Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Children Stories Inspirational

3  

Vijaya Bharathi.A.S.

Abstract Children Stories Inspirational

ಸಂಕು, ಮಂಕು ಮತ್ತು ಪಿಂಕು

ಸಂಕು, ಮಂಕು ಮತ್ತು ಪಿಂಕು

1 min
1.3K



ಸಂಕು ಎಂಬ ಪುಟ್ಟ ಅಳಿಲೊಂದು ಒಂದು ಮರದ ಮೇಲೆ ಪುಟ್ಟದಾದ ಗೂಡನ್ನು ಕಟ್ಟಿಕೊಂಡು ಅದರಲ್ಲಿ ವಾಸವಾಗಿತ್ತು. ಒಂದು ದಿನ ಮಂಕು ಎಂಬ ತುಂಟ ಕೋತಿ ಮರಿಯೊಂದು  ಆ ಮರವನ್ನು ಏರಿ, ಹಿಗ್ಗಾಮುಗ್ಗ ಅಲ್ಲಾಡಿಸತೊಡಗಿತು .ಆಗ ಸಂಕು ಕಟ್ಟಿಕೊಂಡಿದ್ದ ಆ ಗೂಡು ಕಿತ್ತುಹೋಯಿತು. ಪಾಪ, ಆ ಅಸಹಾಯಕ ಪುಟ್ಟ ಗಾತ್ರದ ಸಂಕು ತನ್ನ ಆಶ್ರಯಕ್ಕಾಗಿ ಪಕ್ಕದ ಮರಕ್ಕೆ ಹೋಯಿತು.


ಈ ಮಂಕುವಿನ ತುಂಟತನದಿಂದ ಆದ ಅನಾಹುತವನ್ನು ದೂರದಿಂದಲೇ ನೋಡುತ್ತಿದ್ದ ಪಿಂಕು ಎಂಬ ಆನೆಯೊಂದು ಮರದ ಹತ್ತಿರ ಬಂದು, ಅ ತುಂಟ ಮಂಕುವನ್ನು ತನ್ನ ಸೊಂಡಿಲಿನಿಂದ ಮೇಲೆಕ್ಕೆತ್ತಿ ಹೂಂಕರಿಸಿದಾಗ, ಅದು ಹೆದರಿಕೊಂಡು " ನನನ್ನು ಕಾಪಾಡಿ, ಕಾಪಾಡಿ"ಎಂದು ಜೋರಾಗಿ ಕಿರಿಚಿಕೊಳ್ಳುತ್ತಿತ್ತು. ಆಗ ಅಲ್ಲೇ ಹತ್ತಿರದಲ್ಲಿದ್ದ ಸಂಕು ಪಿಂಕು ಆನೆಯ ಹತ್ತಿರ ಬಂದು, 

" ಗಜರಾಜ, ದಯವಿಟ್ಟು ಆ ಕೋತಿಮರಿಯನ್ನು ಬಿಟ್ಟುಬಿಡು, ಇನ್ನು ಮುಂದೆ ಅದು ಈ ರೀತಿ ತುಂಟತನವನ್ನು ಮಾಡುವುದಿಲ್ಲ. ತುಂಬಾ ಜಾಣನಾಗಿರುತ್ತದೆ" ಎಂದು ಕೇಳಿಕೊಂಡಿತು. 

ತನ್ನ ತಪ್ಪಿನ ಅರಿವಾದ ಮಂಕು, ಸಂಕುವಿನ ಹತ್ತಿರ ಬಂದು " ದಯವಿಟ್ಟು ನನ್ನನ್ನು ಕ್ಷಮಿಸಿಬಿಡು ಅಳಿಲಣ್ಣ. ಇನ್ನು ಮುಂದೆ ಈ ರೀತಿ ನಿನ್ನ ಗೂಡನ್ನು ಹಾಳುಮಾಡುವುದಿಲ್ಲ, ನಾನು ಮತ್ತು ನೀನು ಇಬ್ಬರೂ ಒಳ್ಳೆಯ ಸ್ನೇಹಿತರಂತೆ ಇರೋಣ" ಎಂದು ಹೇಳಿದಾಗ ಒಳ್ಳೆಯ ಮನಸ್ಸಿನ ಸಂಕು, ಮಂಕುವಿನ ಜೊತೆ ಸ್ನೇಹ ಬೆಳೆಸಲು ಒಪ್ಪಿಕೊಂಡಿತು. 

ಇವರಿಬ್ಬರನ್ನೂ ನೋಡುತ್ತಿದ್ದ ಪಿಂಕು, ಮಂಕುವಿನ ಹತ್ತಿರ ಬಂದು,

"ಇಂದು ನೀನು ಸಂಕುವಿ ನಿಂದ ಉಳಿದುಕೊಂಡೆ.ಇಲ್ಲವಾದರೆ ಇಂದು ನಿನ್ನ ಕಥೆಯನ್ನು ಮುಗಿಸಿಬಿಡುತ್ತಿದ್ದೆ."ಎಂದು ಹೇಳಿ, ಸೊಂಡಿಲು ಬೀಸುತ್ತಾ ಮುಂದೆ ನಡೆಯಿತು.

ಮುಂದೆ ಸಂಕು ಮತ್ತು ಮಂಕು ಒಳ್ಳೆಯ ಗೆಳೆಯರಾದರು.  


ನೀತಿ: ಒಳ್ಳೆಯ ಮನಸ್ಸಿನವರು, ತಮಗೆ ತೊಂದರೆ ಮಾಡಿದವರನ್ನೂ ಕ್ಷಮಿಸಿಬಿಡುತ್ತಾರೆ.



Rate this content
Log in

Similar kannada story from Abstract