Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Tragedy Inspirational Others

4.5  

shristi Jat

Tragedy Inspirational Others

ಕಾಲ್ಪನಿಕ ಕಥೆ

ಕಾಲ್ಪನಿಕ ಕಥೆ

4 mins
364


ಒಂದು ಊರಿನಲ್ಲಿ ಒಬ್ಬ ಬಡವನಿದ್ದನು ಕಾಡಿನಿಂದ ಕಟ್ಟಿಗೆ ತಂದು ಊರಲ್ಲಿ ಮಾರುತ್ತಿದ್ದನು. ಅದರಿಂದ ಬಂದ ಹಣದಿಂದ ಅವನ ಸಂಸಾರ ಸಾಗುತಿತ್ತು.

ಒಂದು ದಿನ ಅವನು ಮರವನ್ನು ಕಡಿಯುವಾಗ ಮರದ ಪೊದೆಯೊಳಗೆ ಒಂದು ಅಪ್ಸರೆಯ ಉಂಗುರ ಬಿತ್ತು ಅವನಿಗೆ ಗೋತ್ತಿರಲಿಲ್ಲ ಅವನು ತನ್ನ ಕೆಲಸದಲ್ಲಿ ನಿರತನಾಗಿದ್ದ ಆದರೆ ಅಪ್ಸರೆಗೆ ಅವನ ಬಳಿ ಹೋಗಿ ಹೇಗೆ ಕೇಳಬೇಕು ತಿಳಿಯಲಿಲ್ಲ 

ಅವನ ಹತ್ತಿರ ನನ್ನ ವೇಷದಲ್ಲಿ ಹೋಗುವುದು ಸರಿ ಅಲ್ಲ ಅಂತ ಕೊನೆಗೆ ಒಂದು ಉಪಾಯ ಮಾಡಿದಳು.

ಅವಳು ತನ್ನ ವೇಷವನ್ನು ಬದಲಿಸಿಕೊಂಡು ಬಡ ಹುಡುಗಿಯ ವೇಷ ಧರಿಸಿ ತನ್ನ ರೂಪವನ್ನು ಮಾಸಿದ ಹಾಗೆ ಮಾಡಿಕೊಂಡಳು.

ಆ ಬಡ ವ್ಯಕ್ತಿಯ ಬಳಿ ಹೋದಳು ಅಣ್ಣಾ ನಿಮ್ಮಿಂದ ಒಂದು ಸಹಾಯ ಆಗಬೇಕಿತ್ತು ಮಾಡ್ತಿರಾ ಅಂತ ಕೇಳಿದಳು.

ಆ ವ್ಯಕ್ತಿ ಅಪ್ಸರೆಯನ್ನು ನೋಡಿದ ಸಹಾಯನಾ ಏನು ಸಹಾಯ ಮಾಡಬೇಕು ಎಂದು ಕೇಳಿದ ಅದಕ್ಕೆ ಅಪ್ಸರೆ ತಾನು ಕಡಿಯುತ್ತಿರುವ ಮರದ ಪೊದೆಯಲ್ಲಿ ಬೆಳಿಗ್ಗೆ ನಮ್ಮ ಯಜಮಾನಿ ಮತ್ತು ನಾನು ವಾಯು ವಿಹಾರಕ್ಕೆ ಬಂದಿದ್ವಿ ಸ್ವಲ್ಪ ವಿಶ್ರಾಂತಿ ಪಡೆಯಲು ಈ ಮರದ ಕೆಳಗೆ ನಿಂತಿದ್ವಿ ಆಗ ನೀರು ಕುಡಿಯಲು ತನ್ನ ನೀರಿನ ಕ್ಯಾನ್ ತೆಗೆದುಕೊಂಡು ಚೀಲವನ್ನು ಮರದ ಮೇಲೆ ಇಡಲು ಹೋದಳು ಆಗ ಕೈ ಜಾರಿ ಚೀಲ ಸಿಳಿರುವ ಮರದ ಪೊದೆಗೆ ಸಿಕ್ಕಿ ಕೊಂಡಿತು ಅದನ್ನು ಬಿಡಿಸಲು ಹೋದಾಗ ಉಂಗುರ ಜಾರಿ ಪೊದೆಯೊಳಗೆ ಬಿತ್ತು ನಮಗೆ ತೆಗೆಯಲು ಆಗಲಿಲ್ಲ 

ಆ ಉಂಗುರ ನಮ್ಮ ಯಜಮಾನಿಯನ್ನು ಮದುವೆ ಆಗುವ ಹುಡುಗ ಕೊಟ್ಟಿದ್ದು ಅವಳ ಪ್ರೀತಿಯ ವಸ್ತು ಅದಾಗಿದ್ದು ತುಂಬಾ ಚಿಂತಿತಗೊಂಡಿರುವ ನಮ್ಮ ಯಜಮಾನಿಯನ್ನು ನೋಡಲು ಆಗದೆ ಹೇಗಾದರೂ ಮಾಡಿ ತರಲು ಬಂದೆ.

