Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಅನಿತಾ ಸಾಹಿತಿ

Tragedy Inspirational

2  

ಅನಿತಾ ಸಾಹಿತಿ

Tragedy Inspirational

ಅಪರಾಧ

ಅಪರಾಧ

5 mins
11.5K



ನಾನು ಮನಸ್ವಿ,ದರಿದ್ರದವಳು ತಂದೆ ತಾಯಿ ಮನ ಮರ್ಯಾದೆ ಹಾಳು ಮಾಡಿ ಮಣ್ಣು ಸೇರಿದವಳು.ಈಗ ನನ್ನ ಬಗ್ಗೆ ಕೆಟ್ಟ ಮಾತುಗಳು ಸತ್ತ ಮೇಲೂ ಕೇಳಿಸಿಕೊಳ್ಳುತ್ತಿರುವ ನೀಚ ಹೆಂಗಸು.ನನ್ನ ಮಣ್ಣು ಮಾಡಿದ ಮೇಲೆ ನನ್ನ ನರಕಕ್ಕೆ ಕರೆದೊಯುತ್ತಾರೆ.ಆಮೇಲೆ ನಾನು ಹೇಳಬೇಕೆಂದ್ದಿರುವ ಮನದಾಳದ ಮಾತುಗಳು ಹಾಗೆ ಉಳಿಯುತ್ತವೆ.ಅದಕ್ಕೆ ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ ನರಕಕ್ಕೆಹೋಗುವಂತ ಕೆಲಸ ನಾನೇನು ಮಾಡಿರಬಹುದೆಂದ್ದು ಯೋಚನೆ ಮಾಡ್ತಿದ್ದೀರಾ ಆತ್ಮಹತ್ಯೆ ಮಹಾ ಪಾಪ ಕಣ್ರೀ ಗೊತ್ತಿಲ್ವ ಅದೇ ನಾನು ಮಾಡಿಕೊಂಡಿದ್ದು,ಈಗ ಜೀವನನ್ನು ಇಲ್ಲ ಜೀವನು ಇಲ್ಲ ಇದೆಲ್ಲ ಹೇಗಾಯಿತ್ತು ಅಂತ ಹೇಳ್ತಿನಿ ಕೇಳಿ.


ನಾನು ಮೊದಲೇ ಹೇಳಿದ ಹಾಗೆ ನನ್ನ ಹೆಸರು ಮನಸ್ವಿ ತಂದೆ ತಾಯಿಗೆ ಹಿರಿಯ ಮಗಳು,ಕಡು ಬಡತನದಲ್ಲಿ ಬೆಂದು ಹೊರ ಬಂದವಳು.ನನ್ನ ಓದು ಎಸ್ ಎಸ್ ಎಲ್ ಸಿಗೆ ಕೊನೆಯಾಯಿತ್ತು.ಹೇಗೋ ಎಸ್ ಎಸ್ ಎಲ್ ಸಿ ಮುಗಿದ ಎರಡು ವರ್ಷಕೆ ಎಲ್ಲೋ ಒಂದು ಚಿಕ್ಕ ಆಫೀಸಿನಲ್ಲಿ ಕೆಲಸಕೆ ಸೇರಿಕೊಂಡೆ.ಹಾಗೋ ಹೀಗೋ ಜೀವನ ನಡೆಸುತ್ತ ನನ್ನ ತಂಗಿಯನಾದರೂ ಓದಿಸುವ ಇಚ್ಛೆಯಿಂದ ನಾನು ಅಕ್ಕ ಪಕ್ಕದಲ್ಲಿ ಮನೆ ಕೆಲಸ ಆಗಾಗ ಮಾಡಲು ಹೋಗುತ್ತಿದ್ದೆ.


