Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ. ಭಾಗ 3.

ಇಷ್ಟ ದೇವತೆ. ಭಾಗ 3.

2 mins
201



ಎಲ್ಲರೂ ಕಟ್ಟೆಯ ಮೇಲೆ ಕೂತು ಹರಟೆ ಹೊಡೆಯುತ್ತಿರುವಾಗ ಅಜ್ಜ ಮಹದೇವಪ್ಪ ಎಲ್ಲರೆದುದುರು ಒಂದು ವಿಷಯ ಪ್ರಸ್ತಾಪಿಸಿದನು.


ಮಗ ಮಲ್ಲು, ನನ್ನ ಮುದ್ದಿನ ಮೊಮ್ಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಅಂತ ಕಾಣಸುತ್ತೆ .


ಗಿರಿಜೆಯ ಅಪ್ಪ ಮಲ್ಲಪ್ಪ: ಏನ ಹೇಳಕತ್ತಿರಿ ನೀವು?


ಗಿರಿಜೆಯ ಅಜ್ಜ: ಯಾಕೋ ನಾನೇನು ತಪ್ಪ ಹೇಳಿದೆ?


ಮಲ್ಲಪ್ಪ: ಅಪ್ಪ,ಅದೂ , ಅದೂ, ಮದುವೆ ವೇ...

( ಹೆದರುತ್ತ)...


ಗಿರಿಜೆಯ ಅಜ್ಜ: ಅದು, ಅದು , ಬಿಟ್ಟು ಮಾತು ಮುಂದುವರಿಸು.


ಮಲ್ಲಪ್ಪ: ಈಗ್ತಾನೆ ಕಾರ್ಯ ಮಾಡೇವಿ, ಅವಳೂ ಚಿಕ್ಕವಳು, ಅದಕ್ಕೆ.


ಯಾಕ್ಲಾ ಅವಳ ವಯಸ್ಸಿಗೆ ಅಲ್ವಾ, ದೊಡ್ಡ ಮೊಮ್ಮಗಳು ನೀಲಾನ ಮದ್ವಿ ಮಾಡಿದ್ದು, ಈಗೇನಾತು ಅಕಿ ನಾಕು ಮಕ್ಕಳನ್ನು ಹಡೆದು,ತನ್ನ ಸಂಸಾರ ಚೆಂದಗೆ ಮಾಡಿಕೊಂಡು ಹೊಂಟಾಳಲ್ಲ..ಇಕಿನೂ ಹಂಗ . ನೋಡು ನಿನ್ನ ಮಗಳು ಖರೆ, ಆದರ ಅಕಿ ಮೇಲೆ ನಿನಗಿಂತ ಹೆಚ್ಚು ಕಾಳಜಿ ನನಗಿದೆ. ತಿಳಿತಾ. ನಿನಗಿಂತ ಹೆಚ್ಚಿನ ಪ್ರೀತಿ ನನಗಿದೆ ಅರ್ಥ ಮಾಡ್ಕೊ.


ಮಲ್ಲಪ್ಪನನ್ನು ಹೆಂಡತಿ ಕಮಲವ್ವ ಸುಮ್ಮನಿರುವಂತೆ ಸನ್ನೆ ಮಾಡಿದಾಗ ಆತ ಸುಮ್ಮನಾಗಿದ್ದ.


ಆದರೆ ಗಿರಿಜೆ ಆಕೆಯ ಚಿಗವ್ವ ಶಾರಕ್ಕಳ ಜೊತೆಗೆ ಹೆಚ್ಚು ಆತ್ಮೀಯಳಾಗಿದ್ದರಿಂದ ಹೋದವಳೇ ಶಾರಕ್ಕ ಚಿಗವ್ವಳನ್ನು ತಬ್ಬಿಕೊಂಡು ದುಃಖ ಮಾಡಿಕೊಂಡಳು.


ಗಿರಜಮ್ಮ: ಚಿಗವ್ವ ನಾ ಈಗ್ಲೇ ಮದ್ವಿ ಒಲ್ಲೆ, ಇಷ್ಟು ಬೇಗ ಯಾಕ ಇದನ್ನ ಮಾತಾಡಕತ್ತಾರ?


ಶಾರಕ್ಕ ಚಿಗವ್ವ: ಮಗಳ ಮಾವನವರ ಮುಂದೆ ಯಾರು ಮಾತಾಡತಾರಾ ಹೇಳು? ನಾವು ಹು ಅಂದ್ರು ಅನದೆ ಇದ್ರು ಅವರ ನಿರ್ಧಾರ ಬದಲಾಗಲ್ಲ.



