಚ್ಚರಿಕಾದಿತ್ತು. ಅವಳು ಕುಳಿತ ಸೀಟ್, ಕಡೆಯ ಸಾರಿ ಆನಂದ್ ನ ಜೊತೆ ಇಂಡಿಯಾ ಗೆ ಹೋಗಿದ್ದಾಗ ಕುಳಿತಿದ್ದ ಸೀಟೇ ಆಗಿತ್ತು. ಪ್ಲೇನ್ ಟೇಕ್ ಆಫ್ ಆಗುತ್ತಿದ್ದಂತೆಯೇ, ಹಳೆಯ ನೆನಪು ಅವಳನ್ನಾವರಿಸಿತು.


ಆನಂದ್ ಹಾಗು ಲೀಸಾ ಗ್ಲ್ಯಾಸ್ಗೋ ಮೆಡಿಕಲ್ ಕಾಲೇಜ್ ನಲ್ಲಿ ಒಟ್ಟಿಗೆ ಓದಿದವರು. ಆನಂದ್ ಕಾರ್ಡಿಓಲಿಜಿಸ್ಟ್ ಕಡೆಗೆ ಒಲವು ತೋರಿಸಿದರೆ, ಲೀಸಾ ಗಯನೊಕಾಲೊಜಿಸ್ಟ್ ಆಗಬಯಸಿದಳು. ಸ್ನೇಹ ಪ್ರೀತಿಯಾಗುವುದಕ್ಕೆ ಬಹಳ ಸಮಯ ವಾಗಲಿಲ್ಲ. ಒಂದೇ ಹಾಸ್ಪಿಟಲ್ ನಲ್ಲಿ ಕೆಲಸಕ್ಕೆ ಸೇರಿದಷ್ಟೇ ಅಲ್ಲದೆ, ಹಣ ಸಂಪಾದಿಸಿ, ತನ್ನ ಊರಿನಲ್ಲಿ ಟೀಚರ್ ಹೆಸರಲ್ಲಿ ನರ್ಸಿಂಗ್ ಹೋಂ ತೆಗೆದು ಒಟ್ಟಿಗೆ ಪ್ರಾಕ್ಟೀಸ್ ಮಾಡುವ ಕನಸು ಕಂಡಿದ್ದರು.

ಮುಂಬೈ ವಿಮಾನನಿಲ್ದಾಣದಲ್ಲಿ ಆರತಿ ಅವಳಿಗಾಗಿ ಕಾಯುತಿದ್ದಳು. ಸುಮಾರು 260 ಕಿಲೋಮೀಟರು ದೂರದ ಪಂಚಗಣಿ ವರೆಗಿನ ಜರ್ನಿ ಕೇವಲ ಸಾಂಪ್ರದಾಯಕ ಮಾತುಗಳಿಂದ ಕೂಡಿತ್ತು. ಆರತಿ ಗಂಡನ ಅನಾರೋಗ್ಯದ ಕಾರಣದಿಂದ ಪಂಚಗಣಿ ಯಲ್ಲಿದ್ದಳು. ಲೀಸಾಳಿಗೆ ಆತಂಕ ತಡಯಲಾಗಲಿಲ್ಲ.

ಟೆರೇಸ್ ರೂಮ್ ಸೇರಿದ ತಕ್ಷಣ ಸ್ನೇಹಿತೆಯ ಕೈ ಹಿಡಿದುಕೊಂಡಳು ಆರತಿ. “ಲೀಸಾ, ನಾವಿಬ್ಬರೂ 15 ವರ್ಷಗಳಿಂದ ಸ್ನೇಹಿತರು, ಒಟ್ಟಿಗೆ ಓದಿದವರು. ಆ ಕಾರಣಕ್ಕಾಗಿಯೇ, ಲೆಟರ್ ಬರೆದು ಕರೆಸಿಕೊಂಡದ್ದು. ನೂರಾರು ಪ್ರಶ್ನೆಗಳು ನಿನ್ನನ್ನು ಕಾಡುತ್ತಿರಬೇಕು ಅಲ್ವ? ಈಗ ನಾ ಹೇಳುವ ವಿಷಯ ಕೇಳಿ ನಿನಗೆ ದಿಗ್ಬ್ರಮೆ ಆಗಬಹುದು. ಆದರೇ, ನಾನು ಹೇಳುವ ಯಾವ ವಿಷಯದಲ್ಲೂ ಸತ್ಯವಾಗಿಯೂ ಉತ್ಪ್ರೇಕ್ಷೆ ಇಲ್ಲ.”

“15 ದಿನಗಳ ಕೆಳೆಗೆ ನಾನು ಮತ್ತು ಮನೋಜ್ ಪಂಚಗಣಿ ಇಂದ 20 ಕಿಲೋಮೀಟರು ದೂರದಲ್ಲಿರುವ ಮಹಾಬಲೇಶ್ವರ್ಗೆ ಹೋಗುತಿದ್ದವು. ಡ್ರೈವರ್ ಬರದ ಕಾರಣ, ಮನೋಜ್ ಡ್ರೈವ ಮಾಡುತ್ತಿದ್ದರು. ಇದ್ದಕ್ಕಿದ್ದಂತೇ ಮನೋಜ್ ಜ್ಞಾನ ತಪ್ಪಿ ಸ್ಟಿಯರಿಂಗ್ ವೀಲ್ ಮೇಲೆ ಕೋಲಾಪ್ಸ್ ಆಗಿಬಿಟ್ಟರು. ನಮ್ಮ ಕಾರು ಮರಕ್ಕೆ ಡಿಕ್ಕಿ ಹೊಡೆದು ನಿಂತಿತು. ಪುಣ್ಯಕ್ಕೆ ನಮ್ಮಿಬ್ಬರಿಗೂ ಏನು ಆಗಿರಲಿಲ್ಲ. ತಕ್ಷಣ ಕಾರಿನಿಂದ ಕೆಳೆಗಿಳಿದು ಸಹಾಯಕ್ಕಾಗಿ ಕೂಗಿದೆ.”

“ಸುಮಾರು 8 ಅಥವಾ 10 ವರ್ಷದ ಒಬ್ಬ ಹುಡುಗ ಬಂದವನೇ, ಮುಂದಿನ ಸೀಟ್ ನಲ್ಲಿದ್ದ ಮನೋಜ್ಅನ್ನು ಪರೀಕ್ಷಿಸಿ ಐಸ್ ಬಾಕ್ಸ್ ಇದೆಯಾ ಅಂತ ಕೇಳಿದ. ಗಾಬರಿಯಲ್ಲಿದ್ದ ನಾನು ಸರಿಯಾಗಿ ಉತ್ತರ ಕೂಡಲಿಲ್ಲ. ಈಗಲೇ ಬರುತ್ತೇನೆ ಅಂತ ಹೇಳಿ 10 ನಿಮಷದಲ್ಲಿ ಎಲ್ಲಿಂದಲೋ ಐಸ್ ತಂದು ಅದನ್ನು ಪುಡಿ ಮಾಡಿ ಮನೋಜ್ ತಲೆಗೆ ಒಂದು ಟವಲ್ನಲ್ಲಿ ಸುತ್ತಿದ. ತಾನೇ ಡ್ರೈವೆಮಾಡಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದ.”

ಲೀಸಾಳ ಅದರುತ್ತಿರುವ ಕೈಗಳ್ಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮುಂದುವರೆಸಿದಳು ಆರತಿ.

“ಐಸ್ ಪ್ಯಾಕ್ ಕೊಟ್ಟು ಬಹಳ ಒಳ್ಳೆ ಕೆಲೆಸ ಮಾಡಿದಿರಿ. ಇಲ್ಲದಿದ್ರೆ ಬ್ರೈನ್ಗೆ ಡ್ಯಾಮೇಜ್ ಆಗಬಹುದಿತ್ತು. ಆರ್ ಯು ಏ ಕಾರ್ಡಿಯೋಲಾಜಿಸ್ಟ್?” ಮನೋಜನನ್ನು ಅಟೆಂಡ್ ಮಾಡಿದ ಡಾಕ್ಟರ್ ಕೇಳಿದರು. ನಡೆದದ್ದನ್ನೆಲ್ಲಾ ಹೇಳಿದಾಗ, ಡಾಕ್ಟರ್ ಆಶ್ಚರ್ಯ ಪಟ್ಟರು. ಆ ಹುಡುಗ ಮಾಡಿದ ಫಸ್ಟ್ ಏಡ್ ಗೆ ಥೆರಪಿಸ್ಟ್ರಿಕ್ ಹೈಪೋಥೆರ್ಮಿತ್ ಅಂತಾರಂತೆ. ಕೇವಲ ಒಬ್ಬ ಟ್ರೈನ್ಡ್ ಕಾರ್ಡಿಯಾಕ್ ಸ್ಪೆಷಲಿಸ್ಟ್ ಗೆ ಮಾತ್ರ ಮಾಡೋದಕ್ಕೆ ಸಾಧ್ಯ ಅಂದ್ರು.”

