Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Abstract Tragedy Others

4  

Shridevi Patil

Abstract Tragedy Others

ಮಾನಸಿಕ ಖಿನ್ನತೆಯತ್ತ ಪ್ರಯಾಣ. 3.

ಮಾನಸಿಕ ಖಿನ್ನತೆಯತ್ತ ಪ್ರಯಾಣ. 3.

2 mins
523


ಲತಾ ಎರಡನೇ ಬಾರಿ ಗರ್ಭಿಣಿಯಾದಾಗ ಸ್ಕ್ಯಾನಿಂಗ್ ಗೆ ಹೋದಾಗ ಅಲ್ಲಿಯ ವೈದ್ಯರು ಒಂದು ಕಹಿ ವಿಷಯ ಹೇಳಿದರು. ಅದೇನೆಂದರೆ ಆಕೆಯ ಬೆನ್ನು ಮೇಲೆ ಚರ್ಮವು ಸ್ವಲ್ಪ ಬಿಳಿಚಿಗೊಂಡಿತ್ತು. ಅದು ಸ್ವಲ್ಪ ತಿಳಿ ಗುಲಾಬಿ ಬಣ್ಣದ ತರಹ ಕಾಣುವಂತಿದೆ , ಯಾವುದಕ್ಕೂ ಸ್ಕಿನ್ ಡಾಕ್ಟರ್ ಹತ್ತಿರ ಪರೀಕ್ಷಿಸಿ ಎಂದು ಸಲಹೆ ಕೊಟ್ಟಿದ್ದಾರೆ. ಆ ಪ್ರಕಾರ ರಮೇಶ್ ಲೇಟ್ ಮಾಡೋದು ಬೇಡ , ನಾಳೆ ಅಂತ ಯೋಚನೆ ಮಾಡೋದಕ್ಕಿಂತ ಇಂದೇ ಚರ್ಮದ ವೈದ್ಯರ ಬಳಿ ಹೋಗೋಣವೆಂದು ಹೇಳಿದಾಗ , ಲತಾಳಿಗೂ ಅದೇ ಸರಿ ಎನ್ನಿಸಿ , ಆಸ್ಪತ್ರೆಗೆ ಹೋದರು. ಅಲ್ಲಿ ಎಲ್ಲ ತರಹದ ಟೆಸ್ಟ್ ಗಳು ನಡೆದವು. ಚರ್ಮದಲ್ಲಿ ಬಿ 12 ವಿಟಾಮಿನ್ ತೀರಾ ಕಡಿಮೆಯಾಗಿ , ಈ ರೀತಿಯ ಚರ್ಮ ರೋಗ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅದು ಮೊದಮೊದಲು ಗೊತ್ತು ಕೂಡ ಆಗಲ್ಲ. ಅಷ್ಟೇ ಬೇಗ ಹಬ್ಬುತ್ತದೆ ಎಂದು ಹೇಳಿದ್ದಾರೆ.

ಚಿಕ್ಕ ಮಕ್ಕಳಲ್ಲಿ ಈ ಕಾಯಿಲೆ ಉಂಟಾದರೆ , ಸ್ಟಾರ್ಟಿಂಗ್ ಸ್ಟೇಜ್ ಇದ್ದರೆ ಎರಡು ಮೂರು ವರ್ಷದಲ್ಲಿ ವಾಸಿ ಮಾಡಬಹುದು , ದೊಡ್ಡವರಾದರೆ ತುಸು ಕಷ್ಟ , ಆದರೆ ಇದೇನು ತೀರ ಭಯ ಪಡುವಂತಹ ರೋಗವೇನಲ್ಲ , ಜೊತೆಗೆ ಇದು ಒಬ್ಬರಿಂದ ಒಬ್ಬರಿಗೆ ಹರಡುವಂತಹದ್ದು ಅಲ್ಲ , ನಿಮ್ಮ ಗರ್ಭದಲ್ಲಿರುವ ಮಗುವಿಗೆ ಏನೂ ತೊಂದರೆ ಆಗುವುದಿಲ್ಲ , ಭಯ ಬಿಟ್ಟು ಔಷಧಿ ಸೇವನೆ ಮಾಡಿ , ಚೆನ್ನಾಗಿ ಊಟ ನಿದ್ದೆ ಮಾಡಿ , ಹೆಚ್ಚು ಸೂರ್ಯನ ಕಿರಣಗಳು ನಿಮ್ಮ ದೇಹ ತಾಗುವಂತೆ ಇರಿ ಎಂದು ಹೇಳಿ ಮಾತ್ರೆ ಕೊಟ್ಟು ಕಳುಹಿಸಿದರು.


