Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ. ಭಾಗ 4.

ಇಷ್ಟ ದೇವತೆ. ಭಾಗ 4.

2 mins
166



ಹಿಂದಿನ ಭಾಗದಲ್ಲಿ ಅಜ್ಜ ತನ್ನ ಮೊಮ್ಮಗಳು ಮಂಕಾಗಿರುವುದನ್ನು ಗಮನಿಸಿ, ಗಿರಿಜೆಯನ್ನು ಕರೆದು ಪ್ರೀತಿಯಿಂದ ಯಾಕೆ ಅಂತ ಕೇಳುತ್ತಿರಲು, ಗಿರಿಜೆ ಅಳಲು ಶುರು ಮಾಡಿದಳು..


ಅವಳ ದೊಡ್ಡ ಅಕ್ಕ ನೀಲಾ ಗಂಡನ ಮನೆಯಲ್ಲಿ ಆಸ್ತಿ ಇದ್ದು, ಅತ್ತೆಯ ಹಿಂಸೆ ತಾಳಲಾರದೆ ತನ್ನ ಅವ್ವನ ಮುಂದೆ ಗೋಳಾಡಿದ್ದನ್ನು ಗಿರಿಜೆ ಸೂಕ್ಷ್ಮವಾಗಿ ಗಮನಿಸಿದ್ದಳು. ಮೂರು ಜನ ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಅನಬಾರದ್ದನ್ನೆಲ್ಲ ಅಂದಿದ್ದರು ಜೊತೆಗೆ ಕಪ್ಪಾಗಿದ್ದಿಯಾ ಹಾಗೆ ಹೀಗೆ ಅಂತಾ ಅತ್ತೆ ಮತ್ತು ನಾದಿನಿ ಇಬ್ಬರು ಹಿಂಸೆ ಮಾಡುತ್ತಾರೆ ಅಂತಾ ಅವ್ವನ ಎದುರಲ್ಲಿ ಹೇಳುತ್ತಿರುವಾಗ ಕೇಳಿಸಿಕೊಂಡ ಗಿರಿಜೆ ಮದುವೆ ಅಂದರೆ ಹೆದರಿದ್ದು. ಆದರೆ ಅಜ್ಜನಿಗೆ ಇದನ್ನು ಹೇಳುವ ಧೈರ್ಯವಿಲ್ಲದೇ ಸುಮ್ಮನಿದ್ದಳು.


ಆದರೆ ಅಜ್ಜ ಅವಳ ಮನದಿಂಗಿತವನ್ನು ಅರಿತಿದ್ದ. ಇಷ್ಟಿದ್ದಾಗಿನಿಂದ ಅಜ್ಜನ ತೋಳ ಮೇಲೆ ಹತ್ತಿ ಆಡಿ ಬೆಳೆದ ಮುದ್ದಿನ ಮೊಮ್ಮಗಳ ಆ ಮನದ ಮೂಲೆಯ ಭಾವನೆ ಅರ್ಥವಾಗದೆ?


ನೋಡು ಗಿರಜಮ್ಮ, ಎಣ್ಣೆ ಬಂದಾಗ ಕಣ್ಣ ಮುಚ್ಕೊಂಡ್ರು ಅನ್ನಂಗಾಗ ಬಾರದು ಕಂದ, ನಾನು ನಿನ್ನ ಚೊಲೋದಕ್ಕೆ ಮಾಡ್ತಿದೀನಿ. ಅಷ್ಟಕ್ಕೂ ಎಲ್ಲದೂ ಚೆನ್ನಾಗಿರುವಾಗ ನಿ ಯಾಕ್ ಮಗಳ ವಲ್ಲ್ಯಾ ಅನ್ನಾಕತ್ತಿ? ನನ್ನ ಮೇಲೆ ನಂಬಿಕೆ ಇಲ್ಲೆನು ನಿಂಗ? ಆರಾಮಿರ್ತಿ ಎವ್ವ ನಿ ಆ ಮನಿಗೆ ಹೋದ್ರ ಅಂತ ಎಲ್ಲದನ್ನು ಮನ ಮುಟ್ಟುವಂತೆ ಹೇಳಿದಾಗ ಗಿರಿಜೆಗೆ ಏನು ಹೇಳಬೇಕೆಂದು ತಿಳಿಯದೆ ಸುಮ್ಮನೆ ನಿಂತಳು..


ಅಷ್ಟರಲ್ಲಿ ಗಿರಜೆಯ ಕಾಕಾ ಹೊಲದಿಂದ ಬಂದ. ಆಗ ಶಾರಕ್ಕ ತನ್ನ ಗಂಡನಿಗೆ ಗಿರಿಜೆ ಹೇಳಿದ್ದನ್ನು ಹೇಳಿ ಮಾವನವರೊಂದಿಗೆ ಒಂದು ಸಲ ಮಾತಾಡಲು ಹೇಳಿದಳು. ನೋಡೋಣ ಏನಂತಾರೋ ಏನೋ ಅನ್ನುತ್ತಾ ಮಲ್ಲಪ್ಪನ ತಮ್ಮ ಚೆನ್ನಪ್ಪ ಅವರ ಅಪ್ಪನ ಹತ್ತಿರ ನಡೆದನು.