ಮೌನವಾಗಿದ್ದ ಲೀಸಾ ಆರತಿಯ ಮುಖವನ್ನೇ ನೋಡುತಿದ್ದಳು. ಲೀಸಾಳನ್ನು ಅಪ್ಪಿಕೊಂಡು ಹೇಳಿದಳು ಆರತಿ. "ಹೌದು ಲೀಸಾ, ಆನಂದ್ ಗ್ಲಾಸಗೌ ನಲ್ಲಿ ಒಬ್ಬ ಪೇಷಂಟ್ ಜೀವ ಉಳಿಸಿರಲಿಲ್ವ ಇದೇ ಮೆಥಡ್ ಇಂದ? ಅಷ್ಟೇ ಅಲ್ಲ ನಾನು ಆ ಹುಡುಗನ ಮನೆಗೆ ಹೋಗಿದ್ದಾಗ ಅವ್ನು ಹೇಳಿದ ವಿಷ್ಯ ಕೇಳಿ ಇನ್ನೂ ಗಾಬರಿಆಯಿತು. ನಾವು ಓದಿದ ಗ್ಲ್ಯಾಸ್ಗೋನ ಕಾಲೇಜು, ರಿವರ್ಸೈಡ್ ಮೂಸೆಯಂ, ಬಟಾನಿಕಲ್ ಗಾರ್ಡನ್, ಕ್ಯಾಥೆಡ್ರೆಲ್.... ನನಗಂತೂ ಹುಚ್ಚು ಹಿಡಿಯೋದು ಒಂದು ಬಾಕಿ. ನಿಜವಾಗ್ಲೂ, ಲೀಸಾ, ಆನಂದನೇ ನನ್ನ ಕಣ್ಣಮುಂದೆ ಬಂದಂತಿತ್ತು. ಗ್ಲಾಸಗೌ ಗೆ ಹೋಗೋದಿರಲಿ, ಆ ಹುಡುಗ ಹತ್ತಿರದ ಮುಂಬೈ ಸಿಟಿಗೂ ಹೋಗಿಲ್ವಂತೆ."

ಗೆಳತಿಯರಿಬ್ಬರೂ, ಮೌನವಾಗಿದ್ದರು. ಲೀಸಾ ನಡುಗುವ ಧ್ವನಿಯಲ್ಲಿ ಹೇಳಿದಳು. "ಆರತಿ, ಇದನ್ನೆಲ್ಲಾ ಕೇಳಿ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಕೂಡ ನನಗರ್ಥ ಆಗ್ತಾ ಇಲ್ಲ. 8 ವರ್ಷಗಳ ನಂತರ? ನಿನಗ್ ಚೆನ್ನಾಗ್ ಗೊತ್ತು, ನಂಗೆ ಈ ಪುನರ್ಜನ್ಮದ ಬಗ್ಗೆ ಒಂಚೂರು ನಂಬಿಕೆ ಇಲ್ಲ. ಆದ್ರೂ......" 

"ಲೀಸಾ, ನಿನ್ನ ಹಾಗೆ ನಾನು ಒಬ್ಬ ಡಾಕ್ಟರ್ ಎಲ್ಲವನ್ನು ಪರೀಕ್ಷಿಸಿಯೇ ಒಪ್ಪಿಕೊಳ್ಳೂ ಸ್ವಭಾವ. ಆದರೆ, ಆ ಹುಡುಗನ್ನ ಮತ್ತೆ ಭೇಟಿ ಮಾಡಿದಾಗ, ನನ್ನ ಮನಸ್ಸಿಗೆ ಆನಂದ್ ಮತ್ತೆ ಹುಟ್ಟಿದ್ದಾನೆ ಅನ್ನೋದ್ರಲ್ಲಿ ಯಾವ ಸಂಶಯವೂ ಇಲ್ಲ ಅಂತ ಅನ್ನಿಸಿತು." 

"ಹೌದೂ, ಇದುವರೆಗೂ ನೀನು ಆ ಹುಡುಗನ ಹೆಸರೇ ಹೇಳಿಲ್ಲ?” ಆತಂಕದ ಧ್ವನಿಯಲ್ಲಿ ಕೇಳಿದಳು ಲೀಸಾ

"ಶಿವ. ಬಡವರ ಮನೆ ಹುಡುಗ. ತಂದೆ, ತಾಯಿ, ತಂಗೀನ ಅವನೇ ಸಾಕ್ತಾ ಇದ್ದಾನೆ. ಟೂರಿಸ್ಟ್ಸ್ ಗಳನ್ನ ಕುದುರೆ ಮೇಲೆ ಕೂಡಿಸ್ಕೊಂಡು ಟೇಬಲ್ ಟಾಪ್ಗೆ ಕರ್ಕೊಂಡ್ಹೋಗೋದು, ಊರ್ ತೋರಿಸೋ ಕೆಲಸ ಮಾಡ್ಕೊಂಡ್ ಇದಾನೆ.”

"ನಾನು ಅವನನ್ನ ನೋಡ್ಬೇಕು ಆರತಿ. ಆನಂದ್ ಇದ್ದಹಾಗೆ ಇದ್ದಾನ? ನನ್ನ ಹೃದಯದ ಬಡಿತ ಜಾಸ್ತಿ ಆಗ್ತಾ ಇದೆ. ಅವನನ್ನ ನೋಡಿದ ಮೇಲೆ ಇನ್ನೇನಾಗತ್ತೂ?”

"ಒನ್ ನಿಮಿಷ ಲೀಸಾ! ನೀನು ನೀನಾಗಿ ಅವನನ್ನ ನೋಡಕ್ಕಾಗಲ್ಲ. ನೀನು ಒಬ್ಬ ಜರ್ನಲಿಸ್ಟ್. ಶಿವನ ಜನಾಂಗದ ಬಗ್ಗೆ ರಿಸರ್ಚ್ ಮಾಡಕ್ಕೆ ಬಂದಿದೀಯ. ಆ ಸೋಗಿನಲ್ಲಿ, ನೀನು ಅವನನ್ನ ಮಾತಾಡ್ಸಬೋದು. ಇರಕ್ಕೆ ಹೋಟೆಲ್ ನಲ್ಲಿ ನಿನ್ ಹೆಸರಲ್ಲೇ ಬುಕ್ ಮಾಡಿದೀನಿ.” 

ರಾತ್ರಿಯೆಲ್ಲ ನಿದ್ದೆ ಇಲ್ಲದೆ ಹೊರಳಾಡಿದಳು. ನನ್ನನ್ನ ಗುರ್ತು ಹಿಡೀಬಹುದಾ? ಯಾತಕ್ಕಾಗಿ ಮತ್ತೆ ಬಂದ? ಆನಂದ್ನ ಸಾವಿನ ಸತ್ಯ ಹೊರಬರಲಿದೆಯೇ? ಲೀಸಾಳ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ.

ಹೋಟೆಲ್ನ ಮೆಟ್ಟಲನ್ನು ಇಳಿದು ಬರುತ್ತಿದ್ದಂತೆ, ಎದುರಿಗೆ ನಿಂತಿದ್ದ ಶಿವ ಸ್ಪಷ್ಟವಾದ ಇಂಗ್ಲಿಷ್ ನಲ್ಲಿ, "ಗುಡ್ ಮಾರ್ನಿಂಗ್ ಮೇಡಂ. ಮೈ ನೇಮ್ ಈಸ್ ಶಿವ. ಆರ್ ಯು ಕಂಫರ್ಟಬಲ್ ಇನ್ ರೈಡಿಂಗ್ ಹಾರ್ಸ್? ಡೋಂಟ್ ವರಿ. ಐ ಹಾವ್ ಬ್ರಾಟ್ ದ ಬೆಸ್ಟ್ ಹಾರ್ಸ್."