ಸರಿ ಪೊದೆ ತುಂಬಾ ಗಟ್ಟಿಯಾಗಿದೆ ನಾನು ಕಡಿಯಲು ನೋಡಿದೆ ಮರದ ಮಧ್ಯದಲ್ಲಿ ಬಿರುಕು ಬಿಟ್ಟಿದೆ ಅಷ್ಟೆ ಆದರೆ ಅದು ಕೇಳಗೆ ಬೇರಿನಿಂದ ಕೂಡಿದೆ ಕಡಿಯಲು ಅಸಾಧ್ಯ ಆದ ಕಾರಣ ನಾನು ನನಗೆ ನಿಲುಕುವ ವ್ಯವಸ್ಥೆ ಮಾಡಿಕೊಂಡು ಕೊಂಬೆಯನ್ನು ಅಷ್ಟೆ ಕಡಿಯುತ್ತಿರುವೆ ಆದರೆ ನೀನು ಬೇಲೆಬಾಳುವ ವಸ್ತು ಇದರಲ್ಲಿ ಬಿದ್ದಿದೆ ಎಂದು ಹೇಳುತ್ತಿದ್ದಿಯಾ ತೆಗೆಯಲು ಪ್ರಯತ್ನ ಮಾಡುತ್ತೇನೆ.

ಪೊದೆಯನ್ನು ಕಡೆಯತೋಡಗಿದ ತುಂಬಾ ದಪ್ಪ ಗಿರುವ ಕಾರಣ ತುಂಬಾ ಸಮಯ ತೆಗೆದುಕೋಳ್ಳುತ್ತಿತ್ತು ಸ್ವಲ್ಪ ಕಡಿದು ಪೊದೆಯೊಳಗೆ . ಕೈ ಹಾಕಿ ನೋಡಿದ ಆದರೆ ಅವನ ಕೈಗೆ ತಾಕಲಿಲ್ಲ 

ನಿಜವಾಗ್ಲೂ ಈ ಪೊದೆಯೊಳಗೆ ಬಿದ್ದಿದಿಯಾ ಎಂದು ಕೇಳಿದ ಅಪ್ಸರೆಗೆ 

ಅದಕ್ಕೆ ಅಪ್ಸರೆ ಹೂಂ ಅದರೊಳಗಡೆನೆ ಬಿದ್ದಿರೋದು ಆ ವ್ಯಕ್ತಿ ಮತ್ತೆ ಕಡೆಯತೋಡಗಿದ ಪೊದೆಯೊಳಗಡೆ ಏನೋ ಹೊಳೆದಂತಾಯಿತು ಇನ್ನಷ್ಟು ಕಡಿದು ನೋಡಿದ ಅಲ್ಲಿದ್ದ ಉಂಗುರ ತುಂಬಾ ಪ್ರಕಾಶಿಸುತ್ತಿರುವದನ್ನು ಕಂಡು ಬೆರಗಾಗಿ ನೋಡಿದ ಅದನ್ನು ಹೊರತೆಗೆದು ಕೈಯಲ್ಲಿಡಿದು ನೋಡಿದ ಎಷ್ಟು ಸುಂದರವಾಗಿದೆ ಆದರೆ ಇದನ್ನು ನೋಡುತಿದ್ದರೆ ಬರಿ ಉಂಗುರದಂತಿಲ್ಲ ಇದರಲ್ಲಿ ಏನೋ ವಿಶೇಷ ಇದೆ ಅಂದ 

ಅದಕ್ಕೆ ಅಪ್ಸರೆ ಇಲ್ಲ ಹಾಗೇನಿಲ್ಲ ಅದು ತುಂಬಾ ಬೇಲೆಯಿರುವ ಉಂಗುರ ನಮ್ಮ ಯಜಮಾನಿಗೆ ಅವರ ಹುಡುಗ ಪ್ರೀತಿಯಿಂದ ಕೊಟ್ಟಿದ್ದಾರೆ ಅಷ್ಟೆ ಅಂತ ಮಾತು ತೀರುಗಿಸಿದಳು.

