Vaman Acharya

Tragedy Action Others

4  

Vaman Acharya

Tragedy Action Others

ತೋಟದ ಮನೆಯ ಶುಭಾಂಗಿ

ತೋಟದ ಮನೆಯ ಶುಭಾಂಗಿ

6 mins
406


ತೋಟದ ಮನೆಯ ಶುಭಾಂಗಿ 

ಬೆಳಗಿನ ಎಂಟು ಗಂಟೆ ಸಮಯ. ಆಕಾಶದಲ್ಲಿ ಮೋಡ ಕವಿದ ವಾತಾವರಣ. ತುಂತುರು ಮಳೆ ಇರುವದರಿಂದ ಜನ ಜೀವನ ಅಸ್ತವ್ಯಸ್ತ ಆಗದೇ ಇದ್ದರೂ ಜನರಿಗೆ ತೊಂದರೆ ಅಂತೂ ಆಯಿತು. ರಾಘವಪುರ ನಗರದ ಹೊರವಲಯದಲ್ಲಿ ಇರುವ 'ಬಾಲಾಜಿ' ತೋಟದ ಮನೆ ಮುಂದೆ ಅಂದು ಎಂದೂ ಇರದ ಜನರ ಗದ್ದಲ. ತೆಂಗಿನ ಮರಗಳು, ಗುಲಾಬಿ, ತಾವರೆ, ಸೂರ್ಯಕಾಂತಿ, ಮಲ್ಲಿಗೆ, ಚಂಪಾ ಇತ್ಯಾದಿ ವಿವಿಧ ತರಹದ ಹೂ ಗಿಡಗಳು.  ಟೊಮ್ಯಾಟೋ, ಬೀನ್ಸ,  ಹೂಕೋಸು, ಮೂಲಂಗಿ, ಬದನೆಕಾಯಿ, ಪಾಲಕ ಸೊಪ್ಪು, ಕರಿಬೇವು, ಕೊತ್ತಂಬರಿ ತರಕಾರಿ ಗಿಡಗಳು. ವಿವಿಧ ತರಹದ ಹಣ್ಣು ಗಳು ಅಂದರೆ ಹಲಸಿನ, ಕಲ್ಲಂಗಡಿ, ಪಪಾಯ, ಮಾವು, ಸೇಬು, ಸಪೋಟ,ಬಾಳೆ, ನಿಂಬೆ ಗಿಡಗಳು ಇವೆಲ್ಲ ಇರುವದು ಕೇವಲ ಹತ್ತು ಎಕರೆ ಭೂಮಿಯಲ್ಲಿ. ದನ ಕರು ಗಳಿಗಾಗಿ ಪ್ರತ್ಯೇಕ ಶೆಡ್. ಒಂದು ಚಿಕ್ಕದಾದ ಡೈರಿ ಫಾರ್ಮ್.  ಬಾವಿಗೆ ಪಂಪ್ ಸೆಟ್ ಇರುವದರಿಂದ ಇಡೀ ವರ್ಷ ಬೇಕಾದಷ್ಟು ನೀರು. 

ತೋಟದ ಒಡತಿ ಶುಭಾಂಗಿಯ ಪತಿ ಪರಮೇಶ್ವರ ಮಾರ್ಕೆಟಿಂಗ್ ನೋಡಿಕೊಂಡರೆ ಮಗಳು ನಳಿನಿ ಲೆಕ್ಕ ಪತ್ರ ಬರೆಯುವ ಜವಾಬ್ದಾರಿ. ಶುಭಾಂಗಿ ತೋಟದ ಮೇಲ್ವಿಚಾರಣೆ ವಹಿಸಿಕೊಂಡಳು.  ತೋಟದಲ್ಲಿ ಕೆಲಸ ಮಾಡುವ ಆಳುಗಳು,ಸೆಕ್ಯುರಿಟಿ ಗಾರ್ಡ ಹಾಗೂ ಒಂದು ಹೆದರಿಕೆ ಬರುವಂಥ ಆಲ್ಶೇಶನ್ ನಾಯಿ. ಇವರೆಲ್ಲ ತಮ್ಮ ತಮ್ಮ ಕೆಲಸದಲ್ಲಿ ನಿರತ ರಾಗಿರುವರು. ಅವರೆಲ್ಲರಿಗೂ ಅಲ್ಲಿಯೇ ಇರುವ ವ್ಯವಸ್ಥೆ. ವಿದ್ಯುತ್ ಸರಬರಾಜು ವ್ಯತ್ಯಯ ವಾದರೆ ಜನರೇಟರ್.  ಇಂತಹ ವಿಶಿಷ್ಟವಾದ ತೋಟದ ಮನೆಯ ಬಗ್ಗೆ ರಾಘವಪುರ ನಗರ ಹಾಗೂ ಸುತ್ತು ಮುತ್ತ ಇರುವ ಗ್ರಾಮದ ಜನರ ಮನೆ ಮನೆ ಮಾತು ಆಯಿತು. ಬೃಹತ್ ಕಾರ್ಯ ಮಾಡಿರುವ ಶ್ರೇಯಸ್ಸು ಶುಭಾಂಗಿ ಅವರಿಗೆ ಮಾತ್ರ. 