ತಲೆಗೆ ಕೆಂಪು ಟರ್ಬನ್ ಸುತ್ತ್ತಿ, ನೀಲಿ ಬಣ್ಣದ ಮೇಲು ವಸ್ತ್ರ ಹಾಗು ಬಿಳೀ ಪೈಜಾಮ ದರಿಸಿದ್ದ ಶಿವ. ಮಾತನಾಡದೆ, ಲೀಸಾ ಕುದುರೆಯನ್ನೇರಿ ಕುಳಿತಳು. ಲಗಾಮನ್ನು ಹಿಡಿದು, ನಿಧಾನವಾಗಿ ನಡೆಸುತ್ತಾ ತನ್ನ ಊರು, ಜನ, ಅಲ್ಲಿನ ವಾತಾವರಣ, ಬೆಳಗಿನ ಸೂರ್ಯೋದಯದ ವರ್ಣನೆಯನ್ನ ನಿರರ್ಗಳವಾಗಿ ಮಾಡುತ್ತಾ ನಡೆಯುತಿದ್ದ ಶಿವನನ್ನೇ ನೋಡುತ್ತಾ ಮೂಕಳಾದಳು. 

ಪಂಚಗಣಿ ಮಹಾರಾಷ್ಟ್ರ ರಾಜ್ಯದಲ್ಲೇ ಅತಿ ಸುಂದರವಾದ ಸ್ಥಳ. ಅಲ್ಲಿನ ಟೇಬಲ್ ಟಾಪ್ಗೆ ಬೆಳಿಗಿನ ಸೂರ್ಯೋದಯ ನೋಡಲಿಕ್ಕೆಂದೇ ಸಾವಿರಾರು ಜನ ಬರುತ್ತಾರೆ. ಕುದುರೆಯ ಮೇಲೆ ಕುಳಿತು ಟೇಬಲ್ ಟಾಪ್ಗೆ ಪ್ರಯಾಣ ಮಾಡುವುದೇ ಒಂದು ವಿಶಿಷ್ಟವಾದ ಅನುಭವ.

ಶಿವ ಲೀಸಾಳನ್ನು ಬಂಡೆಯ ಮೇಲೆ ಕೂಡಿಸಿದ. ಕುಳಿತ ಕೂಡಲೇ, ಲೀಸಾ ಗಾಬರಿಯಿಂದ ಎದ್ದಳು. ಕಳೆದಸಾರಿ ಆನಂದ್ ನೊಟ್ಟಿಗೆ ಬಂದಿದ್ದಾಗ ಅದೇ ಬಂಡೆಯ ಮೇಲೆ ಕುಳಿತ ನೆನಪು. ಲೀಸಾಳ ಗಾಬರಿಯನ್ನು ನೋಡಿ ಶಿವ ಕಂಗಾಲಾದ. “ಮ್ಯಾಮ್ ಈಸ್ ಎವ್ರಿಥಿಂಗ್ ಓಕೆ?”

ಆಗಸ್ಟೇ ಲೀಸಾಳಿಗೆ ಅರಿವಾಯಿತು ಶಿವ ನುರಿತ ಇಂಗ್ಲಿಷ್ ನಲ್ಲಿ ಮಾತಾಡ್ತಾಯಿದಾನೆ ಅಂತ. "ಹೌ ಕಮ್ ಯು ಸ್ಪೀಕ್ ಫ್ಲ್ಯೂಎಂಟ್ ಇಂಗ್ಲಿಷ್! ವೇರ್ ಡಿಡ್ ಯು ಲರ್ನ್? ನಾನು ಕನ್ನಡದವಳು. ಮ್ಯಾಂಗಲೋರ್ ನಮ್ಮ ತಾಯಿಯ ಊರು. ಇಂಗ್ಲೆಂಡ್ ನಲ್ಲಿ ಇದ್ದರೂ, ಮನೇಲಿ ಕನ್ನಡ ಮಾತನಾಡುತ್ತೇವೆ. ನಿನಗೆ ಕನ್ನಡ ಬರುತ್ತೆ ಅಲ್ವ?”

ನಗುತ್ತ ಹೇಳಿದ ಶಿವ. "ನಮ್ಮೆ ತಂದೆ ಮಹಾರಾಷ್ಟ್ರ ದವರು ತಾಯಿ ಕನ್ನಡದವರು ಹಾಗಾಗಿ, ಎರಡೂ ಭಾಷೆ ಮಾತಾಡ್ತೀವಿ. ಹಾನ್.... ನಿಮ್ಮ ಮೊದಲ ಪ್ರಶ್ನೆ ಗೆ ಉತ್ತರ. ಮೇಡಂ ನಾನು ಶಾಲೆಗೇ ಹೋದವ್ನಲ್ಲಾ ಆದ್ರೂ, ಸರ ಸರ ಅಂತ ಇಂಗ್ಲಿಷ್ ತನಗೆ ತಾನೇ ಬರುತ್ತೆ. ಹೆಂಗೇ ಅಂತ ಗೊತ್ತಿಲ್ಲ. ರಾತ್ರಿ ಮಲಗಿದ್ದಾಗ ವಿಚಿತ್ರ ಕನಸುಗಳು ಕೂಡ ಬೀಳತ್ತೆ. ನಾನು ನೋಡಿರದ ಸ್ಥಳ... ಊರು.... ಜನ.... ಮನೆಗಳು...." ಶಿವ ಅರ್ಧದಲ್ಲೇ ನಿಲ್ಲಿಸಿದ.

"ಯಾಕೆ ಶಿವ ನಿಲ್ಲಿಸ್ಬಿಟ್ಟೆ? ಯಾವ ಸಂಕೋಚಾನೂ ಬೇಡ. ನಾನು ಒಬ್ಬ ಜರ್ನಲಿಸ್ಟ್. ಕೇಳಿದ್ದನ್ನ ಗೌಪ್ಯವಾಗಿ ಇಡೋದು ನನ್ನ ವೃತ್ತ್ತಿ ಧರ್ಮ.”

"ಯಾಕೋ ಎಲ್ಲರ ಹಾಗೆ ನಾನಿಲ್ಲ ಅಂತ ನನಗ್ ಅನ್ಸತ್ತೆ ಮ್ಯಾಮ್. ಯಾರಿಗಾದರೂ ತೊಂದರೆ ಆದಾಗ ಸಹಾಯ ಮಾಡಿದ್ರೆ, ಡಾಕ್ಟರ್ ಅಂತ ಕರೀತಾರೆ. ಇನ್ ಕೆಲವರು ಹುಚ್ಚಾ ಅಂತಲೂ ಕರೀತಾರೆ. ನನ್ನ ತಂದೆ, ತಾಯಿ ಅವಿದ್ಯಾವಂತರು, ಅವ್ರಿಗೆ ನನಗಾಗೋ ಅನುಭವಾನೆಲ್ಲಾ ಹೇಳಕ್ಕೆ ಆಗಲ್ಲ. ಇಂದಷ್ಟೇ ನಿಮ್ಮನ್ನ ನೋಡಿದ್ದು ಮೇಡಂ ನಿಮ್ಮ ಪರಿಚಯ ಕೂಡ ನನಗಿಲ್ಲ. ಹಾಗಾಗಿ...."

"ಶಿವ ನನಗೇನು ಅರ್ಜೆಂಟ್ ಇಲ್ಲ. ಆದ್ರೆ ಒಂದು ಮಾತು. ನಾನು ಈ ಊರ್ನಲ್ಲಿರೋತನ್ಕಾ ನೀನು ಬೇರೆ ಯಾವ ಟೂರಿಸ್ಟನ್ನು ಒಪ್ಪಿಕೊಳ್ಳಬೇಡ. ಹಣದ ಬಗ್ಗೆ ಚಿಂತೆ ಬೇಡ...." ಪರ್ಸ್ನಿಂದ ಹಣದ ಕಂತೆಯನ್ನು ತೆಗೆದು ಶಿವನ ಕೈಗಿಟ್ಟಳು.

"ಮೇಡಂ, ಈ ಹಣಕ್ಕೆ, ನನ್ನ ಕುದುರೇನೇ ಕೊಂಡ್ಕೊಳ್ಳಬಹುದು. ನೀವು ಹೇಳಿದ ಹಾಗೆ ಆಗಲೀ ನಾಳೆ ಬೆಳೆಗ್ಗೆ ಬರ್ತೀನಿ. ಸರಿನಾ?" ನಗುತ್ತಾ ಹೇಳಿದ ಶಿವ.

ಪ್ರಕೃತಿ ತೋರಿಸಲಿದ್ದ, ಹಿಂದೆಂದೂ ಕಾಣದ ಸೂರ್ಯೋದಯದ ನಿರೀಕ್ಷಣೆಯಲ್ಲಿ ನೆರೆದಿದ್ದ ಜನರೆಲ್ಲರೂ ಸ್ತಬ್ದರಾದರು. ಭೂಮಿಯ ಅಂಚಿಂದ ನಿಧಾನವಾಗಿ ಮೇಲೇಳುತಿದ್ದ ಸೂರ್ಯನ ಕಿರಣಗಳಿಂದ ತನ್ನ ಜೀವನದಲ್ಲಿನ ಕತ್ತಲೆಯು ಕೂಡ ಮಾಯವಾಯಿತೇನೋ ಎಂಬಂತೆ ಪುಳಕಿತಳಾದಳು ಲೀಸಾ.