ಬಡ ವ್ಯಕ್ತಿ ಇರಬಹುದು ನಾನದಲ್ಲ ಹೇಳ್ತೀರೋದು ಇದರಲ್ಲಿ ಒಂದು ಶಕ್ತಿ ಇರುವ ಹಾಗೆ ಅನಿಸಿತು ತೇಗೆದಿಕೊ ನಿನ್ನ ಉಂಗುರ ಅಂತ ಅವಳ ಕೈಯಲ್ಲಿ ಕೊಟ್ಟನು.

ಅಪ್ಸರೆ ಸಂತೋಷದಿಂದ ನೀಮಗೆ ತುಂಬಾ ಧನ್ಯವಾದ ನಿಮ್ಮ ಈ ಸಹಾಯ ನಾನು ಯಾವತ್ತೂ ಮರೆಯುವುದಿಲ್ಲ ಕೃತಜ್ಞತೆ ಹೇಳಿದಳು.

ಅದಕ್ಕೆ ಆ ವ್ಯಕ್ತಿ ಇರಲಿ ನನ್ನ ಕೈಲಾದ ಸಹಾಯ ನಾನು ಮಾಡಿರುವೆ ಎಂದು ಮತ್ತೆ ಆ ಮರವನ್ನು ಕಡೆಯಲು ಸಿದ್ಧನಾದ ಅಪ್ಸರೆ ನಿಲ್ಸಿ ಅಣ್ಣಾ ಆ ಮರವೊಂದು ಬಿಟ್ಟು ಬೇರೆಯದು ಕಡಿಯಿರಿ ಯಾಕೆಂದರೆ ನಾನು ನೀಮಗೆ ಉಡುಗೋರೆಯಾಗಿ ಒಂದು ವಸ್ತುವನ್ನು ಈ ಮರದ ಮೇಲೆ ಇಡುವೆ ನೀವು ನಾಳೆ ಅದನ್ನ ತೇಗೆದು ನೋಡಿ ಅಂದಳು.

ಒಪ್ಪಿದ ವ್ಯಕ್ತಿ ಮತ್ತೆ ತನ್ನ ಕೆಲಸದಲ್ಲಿ ನಿರತನಾದ ಅಪ್ಸರೆ ಸ್ವಲ್ಪ ಮುಂದೆ ಹೋಗಿ ತನ್ನ ನೀಜ ರೂಪ ತಾಳಿದಳು ಆ ವ್ಯಕ್ತಿ ಹೇಳಿರುವಂತೆ ಆ ಉಂಗುರ ಅಪ್ಸರೆಯ ಶಕ್ತಿಯ ಉಂಗುರವಾಗಿತ್ತು.

ಮರುದಿನ ಎಂದಿನಂತೆ ಮರ ಕಡೆಯಲು ಪ್ರಾರಂಭಿಸಿದನು ಮಧ್ಯಾಹ್ನ ಮರ ಕಡಿದು ಬೇಸರ ಆಯ್ತು ಧಣಿವಾಯ್ತು ಬಾಯಾರಿಕೆ ಆದಾಗ ನೀರು ಕುಡಿಯಲು ಪಕ್ಕದಲ್ಲಿರುವ ಹಳ್ಳದ ಕಡೆ ಹೋಗಲು ನೋಡಿದ ಆಗ ತನಗೆ ನೆನ್ನೆ ಅಪ್ಸರೆ ಹೇಳಿದ ಮಾತು ಜ್ಞಾಪಕಕ್ಕೆ ಬಂತು ಅಲ್ಲೆನಿರಬಹುದು ಅಂತ ಮರದ ಕಡೆಗೆ ಹೋದನು.

ಮರದ ಕೊಂಬೆಯ ಮೇಲೆ ಕೈ ಆಡಿಸಿದನು ಒಂದು ಎಲೆಯನ್ನು ಕಂಡನು ಅದು ಸಹ ಹೊಳೆಯುತ್ತಿತ್ತು ಏನಿರಬಹುದು ಇದನ್ನ ತೆಗೆದುಕೊಂಡು ನಾನೆನು ಮಾಡಬೇಕು ಅವನಿಗೆ ತಿಳಿಯಲಿಲ್ಲ ನೀರು ಕುಡಿದು ಮನೆಗೆ ಬೇಗ ಹೋದನು ಮನೆಯವರಿಗೆಲ್ಲಾ ತೋರಿಸಿದನು.