ಅಲ್ಲಿ ಗಿರಿಜೆ ಇದ್ದಿದ್ದನ್ನು ಕಂಡು, ಚೆನ್ನಪ್ಪ ಕಣ್ಣು ಸನ್ನೆ ಮಾಡಿ ಹೋಗಲು ಹೇಳಿದನು. ಗಿರಿಜೆ ಹೋದ ನಂತರ,


ಚೆನ್ನಪ್ಪ : ಅಪ್ಪ ನಾನು ನಿಮ್ಮ ಹತ್ತಿರ ಏನೋ ಮಾತಾಡಬೇಕಿತ್ತು.


ಅಪ್ಪ: ಏನು ಚೆನ್ನ,ಅದು


ಚೆನ್ನಪ್ಪ: ಅಪ್ಪ ಅದು ನಮ್ಮ ಗಿರಜಮ್ಮನ ಮದುವೆ ಬಗ್ಗೆ,


ಅಪ್ಪ: ಅದನ್ನೇ ಅನ್ಕೊಂಡೆ. ನಿನ್ನ ಹೆಂಡತಿ ಹೇಳಿ ಕಳ್ಸಿದ್ಲಾ?


ಚೆನ್ನಪ್ಪ: ಇಲ್ಲ ಅಪ್ಪ, ಅದು ನಾನೇ ,,ನಾನೇ ..


ಅಪ್ಪ: ಚೆನ್ನಾ, ನಾನು ಕೇಳಸ್ಕೊಂಡಿದ್ದೆ, ಗಿರಜಮ್ಮ ಅವಳ ಚಿಗವ್ವನ ಹತ್ತಿರ ಮಾತಾಡ್ತಿದ್ದನ್ನು.


ಚೆನ್ನಪ್ಪ: ಹಾಗಲ್ಲ ಅಪ್ಪ, ನಾನು ಹೇಳ್ತಿರೋದು, ಒಂದು ವರ್ಷಾ ಬಿಟ್ಟು ಮಾಡಿದ್ರೆ ಚೋಲೋ ಆಗುತ್ತೆ ಅದನ್ನು ಹೇಳೋಕೆ ಬಂದೆ...


ಅಪ್ಪ: ಆಯ್ತು, ಏನ ಮಾಡ್ಬೇಕಂತಾ ನನಗೆ ಗೊತ್ತು. ನಿಮ್ಮ ನಿಮ್ಮ ಕೆಲಸ ಮಾಡ ನಡಿರಿ.


ಚೆನ್ನಪ್ಪ ಎನ್ ಹೇಳಿದ್ರು ನೀವು ನಿಮಗೇ ತಿಳಿದದ್ದ ಮಾಡರಲ್ವಾ ಮಾಡ್ಕೊರಿ ಅನ್ನುತ್ತಾ ಹೊರಗೆ ಹೋದನು.

ಮತ್ತೆ ಮಹಾದೇವಪ್ಪ ಅಜ್ಜ ಗಿರಜೆಯನ್ನು ಕರೆದು ನೋಡಮ್ಮ ಇವರೆಲ್ಲ ನಾನು ನಿನಗೆ ಏನೋ ಮಾಡಿಬಿಡ್ತೀನಿ ಅನ್ನೋ ತರ ಮಾತಾಡ್ತಿದ್ದಾರೆ. ಮಗಳೇ ನೀನಾದ್ರು ಒಪ್ಕೋತಿಯೊ ಇಲ್ಲೊ, ನೀನು ನನ್ನ ಮಾತಿಗೆ ಇಲ್ಲ ಅನ್ನಲ್ಲ ಒಂದೇ ಒಂದು ನಂಬಿಕೆಯಿಂದ ಪಟೇಲರಿಗೆ ಮಾತು ಕೊಟ್ಟಿದ್ದೀನಿ, ಅಂತ ಹೇಳುತ್ತಿರಲು


ಗಿರಿಜೆಗೆ ಮನದಟ್ಟಾಗಿತ್ತು. ತಾನು ಏನು ಉಲ್ಟಾ ನಿಂತರೂ ಈ ಮದುವೆ ನಡದೆ ನಡೆಯುತ್ತೆ, ಆದ್ದರಿಂದ ಎಲ್ಲರಿಗೂ ಬೇಜಾರು ಮಾಡಿ ಮದುವೆ ಆಗುವುದಕ್ಕಿಂತ ಖುಷಿಯಿಂದ ಒಪ್ಪಿಕೊಳ್ಳುವುದೇ ಮೇಲೆಂದು ಗಿರಿಜೆ ಮನಸ್ಸಿನಲ್ಲಿ ಬೇಸರವಿದ್ದರೂ ಸಹ , ಅಜ್ಜ ನಿಮ್ಮ ಆಸೆಯೆಂತೆಯೇ ಆಗಲಿ, ನಾನು ಒಪ್ಪಿಕೊಂಡಿದಿನಿ ಈ ಮದುವೆಗೆ ಅಂದಳು.


ಮಹದೇವಪ್ಪ ಖುಷಿಯಿಂದ ಸಂಭ್ರಮಿಸಿ ತುಂಬಾ ಖುಷಿ ಪಟ್ಟನು..

ಮುಂದಿನ ಭಾಗದಲ್ಲಿ ಗಿರಿಜೆಯ ಮದುವೆ ಮಾತುಕತೆ ಆಯಿತೋ ಇಲ್ಲವೋ ಎಂಬುದನ್ನು ಇಷ್ಟ ದೇವತೆ ಭಾಗ ೫ ರಲ್ಲಿ ನೋಡೋಣ..






Rate this content
Log in

Similar kannada story from Classics