ಆರತಿ ನಡೆದದ್ದನ್ನೆಲ್ಲಾ ಕೇಳಿ ಲೀಸಾಳಿಗೆ ಎಚ್ಚರಿಕೆಯ ಮಾತನ್ನ ಹೇಳಿದಳು. ತಾನು ಮತ್ತು ಮನೋಜ್ ಮಹಾಬಲೇಶ್ವರ್ ಗೆ ಹೋಗಬೇಕಾಗಿರುವ ಅನಿವಾರ್ಯತೆಯನ್ನು ವಿವರಿಸಿದಳು.

ಬಂದವನೇ, ನೆಲದ ಮೇಲೆ ಕುಳಿತ ಶಿವ. "ಮೇಡಂ, ನೀವು ನಮ್ಮ ಜನಾಂಗದ ಬಗ್ಗೆ ರಿಸರ್ಚ್ ಮಾಡಬೇಕು ಅಂತ ಆರತಿ ಮೇಡಂ ಹೇಳಿದರು. ನನಗೆ ತಿಳಿದಿದ್ದು ಹೇಳ್ತಿನಿ."

"ಕೇಳ್ತೀನಿ ಶಿವ. ಮೊದಲು, ಬೆಳಿಗ್ಗೆ ನಿನಗೆ ಅದೇನೋ ಕನಸುಗಳು ಬೀಳತ್ತೆ ಅಂತ ಹೇಳಕ್ಕೆ ಹೊರಟಿದ್ಯಲ್ಲಾ ಸ್ವಲ್ಪ ಡೀಟೇಲ್ ಆಗಿ ಹೇಳ್ತೀಯಾ? "

"ನಾನು ಇದುವರೆಗೂ, ಯಾರ್ಹತ್ರಾನು ಹೇಳಿಲ್ಲ ಮೇಡಂ. ಆದ್ರೆ, ನಿಮ್ಮನ್ನ ನೋಡಿದರೆ, ಎಷ್ಟೋ ವರ್ಷಗಳಿಂದ ಪರಿಚಯ ಅನ್ಸತ್ತೆ. ರಾತ್ರಿ ಕನಸಿನಲ್ಲಿ, ಯಾರೋ ನನ್ನನ್ನ ಹೊತ್ಕೊಂಡು ಹೋಗಿ ಜೀಪಲ್ಲಿ ಕಟ್ಟಿಹಾಕಿರ್ತಾರೆ, ಆ ಜೀಪ್ ಕೆಳೆಗೆ ಉರಳೂ ಹಾಗೆ. ಯಾವತ್ತೂ ಜೀಪಲ್ಲೂ ಕೂತ್ಕೊಂಡವನೇ ಅಲ್ಲ. ಆದರೂ. ಆರತಿ ಮೇಡಂ ಅವರ ಹಸ್ಬೆಂಡ್ ಗೆ ಹೃದಯಾಘಾತ ಆಗಿತ್ತಲ್ಲ, ಅವತ್ತು ನಾನೇ ಕಾರ್ ಡ್ರೈವ್ ಮಾಡ್ಕೊಂಡು ಹೋದೆ. ಹೇಗೆ ಅಂತ ಗೊತ್ತಿಲ್ಲ. ಇನ್ನು ಕೆಲವುಸಾರಿ......." ಶಿವ ಮಾತು ನಿಲ್ಲಿಸಿ ಎಲ್ಲಿಯೋ ಕಳೆದುಹೋದವನಂತೆ ಕುಳಿತ.

ರಾತ್ರಿಯಿಡೀ ನಿದ್ದೆ ಇಲ್ಲದೆ ಲೀಸಾ ಹೊರಳಾಳಿದಳು. ಶಿವನ ನಡವಳಿಕೆ, ಆಡುವ ಮಾತು, ಅವನ ಗ್ಲ್ಯಾಸ್ಗೋ ವರ್ಣನೆ, ಆಕ್ಸಿಡೆಂಟ್ ಆದ ಜೀಪ್ ಎಲ್ಲ ತಾಳೆಯಾಗಿತ್ತಾದರೂ, ನಂಬುವುದಕ್ಕೆ ಸಾಧ್ಯವಾಗಲಿಲ್ಲ. ಬ್ರಿಯಾನ್ ಗೆ ಕರೆ ಮಾಡಬೇಕೆಂದುಕೊಂಡರೂ, ಒಳ ಮನಸ್ಸು, ಬೇಡವೆಂದು ತೀರ್ಮಾನಿಸಿತು.

ಬೆಳಗಾಗುವುದನ್ನೇ ಕಾಯುತಲಿದ್ದ ಲೀಸಾಗೆ, ಕೆಳೆಗೆ ಇಳುದು ಬರುತ್ತಿದ್ದಂತೆ, ನಗುತ್ತ ನಿಂತಿದ್ದ ಶಿವನನ್ನ ನೋಡಿ, ತಾನಾಗಾಗುತ್ತಿರುವ ಆತಂಕವನ್ನ ಮರೆತು ಹೇಳಿದಳು. "ಇವತ್ತು ಟೇಬಲ್ ಟಾಪ್ ಬೇಡ ಶಿವ, ಬೇರೆ ಎಲ್ಲಾದರೂ ಜಾಗಕ್ಕೆ ಕರೆದುಕೊಂಡು ಹೋಗ್ತಿಯ? "

ಒಂದು ಕ್ಷಣ ಯೋಚಿಸಿದ ಶಿವ ಅನುಮಾನಾಸ್ಪದವಾಗಿ ನುಡಿದ. "ಮ್ಯಾಮ್, ಬೇರೆ ಜಾಗಕ್ಕೆ ಹೋಗ್ಬಹುದು ಆದರೇ.."

“ಆದರೇ? ಏನಾಯಿತು ಶಿವ?"

ಲಿಸಾಳ ಮುಖವನ್ನೇ ನೋಡುತ್ತಾ ಹೇಳಿದ ಶಿವ.

"ಮ್ಯಾಮ್, ಕುದುರೆ ಒಂದೇ ಇದೆ. ದಾರಿ ಸ್ವಲ್ಪ ದೂರ…ಅದಿಕ್ಕೆ"

"ಅಷ್ಟೇ ತಾನೇ," ನಸುನಗುತ್ತಾ ನೋಡಿದಳು, ಲೀಸಾ " ನಿನ್ನೊಟ್ಟಿಗೆ ಬರೋದಿಕ್ಕೆ, ನನಗೇನು ಅಭ್ಯಂತರ ಇಲ್ಲ…..ಓಕೆ?"

ಸಿಡ್ನಿ ಪಾಯಿಂಟ್ನ ನಿಂದ ಕೆಳಗೆ ಪಳ ಪಳನೇ ಹೊಳೆಯುತ್ತಿರುವ ಕೃಷ್ಣ ವ್ಯಾಲಿ. ತಣ್ಣಗೆ ಬೀಸುತಿರುವ ಗಾಳಿ ಲೀಸಾಳನ್ನು ಪರವಶಗೊಳಿಸಿತು.

“ನಿನಗೆ ಕನಸುಗಳು ಶುರುವಾಗಿದ್ದು ಯಾವಾಗಿನಿಂದ ಶಿವ? "

"ಮೇಡಂ, ಸುಮಾರು ಎರಡು ವರ್ಷದ ಹಿಂದೆ ಯಾವ್ದೋ ಕಾರ್ ಆಕ್ಸಿಡೆಂಟ್ ನೋಡಿ ಬಂದವನಿಗೆ ತಲೆ ನೋವು ಶುರು ಆಯಿತು. ಅವತ್ತಿಂದಾ ಹೀಗಾಗ್ತಾ ಇದೆ. ಇನ್ನು ಒಂದು ವಿಷ್ಯ ಮಾಡಮ್....” ಶಿವ ಅನುಮಾನಿಸಿದ.

ತಲೆ ಸವರುತ್ತ ಹೇಳಿದಳು.... "ಪರವಾಗಿಲ್ಲಾ ಶಿವ. ಯಾವ ಸಂಕೋಚಾನು ಇಲ್ಲದೆ ಹೇಳು."

"ಸರಿಯಾಗಿ ಕಾಣ್ಸಲ್ಲ. ಯಾವುದೂ ಫೌಂಟನ್, ನೀರೊಳೆಗೆ ಮುಳುಗಿ ಏನೂ ಹುಡಕ್ತಾ ಇರ್ತೀನಿ ಒಬ್ಬಳು ಹುಡುಗಿ ಕಿರ್ಚ್ಕೋತಾಳೆ....” ತಲೆ ತಗ್ಗಿಸಿಕೊಂಡು ಹೇಳಿದ ಶಿವ.

