Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 8

ಇಷ್ಟ ದೇವತೆ ಭಾಗ 8

2 mins
167



ಗಿರಿಜೆಯು ಮದುಮಗಳಾಗಿ ವರನ ಮನೆಗೆ ಬಂದಾಯ್ತು. ಬಹಳ ಧೂಮ್ ಧಾಮ್ ಅಂತಾ ಮದುವೆಯೂ ನಡೆಯಿತು. ಬಂದವರೆಲ್ಲ ಖುಷಿಯಿಂದ ತಮ್ಮ ತಮ್ಮ ಊರಿಗೆ ಹೊರಟಾಯ್ತು. ಇನ್ನು ಇವತ್ತು ಗಿರಿಜೆಯು ಹೊಸದಾಗಿ ಮಡಿಲಕ್ಕಿ ತುಂಬಿಸಿಕೊಂಡು ಗಂಡನ ಮನೆ ಪ್ರವೇಶ ಮಾಡುವುದಿದೆ. ಚಿಕ್ಕವಳು ಆಗ ತಾನೇ ದೊಡ್ಡವಳಾಗಿದ್ದು , ಏನೊಂದು ತಿಳಿಯದ ವಯಸ್ಸಲ್ಲಿ ಅಜ್ಜನ ಹುಚ್ಚು ಆಸೆಗೆ ಹದಿಮೂರನೇ ವಯಸ್ಸಲ್ಲಿ ಮದುವೆ ಆಗಿ ಪಟೇಲರ ಮನೆ ಸೊಸೆಯಾಗಿ ಬಂದಳು. "ಅವಳು" ಇನ್ನು ತನ್ನ ಇಡೀ ಜೀವನವನ್ನು ಆ ಮನೆಯಲ್ಲಿಯೇ ಕಳಿಯಬೇಕಿತ್ತು.


ಅಂದು ಅವಳ ಮೊದಲ ರಾತ್ರಿ . ಹಿಂದೆ ಅದನ್ನು ಹಾಸಿಗೆ ಶಾಸ್ತ್ರ ಅಂತ ಕರೆಯುತ್ತಿದ್ದರು. ಅವಳ ಅತ್ತೆ ಹಾಗೂ ಚಿಗವ್ವ ಇಬ್ಬರೂ ಮನೆ ಒಳಗೆ ಬಂದಿದ್ದರು, ಕೋಣೆಯವರೆಗೆ ಬಂದರು. ಹಾಗಂತ ಕೋಣೆಯ ಒಳಗೆ ಹೋಗಲಿಕ್ಕಾಗದು ಅಲ್ಲವೇ? ಪಾಪ ಏನೂ ಅರಿಯದ ಆ ವಯಸ್ಸಲ್ಲಿ ಮದುವೆ ಮಾಡಿ, ಮೊದಲ ರಾತ್ರಿ,ಅಥವಾ ಹಾಸಿಗೆ ಶಾಸ್ತ್ರ ಅಂದರೆ ಏನು ಅತ್ತೆ ಅಂತ ಅವಳ ಸೋದರತ್ತೆಯನ್ನು ಕೇಳಿದಾಗ ಅವಳ ಅತ್ತೆ ದುಃಖತೃಪ್ತರಾಗಿ, ಏನು ಇಲ್ಲ ಗಿರಿಜಮ್ಮ, ನಿನ್ನ ಗಂಡ ಹೇಗೆ ಹೇಳುತ್ತಾನೋ ಹಾಗೆ ಕೇಳಬೇಕು. ಅವನು ಕೇಳಿದ್ದನ್ನು ಇಲ್ಲ ಅನ್ನಬೇಡ, ಕೋಣೆಯಿಂದಾಚೆ ಧ್ವನಿ ಬರಬಾರದು. ಗಂಡ ಹೆಂಡತಿ ಗುಟ್ಟು ವ್ಯಾಧಿ ರಟ್ಟು ಅದಕ್ಕೆ ನೀನು ದ್ವನಿ ತಗ್ಗಿಸಿ ಮಾತಾಡು. ಗಂಡನ ಸೇವೆಯೇ ಹೆಣ್ಣಿಗೆ ಶ್ರೇಯಸ್ಸು ಅಂತ ಅತ್ತೆ ಹೇಳಿದ್ದನ್ನು ಕತ್ತು ಅಲ್ಲಾಡಿಸಿ ಹು ಅಂತ ಹೇಳಿ ಒಳನಡೆದಳು ಅವಳು.



