Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

4  

Shridevi Patil

Classics Inspirational Others

ಅವಳೂ ತಾಯಿಯೇ. ಭಾಗ 4.

ಅವಳೂ ತಾಯಿಯೇ. ಭಾಗ 4.

2 mins
495



ಚಿಕ್ಕಮ್ಮ ಜಾರಿ ಬಿದ್ದು ಕಾಲು ನೋವು ಮಾಡಿಕೊಂಡಿದ್ದಕ್ಕೆ ಕಲಾವತಿ ಚಿಕ್ಕಮ್ಮನ ಕುರಿತು ಮಾತನಾಡುತ್ತಿರುವಾಗ ಅವಳ ಅಕ್ಕ ,ಹಾಗೆಲ್ಲ ಮಾತನಾಡುವುದು ತಪ್ಪು ಕಲಾ, ಇಂತಹ ಪರಿಸ್ಥಿತಿಯಲ್ಲಿ ನಾವಲ್ಲದೆ ಯಾರು ನೋಡ್ಕೊಳ್ತಾರೆ ಹೇಳು ಅವರನ್ನು? ಏನೇ ಸಿಟ್ಟು , ಜಗಳ , ಮನಸ್ತಾಪಗಳಿದ್ದರೂ ಸಹ ಅವನ್ನೆಲ್ಲ ಪಕ್ಕಕ್ಕಿಟ್ಟು ಆರೈಕೆ ಮಾಡ ಬೇಕಾದದ್ದು ನಮ್ಮ ಕರ್ತವ್ಯ . ಹಾಗಾಗಿ ನೀನು ಇವತ್ತೇ ಹೊರಡು ಊರಿಗೆ. ನಿನ್ನ ಅವಶ್ಯಕತೆ ಹೆಚ್ಚಿರುತ್ತದೆ ಅಲ್ಲಿ ಅಂತ ಅಕ್ಕ ಹೇಳಿದಾಗ , ಕಲಾವತಿಯು ಅಕ್ಕಾ ,ನೀನು ಹೇಳ್ತಿದಿಯ ಅಂತ ಹು ಅನ್ನಬೇಕು ನಾನು, ನಿಜವಾಗಲೂ ನನಗಂತೂ ಎಳ್ಳಷ್ಟೂ ಮನಸ್ಸು ಇಲ್ಲ ಎಂದಳು.


ಮದ್ಯಾಹ್ನದವರೆಗೂ ಇರು, ನಿನ್ನ ಭಾವ ಊಟಕ್ಕೆ ಬಂದಾಗ ನಾನು ಊರಿಗೆ ಬರಲು ಕೇಳಿ ನೋಡ್ತೀನಿ . ಅವರೇನಾದರೂ ಹು ಅಂದರೆ ಇಬ್ಬರು ಸೇರಿ ಹೋದರಾಗುತ್ತೆ ,ಸರೀನಾ ಅಂದಾಗ , ಕಲಾವತಿಯು ಖುಷಿಯಿಂದ ಕುಣಿದಾಡಿದಳು.


ಕಲಾವತಿಯ ಭಾವ ಊರಿಗೆ ಹೊರಡಲು ಒಪ್ಪಿಗೆ ಕೊಟ್ಟಾಗ ಇಬ್ಬರು ಖುಷಿಯಿಂದ ಊರಿಗೆ ಹೊರಡಲು ಸಿದ್ಧರಾದರು.


ಊರಿಗೆ ಬಂದು ನೋಡುತ್ತಾರೆ ,ಚಿಕ್ಕಮ್ಮನ ಒಂದು ಕಾಲು ಮುರಿದಿದೆ , ಕೈ ಕೂಡ ಗಾಯವಾಗಿ , ಮುಖವೆಲ್ಲ ತರಚಿದ ಗಾಯಗಳಾಗಿದ್ದು , ನೋಡಿದರೆ ಕರುಳು ಹಿಂಡುವಂತೆ ಆಗಿತ್ತು.


ಈಗ ಆ ಚಿಕ್ಕಮ್ಮನ ಪೊಗರು , ದರ್ಪ , ದೌಲತ್ತು ಎಲ್ಲವೂ ನೆಲ ಕಚ್ಚಿದ್ದವು.. ಆರೈಕೆ ಮಾಡುವವರು, ಕಾಳಜಿಯಿಂದ ನೋಡಿ ಕೊಳ್ಳುವವರು ಬೇಕಾಗಿತ್ತು.