ಅಸಾಧ್ಯ ವನ್ನು ಸಾಧ್ಯ ಹೇಗೆ ಮಾಡಿದಳು ಶುಭಾಂಗಿ?

 ಅಂದು ಪೋಲಿಸ್ ವ್ಯಾನ್ ಬಂದು ತೋಟದ ಮನೆ ಒಳಗಡೆ ನಿಲ್ಲಿಸಿ ದ್ದರು. ಪೋಲಿಸ್ ಇನ್ಸಪೆಕ್ಟರ್ ಅನಿರುಧ್ಧ ಹಾಗೂ ಇಬ್ಬರು ಪೇದೆಗಳು ಮಹಾದೇವ್ ಹಾಗೂ ಕೇಶವ್ ಒಳಗೆ ಇದ್ದರು.  ಜನರ ಗುಂಪು ಮನೆ ಒಳಗೆ ಪ್ರವೇಶ ವಾಗದಂತೆ ತಡೆಯಲು ದೊಡ್ಡ ಗೇಟ್ ಒಳಗಿನಿಂದ ಲಾಕ್ ಮಾಡಿದರು.

ಪೋಲಿಸ್ ಟೀಮ್ ಏಕೆ ಬಂದರು? ಆಗಿರುವದಾದರೂ ಏನು?

ಮನೆಯ ಯಜಮಾನಿ ಐವತ್ತು ವರ್ಷದ ಶುಭಾಂಗಿ. ಅಂದು ಬೆಳಗ್ಗೆ ಐದು ಗಂಟೆಗೆ ಕಳ್ಳರು ಆಲ್ಶೇಶನ್ ನಾಯಿ ಜಾಸ್ಮಿನ್ ಕೊಂದು, ಸೆಕ್ಯುರಿಟಿ ಗಾರ್ಡ ಮುಕುಂದಪ್ಪ ನನ್ನು ಕಟ್ಟಿಹಾಕಿ ಅವನ ಬಾಯಿ ಮುಚ್ಚಿ ಕಳ್ಳತನ ಮಾಡಿದರು. ಇಷ್ಟೆಲ್ಲ ಮಾಡಬೇಕಾದರೆ ತೋಟದ ಮನೆಯ ಬಗ್ಗೆ ಮಾಹಿತಿ ಇರುವರೇ  ಇರಬೇಕು. ಚಿನ್ನದ ಸಾಮಾನುಗಳನ್ನು ಹಾಗೂ ನಗದು ಹಣ ಲಪಟಾಯಿ ಸಿದರು. ಶುಭಾಂಗಿ ಬೆಳಗ್ಗೆ ಆರು ಗಂಟೆಗೆ ಎದ್ದು ಹೊರಗೆ ಬಂದಾಗ ಪ್ರೀತಿಯಿಂದ ಕರೆಯುವ ನಾಯಿ ಜಾಸ್ಮೀನ್ ಸತ್ತು ಬಿದ್ದಿರುವದನ್ನು  ಮುಕುಂದಪ್ಪನಿಗೆ ಕಟ್ಟಿ ಹಾಕಿರುವದನ್ನು ನೋಡಿದಳು. ಆಕೆಗೆ ಗಾಬರಿಯಾಗಿ ಅಲ್ಲಿಂದಲೇ ಒಬ್ಬ ಆಳನ್ನು ಕೂಗಿ ಮುಕುಂದಪ್ಪನಿಗೆ ಕಟ್ಟಿದ ಹಗ್ಗ ಬಿಡಿಸಿ ಬಾಯಿಗೆ ಮುಚ್ಚಿದ ಬಟ್ಟೆ ತೆಗೆಯಲು ಹೇಳಿದಳು. ಇದೆಲ್ಲ ಅನಾಹುತ ಹೇಗೆ ಆಯಿತು? ಎಂದು ಅವನಿಗೆ ಕೇಳಿದಳು. ಅವನು ಆಗಿರುವ ಘಟನೆಯನ್ನು ವಿವರವಾಗಿ ತಿಳಿಸಿದ. 