ಮನೆ ಯಜಮಾನರು ಹಳೆ ಬಟ್ಟೆ,ಉಳಿದ ಅಣ್ಣ ಕೊಡುತ್ತಿದ್ದರಿಂದ ಹೆಚ್ಚು ಹಣ ಕಾಸು ವೆಚ್ಚ ಮಾಡದೇ ತಂಗಿ ಕಾಲೇಜು ವಿದ್ಯಾಭ್ಯಾಸಕೆ ಉಳಿತಾಯ ಮಾಡುತ್ತ ನೆಮ್ಮದಿ ಜೀವನ ನಡೆಸುತ್ತಿದ್ದೆ.ಇದರ ಜೊತೆ ವಯಸ್ಸಿನ ಹುಮ್ಮಸ್ಸು ಬೇರೆ ಜೊತೆಯಲ್ಲಿ, ತಿನ್ನೋಕೆ ಅಂತದೇನು ಗತಿ ಇಲ್ಲದ್ದಿದರು ಮೈ ಕೈ ತುಂಬಿಕೊಂಡು ನೋಡುವರ ಕಣ್ಣು ಕುಕ್ಕುವಂತೆ ಇದ್ದೆ. ನನ್ನ ಉಬ್ಬು ತಬ್ಬು ನೋಡಿದವರು ನನ್ನ ಹಿಂದೆ ಬಿದ್ದು ಸಾಯುತ್ತಿದರು. ಮದುವೆ ಆಗಿರಲ್ಲಿಲ್ಲ.ಅವರ ಮನೆಯಲ್ಲಿ ಜನ ಜಾಸ್ತಿ ಹಾಗಾಗಿ ಒಮ್ಮೊಮ್ಮೆ ನನ್ನಗೆ ಆಫೀಸ್ ರಜೆಯಿದ್ದಾಗ ಅವರ ಮನೆಗೆ ಹೋಗಿ ಕೆಲಸ ಮಾಡಿ ಬರುತ್ತಿದ್ದೆ. ಆಗ ನನ್ನ ಅಮ್ಮನಿಗು ವಿಶ್ರಾಂತಿ ಸಿಗುತ್ತಿತ್ತು.


ಇನ್ನು ನನ್ನ ಅಪ್ಪನ ಕಥೆ ಬಿಡಿ ಕುಡಿದು ಹೆಂಡ್ತಿ ಪಕ್ಕ ಮಲಗೋದೇ ಗಂಡನ ಜವಾಬ್ದಾರಿ ಅನ್ಕೊಂಡಿದ್ರು.ನನ್ನ ತಂಗಿ ಇನ್ನೂ ಚಿಕ್ಕವಳು ಅವಳಿಗೆ ಅಪ್ಪ ಅಮ್ಮನ ಚೆಲ್ಲಾಟ ಚಪಲದ ಆಟ ತಿಳಿಯುತ್ತಿರಲಿಲ್ಲ. ಆದರೆ ನನ್ನ ವಯಸ್ಸಿಗೆ ಎಲ್ಲಾ ತಿಳಿಯುತ್ತಿದ್ದರಿಂದ ನನ್ನ ಒಲವೂ ತಂದೆ ತಾಯಿ ಮಾಡುವ ಕರ್ಮದತ್ತವಾಲಿತ್ತು.ಮೊದಲೇ ಮನೆ ಚಿಕ್ಕದು ಚಿಕ್ಕ ಮಾತು ದೊಡ್ಡದಾಗಿ ಕೇಳಿಸುತ್ತಿತ್ತು ಅವರ ಗುಸು ಗುಸು ಪಿಸುಪಿಸು ಮಾತು ಕೇಳಿದೊಡ್ಡನೆ ಮೈ ರೋಮಾಂಚನಗೊಳ್ಳುತ್ತಿತ್ತು. ನಾನೇನು ಅಷ್ಟು ಚಿಕ್ಕೊಳ್ಳು ಅಲ್ಲ ಮದುವೆ ವಯಸ್ಸೇ ನಂದು.