ಕಲಾವತಿಯ ವರ್ತನೆ ನೋಡಿ ಆ ಚಿಕ್ಕಮ್ಮನಿಗೆ ಅರ್ಥವಾಗಿತ್ತು. ಇವಳೇನೂ ನನ್ನ ನೋಡಿಕೊಳ್ಳುವುದಿಲ್ಲ ,ನನ್ನತ್ತ ತಿರುಗಿಯೂ ಸಹ ನೋಡಲ್ಲ ,ಇದಂತೂ ಸತ್ಯ ಅಂದುಕೊಂಡಿದ್ದಳು. ಆದರೆ ಅದು ಉಲ್ಟಾ ಪಲ್ಟಾ ಆಗಿತ್ತು. ಚಿಕ್ಕಮ್ಮನ ಆರೈಕೆಯ ವಿಷಯದಲ್ಲಿ ಅಕ್ಕನಿಗಿಂತ ಒಂದು ಕೈ ಮೇಲಾಗಿಯೇ ನೋಡಿಕೊಂಡಳು . ಹೊತ್ತು ಹೊತ್ತಿಗೆ ಮಸಾಜ್ ಮಾಡುವುದು , ಬಿಸಿನೀರು ಹಾಕುವುದು , ಸ್ವಲ್ಪವೇ ಅಡ್ಡಾಡಿಸುವುದು ಹೀಗೆ ತನ್ನ ಕೈಲಾದಷ್ಟು ಮಾತ್ರ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದ್ದಳು ನಮ್ಮ ಕಲಾವತಿ.....


ಬರು ಬರುತ್ತಾ ಕಲಾವತಿ ಮತ್ತು ಚಿಕ್ಕಮ್ಮನ ಮದ್ಯ ಪ್ರೀತಿಯ ಮೊಗ್ಗು ಚಿಗೊರೋಡೆಯಲು ಶುರುವಾಗಿತ್ತು. ಹೆಣ್ಣು ಮಕ್ಕಳಿಬ್ಬರು ತುಂಬಾ ಒಳ್ಳೆಯವರಿದ್ದಾರೆ. ನಾನೇ ತಪ್ಪಾಗಿ ಅರ್ಥ ಮಾಡಿ ಕೊಂಡಿದ್ದೆ. ನಾನೆಷ್ಟು ಅನ್ಯಾಯ ಮಾಡಿದೆ ಇವರಿಗೆ? ಛೇ, ಅಪ್ಪ ಮಕ್ಕಳನ್ನ ದೂರ ಮಾಡಿ ಬಿಡುತ್ತಿದ್ದೇನೋ ಏನೋ ಅನ್ನುತ್ತಾ ತಾನು ಮಾಡಿದ ಆ ನೀಚ ಕೆಲಸವನ್ನು ನೆನೆದು ಬೇಜಾರಾಗಿವುದಲ್ಲದೆ , ಅಕ್ಕ ತಂಗಿಯರಿಬ್ಬರನ್ನು ಕರೆದು ತಾನು ಮಾಡಿದ ತಪ್ಪೇಲ್ಲವನ್ನು ಕ್ಷಮಿಸುವಂತೆ ಕೇಳಿ ಕೊಂಡಿದ್ದಾಳೆ. ಆಗ ಅಕ್ಕ ತಂಗಿಯರಿಬ್ಬರೂ ಸಹ ಖುಷಿಯಾಗಿ ಚಿಕ್ಕಮ್ಮ , ನೀವು ಕ್ಷಮೆ ಕೇಳುವುದೆಲ್ಲ ಬೇಡ , ನೀವು ಹೀಗೆ ಯಾವಾಗಲೂ ನಮ್ಮ ಜೊತೆ ಸಂತೋಷದಿಂದ ಇದ್ದರೆ ಸಾಕೆಂದು,ಅಕ್ಕ ತಂಗಿ ಕೇಳಿದರು.


ಆಗ ಅವರ ದೊಡ್ಡ ಗುಣಕ್ಕೆ ,ದೊಡ್ಡತನಕ್ಕೆ ನಾಚಿ ,ತಲೆ ತಗ್ಗಿಸಿ ಕುಳಿತಳು. ತಾನು ಮಾಡಿದ್ದು ತಪ್ಪೆಂದು ಅರ್ಥವಾಗಿದೆಯಲ್ಲ ಸಾಕು ಎಂದು ಅಕ್ಕ ತಂಗಿಯರಿಬ್ಬರು ಖುಷಿಯಾದರು.


ಮುಂದೆ ಚಿಕ್ಕಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹೇಗೆ ಇದ್ದು , ಅವರಿಗೆ ಆಸರೆಯಾದರು ಅಂತ

ಮುಂದಿನ ಭಾಗದಲ್ಲಿ ನೋಡೋಣ.



Rate this content
Log in

Similar kannada story from Classics