ಆಗ ಶುಭಾಂಗಿ ಗೋದ್ರೆಜ್ ಸೇಫ ಇರುವ ರೂಮಿಗೆ ಹೋದಳು. ಅಲ್ಲಿ ಕಂಡ ದೃಶ್ಯ ಆಕೆಗೆ ದಿಗ್ಭ್ರಮೆ ಆಯಿತು. ಚಿನ್ನ ಹಾಗೂ ನಗದು ಹಣ ಮಾಯವಾಗಿ ಅದರೊಳಗೆ ಇರುವ ಡಾಕ್ಯುಮೆಂಟ್ ಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಅಷ್ಟರಲ್ಲಿ ಪರಮೇಶ್ವರ, ನಳಿನಿ  ನಿದ್ರೆ ಯಿಂದ ಎದ್ದರು. ಪರಿಸ್ಥಿತಿ ಅರ್ಥ ಮಾಡಿಕೂಂಡು  ಶುಭಾಂಗಿ ಗೆ ಸಾಂತ್ವನ ಹೇಳಿದರು. ತಡಮಾಡದೆ ಶುಭಾಂಗಿ  ಪೋಲಿಸ್ ಕಂಪ್ಲೇಂಟ್ ಕೊಟ್ಟಳು. ಪೋಲಿಸ್ ಬಂದಮೇಲೆ ಕಳುವಾದ ಚಿನ್ನ ಹಾಗೂ ಬೆಳ್ಳಿ ಸಾಮಾನು ಗಳ ಯಾದಿ ಇರುವ ದೂರು ಅವರಿಗೆ ಕೊಟ್ಟು ತನಗೆ ಸಂಶಯ ಇರುವ ವ್ಯಕ್ತಿಗಳ ವಿವರ ಕೊಟ್ಟಳು. ಸ್ಥಳದ ತಪಾಸಣೆ ಮಾಡಿ ಕರೆ ಬಂದಾಗ ಪೋಲಿಸ  ಸ್ಟೇಶನ್ ಗೆ ಬರಬೇಕು ಎಂದು ಹೇಳಿ ಎಫ್ ಐ ಆರ್ ತೆಗೆದುಕೊಂಡು ಪೋಲಿಸರು ಅಲ್ಲಿಂದ ಹೊರಟರು. 

ಪ್ರೀತಿಯಿಂದ ಬೆಳೆಸಿದ ನಾಯಿ ಜಾಸ್ಮಿನ್ ಅಂತ್ಯಕ್ರಿಯೆ ಮಾಡಲು ಹೊರಗೆ ತೆಗೆದುಕೊಂಡು ಹೋದಾಗ  ಶುಭಾಂಗಿಗೆ ದು:ಖ ತಡೆಯಲು ಆಗದೇ ಬಿಕ್ಕಿ ಬಿಕ್ಕಿ ಅತ್ತಳು. ಮನೆಯಿಂದ ಪೋಲಿಸರು ಹಾಗೂ ಜನರ ಗುಂಪು  ಹೋದ ಮೇಲೆ ಸಮಯ ಬೆಳಗಿನ ಹತ್ತು ಗಂಟೆ. ಆ ಸಮಯದಲ್ಲಿ ಶುಭಾಂಗಿ ಏಕಾಂಗಿ ಆಗುವ ಇಚ್ಛೆ ಆಗಿ ಮೂಲೆ ಯಲ್ಲಿ  ಇರುವ ಕುರ್ಚಿಯ ಮೇಲೆ ಕುಳಿತಳು. ಪತಿ ಹಾಗೂ ಮಗಳಿಗೆ ಸ್ವಲ್ಪ ಸಮಯ ತನ್ನ ರೂಮಿಗೆ ಬರಬೇಡಿ ಎಂದಳು. ಆಕೆಯ ಪರಿಸ್ಥಿತಿ ನೋಡಿ ಯಾರೂ ಮಾತನಾಡಿಸುವ ಧೈರ್ಯ ಮಾಡಲಿಲ್ಲ. ಶುಭಾಂಗಿ ತನ್ನ ಬಾಲ್ಯದಿಂದ ಇಲ್ಲಿಯವರಿಗೆ ಆದ ಘಟನೆಗಳನ್ನು ಮೆಲುಕು ಹಾಕಿದಳು.  

ಶುಭಾಂಗಿ ತನ್ನ ಆರನೇ ವಯಸ್ಸಿನಲ್ಲಿ ತಂದೆಯನ್ನು ಹಾಗೂ ಎಂಟನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದು ಕೊಂಡು ಅನಾಥೆ ಆದಳು. ತಂದೆ ಮನೋಹರ ಕನಕಾಪುರ, ರಾಘವ್ ಪುರದ ಪ್ರತಿಷ್ಟಿತ ವ್ಯಕ್ತಿ ಎರಡು ಸಲ ಶಾಸಕರಾದ ಪ್ರಸ್ತುತ ಮಾಜಿ  ಶಾಸಕರು ರಾಮ ಪ್ರಸಾದ್ ಅವರ ವ್ಯವಹಾರದ ಲೆಕ್ಕ ಪತ್ರ ಕಳೆದ ಇಪ್ಪತ್ತೈದು ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು. ತಾಯಿ ಅನಸೂಯ ಅವರ ಮನೆಯಲ್ಲಿ ಅಡುಗೆ ಮಾಡುವಳು. 