ಮನೆಯವರೆಲ್ಲಾ ನೋಡಿದರು ಆದರೆ ಅವರಿಗೂ ತಿಳಿಯಲಿಲ್ಲ ಅದೇನು ಅಂತ ಆ ವ್ಯಕ್ತಿ ಹೊಳೆಯುತ್ತಿದೆ ಅಂದರೆ ಮಾರಿದರೆ ಇದರಿಂದ ದುಡ್ಡು ಬರಬಹುದಾ ಎಂದು ಮನೆಯವರಿಗೆ ಕೇಳಿದನು ಮನೆಯವರು ಇರಬಹುದು ನಾಳೆ ಪೇಟೆಗೆ ಹೋದಾಗ ಕೇಳಿದರಾಯ್ತು 

ಆ ವ್ಯಕ್ತಿ ಇರಲಿಕ್ಕಿಲ್ಲ ಆ ಹುಡುಗಿ ತುಂಬ ಬಡವಿ ಅವಳ ವ್ಯವಸ್ಥೆ ನೋಡಿದರೆ ನನಗೆ ದುಬಾರಿ ಉಡುಗೊರೆ ಕೋಡಲು ಸಾಧ್ಯವಿಲ್ಲ ಅನ್ಸುತ್ತೆ ಏನೆ ಇರಲಿ ಮನೆಯ ಪೆಟ್ಟಿಗೆಯಲ್ಲಿ ಇಟ್ಟರಾಯಿತು ಪ್ರೀತಿಯಿಂದ ಕೊಟ್ಟಿದ್ದಾಳೆ ಪಾಪ!

ಮರುದಿನ ಬೆಳಿಗ್ಗೆ ಒಬ್ಬ ವ್ಯಕ್ತಿ ತುಂಬಾ ಹಸಿವಿನಿಂದ ಇವನ ಮನೆಗೆ ಬಂದಿದ್ದ ಆ ಬಡ ವ್ಯಕ್ತಿ ಹಸಿದವನಿಗೆ ಊಟ ತಂದು ಕೊಟ್ಟನು.

ಸ್ವಲ್ಪ ಸಮಯದ ನಂತರ ಕಟ್ಟಿಗೆ ಕಡಿಯಲು ಹೋದರಾಯಿತು ಎಂದು ಮನೆಯೊಳಗೆ ಕೋಡಲಿ ತರಲು ಹೋದನು ಇತ್ತ ಹೋರಗಿನಿಂದ ಯಾರೊ ಅವನನ್ನು ಕೇಳಿಕೊಂಡು ಬಂದಿದ್ದರು ಕಂಡು ಹೋರಗೆ ಬಂದನು.ಬಂದಿರುವ ವ್ಯಕ್ತಿಗೂ ಕೋಡಲಿ ಬೇಕಾಗಿತ್ತು ಒಂದು ದಿನದ ಮಟ್ಟಿಗೆ ಕೊಡುವಂತೆ ಕೇಳಿಕೊಂಡನು.

ಸರಿ ಎಂದು ಅವನಿಗೆ ಕೊಟ್ಟು ಕಳುಹಿಸಿದ ಏನು ಕೆಲಸ ಇಲ್ಲದಕ್ಕಾಗಿ ಅಸ್ತವ್ಯಸ್ತವಾಗಿರುವ ತನ್ನ ವಸ್ತುಗಳನ್ನು ಜೊಡಿಸತೋಡಗಿದ ಕೊನೆಗೆ ಪೆಟ್ಟಿಗೆಯತ್ತ ಕಣ್ಣೊಯ್ತು ಅದರಲ್ಲಿಟ್ಟಿದ್ದ ಎಲೆಯ ಮೇಲೆ ಎರಡು ಮುತ್ತುಗಳಿದ್ದವು ಎಲ್ಲಿಂದ ಬಂದವು ಮನೆಯವರಿಗೆ ಕೇಳಿದ ಅವರಿಗೂ ಗೋತ್ತಿಲ್ಲ ಎಂದು ಹೇಳಿದರು.

ಹೇಗಿದ್ದರು ಇವತ್ತು ಖಾಲಿ ಇರುವೆ ಪೇಟೆಗೆ ಹೋಗಿ ಕೇಳಿದರಾಯ್ತೆಂದು ಎಲೆ ಮತ್ತು ಮುತ್ತು ಎರಡನ್ನು ತೆಗೆದುಕೊಂಡು ಹೋದ

ಪೇಟೆಯಲ್ಲಿ ಆಭರಣಗಳ ಅಂಗಡಿಗೆ ಹೋಗಿ ತೋರಿಸಿದನು ಅವೆರಡನ್ನು ನೋಡಿದ ಮಾಲಿಕ ಮುತ್ತುಗಳಿಗೆ ದುಡ್ಡು ಬರುತ್ತೆ ಆದರೆ ಎಲೆ ದುಡ್ಡು ಬರುವ ವಸ್ತು ಅಲ್ಲ ಎಂದನು.