ಗಿರಜಮ್ಮ: ಅಲ್ಲ ಚಿಗವ್ವ, ಮದುವಿ ಆಕ್ಕನಿ, ಆಗಲ್ಲ ಅಂತಾ ಅಲ್ಲ,ಅದರ ಇಷ್ಟ ಬೇಗ ಬೇಡ ಅಂತ ಕಾಕಾಗ ಹೇಳ್ರಿ,


ಶಾರಕ್ಕ ಚಿಗವ್ವ: ನೋಡು ಗಿರಜಮ್ಮ, ಅಜ್ಜ ನಿನ್ನ ಒಳ್ಳೇದಕ್ಕ ಮಾಡ್ತಾರಾ ಅಂತ ಸುಮನಾಗು. ಮತ್ತ ಮದುವೆಗೆ ಒಪಕೊಂಡ್ ಬಿಡು.


ಗಿರಜಮ್ಮ: ಚಿಗವ್ವ, ಚಿಗವ್ವ, ದಯವಿಟ್ಟು ಕಾಕಾಗ ಹೇಳ್ರಿ ನೀವು. ಒಂದ್ಸಲ ಮಾತಾಡ್ಲಿ ಅಜ್ಜನ ಜೋಡಿ.. ಏನಂತಾರ ನೋಡೋಣ..


ಆತಬಿಡವಾ, ನಿಮ್ಮ ಕಾಕಾ ಸಂಜಿಮುಂದ ಹೊಲದಿಂದ ಮನೆಗೆ ಬರ್ಲಿ, ಒಂದ್ ಮಾತು ಹೇಳಿ ನೋಡ್ತನಿ. ಮುಂದಿಂದ ಆ ದೇವರಿಗೆ ಬಿಟ್ಟಿದ್ದು ಅಂತ ಚಿಗವ್ವ ತನ್ನ ಕೆಲಸಕ್ಕ ಹತ್ತಿದಳು.


ಇತ್ತ ಗಿರಜಾಮ್ಮಗ ಒಟ್ಟ ಸಮಾಧಾನ ಆಗವಲ್ದು. ಊಟನು ಬೇಡವಾಯ್ತು, ನಿದ್ದಿನೂ ಹೋಯ್ತು. ಅಜ್ಜನ ಮಾತು ಕಿವಿಯಲ್ಲಿ ಪುನರಾವರ್ತನೆ ಆಗ್ತಾ ಇತ್ತು.. ಯಾರು ಕರೆದರೂ ಪರಿವೆಯೇ ಇಲ್ಲದೆ ಮಂಕಾಗಿರುತ್ತಿದ್ದಳು.


ಕೇವಲ ಹನ್ನೆರಡು ವರ್ಷ ಈಗ ಯಾಕ ಮದುವಿ ಮಾಡಕುಂತಾರ ಅಂತ ಚಿಂತೆ ಮಾಡಲು ಶುರುವಾದಳು. ಹಿಂದೆಲ್ಲ ಬಹು ಬೇಗ ಅಂದರೆ ಮೈನೆರೆತ ಒಂದೆರಡು ವರ್ಷದಲ್ಲಿ ಮದುವೆ ಮಾಡಿ ತಮ್ಮ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳಿಸುತ್ತಿದ್ದರು.ಆದರೆ ಅದು ಗಿರಜಮ್ಮ ನಿಗೆ ಬೇಡವಾಗಿತ್ತು. ತೀರ ಸುಂದು ಬಡಿದಳವಂತೆ ಇರತೊಡಗಿದಳು.


ಪ್ರೀತಿಯ ಮೊಮ್ಮಗಳು ಆ ರೀತಿ ಮಂಕಾಗಿ ಇರುವುದನ್ನು ನೋಡಿದ ಆಕೆಯ ಅಜ್ಜ ಬಹಳ ಪ್ರೀತಿಯಿಂದ ಮೊಮ್ಮಗಳನ್ನು ಹತ್ತಿರಕ್ಕೆ ಕರೆದು, ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಸಪ್ಪಾಗಿರಲು ಕಾರಣ ಕೇಳಿದನು..


ಹಾಗಾದರೆ ಇಷ್ಟ ದೇವತೆಯ ಮುಂದಿನ ಭಾಗದಲ್ಲಿ ಅಜ್ಜ ಏನು ಹೇಳಿದನು,ಗಿರಿಜೆಯು ಮದುವೆಗೆ ಒಪ್ಪಿದಳಾ ಅಥವಾ ಇಲ್ಲವಾ ಎನ್ನುವುದನ್ನು ನೋಡೋಣ......


Rate this content
Log in

Similar kannada story from Classics