 ಪುಟ್ಟ ಹುಡುಗಿ ಶುಭಾಂಗಿ ಅನಾಥೆ ಆಗಿರುವದಕ್ಕೆ ಕರುಣೆ ಬಂದು ರಾಮ ಪ್ರಸಾದ್ ಅವರು ಆಕೆಗೆ ತಮ್ಶ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿ ಆಕೆಯನ್ನು ಶಾಲೆಗೆ ಸೇರಿಸಿದರು. ಶುಭಾಂಗಿ ಮೇಲೆ ಕರುಣೆ ಬರಲು ಕಾರಣ ಆಕೆಯ ತಂದೆ ಹಾಗೂ ತಾಯಿ ಅವರ ಸುದೀರ್ಘ ಪ್ರಾಮಾಣಿಕ ನಿಸ್ವಾರ್ಥ ಸೇವೆ.  ಹತ್ತನೇ ತರಗತಿ ಪಾಸಾದಾಗ ಶುಭಾಂಗಿಯ ವಯಸ್ಸು ಹದಿನೆಂಟು ವರ್ಷ.  ರಾಮಪ್ರಸಾದ್ ಅವರು ಶುಭಾಂಗಿ ಗೆ ತಮ್ಮದೇ ಆದ  ಮಾತೋಶ್ರೀ ಪದ್ಮಾವತಿ ಪ್ರಾಥಮಿಕ ಶಾಲೆಯಲ್ಲಿ  ರಾಘವಪುರ ದಲ್ಲಿ ಕ್ಲರ್ಕ ಎಂದು ಕೆಲಸಕ್ಕೆ ಸೇರಿಸಿದರು. ಅವರಿಗೆ ಚಿರ ಖುಣಿ ಎಂದು ಮೇಲಿಂದ ಮೇಲೆ ಶುಭಾಂಗಿ  ಹೇಳುತ್ತಿದ್ದಳು. ಅವರನ್ನು ಶುಭಾಂಗಿ ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯುತ್ತಿದ್ದಳು. ಅದೇ ಶಾಲೆಯಲ್ಲಿ  ಒಂದು ವರ್ಷದ ಹಿಂದೆ  ಕ್ಲರ್ಕ ಎಂದು ಕೆಲಸಕ್ಕೆ ಸೇರಿದ ಪರಮೇಶ್ವರ ಹೊಸದುರ್ಗ ಅವರ ಜೊತೆಗೆ ಮೊದಲು  ಪ್ರೇಮ ನಂತರ ವಿವಾಹ ಆಯಿತು. ರಾಮಪ್ರಸಾದ್ ಅವರು ಇದಕ್ಕೆ ವಿರೋಧ ಮಾಡಿ ಆಮೇಲೆ ಸಮ್ಮತಿ ಕೊಟ್ಟರು. ಪರಿಚಯವೇ ಇರದ ಪರಮೇಶ್ವರ ಸ್ವಲ್ಪ ಸಮಯದಲ್ಲಿ ಪತಿ ಪರಮೇಶ್ವರ ಹೇಗೆ ಆದ?