ದಡಕ್ಕನೆ ಎದ್ದು ನಿಂತಳು ಲೀಸಾ. ಆನಂದ್ ಮನಸ್ಸಿನಲ್ಲಿದ್ದ ಭಾವನೆಗಳನ್ನು ಮೊದಲ ಬಾರಿಗೆ ರೋಮ್ ನ ದಿ ಟ್ರೆವಿ ಫೌಂಟನ್ನಲ್ಲಿ ನೀರಲ್ಲಿ ಮುಳುಗಿ ಕಾಯಿನ್ ಹುಡುಕಿ ಹೇಳಿದ್ದ. ತನಗೆ ಮತ್ತು ಆನಂದ್ಗೆ ಮಾತ್ರ ಗೊತ್ತಿದ್ದ ವಿಷ್ಯ. ದಿಕ್ಕೇ ತೋಚದೆ ನಿಂತಿದ್ದ ಲೀಸಾ ಅಲ್ಲಿಗೆ ಬಂದು ನಿಂತವರನ್ನು ನೋಡಲೇ ಇಲ್ಲ

ತಲೆಗೆ ಟೋಪಿ ಹಾಕಿಕೊಂಡು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ ಇಬ್ಬರು ಚೇಲಗಳೊಂದಿಗೆ ಬಂದು ನಿಂತವನು ಲೀಸಾ ಬಾಯಿ ತೆಗೆದು ಕೇಳುವುದಕ್ಕೆ ಮುಂಚೆ, ಇಂಗ್ಲಿಷ್ ನಲ್ಲಿ ಹೇಳಿದ. "ನೀವ್ ಯಾರು, ಯಾತಕ್ಕಾಗಿ ಇಲ್ಲಿ ಬಂದಿದಿರಾ ಅಂತಾನೂ ಗೊತ್ತು. 48 ಗಂಟೆ ಒಳಗೆ ಜಾಗ ಕಾಲಿ ಮಾಡ್ಕೊಂಡು ಹೋಗ್ದೆದ್ರೇ ಮುಂದೆ ಆಗೋ ಅನಾಹುತಕ್ಕೆ ನೀವೇ ಜವಾಬ್ದಾರರು." ಶಿವನ ಕಡೆಗೊಮ್ಮೆ ಕೆಕ್ಕರಿಸಿ ನೋಡುತ್ತಾ, ಆ ವ್ಯಕ್ತಿ ಹೊರಟೆ ಹೋದ.

ದಿಗ್ಬ್ರಮೆ ಇಂದ ಕೇಳಿದಳು 

"ಆ ವ್ಯಕ್ತಿ ಯಾರು ಶಿವ? 

"ಅವನು ದೊಡ್ಡ ರೌಡಿ. ಜೋಸೆಫ್. ಅವನು ನಿಮಗೆ ಹೇಗೆ ಪರಿಚಯ? ಇಲ್ಲಿ ಇರೋದ ಬೇಡ ಬನ್ನಿ ಮೇಡಂ, ನಿಮ್ಮ ಹೋಟೆಲ್ ಗೆ ಹೋಗೋಣ." ಹೋಗುತಿದ್ದ ವ್ಯಕ್ತಿಗಳನ್ನೇ ನೋಡುತ್ತಾ ಹೇಳಿದ, ಶಿವ.

ವಿಷಯ ತಿಳಿದ ಆರತಿ ಗಾಬರಿಯಾದಳು, "ತುಂಬಾ ದೊಡ್ಡ ರೌಡಿ ಆ ಜೋಸೆಫ್. ಯಾಕೊ ವಿಷ್ಯ ಜಟಿಲವಾಗ್ತಾಇದೆ ಲೀಸಾ. ನನ್ನ ಪರಿಚಯದ ಪೊಲೀಸರಿಗೆ ಇನ್ಫಾರಂ ಮಾಡ್ತಿನೀ. ನೀನ್ ಮಾತ್ರ ನನಗೆ ಫೋನ್ ಮಾಡ್ತಾ ಇರು, ಪ್ಲೀಸ್."

ಸ್ನೇಹಿತೆಯ ಭರವಸೆ ಲೀಸಾಳಿಗೆ ಸಾಂತ್ವನ ನೀಡಿತು. ಆನಂದ್ನ ಫೋಟೋವನ್ನು ನೋಡುತ್ತಾ ಮಾತನಾಡಿದಳು. “ನೀನೆ ಹೇಳು ಆನಂದ್ ನಾನ್ ಏನ್ ಮಾಡ್ಲಿ ಅಂತ? ಶಿವನನ್ನ ನೋಡ್ತಾ ಅವ್ನ ಮಾತ್ ಕೇಳ್ತಾಯಿದ್ರೇ, ನೀನೇ ಕಣ್ಮುಂದೆ ಬಂದಂತೆ ಆಗತ್ತೆ. ನಾನ್ ಏನ್ ಮಾಡ್ಲಿ?”

ಫೋನ್ ರಿಂಗ್ ಆಯಿತು. ಆ ಕಡೆಯಿಂದ ಕೇಳಿದ್ದು ಪರಿಚಿತವಾದ ಧ್ವನಿ. "ಹಲೋ ಬ್ರಿಯಾನ್? ಈ ನಂಬರ್ ನಿನಗೆ ಹೇಗೆ ಸಿಕ್ತು." 

"ಆರತಿಗೆ ಫೋನ್ ಮಾಡಿ ನಿನ್ ನಂಬರ್ ತೊಗೊಂಡೆ. ಏನಾಗ್ತಾಇದೇ ಲೀಸಾ? ಆರತಿ ವಾಸ್ ಡಿಸ್ಟರ್ಬ್ಡ್. ಈಸ ಎವ್ರಿಥಿಂಗ್ ಫೈನ್?”

"ನಿನಗ್ಯಾಕೆ ಹಾಗೆ ಅನ್ನಿಸ್ತಾಯಿದೆ? ಇಲ್ಲಿ ಎಲ್ಲ ಆರಾಮಾಗಿದೆ. ಪೇಪರ್ ವರ್ಕ್ ನಲ್ಲಿ ಬ್ಯುಸಿ ಆಗಿದ್ದೀನಿ ಅಷ್ಟೇ. ಎನಿವೇ, ಆಯ್ ವಿಲ್ ಕಾಲ್ ಲೇಟರ್." ಉತ್ತರಕ್ಕೂ ಕಾಯದೆ ಡಿಸ್ಕನೆಕ್ಟ್ ಮಾಡಿದಳು,

ಸಂಜೆಯಾದರೂ ಶಿವನ ಸುಳಿವೇಇಲ್ಲ. ತಾನೇ ಯಾಕೆ ಶಿವನನ್ನು ನೋಡಿಕೊಂಡು ಬರಬಾರದು ಎಂದು ತೀರ್ಮಾನಿಸಿ ಹೊರಟಳು. ಆರತಿ ಹೇಳಿದಂತೆ, ಮನೆ ನೋಡಿದಕೂಡಲೇ ಲೀಸಾಳಿಗೆ ಬಡತನ ಕಂಡಿತು. ಕುಳಿತುಕೊಳ್ಳುವುದಕ್ಕೆ ಕುರ್ಚಿ ಕೂಡ ಇರಲಿಲ್ಲ. ಶಿವ ಒಳಗಿಂದ ಒಂದು ವುಡನ್ ಬಾಕ್ಸ್ ತಂದು ಕೊಟ್ಟ. ಶಿವ ಉತ್ತರ ಕೊಡುವುದಕ್ಕೂ ಮುಂಚೆ ಅವನ ತಂದೆ ಒಳಗಿನಿಂದ ಬಂದರು. ಶಿವನ ತಾಯಿಯೂ ಕೂಡ ಬಂದು ನೆಲದ ಮೇಲೆ ಕುಳಿತಳು. ಅವರಿಬ್ಬರೂ ಅವಳನ್ನು ಸಂಶಯದಿಂದ ನೋಡುವುದಷ್ಟೇ ಅಲ್ಲದೆ, ಕೇಳಿದ ಪ್ರಶ್ನೆಗಳಿಂದ ಅವರಿಗೆ ತನ್ನ ಮೇಲೆ ಅನುಮಾನ ಬಂದಿದೆಎಂದು ಲೀಸಾಳಿಗೆ ಅರ್ಥವಾಯಿತು. ಭಾಷೆಯ ಸಮಸ್ಯೆ ಯಾದ್ದರಿಂದ, ಶಿವನ ತಂದೆ ಮರಾಠಿ ಭಾಷೆಯಲ್ಲಿ ಹೇಳಿದ್ದನ್ನ ಶಿವ ಇಂಗ್ಲಿಷ್ ನಲ್ಲಿ ಹೇಳಿದ.