ಆ ಅಶೋಕ್ ಅನ್ನೋ ಬೇವರ್ಸಿ ಮಗ ನನ್ನ ಮೇಲೆ ಕಣ್ಣು ಹಾಕಿದೆ ತಡ ನಾನು ಆ ಮುಖಕ್ಕೆ ಮನ ಸೋತೆ,ದುಡ್ಡು ಕಾಸು ಚೆನ್ನಾಗಿದೆ ಅನ್ನೋ ಕಾರಣ ನನ್ನ ಬುದ್ದಿಯನ್ನು ಮಂದ ಮಾಡಿತ್ತು. ನನ್ನ ಕದ್ದು ನೋಡೋದು ಕಣ್ಣಿನಲ್ಲೇ ಮೇಲಿಂದ ಕೆಳಗಿನವರೆಗೆ ನೋಡಿ ನನ್ನ ಅಂದದ ಬಗ್ಗೆ ಮೆಚ್ಚುಗೆ ನೀಡುತ್ತಿದ್ದ ಅದಕ್ಕಾಗಿಯೇ ಅಮ್ಮ ಬೇಡವೆಂದರೂ ಅವರ ಮನೆ ಕೆಲ್ಸಕೆ ಹೋಗುತ್ತಿದೆ,ಭಾನುವಾರ ಬಂತೆಂದರೆ ಆಫೀಸ್ ರಜೆ ಇವರ ಮನೆಗೆ ನನ್ನ ಹಾಜರಿ ಇರುತ್ತಿತ್ತು.ನನ್ನಗೆ ಅವನ ಜೇಬಿನಲ್ಲಿ ಇರೋ ಕಂತೆ ಕಂತೆ ನೋಟುಗಳು ನನ್ನ ಕಣ್ಣನ್ನು ಸೆಳೆಯುತ್ತಿದ್ದವು.ಹೀಗೆ ಒಂದು ದಿನ ಯಾರು ಇಲ್ಲದಾಗ ಅವನು ನನ್ನ ಪ್ರೀತಿ ಮಾಡ್ತೀನಿ ಅಂದ ನಾನು ಏನೋ ಸಾಧಿಸಿದವಳಂತೆ ಹೂ ಅಂತ ಹೇಳೇಬಿಟ್ಟೆ,ನಂಗು ಅದೇ ಬೇಕಿತ್ತು ದುಡ್ಡು ಕಾಸು ಚೆನ್ನಾಗಿ ಇರೋ ಹುಡುಗ ಇಷ್ಟೆಲ್ಲ ಇರುವಾಗ ನಿರಾಕರಿಸೋದು ಹೇಗೆ ಹೇಳಿ.ಆವಾಗಿನಿಂದ ನಾವೂ ಹೊರಗೆ ಭೇಟಿ ಆಗೋದು ಪಾರ್ಕಿನ ಸಂಧಿಯಲ್ಲಿ ತೂರಿಕೊಂಡು ಲೊಚ್ಚ ಲೊಚ್ಚ ಅಂತ ಮುತ್ತು ಕೊಡೋದು ಸರ್ವೇ ಸಾಮ್ಯಾನವಾಗಿತ್ತು.