ಖುಷಿಯಾದ ಬಡ ವ್ಯಕ್ತಿ ಹಣ ಮತ್ತು ಎಲೆಯನ್ನು ತಗೊಂಡು ಮನೆಗೆ ಹೋದನು.ಮನೆಯವರೆಲ್ಲಾ ಖುಷಿಪಟ್ಟರು.

ಎಲೆಯಲ್ಲಿ ಏನೋ ಶಕ್ತಿ ಇದೆ ಅಂತ ಗೋತ್ತಾಯ್ತು ಮತ್ತೆ ಪೆಟ್ಟಿಗೆಯಲ್ಲಿಟ್ಟು ಹೀಗೆ ಸ್ವಲ್ಪ ದಿನ ಕಳೆದವು

ಆ ಬಡ ವ್ಯಕ್ತಿ ಕೆಲಸಕ್ಕೆ ಹೋಗುವುದನ್ನೆ ಬಿಟ್ಟ ಸಿರಿತನದಿಂದ ಬದುಕತೋಡಗಿದರು.

ತಿಂಗಳುಗಳುರುಳಿದವು ಆದರೆ ಪೆಟ್ಟಿಗೆ ತೆಗೆದು ನೋಡುತಿದ್ದ ಒಂದು ಮುತ್ತು ಎಲೆಯ ಮೇಲೆ ಕಾಣಿಸಲಿಲ್ಲ ದುಡ್ಡು ಎಲ್ಲಾ ಖಾಲಿಯಾಯಿತು ಮತ್ತೆ ಮರ ಕಡಿಯಲು ಕಾಡಿಗೆ ಹೋದ ಆಯಾಸಗೊಂಡ ಅವನು ಅಪ್ಸರೆ ಎಲೆ ಕೊಟ್ಟಿರುವ ಮರದ ಕೆಳಗೆ ಮಲಗಿದ.

ಅಪ್ಸರೆ ಅಲ್ಲಿ ಪುನಹ ಬಂದಳು ಆದರೆ ಈ ಭಾರಿ ತನ್ನ ನಿಜ ರೂಪದಲ್ಲಿ ಬಂದಿದ್ದಳು ಮಲಗಿರುವ ವ್ಯಕ್ತಿಯನ್ನು ಎಬ್ಬಿಸಿದಳು.

ತಾನ್ಯಾರು ಎಂದು ಹೇಳುವಂತೆ ಕೇಳಿದಳು ಆ ವ್ಯಕ್ತಿ ನನಗೆ ಗೋತ್ತಾಗಲಿಲ್ಲ ಎಂದು ಹೇಳಿದ ಉಂಗುರದ ವಿಷಯ ನೆನಪಿಸಿದಳು ಅಲ್ಲದೆ ಅವತ್ತು ಬಂದಿರುವುದು ನಾನೆ ವೇಷ ಬದಲಿಸಿದ್ದೆ ಅದು ನನ್ನ ಶಕ್ತಿಯ ಉಂಗುರವಾಗಿತ್ತು ಹಾಗೂ

ನೀನಗೆ ನೀಡಿರುವ ಎಲೆಯಿಂದ ನೀನು ಇನ್ನೊಬ್ಬರಿಗೆ ಸಹಾಯ ಮಾಡಿದರಷ್ಟೇ ಮುತ್ತಾಗುವುದು ಎಂದಳು ಇಲ್ಲವಾದಲ್ಲಿ ಅದು ಆಗುವುದಿಲ್ಲ 

ಕ್ಷಮೆ ಕೋರಿದ ಆ ಬಡವ ನಾನು ಖಂಡಿತ ಬೇರೆಯವರಿಗೆ ಸಹಾಯ ಮಾಡುವೆ ಸರಿಯಾದ ರೀತಿಯಲ್ಲಿ ಬಳಸುವೆ ಎಂದನು.

ಅಪ್ಸರೆ ಅಲ್ಲಿಂದ ಹೋದಳು ಹಾಗೆಯೇ ಬಡವನು ಕೂಡ ಶ್ರೀಮಂತನಾದ ಬಡವರಿಗೆಲ್ಲಾ ದಾನ ಮತ್ತು ಸಹಾಯ ಮಾಡತೊಡಗಿದ.

 

 


Rate this content
Log in

Similar kannada story from Tragedy