"ಮೇಡಂ, ನಮ್ಮೆ ತಂದೆ ಕೂಡ ನಿಮಗೆ ಇಲ್ಲಿಂದ ಹೋಗುವುದಕ್ಕೆ ರಿಕ್ವೆಸ್ಟ್ ಮಾಡ್ತಾ ಇದ್ದಾರೆ. ನೀವು ಜರ್ನಲಿಸ್ಟ್ ಅಲ್ಲ ಅಂತ ಅವರಿಗೂ ಗೊತ್ತಾಗಿದೆ. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಡಿ. ನಾವು ಬಡವರು. ಜೋಸೆಫ್ ನಂತ ವ್ಯಕ್ತಿಗಳನ್ನು ಎದುರುಹಾಕಿಕೊಳ್ಳುವುದು ನಮಗೆ ಸಾಧ್ಯವಿಲ್ಲ."

ಲೀಸಾಳಿಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ಜೋಸೆಫ್ ಇಲ್ಲಿಗೂ ಬಂದು ಹೆದರಿಸಿದ್ದಾನೆಂದು ತಿಳಿಯಿತು. ಹೋಟೆಲ್ ಹತ್ರ ನೀನೊಬ್ಬನೇ ಬಾ ಎಂದು ಹೇಳಿ ಹೊರಟಳು. ಹೊರಗಡೆ ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಕರೆ ಮಾಡಿ ಯಾರಿಗೋ ವಿಷಯ ತಿಳಿಸಿದನ್ನು, ಲೀಸಾ ಗಮನಿಸಲಿಲ್ಲ.

ಕುರ್ಚಿಯ ಮೇಲೆ ಕುಳಿತೇ ನಿದ್ದೆ ಮಾಡುತಿದ್ದ ಲೀಸಾಳಿಗೆ ಯಾರೂ ಕದವನ್ನು ಮೆಲ್ಲಗೆ ತಟ್ಟಿದಂತೆ ಕೇಳಿ ಬಾಗಿಲು ತೆಗೆದಾಗ ಆಘಾತವಾಯಿತು. ಕುಸಿದು ಕುಳಿತಿದ್ದ ಶಿವನ ಹೊಟ್ಟೆಯಿಂದ ರಕ್ತ ಜಿನುಗುತ್ತಿತ್ತು!

ನಿದ್ದೆಯ ಗುಂಗಿನಲ್ಲಿದ್ದ ಮ್ಯಾನೇಜರ್ ಅನ್ನು ಎಬ್ಬಿಸಿ ಸ್ವಲ್ಪ ಕಾಟನ್ ಹಾಗು ಲೋಷನ್ ತೆಗೆದುಕೊಂಡಳು. ಬಾತ್ರೂಮ್ ನಲ್ಲಿ ಜಾರಿ ಗಾಯವಾಗಿದೆ ಎಂದು ಸುಳ್ಳು ಹೇಳಿ ಮೇಲೆ ಓಡಿದಳು.

ಗಾಯೆಕ್ಕೆಡ್ರೆಸ್ಸಿಂಗ್ ಮಾಡಿ ಬಿಸಿ ಟೀ ಮಾಡಿ, ಶಿವನನ್ನು ನಿಧಾನವಾಗಿ ಎಬ್ಬಿಸಿ, ಕುಡಿಸಿದಳು. ಸ್ವಲ್ಪ ಚೇತರಿಕೆ ಬಂದ ನಂತರ, ಶಿವ ನಡೆದದ್ದನ್ನು ವಿವರಿಸಿದ. ಶಿವನನ್ನು ಜೋಸೆಫ್ನ ಒಡನಾಡಿಗಳು ಅಟ್ಟಿಸಿ ಚಾಕುವಿನಿಂದ ಇರಿದರಂತೆ. ಆ ಸಮಯಕ್ಕೆ ಯಾರೋ ರಸ್ತೆಯಲ್ಲಿ ಹೋಗುತ್ತಿದ್ದವರು ಕಾರ್ ನಿಲ್ಲಿಸಿದಾಗ ಓಡಿಹೋದರಂತೆ.

"ಶಿವ ನಿನ್ನ ಹೊಟ್ಟೆಗೆ ಬ್ಯಾಂಡೇಜ್ ಮಾಡುವಾಗ, ಚಾಕುವಿನ ಗಾಯದ ಕಲೆ ನೋಡಿದೆ. ಹಿಂದೇನು ಹೀಗೆ ಯಾರಾದರೂ ಇರಿದಿದ್ದರ?”

"ಇಲ್ಲ ಮೇಡಂ. ಈ ಕಲೆ ನನಗೆ ಹುಟ್ಟಿದಾಗಿನಿಂದ ಇದೆ. ನನಗೆ ಒಂದು ವಿಷ್ಯ ಅರ್ಥ ಆಗ್ತಾ ಇಲ್ಲ ಮೇಡಂ. ಜೋಸೆಫ್ ಬೆಳಿಗ್ಗೆ ಧಮ್ಕಿ ಕೊಟ್ರು. ಈಗ ಅವನ ಚೇಲಾಗಳು ಅಟ್ಯಾಕ್ ಮಾಡಿದ್ರು. ಯಾಕೆ ಮೇಡಂ?  

ಲೀಸಾ ಶಿವನ ಮಾತು ಕೇಳಿಸಿಯೇ ಇಲ್ಲವೆಂಬಂತೆ, ಅವನ ಹೊಟ್ಟೆಯ ಮೇಲಿದ್ದ ಕಲೆಯನ್ನೇ ನೋಡುತ್ತಾ ಕೇಳಿದಳು. "ಆ ಜೋಸೆಫ್ ಬರುವುದಕ್ಕೆ ಮುಂಚೆ ನೀನು ಏನೋ ಹೇಳ್ಬೇಕು ಅಂತ ಇದ್ಯಲ್ಲ, ಈಗ ಹೇಳು ಶಿವ. ನಿನ್ನ ಎಲ್ಲ ಪ್ರಶ್ನೆಗಳಿಗೂ ನಾನು ಆನ್ಸರ್ ಮಾಡ್ತೀನಿ."

ಶಿವ ನಿಧಾನವಾಗಿ ಹೇಳಿದ. "ಮೇಡಂ, ಕನಸಲ್ಲಿ ಕೂಡ ನನಗೆ ಯಾರೂ ಚಾಕು ತೊಗೊಂಡು ಇರಿದ ಹಾಗೆ ಆಮೇಲೆ ನನ್ನ ಹೊತ್ಕೊಂಡು ಜೀಪ್ನಲ್ಲಿ ಕೂಡ್ಸಿ ಬಾಯಿಗೆ ಬಟ್ಟೆ ಕಟ್ಟಿದ ಹಾಗೆ ಬೀಳತ್ತೆ. ಕಿರುಚ್ಕೊಳ್ಳಕ್ಕೂ ಆಗದೆ ಎದ್ದಾಗ ಮೈ ಎಲ್ಲ ಬೆವರು ಸುರೀತಿರತ್ತೆ."

ಲೀಸಾ ಥಟ್ಟನೆ ಎದ್ದಳು. "ಏನೆಂದೇ? ನಿನಗೆ ಚಾಕುವಿನಿಂದಾ ಇರಿದರಾ? ಆಮೇಲೆ ನಿನ್ನ ಜೀಪ್ನಲ್ಲಿ ಕೂಡ್ಸಿ...ಒಹ್ ಮೈ ಗಾಡ್!”

ಏನು ಅರ್ಥವಾಗದ ಶಿವ ಗಾಬರಿಯಿಂದ ಲೀಸಾಳ ಮುಖವನ್ನೇ ನೋಡಿದ.

ಶಿವನ ತಲೆಯನ್ನು ನೇವರಿಸುತ್ತಾ, " ಇಲ್ಲ ಶಿವ. ಆಗ ನಾನು ಆನಂದ್ ಬಳಿ ಇರಲಿಲ್ಲ. ಆದ್ರೆ ಈಗ, ನಿನ್ನನ್ನ ಮಾತ್ರ ಏನು ಆಗದ ಹಾಗೆ ನಾನು ನೋಡ್ಕೊಳ್ತೀನಿ. ಸ್ವಲ್ಪ ಸಮಯ ಕೊಡು ಶಿವ. ನಿಧಾನವಾಗಿ ನಾನೇ ಎಲ್ಲ ವಿಷ್ಯ ಹೇಳ್ತಿನಿ.” ಕಣ್ಣೀರಿಡುತ್ತಾ ನುಡಿದಳು ಲೀಸಾ.