ಹೀಗೆ ನಮ್ಮ ಚೆಲ್ಲಾಟ ಮುಂದುವರೆಯಿತ್ತು ಅವರ ಮನೆವರಿಗೂ ಅನುಮಾನ ಬರಲು ಶುರುವಾಯಿತ್ತು. ಆದರೆ ನನ್ನಗೆ ಅವನ ದುಡ್ಡು ಕಾಸು ನೋಡಿ ಒಳ್ಳೆ ಜೀವನ ಸಿಗುತ್ತೆ ಅಂತ ಅನ್ಸ್ತು.ಅವನು ಆಗಾಗ ನನ್ನಗೆ ಐನೂರು ಸಾವಿರ ದುಡ್ಡು ಕೊಡೋನು ಅದರಿಂದ ಗೆಳೆತಿರ ಜೊತೆ ಹೋಗಿ ಮಜಾ ಮಾಡಲು ಅವಕಾಶ ಸಿಕ್ತಿತ್ತು.ಹೀಗೊಂದು ದಿನ ಅವನ ಸ್ನೇಹಿತನ ರೂಮಿಗೆ ಕರ್ಕೊಂಡು ಹೋಗಿದ್ದ ಅಲ್ಲೇ ಹೋಟೆಲಿನಿಂದ ಊಟ ತರಿಸಿ ಸ್ವಲ್ಪ ಹೊತ್ತು ಕೂತು ಮಾತಾಡಿ ಮನೆಗೆ ತೆರಳಿದ್ದೀವಿ.ಅಮ್ಮ ನನ್ನನ್ನು ನಂಬಿದ್ಲು ನಾನು ಕೆಲ್ಸಕ್ಕೆ ಹೋಗಿ ಬರ್ತಿದ್ದೀನಿ ಅಂದ್ಕೊಂಡಿದ್ಲು ಇದಾದ್ಮೇಲೆ ಪದೇ ಪದೇ ಅವನ ಸ್ನೇಹಿತನ ರೂಮಿಗೆ ಹೋಗಿ ಬರ್ತ್ತಿದ್ವಿ ಮಧ್ಯದಲ್ಲಿ ನನ್ನ ಶೀಲವನ್ನು ಸಹ ಬಿಟ್ಟುಕೊಟ್ಟೆ .ಅವನ ಆಸೆ ತೀರಿದ ಮೇಲೆ ನನ್ನಗೆ ಎರಡರಿಂದ ಮೂರು ಸಾವಿರ ಖರ್ಚಿಗೆ ಅಂತ ಕೊಡ್ತಿದ್ದ. ಅವನು ಕೊಟ್ಟ ಉದ್ದೇಶ ನಂಗೆ ಅರ್ಥವಾಗಿರಲಿಲ್ಲ. ಕೆಲವೂ ತಿಂಗಳುಗಳು ಕಳೆದಂತೆ ನನ್ನ ಭೇಟಿಯಾಗಲು ನಿರಾಕರಿಸುತ್ತಿದ್ದ ಆದರೆ ಸ್ನೇಹಿತನ ರೂಮಿಗೆ ಮಾತ್ರ ಆಗಾಗ ಕರೆದೊಯಿತ್ತಿದ್ದ ನಾನು ಅವನಿಗೆ ಮದುವೆ ಬಗ್ಗೆ ಮಾತಾಡಲು ಮನೆಗೆ ಬಾ ಎಂದು ಹೇಳಿದೆ ತಡ ಹ್ಮ್ಮ್ ಎಂದಷ್ಟೇ ಹೇಳಿ ಮನೆಗೆ ಹೋಗಲು ಅವಸರಿಸುತ್ತಿದ. ಮುಂದೆ ಒಂದು ದಿನ ಅವರ ಅತ್ತಿಗೆ ಅವನ ಲಗ್ನ ಪತ್ರಿಕೆ ನನ್ನ ಕೈಯಲ್ಲಿಟ್ಟು ಮದುವೆಗೆ ತಪ್ಪದೆ ಬರಬೇಕು ಎಂದು ಹೇಳಿ ಅವನ ಸಹವಾಸ ಬಿಡಲು ಹೇಳಿದರು ನಂಗೆ ಕೋಪ ನೆತ್ತಿಗೇರಿತ್ತು.ಅವನರೂಮಿಗೆ ಹೋಗಿ ದರ ದರ ಎಳೆದು ತಂದು ಒಂದರ ಮೇಲೆ ಒಂದು ಪ್ರಶ್ನೆ ಕೇಳತೊಡಗಿದ್ದೆ ಅವನಿಗು ಸಿಟ್ಟು ಬಂದು ನಾಲ್ಕು ಏಟು ಬಾರಿಸಿ ಬಾಯಿಗೆ ಬಂದ ಹಾಗೆ ನನ್ನ ಮಾನ ತೆಗೆದ ಕೊನೆಗೂ ನನ್ನ ಚರಿತ್ರೆ ಹದಗೆಡಿಸಿದ್ದ.



ಇನ್ನು ಮುಂದೆ ನನ್ನ ಕಥೆ ಕೇಳ್ಬೇಡಿ ಮನೆಯಲ್ಲಿ ನಂಗೆ ಎಳ್ಳಷ್ಟೂ ಮರ್ಯಾದೆ ಸಿಗಲಿಲ್ಲ ಮತ್ತೆ ನನ್ನ ಅಪ್ಪ ಅಮ್ಮನ ನಿಂದನೆ ನಂಗೆ ಒಂದು ದಿನ ಬೇಸರ ತಂದಿತ್ತು.ವಯಸ್ಸಿನ ಚಪಲಕೆ ದುರಾಸೆಗೆ ಹಿಂದೆ ಮುಂದೆ ಯೋಚಿಸದೆ ದಾರಿ ತಪ್ಪಿದಲ್ಲದೆ ತಂದೆ ತಾಯಿ ಮಾನ ಮರ್ಯಾದೆ ಕಳೆದೆ ಮತ್ತು ನನ್ನ ಶೀಲವನ್ನು ಕಳೆದುಕೊಂಡು ಬದುಕುವ ಆಸೆಯನ್ನು ಮರೆತುಬಿಟ್ಟೆ,ಸಾಯುವಾಗಲು ನನ್ನ ಬಗ್ಗೆ ಮಾತ್ರ ಚಿಂತಿಸಿದೆ ತಂದೆ ತಾಯಿಯನ್ನು ಒಂಟಿಯಾಗಿ ನಡು ನೀರಿನಲ್ಲಿ ಕೈ ಬಿಟ್ಟೆ.ನನ್ನ ಮುದ್ದು ತಂಗಿಯನ್ನು ಬಿಟ್ಟು ಹೋದೆ.ಇದ್ದಿಷ್ಟು ನನ್ನ ನೋವಿನ ಕಥೆ.        

