manjula g s

Comedy Inspirational Others

3  

manjula g s

Comedy Inspirational Others

ಸ್ನೇಹದಲ್ಲಿ ಹಾಸ್ಯ

ಸ್ನೇಹದಲ್ಲಿ ಹಾಸ್ಯ

1 min
171


# ಅಡ್ಡಹೆಸರು#


ಸಾಮಾನ್ಯವಾಗಿ ಸ್ನೇಹಿತರ ನಡುವೆ ಸಮಾನಮನಸ್ಕತೆ ಇರುತ್ತದೆ. ಆದಕಾರಣ ಅವರ ನಡುವೆ ಕೆಲವು ರಹಸ್ಯಗಳು, ಗುಟ್ಟುಗಳು, ಕೋಡ್ ಪದಗಳು ಅರ್ಥಾತ್ ಇತರರಿಗೆ ಇಟ್ಟ ಅಡ್ಡ ಹೆಸರುಗಳು ಅವರಿಗೆ ಮಾತ್ರವೇ ತಿಳಿದಿರುತ್ತದೆ. 


ಇಂತಹದ್ದೇ ಒಂದು ನಮ್ಮ ಸಹೋದ್ಯೋಗಿ ಗೆಳತಿಯರ ಸ್ನೇಹ ಗುಂಪಿನಲ್ಲಿ ನಮ್ಮ ಗುಂಪನ್ನು ಸೇರದ ಕೆಲವರಿಗೆ ಅಡ್ಡ ಹೆಸರುಗಳನ್ನು ನಾವು ಇಟ್ಟಿದ್ದೆವು. ಆದರೆ ಹೊಸದಾಗಿ ನಮ್ಮ ಗುಂಪನ್ನು ಸೇರಿದ್ದ ಗೆಳತಿಯೊಬ್ಬರಿಗೆ ಈ ಬಗ್ಗೆ ತಿಳಿದಿರಲಿಲ್ಲ! ಅದರ ಜೊತೆ ಅವರು ಅನ್ಯ ಸಮುದಾಯಕ್ಕೆ ಸೇರಿದವರಾದ್ದರಿಂದ ನಮ್ಮ ಹಿಂದೂ ಪೌರಾಣಿಕ ಹೆಸರುಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ವಿಪರ್ಯಾಸವೆಂದರೆ ನಾವು ಸ್ವಲ್ಪ ಧಡೂತಿಯಂತಿದ್ದ ಹೆಂಗಸೊಬ್ಬರಿಗೆ "ಹಿಡಂಬಿ" ಎಂಬ ಹೆಸರು ಇಟ್ಟಿದ್ದೆವು! ನಮ್ಮ ಗೆಳತಿ ಹಿಡಂಬಿ ಎಂಬುದು ಅವರ ನಿಜವಾದ ಹೆಸರು ಎಂದು ತಿಳಿದುಕೊಂಡಿದ್ದರು. 


ಒಂದು ದಿನ ಕಾರ್ಯಕ್ರಮದಲ್ಲಿ ನಾವೆಲ್ಲ ಗುಂಪಿನಲ್ಲಿದ್ದಾಗ ಹಿಡಂಬಿ ಬಿರುದಾಂಕಿತ ಮಹಿಳೆ ಬಂದೊಡನೆ, ಎಲ್ಲರ ಮುಂದೆ ಜೋರಾಗಿ "ರೀ.... ಹಿಡಂಬಿ ಇಲ್ಲಿ ಬನ್ನಿ...."ಎಂದುಬಿಟ್ಟರು! 

ಆಗ ಕಕ್ಕಾಬಿಕ್ಕಿಯಾಗುವ ಸರದಿ ನಮ್ಮದಾಗಿತ್ತು!


Rate this content
Log in

Similar kannada story from Comedy