ಅದೊಂದು ದೊಡ್ಡ ಕಥೆ ಎಂದರು ಕೆಲವರು. ನಿಜವಾಗಿ  ನಡೆದಿರುವದಾದರೂ ಏನು ಯಾರಿಗೂ ಗೊತ್ತಾಗಲಿಲ್ಲ. ಒಂದು ವಿಷಯವಂತು ಸತ್ಯ. ಆಗ ಆಕೆಗೆ ಬಾಳಸಂಗಾತಿಯ ಅವಶ್ಯಕತೆ ಇತ್ತು. ಪರಮೇಶ್ವರ ನಿಗೆ ಅವಳಮೇಲೆ ಪ್ರೀತಿ ಆಗಿತ್ತು. ಆದರೆ ಶುಭಾಂಗಿ ಗೆ ಕೇಳುವ ಧೈರ್ಯ ಅವನಿಗೆ ಇರಲಿಲ್ಲ.  ಒಂದು ದಿವಸ ಶುಭಾಂಗಿ ಮದುವೆ ಪ್ರಸ್ತಾವನೆ ಆತನಿಗೆ ಮಾಡಿದಳು. ಆ ಸಮಯದಲ್ಲಿ ಪರಮೇಶ್ವರ ಮನಸ್ಸಿನಲ್ಲಿ ಅಂದು ಕೊಂಡ ರೋಗಿ ಬಯಸಿದ್ದು  ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ.  ಮದುವೆ ಆಗಿ ಒಂದು ವರ್ಷ ಆದಮೇಲೆ ಹೆಣ್ಣು ಮಗು ಜನನ ವಾಯಿತು. ಆ ಮಗುವಿಗೆ ನಳಿನಿ ಎಂದು ನಾಮಕರಣ ಮಾಡಿದರು. ನಳಿನಿ ಬೆಳೆಯುತ್ತಾ ಪ್ರತಿಭಾವಂತೆ ಆದಳು.  ತಾಯಿಗೆ ತುಂಬಾ ಸಹಾಯ ಮಾಡುವ ವಿಶಿಷ್ಟವಾದ ಸ್ವಭಾವ ಬೆಳೆಸಿ ಕೊಂಡಳು. ಹತ್ತನೇ ತರಗತಿಯಲ್ಲಿ ನಳಿನಿ ಫರ್ಸ್ಟ್ ಕ್ಲಾಸ್ ಪಾಸಾಗಿ ರಾಘವಪುರ ಕಾಲೇಜಿನಲ್ಲಿ ಸೇರಿದಳು. ಆಕೆಗೆ ಶಾಲೆಯಿಂದ ಸ್ಕಾಲರ್ ಶಿಪ್ ಕೂಡಾ ಸಿಕ್ಕಿತು. ಶುಭಾಂಗಿ ಆ ಸಮಯದಲ್ಲಿ  ಶಾಲೆಯಲ್ಲಿ  ಕೆಲಸಕ್ಕೆ ಸೇರಿ ಇಪ್ಪತ್ತು ವರ್ಷ ಆಗಿತ್ತು. 

ಒಂದು ದಿವಸ ಸ್ಥಳೀಯ ದಿನಪತ್ರಿಕೆ 'ರಾಘವ ವಾಣಿ'  ರವಿವಾರದ ವಾರದ ಪುರವಣಿಯಲ್ಲಿ ' 'ಗ್ರಾಮೀಣ ಯುವಕನ ಯಶೋಗಾಥೆ'. ಅದನ್ನು ಓದಿದ ಶುಭಾಂಗಿಯ ಮನಸ್ಸಿನಲ್ಲಿ ತುಂಬಾ ಪ್ರಭಾವ ಬೀರಿತು. ನಿರುದ್ಯೋಗಿ ಯುವಕ ತನಗಿರುವ ಆರು ಎಕರೆ ಬಂಜರು ಭೂಮಿಯನ್ನು ಫಲವತ್ತಾದ ತೋಟ ಮಾಡುವಲ್ಲಿ ತೆಗೆದುಕೊಂಡ ಸಮಯ ಕೇವಲ ಐದು ವರ್ಷ.   ರಾಘವಪುರ ಹೊರವಲಯದಲ್ಲಿ ಶುಭಾಂಗಿ ತನ್ನ  ಹೆಸರಿನಲ್ಲಿ ಇರುವ ಹತ್ತು ಎಕರೆ ಬಂಜರು ಭೂಮಿಯನ್ನು  ತೋಟ ಏಕೆ ಮಾಡ ಬಾರದು ಎನ್ನುವ ವಿಚಾರ ತಲೆಯಲ್ಲಿ ಬಂದಿತು. ಆ ಯುವಕನ ಯಶೋಗಾಥೆಯನ್ನು ಅನೇಕ ಸಲ ಓದಿ ಮನದಟ್ಟು ಮಾಡಿಕೊಂಡಳು.  ಇಂತಹ ದೊಡ್ಡ ಕೆಲಸಕ್ಕೆ ಹಿರಿಯರ ಸಲಹೆ ಮತ್ತು ಆಶೀರ್ವಾದ ಬೇಕೇ ಬೇಕು ಎಂದು ಆಕೆಯನ್ನು ಪ್ರೀತಿಯಿಂದ ಬೆಳೆಸಿದ ರಾಮ ಪ್ರಸಾದ್ ಅವರ ಬಳಿಗೆ ಹೋದಳು.

 ಆಗ ಸಮಯ ಸಾಯಂಕಾಲ ಆರು ಗಂಟೆ. ಅವರು ಸುಮ್ಮನೆ ಕುಳಿತಿರುವದನ್ನು ನೋಡಿ ಒಳಗೆ ಹೋದಳು. ಅವರಿಗೆ ನಮಸ್ಕಾರ ಮಾಡಿ ಪಕ್ಕದ ಚೇರ್ ಮೇಲೆ ಕುಳಿತಳು. 

"ಅಪ್ಪಾಜಿ, ನಿಮ್ಮ ಹತ್ತಿರ ಮಾತನಾಡ ಬಹುದೇ?"

"ಏನಮ್ಮ, ಶುಭಾಂಗಿ ಹೇಳು."

