Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Classics Inspirational Others

4.0  

shristi Jat

Classics Inspirational Others

ಕುಟುಂಬ

ಕುಟುಂಬ

1 min
147


ಕುಟುಂಬ ನಮಗೆ ಕವಚ ಇದ್ದ ಹಾಗೆ ನಮ್ಮ ಬಾಲ್ಯದ ಜೀವನಕ್ಕೆ ತಂದೆ ತಾಯಿಯು ಆಶ್ರಯದ ಹೋದಿಕೆಯಾಗಿರುತ್ತಾರೆ. ತಂದೆಯು ನಮ್ಮ ಬೆಳವಣಿಗೆಗೆ ಮಾರ್ಗದರ್ಶಕನಾಗಿರುತ್ತಾನೆ. ದಾರಿ ತೋರುವ ದಿಕ್ಸೂಚಿಯಾಗಿರುತ್ತಾನೆ. ತಾಯಿಯು ಮಮತೆ ವಾತ್ಸಲ್ಯದ ಸಾಗರವಾಗಿ ಬೆಳೆಸುತ್ತಾಳೆ. ಅಜ್ಜ ಅಜ್ಜಿಯರು ನಮಗೆ ಅಕ್ಕರೆಯನ್ನು ಕೊಟ್ಟು ನಮಗೆ ಮಾದರಿಯಾಗಿರುತ್ತಾರೆ. ಕುಟುಂಬವು ನಮಗೊಂದು ಧೈರ್ಯ ನಾವಿಡುವ ಪ್ರತಿಯೊಂದು ಹೆಜ್ಜೆಗೂ ನಮಗೆ ಬೆಂಬಲ ನೀಡಿ ಸಹಕರಿಸುತ್ತಾರೆ.ನಮ್ಮ ಕಷ್ಟದಲ್ಲಿ ಬೆನ್ನೆಲುಬಾಗಿ ನಮ್ಮ ಸುಖದಲ್ಲಿ ಸಂಭ್ರಮಿಸುತ್ತಾರೆ.  ಬೆಳೆದು ನಮ್ಮ ಕಾಲಮೇಲೆ ನಾವು ನಿಲ್ಲುವುವರೆಗೂ ನಮಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಾರೆ. ನಾವು ಒಂದು ಮಟ್ಟಕ್ಕೆ ತಲುಪಿದ ಮೇಲೆ ನಮಗೆ ಒಂದು ಬಾಳಸಂಗಾತಿಯನ್ನು ಜೊತೆಮಾಡುತ್ತಾರೆ. ಜವಬ್ದಾರಿಯ ಮೂಟೆಯನ್ನು ಹೊತ್ತ ಮತ್ತು ತನ್ನಿಂದಾದ ಹೊಸದೊಂದು ಕುಟುಂಬದ ಕಾಳಜಿ ವಹಿಸಿಕೊಳ್ಳುವ ಯಜಮಾನನಾಗುತ್ತಾನೆ. ಅವರು ಹೆಣ್ಣಾಗಲಿ ಗಂಡಾಗಲಿ ಕಾಲಚಕ್ರ ಒಂದೇ ಕುಟುಂಬ ಎಂದರೆ ತಂದೆ ತಾಯಿ ಅಜ್ಜ ಅಜ್ಜಿಯರು ಇರುವುದೆ ಅಲ್ಲ ಕೆಲವರು ತಂದೆಯ ನೇರಳಲ್ಲಿ ಬೆಳೆಯುತ್ತಾರೆ ತಾಯಿ ಇರುವುದಿಲ್ಲ ಇನ್ನೂ ಕೆಲವರಿಗೆ ತಂದೆ ಇರುವುದಿಲ್ಲ ಇಬ್ಬರ ಜವಾಬ್ದಾರಿ ಒಬ್ಬಳೆ ಹೊತ್ತು ಸಲಹುತ್ತಾಳೆ. ಕೆಲವರದು ಕುಟುಂಬ ದೊಡ್ಡದಾಗಿರುತ್ತದೆ. ಕೆಲವರದು ಚಿಕ್ಕದು ಇನ್ನೂ ಕೆಲವರಿಗೆ ಬಾಳಸಂಗಾತಿಯಿಂದ ಕುಟುಂಬವಾಗಿರುತ್ತದೆ .ಅವರಿಗೆ ಪೋಷಕರೆ ಇರುವುದಿಲ್ಲ. ಕುಟುಂಬ ಒಂದು ನದಿ ಇದ್ದ ಹಾಗೆ ಕಲ್ಲುಗಳು,ಏರುಪೇರು ಎಲ್ಲಾ ನುಗ್ಗಿ ಹರಿಯುತ್ತದೆ. ಹಾಗೆ ಕುಟುಂಬದಲ್ಲುಂಟಾಗುವ ಕಷ್ಟಗಳು, ನೋವುಗಳನ್ನು ದಾಟಿ ಮುಂದೆ ಸಾಗುತ್ತೇವೆ.ಕುಟುಂಬ ಎಂದರೆ ನನಗೋಸ್ಕರ ಎಂಬ ಪದದಿಂದ ನಮಗೋಸ್ಕರ ಅನ್ನೊ ಕಾಳಜಿಯ ಪದ ವಾಗುತ್ತದೆ. ಅವರಿಂದ ನಾವು ನಮ್ಮ ಜೊತೆ ಮತ್ತು ನಮ್ಮಿಂದ ಹಿಗೆ ಕಾಲಚಕ್ರವಾಗಿ ಮುಂದುವರಿಯುತ್ತದೆ. ಅಂದರೆ ಪೋಷಕರಿಂದ ನಾವು ನಮ್ಮ ಜೊತೆ ಅಂದರೆ ಒಡಹುಟ್ಟಿದವರು ಹಾಗೂ ನಮ್ಮಿಂದ ಅಂದರೆ ನಮ್ಮ ಮಕ್ಕಳು ಕುಟುಂಬವು ಒಂದು ಸರಪಳಿ ಇದ್ದ ಹಾಗೆ ಪರಂಪರೆಯು ಉದ್ದವಾಗುತ್ತಾ ಹೋಗುತ್ತದೆ. ಅದಕ್ಕೆ ನಾವು ನಮ್ಮ ಆಪ್ತರನ್ನು ಕುಟುಂಬ ಇದ್ದ ಹಾಗೆ ಎಂದು ಹೇಳುತ್ತೇವೆ.

"ಕುಟುಂಬ ಪ್ರೀತಿ ತುಂಬಿದ ಕಡಲು"


Rate this content
Log in

Similar kannada story from Classics