ಮನೆಗೆ ಬಂದ ಮೇಲೆ ಲತಾಳ ಅಳು ನಿಲ್ಲಲೇ ಇಲ್ಲ , ಆಸ್ಪತ್ರೆಯಲ್ಲಿ ಬಹಳ ತಡೆದುಕೊಂಡಿದ್ದಳು. ಮನೆ ಮುಟ್ಟುತ್ತಲೇ ದುಃಖ ಹೊರ ಹಾಕಿದ್ದಳು. ಮಗುವಿನ ಆಟ ನೋಡುತ್ತಾ ಮೈಮರೆಯುತ್ತಿದ್ದಳು . ಒಮ್ಮೆಲೇ ಮೌನಿಯಾಗುತ್ತಿದ್ದಳು. ಮಾತಿಲ್ಲ , ಕತೆಯಿಲ್ಲ , ಒಂಟಿಯಾಗಿ ಏನನ್ನೋ ಯೋಚಿಸುತ್ತಾ ಒಬ್ಬಳೇ ಇರತೊಡಗಿದಳು. ವೈದ್ಯರು ಹೇಳಿದಂತೆ ಅದೂ ದೇಹವನ್ನೆಲ್ಲ ಆಕ್ರಮಿಸತೊಡಗಿತು. ಇದರಿಂದ ಲತಾ ದಿನದಿಂದ ದಿನಕ್ಕೆ ಕುಗ್ಗುತ್ತಾ ಹೋದಳು. ಮನೆಯಿಂದ ಹೊರ ಹೋಗುವುದನ್ನೇ ನಿಲ್ಲಿಸಿದಳು. ಹೋರಾಗಿನವರೊಂದಿಗೆ ಮಾತು ಕಮ್ಮಿ ಮಾಡಿದಳು. ಸಂಬಂಧಿಕರ ಯಾವೊಂದು ಕಾರ್ಯಕ್ರಮಕ್ಕೂ ಭಾಗಿಯಾಗಲಿಲ್ಲ. ಗೊತ್ತಿದ್ದವರು ಅಯ್ಯೋ ಪಾಪವೆಂದರೆ , ಗೊತ್ತಿರಲಾರದವರು ಮಗ ಹುಟ್ಟಿದ ಮೇಲೆ ಸೊಕ್ಕು ಬಂದಿದೆ ಎಂದು ಆಡಿಕೊಂಡರು. ಕೆಲವೊಬ್ಬರು ಆ ಚರ್ಮ ರೋಗದ ಬಗ್ಗೆ ತಿಳಿದವರು ,ಅಯ್ಯೋ ಲತಾ ಹೆದರಬೇಡ , ಅದೇನು ದೊಡ್ಡ ಕಾಯಿಲೆ ಅಲ್ಲ , ಅಂತೆಲ್ಲ ಸಮಾಧಾನ ಮಾಡಿದರೆ , ಕೆಲವರು ಅದೇನು ತಮಗೆ ಅಂಟಿಕೊಳ್ಳುತ್ತದೆಯೇನೋ ಎನ್ನುವಂತೆ ಮಾಡುತ್ತಿದ್ದರು. ಇದೆಲ್ಲವನ್ನು ಕಂಡು ಲತಾ ಮಾನಸಿಕವಾಗಿ ತುಂಬಾ ಬಳಲಿದಳು. ಮಾನಸಿಕ ಖಿನ್ನತೆಯತ್ತ ಸಾಗಿದಳು. ಈ ಮದ್ಯ ಎರಡನೇ ಡೆಲಿವರಿ ಆಗಿ ಹೆಣ್ಣು ಮಗು ಹುಟ್ಟಿತು. ಅನನಗೆ ಜನ್ಮ ಕೊಟ್ಟ ನನ್ನ ತಂದೆಯೇ ನಿಮ್ಮ ತಾಯಿ ಆರತಿಗೆ ಮೋಸ ಮಾಡಿದ ವ್ಯಕ್ತಿ!" ನನಗೆ ಜನ್ಮ ಕೊಟ್ಟ ನನ್ನ ತಂದೆಯೇ ನಿಮ್ಮ ತಾಯಿ ಆರತಿಗೆ ಮೋಸ ಮಾಡಿದ ವ್ಯಕ್ತಿ!" ಅಣ್ಣ ತಂಗಿ ಹೇಗೋ ಬೆಳೆಯತೊಡಗಿದರು. ಆದರೆ ಲತಾ ಮಾತ್ರ ಡಿಪ್ರೆಶೇನ್ ಗೆ ಒಳಗಾಗಿ ,ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಳು. ಗಂಡನ ಸಮಾಧಾನದ ಮಾತನ್ನು ಕೇಳಲಿಲ್ಲ. ಮನಸ್ಸಿನಲ್ಲಿಯೇ ಕೊರಗುತ್ತಿದ್ದಳು. ತಾನಾಯಿತು , ಕೋಣೆ ಆಯಿತು ಎನ್ನುವಂತೆ ಬದುಕಲು ಶುರು ಮಾಡಿದಳು. ಔಷಧಿ ತೆಗೆದುಕೊಳ್ಳುತ್ತಿದ್ದರೂ ಅದೆಷ್ಟು ಬೇಗ ಮೈ ಪೂರ್ತಿ ಹರಡಿತ್ತೆಂದರೆ ಅದು ತಲುಪದ ದೇಹದ ಭಾಗ ಉಳಿದಿರಲಿಲ್ಲ. ತಲೆಯಲ್ಲಿಯೂ ಸಹ ಪಸರಿಸಿತ್ತು. ಹೀಗಾಗಿ ಲತಾ ದಿನದಿಂದ ದಿನಕ್ಕೆ ಕುಗ್ಗುತ್ತಾ ಹೋದಳು. ಮಾನಸಿಕವಾಗಿ ತುಂಬಾ ಜರಿದಳು. ಏನು ಧೈರ್ಯ , ಸಮಾಧಾನ ಹೇಳಿದರೂ ಆಕೆಯಂತೂ ಕೋಣೆ ಬಿಟ್ಟು ಹೊರ ಬರಲು ತಯಾರು ಇರಲೇ ಇಲ್ಲ.



ಈ ರೀತಿಯಾಗಿ ಲತಾ ಮಾನಸಿಕ ಖಿನ್ನತೆಯಿಂದ ತನ್ನ ಗಂಡ ಮಕ್ಕಳಿಂದ ದೂರಾದಳು .



Rate this content
Log in

Similar kannada story from Abstract