"ಅಪ್ಪಾಜಿ, ನೀವು ಸಿಟ್ಟು ಮಾಡಿಕೊಳ್ಳುವುದಿಲ್ಲ ಎಂದರೆ ಹೇಳುವೆ."

"ನಿನ್ನ ಮೇಲೆ ನಾನೇಕೆ ಸಿಟ್ಟು ಮಾಡಲಿ? ಬೇಗ ಹೇಳು."

"ನಿಮಗೆ ಗೊತ್ತಿರುವಂತೆ ನನ್ನ ಹೆಸರಿನಮೇಲೆ ಹೊರವಲಯದಲ್ಲಿ ಹತ್ತು ಎಕರೆ ಭೂಮಿ ಇದೆ."

"ಅದು ಯಾವುದಕ್ಕೂ ಉಪಯೋಗ ಇಲ್ಲದ ಬಂಜರು ಭೂಮಿ."

"ಅಪ್ಪಾಜಿ, ವ್ಯವಸಾಯಕ್ಕೆ ಯೋಗ್ಯವಲ್ಲದ ಬರಡು ಭೂಮಿ ಉತ್ತಮ ಪಡಿಸಿ ತೋಟಗಾರಿಕೆ ಮಾಡಬಹುದು." ಎಂದು ಹೇಳಿದಳು.

ಆಗ ರಾಮ ಪ್ರಸಾದ್ ನಗುತ್ತ, "ನಿನಗೆ ಇಷ್ಟು ಜ್ಞಾನ ಹೇಗೆ ಬಂದಿತು.?

"ಅಪ್ಪಾಜಿ, ಈ ಲೇಖನ ಓದಿದ ಮೇಲೆ ಜ್ಞಾನೋದಯ ಆಯಿತು." ಎಂದು ಹೇಳಿ ಆಗತಾನೆ ತಾನು ಓದಿದ ಯುವಕನ ಯಶೋಗಾಥೆ ಅವರಿಗೆ ಕೊಟ್ಟಳು. ಅವರು ಆ ಲೇಖನವನ್ನು ಪೂರ್ತಿ ಓದಿ,

"ಶುಭಾಂಗಿ, ಇದು ನಿನಗೆ ನಿಜವಾಗಿಯೂ ಪ್ರೇರಣೆ ಆಗಿದೆಯಾ?"

"ಹೌದು ಅಪ್ಪಾಜಿ."

"ಸರಿ, ನಿನಗೆ ಬೇಕಾದ ಸಲಹೆ, ಸಹಕಾರ ಹಾಗೂ ಹಣ ಕಾಸಿನ ವ್ಯವಸ್ಥೆ ಮಾಡುವೆ ಚಿಂತೆ ಮಾಡಬೇಡ." ಎಂದು ಆಕೆಯ ತಲೆಯಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರು.

ರಾಮ ಪ್ರಸಾದ್ ಅವರಿಗೆ ವಯೋಮಾನ ಪ್ರಕಾರ ಆರೋಗ್ಯದಲ್ಲಿ ಏರು ಪೇರು ಆದರೂ ಲೆಕ್ಕಿಸದೇ ಸಮಾಜ ಕಾರ್ಯಕ್ಕೆ ಎಲ್ಲಿಲ್ಲದ ಉತ್ಸಾಹ ತೋರಿಸುವರು. ಅವರು ಶಾಸಕರು ಇದ್ದಾಗ ಬಡವರಿಗೆ ಸಹಾಯ ಮಾಡಿ ಹೆಸರು ಗಳಿಸಿದ್ದರು.  ಪ್ರಸ್ತುತ  ಶುಭಾಂಗಿಯ ಕನಸು ನನಸಾಗಿ ಮಾಡುವ ಅವಕಾಶ ಕಳೆದು ಕೊಳ್ಳಬಾರದು ಎಂದು ಅವರು ಮನಸ್ಸಿನಲ್ಲಿ ಅಂದುಕೊಂಡರು.

ಶುಭಾಂಗಿ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿ ಮತ್ತೆ ಬರುವದಾಗಿ ಹೇಳಿ ಅಲ್ಲಿಂದ ಹೊರಟಳು. 