 ***

ಮನಸ್ವಿ ದೇಹದ ಮೇಲೆ ಮಣ್ಣು ಹಾಕಿದ್ದೆ ತಡ ಅವಳು ಮಾತು ಮುಗಿಸುವ ಮುನ್ನವೇ ಅವಳ ಆತ್ಮ ಯಾವೂದೋ ಹೊಸ ಲೋಕಕೆ ಹಾರಿತು 

ಅಲ್ಲಿ ಬಹಳಷ್ಟು ಯುವತಿ ಯುವಕರು ವಯಸ್ಸಾದವರ ಕಾಲು ತೊಳೆಯುತ್ತಿದ್ದರು,ಇನ್ನು ಕೆಲವರು ವೃದರನ್ನು ಎತ್ತಿಕೊಂಡು ಆ ಕಡೆಯಿಂದ ಈ ಕಡೆ,ಈ ಕಡೆಯಿಂದ ಆ ಕಡೆಗೆ ತಿರುಗಾಡಿಸುತ್ತಿದ್ದರು ವಯಸ್ಸಾದವರು ಸಹ ಅವರಿಗಿಂತ ದುಪ್ಪಟ ವಯಸ್ಸಾದವರ ಸೇವೆ ಮಾಡುತ್ತಿದ್ದರು.

ಮನಸ್ವಿ ಆತ್ಮಕೆ ಎಲ್ಲವೂ ಆಶ್ಚರ್ಯ ಇವರೆಲ್ಲ ಯಾಕೆ ಕಾಲು ತೊಳೆಯುತ್ತಿದ್ದರೆ,ಮುದುಕ ಮುದುಕಿಯರನ್ನ ಯಾಕೆ ಹೊತ್ತುಕೊಂಡು ತಿರುಗಾಡುತ್ತಿದರೆ ಎಂದು ತನ್ನನ್ನು ತಾನು ಪ್ರಶ್ನಿಸುವಾಗ .


ಪ್ರಕಾಶಮಾನ ಬೆಳಕನ್ನು ಹೊತ್ತುಕೊಂಡು ಬಂದು ಒಬ್ಬ ದೇವಾ ಇದು ನರಕ ಎಂದ,ಮನಸ್ವಿ ಮನಸಲ್ಲಿ ಇದ್ದ ನರಕದ ಚಿತ್ರಣ ಬೇರೆಯೆಯಾಗಿತ್ತು .ಇಲ್ಲಿ ಅತಿ ಹೆಚ್ಚು ಅಥವಾ ಕ್ಷಮಿಸಲಾಗದ ತಪ್ಪುಗಳು ಆಗಿದ್ದಲ್ಲಿ ಸ್ವರ್ಗದಿಂದ ಕರೆಸುವ ವೃದ್ದರ ಸೇವೆ ಮಾಡಬೇಕು ಮತ್ತು ನಾವೂ ಕೊಡೊ ದಿನ ನಿತ್ಯ ಶಿಕ್ಷೆ ಅನುಭವಿಸಬೇಕು ಎಂದು ಮನಸ್ವಿಗೆ ವಿವರಿಸಿದ ಆ ದೇವಾ.


