Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Classics Inspirational Others

4.0  

shristi Jat

Classics Inspirational Others

ಪ್ರಯಾಣ

ಪ್ರಯಾಣ

1 min
150


ಪ್ರಯಾಣ ಮಾಡುವುದು ಒಂದು ಒಳ್ಳೆಯ ಅಭ್ಯಾಸ ಏಕೆಂದರೆ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ರಿಯಾಶೀಲರನ್ನಾಗಿ ಮಾಡುತ್ತದೆ.ಬೇರೆ ವಾತಾವರಣ ಬೇರೆ ಆಲೋಚನೆಗಳು ಮನಸ್ಸನ್ನು ಸದೃಡವಾಗಿರುಸುತ್ತದೆ ಹಾಗೂ ಜ್ಞಾನ ಬೆಳೆಯುತ್ತದೆ."ದೇಶ ಸೂತ್ತಿ ನೋಡಿ ಕೋಶ ಓದಿ ನೋಡಿ" ಹಿರಿಯರು ಹೇಳಿದ ಹಾಗೆ ಪ್ರಪಂಚದಲ್ಲಿ ಏನೇನು ನಡೆಯುತ್ತಿದೆ ಎಂದು ತಿಳಿಯುತ್ತದೆ. ಅಲ್ಲದೆ ಬೇರೆ ಪ್ರಪಂಚದ ಜ್ಞಾನ ಬೆಳೆಯುತ್ತದೆ ಪ್ರಯಾಣ ಮಾಡುವುದರಿಂದ ಉಲ್ಲಾಸದಿಂದಿರುತ್ತೇವೆ.ಪ್ರಯಾಣ ದೇಶದ ಒಳಗಡೆ ಇರಲಿ ಅಥವಾ ದೇಶದೋರಗಡೆ ಇಡೀ ಜಗತ್ತು ಸೂತ್ತುವುದಾಗಲಿ ಆಯಾ ಜಾಗದ ಪ್ರಸಿದ್ಧಿಯನ್ನು ತಿಳಿದುಕೋಳ್ಳುತ್ತೇವೆ. ಅಲ್ಲಿನ ವಿಶೇಷಗಳು ಬಗ್ಗೆ ಗೋತ್ತಾಗುತ್ತದೆ.ಬೇರೆ ಭಾಷೆಯ ಜ್ಞಾನ ದೋರೆಯುತ್ತದೆ.ಪದೆ ಪದೆ ಪ್ರಯಾಣ ಮಾಡಿದ್ದೆ ಆದಲ್ಲಿ ನಾವು ಅಲ್ಲಿನ ಭಾಷೆಯನ್ನು ಕಲಿಯುತ್ತೇವೆ. ಕೆಲವು ದೇಶಗಳಲ್ಲಿ ಇಂದಿಗೂ ಪುರಾತನದ ವೈಶಿಷ್ಟ್ಯಗಳು ಮೆರೆಯುತ್ತಿವೆ. ಅವೆನಂದರೆ ಅದ್ಭುತವಾದ ಶಿಲೆಗಳು ಮತ್ತು ಕಟ್ಟಡಗಳು ನೋಡುಗರಿಗೆ ಬೆರಗು ಮೂಡಿಸುತ್ತವೆ. ಉದಾಹರಣೆಗೆ ಭಾರತ, ಈಜಿಪ್ಟ್ ಇತ್ಯಾದಿ ಹಾಗೂ ಅಭಿವೃದ್ಧಿಗೊಂಡಿರುವ ದೇಶಗಳಾದ ಸ್ವಿಟ್ಜರ್ಲೆಂಡ್, ಸಿಡ್ನಿ, ನ್ಯೂಯಾರ್ಕ್,ಇಟಲಿ,ಬಾಲಿ, ಫ್ರಾನ್ಸ್, ಸಿಂಗಾಪುರ್ ಇತ್ಯಾದಿ ತಾಣಗಳು ವಿಶ್ವ ವಿಖ್ಯಾತಗೊಂಡಿವೆ. ಪ್ರಯಾಣಿಗರನ್ನು ಸೆಳೆಯುವ ದೇಶಗಳಿವು.ಅಲ್ಲಿನ ಜನಾಂಗದ ಆಹಾರ ಅವರ ಭಾಷೆ ಅವರವರ ಉಡುಗೆತೋಡುಗೆಗಳು ವಿಶಿಷ್ಟವಾಗಿ ವೈ ಫಲ್ಯಗೋಂಡಿದೆ. ನೋಡುವುದು ಅಷ್ಟೇ ಅಲ್ಲ ಕೆಲವರು ಉನ್ನತ ಶಿಕ್ಷಣಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಕೆಲವು ವರ್ಷಗಳ ಕಾಲ ಪರ ದೇಶಕ್ಕೆ ಹೋಗುವುದುಂಟು.ಯಾವ ದೇಶವು ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದಿದೆ ಎಂಬ ಜ್ಞಾನ ದೊರೆಯುತ್ತದೆ.ನಮ್ಮ ಬಿಡುವಿನ ಸಮಯದಲ್ಲಿ ಪ್ರಯಾಣಿಸುವದರಿಂದ ನಮಗೆ ವಿಶ್ರಾಂತಿ ದೊರೆಯುದಲ್ಲದೆ ಸ್ಮರಣೀಯ ಸ್ಥಳಗಳಾಗಿರುತ್ತವೆ.


Rate this content
Log in

Similar kannada story from Classics