ಕೋಣೆಯಲ್ಲಿ ಶಂಭು ತನ್ನ ಹೆಂಡತಿ ಗಿರಿಜೆ ಬರುವುದನ್ನು ನೋಡುತ್ತಾ ಕುಳಿತಿದ್ದನು. ಶಂಭು ಸೀದಾ ಸಾದಾ ಹುಡುಗ. ಪಟೇಲರ ಮಗ ನಿಜ,ಆದರೆ ಓದಿದವನಲ್ಲ. ಯಾವಾಗಲೂ ಹೊಲದಲ್ಲಿ ಹುಟ್ಟಿ ಹೊಲದಲ್ಲಿ ಬೆಳೆಯುತ್ತಿದ್ದ. ಪಟೇಲರಿಗೆ ಮಗನ ಮದುವೆ ಆಗಬೇಕಿತ್ತು. ಸುಂದರವಾದ ಗಿರಿಜೆ ಕಣ್ಣಿಗೆ ಬೀಳಲು ಮಹಾದೇವಪ್ಪನ ಜೊತೆಗೆ ಮಾತಾಡಿಯೇ ಬಿಟ್ಟಿದ್ದರು. ಗಿರಿಜೆಯ ಅಜ್ಜ ಬರಿ ಆಸ್ತಿ ನೋಡಿದರು , ಹುಡುಗನನ್ನು ಆರಿಸಲೇ ಇಲ್ಲ ಅಥವಾ ನೋಡಲೇ ಇಲ್ಲ. ಪಟೇಲರ ಬಾಯಿ ಮಾತಿಗೆ ಮರುಳಾದರೊ ಏನೋ , ಅಥವಾ ಮೊಮ್ಮಗಳ ಮೇಲಿನ ಕುರಡು ಪ್ರೀತಿ ಹಾಗೆ ಮಾಡಿಸಿತೋ ಗೊತ್ತಿಲ್ಲ, ತನ್ನ ಮುದ್ದಿನ ಮೊಮ್ಮಗಳು ಚೆನ್ನಾಗಿ ಇರುತ್ತಾಳೆಂದು ತಿಳಿದು , ಎಲ್ಲರನ್ನು ಒಪ್ಪಿಸಿ ಮದುವೆ ಮಾಡಿ ಅಜ್ಜ ಅಂತೂ ಗೆದ್ದು ಆಗಿತ್ತು. ಆದರೆ ಅವಳು ಗೆಲ್ಲಬೇಕು. ಆ ಗೆಲುವು ಅವಳಿಂದಾಗಬೇಕು. ಅಂದಾಗ ಮಾತ್ರ ಈ ಮದುವೆ ಯಶಸ್ವಿ ಆಗೋದು..


ಬೋರು , ನೀರು ಅಂತ ಮಣ್ಣಲ್ಲಿ ಮಣ್ಣಾಗಿ ದುಡಿಯುವ ಶಂಭುವಿಗೆ ಹೊರಗಿನ ಪ್ರಪಂಚ ಜ್ಞಾನ ತುಂಬಾ ಕಮ್ಮಿಯಿತ್ತು. ಎತ್ತು, ಗಳೇ ಹೊಡಿಯುವುದು, ನೀರು ಹಾಯಿಸುವುದು,ಇದಷ್ಟೇ ಕೆಲಸ ಗೊತ್ತಿದ್ದ ಶಂಭು, ತಮ್ಮಂದಿರಂತೆ ಓದಲಿಲ್ಲ, ಫ್ಯಾಶೇನ್ ಮಾಡಲಿಲ್ಲ, ಸಿಟಿ ಸುತ್ತಲಿಲ್ಲ. ಹೀಗಾಗಿ ಆತನಿಗೆ ಪ್ರಪಂಚ ಜ್ಞಾನ ತುಸು ಕಮ್ಮಿ ಇತ್ತು.


ಆತನಿಗೆ ಗಿರಿಜೆ ತುಂಬಾ ಹಿಡಿಸಿದ್ದಳು. ತನಗಿಂತ ಹದಿನಾಲ್ಕು ವರ್ಷ ಚಿಕ್ಕವಳು ಬೇರೆ. ಆದರೂ ಅವಳು ಹೆಂಡತಿ, ಅವನು ಗಂಡನೇ ಅಲ್ಲವೇ? ಕೋಣೆಗೆ ಹೋದ ಗಿರಿಜೆ ಗಂಡನ ಪಾದ ಮುಟ್ಟಿ ನಮಸ್ಕರಿಸಿ , ನಿಂತಳು. ಆತ ಅವಳನ್ನು ನೋಡಿ ನಾನು ನಿನಗೆ ಇಷ್ಟವೇ ಅಂತ ಕೇಳಿದಾಗ ಪಾಪ ಅವಳು ಏನು ಹೇಳಲು ತೋಚದೆ ಕುಳಿತಿದ್ದಳು. ಹೀಗೆ ಮಾತುಗಳನ್ನಾಡುತ್ತಾ ಹಾಗೆ ಅವಳನ್ನು ತನ್ನೆಡೆಗೆ ಎಳೆದಾಗ ,ಆತನ ಗಡಸು ಕೈ ಆಕೆಗೆ ನೋವುಂಟು ಮಾಡಿತು, ಆದರೂ ಅವಳು ಅತ್ತೆ ಹೇಳಿದ ಮಾತು ನೆನಪಾಗಿ ಸುಮ್ಮನಾದಳು. ಗಂಡ ತನ್ನೊಡನೆ ಹೀಗೇಕೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತ ತನ್ನ ಅವ್ವನನ್ನು ಮನದಲ್ಲಿ ನೆನೆದುಕೊಳ್ಳುತ್ತ ಗಂಡನತ್ತ ತಿರುಗಿದಳು.


ಮುಂದೇನಾಯ್ತು ಅಂತ ಇಷ್ಟ ದೇವತೆಯ ಮುಂದಿನ ಭಾಗದಲ್ಲಿ ನೋಡೋಣ..


Rate this content
Log in

Similar kannada story from Classics