ಆರತಿ ಲೀಸಾ ಹೇಳಿದ್ದಿನೆಲ್ಲಾ ಕೇಳಿ ದಿಗ್ಬ್ರಮೆ ಗೊಂಡಳು. "ಲೀಸಾ, ನಮ್ಮ ಕಾರು ಅಲ್ಲೇ ಇದೆ. ನಾನು ಡ್ರೈವರ್ಗೆ ಎಲ್ಲ ವಿಷ್ಯ ಹೇಳಿ ಕಳಿಸ್ತೀನಿ. ದಯವಿಟ್ಟು, ನೀನು ಶಿವ ಮಹಾಬಲೇಶ್ವರ್ ಗೆ ಬನ್ನಿ. ಬಂದಮೇಲೆ ಏನ್ ಮಾಡ್ಬೇಕು ಅಂತ ನಿರ್ಧಾರ ಮಾಡೋಣ."

"ಆರತಿ, ನಿನ್ನಿಂದ ಇವತ್ತು ನನಗೆ ಆನಂದ್ ಸಾವಿನ ಹಿಂದಿನ ಸತ್ಯ ಗೊತ್ತಾಗೋದ್ರಲ್ಲಿದೆ. ನಾನು ಶಿವ ಇಲ್ಲಿಂದ ಹೊರಡ್ತೀವಿ. ನಿನಗೆ ಫೋನ್ ಮಾಡ್ತೀನಿ. ಥ್ಯಾಂಕ್ಸ್ ಫಾರ್ ಎವ್ರಿಥಿಂಗ್. ಯು ಆರ್ ದಿ ಬೆಸ್ಟ್ ಫ್ರೆಂಡ್ ಆರತಿ."

ಡಿಸ್ ಕನೆಕ್ಟ್ ಮಾಡಿದ ಲೀಸಾ, ಬೇರೊಂದು ನಂಬರ್ ಗೆ ಡಯಲ್ ಮಾಡಿದಳು.

ಎಲ್ಲವನ್ನುಕೇಳಿ ಹೌಹಾರಿದ ಮೇರಿ, ಬ್ರಿಯಾನ್ ಗೆ ಫೋನ್ ಮಾಡ್ತೀನಿ ಅವನು ಖಂಡಿತ ಇಂಡಿಯಾ ಗೆ ಬಂದು ಸಹಾಯ ಮಾಡ್ತಾನೆ ಎಂದಾಗ, ಲೀಸಾ ಸ್ವಲ್ಪ ಒರಟಾಗೆ ಹೇಳಿದಳು. "ಅಮ್ಮ. ಯಾರಿಗೂ ಏನೂ ಹೇಳ್ಬೇಡ. ಇದು ನನ್ನ ಯುಧ್ಧ. ಸಮಯ ಬಂದಾಗ ನಾನೇ ಬ್ರಿಯಾನ್ ಗೆ ಫೋನ್ ಮಾಡ್ತೀನಿ.”

ಶಿವನ ಮೈ ಸುಡುತಿತ್ತು. ಶಿವನ ತಲೆಯನ್ನು ತನ್ನ ತೊಡೆ ಮೇಲೆ ಮಲಗಿಸಿಕೊಂಡಳು. ಅರ್ಧ ದಾರಿ ಹೋಗುತ್ತಿದ್ದಂತೆ ಕಾರು ನಿಂತಿತು. ಬಾಯಿ ತೆರೆಯುವಷ್ಟರಲ್ಲಿ ಹಿಂಬದಿಯ ಡೋರ್ ಓಪನ್ ಮಾಡಿ ಮಲಗಿದ್ದ ಶಿವನನ್ನು ಹೊತ್ತು ನಡೆದ`ರು ಜೋಸೆಫ್ ಹಾಗು ಅವನ ಸಹಚರರು. ದಿಗ್ಬ್ರಮೆ ಗೊಂಡ ಲೀಸಾ ಜೋಸೆಫ್ ಹಿಂಬಾಲಿಸಿ ಓಡಿದಳು. 

ಲೀಸಾಳಿಗೆ ಹಿಂದೆ ಬರುತಿದ್ದ ಪೊಲೀಸ್ ವ್ಯಾನ್ ಕಡೆ ಗಮನ ವಿರಲಿಲ್ಲ. ಓಡಿ ದಣಿವಾಗಿ ನಿಂತು ನೋಡಿದಾಗ ಜೋಸೆಫ್ ಆಗಲಿ ಅಥವಾ ಶಿವ ಆಗಲಿ ಕಾಣಲಿಲ್ಲ. ಜೋರಾಗಿ ಶಿವನ ಹೆಸರುಹಿಡಿದು ಕೂಗಿದಳು. 

ಮೊಬೈಲ್ ಬೆಳಕಿನಲ್ಲಿ ಹುಡುಕಿದಾಗ ಅಲ್ಲೊಂದು ಶೆಡ್ ಇರುವುದು ಕಂಡಿತು. ಹತ್ತಿರ ಹೋಗುತ್ತಿದಂತೆ ಜೋಸೆಫ್ ಹೊರಗೆ ಬಂದ.

"ನಿನಗೆ ವಾರ್ನಿಂಗ್ ಕೊಟ್ಟಿದ್ದೆ ತಾನೇ, ಗಂಟು ಮೂಟೆ ಕಟ್ಕೊಂಡು ನಿಂಪಾಡಿಗೆ ನೀನು ಹೊರಡು ಅಂತ?”

ಲೀಸಾ ಉತ್ತರ ಕೊಡುವುದಕ್ಕೂ ಮುಂಚೆ ಶೆಡ್ ಒಳಗಿಂದ ಯಾರೋ ಕಿರುಚಿದ ಶಬ್ದ ಕೇಳಿಸಿತು. ಬಾಗಿಲು ತೆಗೆದು ಓಡಿದ ಶಿವ. ಜೋಸೇಫ್ನ ಸಹಪಾಠಿಯೂಬ್ಬ ತಲೆಹಿಡಿದುಕೊಂಡು ಹೊರಬಂದ. ಜೋಸೆಫ್, ಶಿವ ಹೋದ ದಿಕ್ಕಿನಲ್ಲಿ ತಾನು ಓಡಿದ. 

ಪೊಲೀಸ್ ಆಫೀಸರ್ ಜೊತೆ ಆರತಿ ಜೀಪಿನಿಂದ ಕೆಳಗಿಳಿದಾಗ ಲೀಸಾಳಿಗೆ ಎಲ್ಲವೂ ಅರ್ಥವಾಯಿತು. ಆರತಿಯನ್ನು ಗಟ್ಟಿಯಾಗಿ ಕಟ್ಟಿಕೊಂಡು ಅತ್ತಳು ಲೀಸಾ.

 “ಲೀಸಾ, ಪ್ಲೀಸ್ ಧೈರ್ಯ ತಂದುಕೊ. ಶಿವನಿಗೆ ಏನು ಆಗುವುದಿಲ್ಲ.”

ಆರತಿ ಗೆಳತಿಯನ್ನು ಸಮಾಧಾನ ಮಾಡುತಿದ್ದಂತೇ ಗುಂಡಿನ ಶಬ್ದ ಕೇಳಿಬಂತು. ಎಲ್ಲರೂ ಶಬ್ಧಬಂದ ದಿಕ್ಕಿನತ್ತ ಓಡಿದರು.

ಅಲ್ಲಿನ ದೃಶ್ಯವನ್ನು ನೋಡಿ ಲೀಸಾ ಮೂಕಳಾದಳು. 

ಜೋಸೆಫ್, ಹೊಗೆಯಾಡುತ್ತಿದ್ದ ಬಂದೂಕನ್ನು ಹಿಡಿದು ನಿಂತಿದ್ದ. ಶಿವ ಎಲ್ಲೂ ಕಾಣಲಿಲ್ಲ. ಪೊಲೀಸ್, ಜೋಸೆಫ್ ಗೆ ಬಂದೂಕನ್ನು ಕೆಳಗೆ ಹಾಕಲು ವಾರ್ನಿಂಗ್ ಕೊಟ್ಟರೂ, ಜೋಸೆಫ್ ನಿಂತೇ ಇದ್ದ. ಅಷ್ಟರಲ್ಲೇ ಅವನ ಮೊಬೈಲ್ ರಿಂಗ್ ಆಯಿತು.