ಒಂದು ತಿಂಗಳು ಕಳೆಯಿತು. ಈ ಅವಧಿಯಲ್ಲಿ ಆಕೆ ಸುಮ್ಮನೆ ಕೂಡದೇ ಇಸ್ರೇಲ್ ಕೃಷಿ ತಂತ್ರಜ್ಞಾನದ ಬಗ್ಗೆ ಮಾಹಿತಿ ಹಾಗೂ ಪುಸ್ತಕಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಿದಳು. ಸಂಶಯ ಇದ್ದಲ್ಲಿ ತಜ್ಞರಿಗೆ ಕೇಳಿ ತಿಳಿದು ಕೊಂಡಳು. ಆಗಲೇ ಬಂಜರು ಭೂಮಿ ಫಲವತ್ತಾಗಿ ಮಾಡಿರುವ ಸ್ಥಳಗಳ  ಮಾಹಿತಿ ಸಂಗ್ರಹಿಸಿ ಅಲ್ಲಿಗೆ   ಹೋಗಿ ಅವರೊಡನೆ ಚರ್ಚೆ ಮಾಡಿದಳು. ಆವರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿತು. ಇದೆಲ್ಲ ಆಗುವದಕ್ಕೆ ಆರು ತಿಂಗಳು ಹಿಡಿಯಿತು.  ಇದು ಆಕೆಗೆ ಕೇವಲ  ಅನುಭವ ಅಷ್ಟೇ ಅಲ್ಲ ಯೋಜನೆ ಅನುಷ್ಠಾನಗೊಳಿಸಲು ಸಹಾಯವಾಯಿತು. 

ಒಂದು ದಿವಸ ಬೆಳಗ್ಗೆ ಶುಭಾಂಗಿ ಅಪ್ಪಾಜಿ ಭೇಟಿ ಆಗಿ ತಾನು ಇಲ್ಲಿಯವರಿಗೆ ಮಾಡಿರುವ ಕೆಲಸದ ಬಗ್ಗೆ ವರದಿ ಕೊಟ್ಟಳು. ಇದನ್ನು ಕೇಳಿದ ರಾಮಪ್ರಸಾದ್ ಆಕೆಗೆ ಭೇಷ್ ಎಂದು ಪ್ರಶಂಸೆ ಮಾಡಿ ಫರಿದಾಬಾದ ನಲ್ಲಿ ಇರುವ ಇಸ್ರೇಲ್ ಆಧುನಿಕ ಕೃಷಿ ತಂತ್ರಜ್ಞಾನ ಕೇಂದ್ರದಲ್ಲಿ ಒಂದು ತಿಂಗಳು ತರಬೇತಿ ತೆಗೆದು ಕೊಳ್ಳಲು ಹೇಳಿದರು. ಅದಕ್ಕಾಗಿ ಅವರು ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿದರು. ಬರುವ ತಿಂಗಳು ಹದಿನೈದನೆ ದಿನಾಂಕ ಅಲ್ಲಿ ಇರಬೇಕು. ಹೋಗುವ ಎಲ್ಲ ಸಿದ್ಧತೆ ಮಾಡಿಕೊಂಡು ಆ ದಿವಸ ಹೊರಟೇ ಬಿಟ್ಟಳು. ತರಬೇತಿ ಅವಧಿ ಮುಗಿದು ವಾಪಸ್ ಬಂದಾಗ ಶುಭಾಂಗಿ ತನ್ನ ಗುರಿ ಸಾಧಿಸುವ ಯೋಜನೆಯಲ್ಲಿ ಒಂದು ಹೆಜ್ಜೆ ಮುಂದೆ ಬಂದಳು. 