ಮತ್ತೆ ನಂಗು ಅದೇ ಮಾಡಲು ಹೇಳುತ್ತಿರಾ ಆತ್ಮ ಪ್ರಶ್ನಿಸಲು,ಆ ದೇವಾ ಇಲ್ಲ ನೀವೂ ನಾವೂ ಕೊಟ್ಟ ಆತ್ಮವನ್ನು ಹತ್ಯೆ ಮಾಡಿದ್ದೀರಿ ಹಾಗಾಗಿ ನಾವೂ ಇಂಥ ಶಿಕ್ಷೆ ಕೊಡುವುದಿಲ್ಲ ಬದಲಾಗಿ ಆತ್ಮಕೆ ಹೆಚ್ಚು ನೋವು ಉಂಟಾಗುವಂತ ಸೂಕ್ಷ್ಮ ಮನಸ್ಸನ್ನು ಆತ್ಮದಲ್ಲಿ ಇರಿಸಿ ಮತ್ತೆ ಭೂಮಿಗೆ ಕಳಿಸುತ್ತೆವೆ ನಿಮ್ಮ ಬಂದು ಮಿತ್ರರು ನೋವುಪಡುತ್ತಿರುವ ದೃಶ್ಯ ನೋಡಿ ನಿಮ್ಮ ಆತ್ಮಕೆ ಸಂಕಟವಾಗಬೇಕು ಇದೆ ಶಿಕ್ಷೆ ನೀವೂ ಅನುಭವಿಸುತ್ತಿರಬೇಕು ನಾವೂ ನಿಮ್ಮನು ಮತ್ತೆ ನರಕಕ್ಕೆ ಕರೆಸುಕೊಳ್ಳುವವರೆಗೂ.ನಿಮ್ಮ ಜನುಮ ದಾತರಿಗೆ ನೋವೂ ಕೊಟ್ಟ ತಪ್ಪಿಗೆ ಯಾವ ವೃದ್ದರ ಆಶೀರ್ವಾದ ಸ್ವರ್ಗ ಅಥವಾ ನರಕದಿಂದ ಪಡೆದುಕೊಳ್ಳುವಂತಿಲ್ಲಾ.ಅವಳು ಮತ್ತೊಮೆ ಏನೋ ಕೇಳಬೇಕು ಎನ್ನುವಷ್ಟರಲ್ಲಿ ಮನಸ್ವಿ ಆತ್ಮವನ್ನು ಆ ದೇವಾ ಅವಳನ್ನು ಭೂಮಿಗೆ ತಳ್ಳಿ ಬಿಟ್ಟ. ಮನಸ್ವಿ ಆತ್ಮ ಅಳುತ್ತ ಸುಡುಗಾಡಿನಲ್ಲಿ ಕೂತು ಕಣ್ಣೀರು ಹಾಕುತ್ತ ಕೂತಿತ್ತು.ಮಣ್ಣು ಮುಚ್ಚಿದ ಅವಳ ಸಮಾಧಿ ನೋಡಿ ದುಃಖ ಉಮಾಳಿಸಿತ್ತು ಇದರ ಜೊತೆ ಮಾನವರ ಮಾತು ಅವಳನ್ನು ಇನ್ನು ಹಿಂಸಿಸುತಿತ್ತು.


ಮೊದಲನೆ ಹೆಂಗಸು:ಬದುಕಿ ಸಾಧಿಸೋ ಬದಲು ಸತ್ತು ಮಣ್ಣು ಸೇರಿದ್ಲು ಇನ್ನು ಚಿಕ್ಕ ವಯಸ್ಸು ಸಾಯೋ ಅಂತದೇನು ಬಂದಿತ್ತು ಈ ಹುಡುಗಿಗೆ.


ಎರಡೆನೆ ಹೆಂಗಸು :ಅಯ್ಯೋ ಇದ್ದಾಗಲೂ ಕಷ್ಟ ಕೊಟ್ಟಳು,ಈಗ ಸತ್ತು ಮಾನ ಮರ್ಯಾದೆ ಹರಾಜು ಹಾಕಿದ್ಲು.


ಮೂರನೇ ಹೆಂಗಸು:ಸತ್ತು ತಂದೆ ತಾಯಿಗೆ ನೆಮ್ಮದಿ ಕೊಟ್ಟಳು ಬಿಡ್ರಿ, ಇಂಥಾ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು.


ನಾಲ್ಕನೇ ಹೆಂಗಸು:ಅದೇ ಶಶಿಧರ್ ಶೆಟ್ಟರ ಮನೆಯಲ್ಲಿ ಇದ್ದ ನೋಡಿರಿ ಒಬ್ಬ ಕರಿ ಮುಖದವನು ಅವನ ಜೊತೆ ಸಂಬಂಧ ಇಟ್ಟ್ಕೊಂಡಿದಳಂತೆ ಕಣ್ರೀ ಅವನು ಮದುವೆ ಫಿಕ್ಸಾಯ್ತ್ತುಅಂತ ಇವಳು ಗಲಾಟೆ ಮಾಡ್ಕೊಂಡ್ಲು ಅದೇ ಕೋಪಕೆ ತಂದೆ ತಾಯಿ ಬೈದ್ರು ಅಂತ ನೇಣು ಹಾಕೊಂಡಲ್ಲಂತೆ