ಅದೇ ಸಮಯಕ್ಕೆ ಶಿವನನ್ನು ನೋಡಿ ಲೀಸಾ ಜೋರಾಗಿ ಕೂಗಿದಳು. ಜೋಸೆಫ್ ತಕ್ಷಣ, ಗನ್ ಶಿವನ ಕಡೆ ತಿರುಗಿಸಿ ಸುಡಬೇಕ್ಕೆನ್ನುವಷ್ಟರಲ್ಲಿ ಪೊಲೀಸ್ ಜೋಸೆಫ್ಗೆ ಶೂಟ್ ಮಾಡಿದರು.

ಆರತಿ ಹಾಗು ಪೊಲೀಸ್ ಆಫೀಸರ್ ಶಿವನಿಗೆ ಯಾವ ಅಪಾಯವು ಇಲ್ಲವೆಂದು ಭರವಸೆ ನೀಡುತಿದ್ದಾಗ, ಲೀಸಾ ಜೋಸೆಫ್ ಬಿದ್ದೆಡೆಗೆ ಹೋದಳು. ಶಬ್ದಬರುತಿದ್ದ ಮೊಬೈಲ್ ಕಿವಿಗಿಟ್ಟಾಗ ಆಗಾಥ ವಾಯಿತು.

"ಜೋಸೆಫ್ ಐ ಹರ್ಡ್ ಗನ್ ಸೌಂಡ್ಸ್, ಡೋಂಟ್ ಹಾರ್ಮ್ ಲೀಸಾ. ಶಿ ಈಸ್ ವೆರಿ ಇಂಪಾರ್ಟೆಂಟ್ ಟು ಮೀ. ಬಟ್ ಡೋಂಟ್ ಲೀವ್ ಶಿವಾ” ಆ ಕಡೆ ಇಂದ ಬರುತಿದ್ದ ಧ್ವನಿಯನ್ನು ಗುರುತಿಸಿ ಸ್ತಬ್ದಳಾದಳು ಲೀಸಾ.

 “ಏನಾಯಿತು ಲೀಸಾ? ಯಾರಜೊತೆ ಮಾತ್ ಆಡಕ್ ಹೊರಟಿದ್ದ ಜೋಸೆಫ್." ಓಡಿಬಂದ ಆರತಿ ಕೇಳಿದಳು

"ಆರತಿ, ನನ್ನ ಆನಂದ್ ಆಕ್ಸಿಡೆಂಟ್ ನಲ್ಲಿ ಸಾಯಲಿಲ್ಲ. ಅವನನ್ನ ಕೊಲೆ ಮಾಡಿ ಅದನ್ನು ಆಕ್ಸಿಡೆಂಟ್ ಅಂತ ನಂಬೋಹಾಗೆ ಮಾಡಿದ್ರು. ಇಲ್ಲಿ ಬಿದ್ದಿದ್ದಾನಲ್ಲ ಜೋಸೆಫ್, ಬಹುಷಃ ಅವನೇ ಕೊಲೆಗಾರ. ಆದ್ರೆ....” ಲೀಸಾಳ ಮುಖದಲ್ಲಿ ವಿಚಿತ್ರವಾದ ನಗುವೊಂದು ಕಾಣಿಸಿತು; “ಕೊಲೆ ಮಾಡಿಸಿದ್ದು ಯಾರು ಅಂತ ಗೊತ್ತಾಯ್ತು. "

ಚಿಂತೆಯಿಂದ ಮುಖ ಬಾಡಿಸಿಕೊಂಡಿದ್ದ ಲಿಸಾಳನ್ನು ನೋಡುತ್ತಾ ಹೇಳಿದಳು ಆರತಿ. "ನನಗ್ ಗೊತ್ತು ಲೀಸಾ…….ಶಿವನ್ನ ಏನ್ಮಾಡ್ಬೇಕು ಅನ್ನೋ ಚಿಂತೆ ನಿನಗ್ ಕಾಡ್ತಾಯಿದೆ. ನನಗ್ ಗೊತ್ತಿರೋ ಒಬ್ರು ಸ್ವಾಮೀಜಿ ಇದ್ದಾರೆ…….ತುಂಬಾನೇ ಪ್ರಾಕ್ಟಿಕಲ್. ನಾವ್ಯಾಕೆ ಒಂದ್ ಸಾರಿ ಅವರನ್ನೇ ಭೇಟಿ ಮಾಡ್ಬಾರ್ದು?"

ಲೀಸಾ ಆಶ್ರಮದ ಆ ನೂರು ಮೆಟ್ಟಲುಗಳನ್ನು ಹತ್ತುವಾಗ, ಅವಳನ್ನು ಕಾಡುತಿದ್ದ ಪ್ರಶ್ನೆ? ನನ್ನ ಮನಸ್ನಲ್ಲಿರೋ ಪ್ರಶ್ನೆಗಳಿಗೆ ಉತ್ತರ ಸಿಗತ್ತಾ?


ಆರತಿ ಇಂದ ಎಲ್ಲ ವಿಷಯಗಳನ್ನು ಕೇಳಿದ ಸ್ವಾಮೀಜಿ ಮುಂದೆ ನಿಂತಿದ್ದ ಲೀಸಾ ಹಾಗು ಶಿವನನ್ನು ನೋಡಿ ನಸು ನಗುತ್ತ ಹೇಳಿದರು.

“ಲೀಸಾ, ನಿನ್ನ ತೊಳಲಾಟ ನನಗೆ ಅರ್ಥವಾಗುತ್ತದೆ; ಶಿವ ನಿನಗೇನಾಗಬೇಕು? ಅವನನ್ನು ಆನಂದ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಹಾಗಾದರೆ ಆ ಶಿವನಿಲ್ಲರುವ ಆನಂದ್? ಈ ಜಟಿಲವಾದ ಪ್ರಶ್ನೆಗೆ ಉತ್ತರ ಭಗವದ್ ಗೀತೆಯಲ್ಲಿದೆ.


ಭಗವದ್ ಗೀತೆಯಲ್ಲೇ ಕೃಷ್ಣ ಹೇಳಿದ್ದಾನೆ:

ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್

ಉಬೌತೌನ ವಿಜಾನೀತೋ ನಾಯಂ ಹಂತಿ ನ ಹನ್ಯತೇ.


ಇದರರ್ಥ, ಆತ್ಮನು ಅವಿನಾಶಿ, ನಿತ್ಯನು, ಹುಟ್ಟು ಸಾವು ಇಲ್ಲದವನು.... ಶರೀರ ಕೊಲ್ಲಲ್ಪಡುವಾಗಲೂ ಆತ್ಮ ಅಲ್ಲಿ ಸಾಯುವುದಿಲ್ಲ...

ಶಿವ ಹಿಂದಿನ ಜನ್ಮದಲ್ಲಿ ಆನಂದನೇ ಆಗಿದ್ರು…ಈ ಜನ್ಮದಲ್ಲಿ ಶಿವ ಆಗಿದ್ದಾನೆ ಹೊರತು, ಆನಂದನಲ್ಲ. ಹೊಸ ಶರೀದೊಂದಿಗೆ, ಅವನಿಗೆ ಹೊಸ ಜೀವನವನ್ನು ಕಲ್ಪಿಸುವ ಅಧಿಕಾರವಿದೆ … ಅವನನ್ನು ಬೆಳೆಸಿ ಮುಂದೆ ತರುವುದು… ನೀನು ಆನಂದನ ಮೇಲಿಟ್ಟಿರುವ ಪ್ರೀತಿಗೆ ಸರಿಯಾದ ಬಳುವಳಿ."

ಕೆಲವು ವರ್ಷಗಳ ನಂತರ....

ಬಾಗಿಲು ತೆಗೆದು ಹೊರಗೆ ಬಂದ ಆರತಿಯ ತಲೆ ನರೆತಿತ್ತು. ಮುಖದಲ್ಲಿ ಸುಕ್ಕುಗಳು ಕಾಣುತಿತ್ತು. ಕಣ್ಣಿಗೆ ತನ್ನ ಕೈಗಳ ಆಸರೆಯನ್ನು ಕೊಟ್ಟು ಯಾರಿರಬಹುದೆಂದು ನೋಡುತ್ತಾ, ಕೇಳಿದಳು

“ಯಾರಪ್ಪ ನೀನು"

“ಪೋಸ್ಟ್ಮನ್ ಮೇಡಂ”

" ಓಹ್? ಯಾರಿಂದಾನಪ್ಪ ಲೆಟರ್?"

ಫ್ರಮ್ ಅಡ್ರೆಸ್ ನೋಡಿ ಹೇಳಿದ ಪೋಸ್ಟ್ ಮಾನ್, “ಲಂಡನ್ ನಿಂದ ಮೇಡಂ, ಯಾರೂ ಡಾಕ್ಟರ್ ಶಿವಾನಂದ ಅನ್ನೊವರಿಂದಾ. ”


Rate this content
Log in

Similar kannada story from Drama