ಆಗಲೇ ರಾಮಪ್ರಸಾದ್ ಆವರು ಸ್ಥಳೀಯ ಸರಕಾರಿ  ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಶುಭಾಂಗಿಯ ಯೋಜನೆ ವಿವರ ತಿಳಿಸಿ ಆಕೆಗೆ ಸಹಾಯ ಮಾಡಲು ಹೇಳಿದರು. ಈ ವಿಷಯ ತಿಳಿದ ಶುಭಾಂಗಿ ಅಧಿಕಾರಿಗಳನ್ನು ಭೇಟಿಯಾಗಿ ಭೂಮಿ ನೋಡಲು ಬರುವಂತೆ ವಿನಂತಿ ಮಾಡಿದಳು. ಅವರು ಬರುವ ಗುರುವಾರ ಬೆಳಗಿನ ಎಂಟು ಗಂಟೆಗೆ ಅಲ್ಲಿಗೆ ಬರುವದಾಗಿ ಹೇಳಿದ ಪ್ರಕಾರ ಬಂದು ಉಪಯುಕ್ತ ಮಾಹಿತಿ ಹಾಗೂ ಸರಕಾರದಿಂದ ಸಹಾಯ ಮಾಡುವ ಭರವಸೆ ಕೊಟ್ಟರು. ಇಂತಹ ದೊಡ್ಡ ಕೆಲಸವಾಗಲೂ ಪ್ರಾರಂಭದಲ್ಲಿ ಅನೇಕ ವಿಘ್ನಗಳು ಬರುವದು ಸಹಜ. ಶುಭಾಂಗಿ ಧೃತಿಗೆಡದೇ ಎಲ್ಲವನ್ನೂ ಎದುರಿಸುತ್ತ ನಡೆದಳು. ಬ್ಯಾಂಕ್ ನವರು ಸಾಲ ಸೌಲಭ್ಯ ಆವಶ್ಯಕತೆ ಇರುವಾಗ ಕಂತಿನ ರೂಪದಲ್ಲಿ ಒದಗಿಸಿದರು. ಆಕೆಯ ಆರು ವರ್ಷಗಳ ಅವಿರತ ಪ್ರಯತ್ನ ಇಂದು ಮಾದರಿ ತೋಟವಾಯಿತು ಎಂದರೆ ಎಲ್ಲರಿಗೂ ಅಚ್ಚರಿ ಆಯಿತು. ಆದರೆ ಆಧುನಿಕ ತೋಟದ ಸೂತ್ರಧಾರ ರಾಮಪ್ರಸಾದ್ ಅವರಿಗೆ ಇದನ್ನು ನೋಡುವ ಭಾಗ್ಯ ಇಲ್ಲ. ಅವರು ಮರಳಿ ಬರದೇ ಇರುವ ಲೋಕಕ್ಕೆ ಹೋಗಿ ಒಂದು ತಿಂಗಳು ಆಗಿತ್ತು. ಗೋಡೆಯ ಮೇಲೆ ಇರುವ ಗಡಿಯಾರ ಹನ್ನೆರಡು ಗಂಟೆ ಶಬ್ದ ಮಾಡುವದಕ್ಕೂ ಪೋಲಿಸ್ ಸ್ಟೇಷನ್ ನಿಂದ ಕರೆ ಬರುವದಕ್ಕೂ ಶುಭಾಂಗಿ ತನ್ನ ಹಿಂದಿನ ನೆನಪುಗಳಿಂದ ಹೊರಬಂದು ಅಲ್ಲಿಗೆ ಹೋದಳು. ಪೋಲಿಸ್ ಸ್ಟೇಷನ್ ನಲ್ಲಿ ಶುಭಾಂಗಿ ಗೆ ಆಶ್ಚರ್ಯ ಕಾದಿತ್ತು. ಚಿನ್ನದ ಸಾಮಾನುಗಳು ಹಾಗೂ ನಗದು ಹಣ ಸುರಕ್ಷಿತ ವಾಗಿ ಬಂದಿತು. ಅಪರಾಧಿಯನ್ನು ನೋಡಿದ ಶುಭಾಂಗಿ ಗೆ ಒಂದೇ ಸಮನೆ ಕಣ್ಣೀರು. ಅವನು ಬೇರೆ ಯಾರೂ ಆಗಿರದೇ ಅಪ್ಪಾಜಿಯವರ ದಾರಿ ತಪ್ಪಿದ ಏಕೈಕ ಪುತ್ರ ಅಂಬರೀಷ್. ತಾಯಿ ಇಲ್ಲದ ಮಗ ಎಂದು ಅವನಿಗೆ ಅತಿಯಾಗಿ ಪ್ರೀತಿಸಿದರು. ಅವನು ಹತ್ತನೇ ತರಗತಿಯಲ್ಲಿ ಐದು ಸಲ ಫೇಲ್ ಆಗಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ  ಕೊಟ್ಟು ಗುಂಡಾ ಹುಡುಗರ ಸ್ನೇಹ ಮಾಡಿದ. ಶುಭಾಂಗಿಯ ಪ್ರಗತಿ ಅವನಿಗೆ ಸಹನೆ ಆಗದೇ ಇಂತಹ ಕೃತ್ಯ ಮಾಡಿ ಸಿಕ್ಕಿ ಹಾಕಿಕೊಂಡ. ಆ ಸಮಯದಲ್ಲಿ ಶುಭಾಂಗಿಯ ಸಂದಿಗ್ಧ ಪರಿಸ್ಥಿತಿಯನ್ನು ಗಮನಿಸಿದ ಪೋಲಿಸ್ ಇನ್ಸಪೆಕ್ಟರ್ ಅನಿರುದ್ಧ ಆಕೆಗೆ ಸಮಾಧಾನ ಮಾಡಿ,

"ಶುಭಾಂಗಿ ಅವರೇ, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು. ಅಂಬರೀಷ್ ಮುಂದೆ ಸುಧಾರಿಸಿದರೆ ಶಿಕ್ಷೆ ಕಡಿಮೆ ಆಗಬಹುದು."ಎಂದರು

ಶುಭಾಂಗಿ ಭಾರವಾದ ಮನಸ್ಸಿನಿಂದ ತೋಟದ ಮನೆಗೆ ಬಂದು ಪತಿ ಹಾಗೂ ಮಗಳಿಗೆ ಆಗಿರುವ ವಿಷಯ ತಿಳಿಸಿ ದಳು.








Rate this content
Log in

Similar kannada story from Tragedy