ಐದನೇ ಹೆಂಗಸು : ಮನಸ್ವಿ ಹೀಗೆ ಮಾಡ್ಕೋಬಾರ್ದಿತ್ತು.ಅವಳನ್ನು ಹಾಳು ಮಾಡಿದವನು ಮದುವೆಯಾಗಿ ಸುಖವಾಗಿ ಸಂಸಾರ ಮಾಡ್ತಿದಾನೆ ಇವಳು ಇಲ್ಲಿ ಸತ್ತು ಮಲಗಿದ್ದಾಳೆ ಪೀಡೆ ತೊಲಗಿ ಹೋಯಿತ್ತು ಅಂತ ನೆಮ್ಮದಿಯಿಂದ ಇದ್ದಾನೆ,ಇವಳು ಇದ್ದು ಅವನ ಮುಂದೆ ಚೆನ್ನಾಗಿ ಬದುಕಿ ತೋರಿಸಬೇಕಿತ್ತು ಅದು ಬಿಟ್ಟು ಮಣ್ಣು ಸೇರಿದ್ಲು.


ಜನರ ಮಾತು ಕೇಳಿ ಮನಸ್ವಿ ಆತ್ಮ ಹೀಗೆ ಹೇಳುತಿತ್ತು.ನೀವೂ ನಾನು ಮಾಡಿದ ತಪ್ಪು ಮಾಡ್ಬೇಡಿ ತಪ್ಪು ಆಗೋದು ಸಹಜ ಅದೇಕೆ ಪರಿಹಾರ ಆತ್ಮಹತ್ಯೆ ಅಲ್ಲ.ಇದ್ದು ಸಾಧಿಸಿ,ಜೀವನನ ಕಟ್ಟಿಕೊಳ್ಳಬೇಕು .ಸತ್ತ ಮೇಲೆ ನಿಮ್ಮ ತಂದೆ ತಾಯಿ ಅಕ್ಕ ತಂಗಿ ಬಂಧು ಮಿತ್ರರನ್ನು ಸಮಾಧಾನ ಮಾಡುವ ಅವಕಾಶ ಸಿಗುವುದ್ದಿಲ್ಲ ನನ್ನ ಹಾಗೆ ಮಾಡಿದರೆ ನಿಮ್ಮಗೆ ನರಕವೇ ಗತಿ,ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಕೇಳಿಸಿಕೊಂಡ್ರಲ್ಲ ಜನ ಹೇಗೆಲ್ಲ ಮಾತಾಡ್ತಾರೆ ಅಂತ ಇನ್ನೊಂದು ಮಾತು ಅಪರಾಧ ಮಾಡಿದ್ರೆ ಬರಿ ನರಕ ಇರಲ್ಲ ನಮ್ಮ ಒಳ್ಳೆ ಕೆಲಸಕ್ಕೆ ಸ್ವರ್ಗಾನು ತೋರಿಸ್ತಾರೆ ಆದರೆ ಆತ್ಮ ಹತ್ಯೆ ಮಾಡ್ಕೊಂಡ್ರೆ ಬರಿ ನರಕ ಅಂತೇ.ನಾನು ಹೇಳಿದು ನೆನಪಿನಲ್ಲಿ ಇರ್ಲಿ ನಾ ಬರ್ತೀನಿ ನನ್ ಥರ ಯಾವೂದಾದರೂ ಆತ್ಮ ಇದ್ದೀಯ ಎಂದು ಹುಡುಕಕೆ ಹೋಗ್ಬೇಕು.ಮನಸ್ವಿ ತಂದೆ ತಾಯಿಯನ್ನು ಒಮ್ಮೆ ಕರೆದು

ಅಮ್ಮ ಅಪ್ಪ ಯಮ ಧರ್ಮನ ಸಮಯ ಹಾಳು ಮಾಡಿ ಬಲವಂತವಾಗಿ ನನ್ನ ಆತ್ಮವನ್ನು ಒಯ್ಯುವ ಕಾರ್ಯಕೆ ಕರೆದಿದಕ್ಕೆ ನನ್ನಗೆ ಇನ್ನು ಶಿಕ್ಷೆ ಜಾಸ್ತಿ.ಸ್ವರ್ಗ ಇನ್ನಿಲ್ಲ.ನಿಮ್ಮ ಜೊತೆ ಇದ್ದಿದ್ರೆ ಸ್ವರ್ಗ ಸಿಕ್ಕಿರೋದು.






Rate this content
Log in

Similar kannada story from Tragedy