Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Drama Classics Others

4.0  

shristi Jat

Drama Classics Others

ಮರಣಾನಂತರದ ಜೀವನ

ಮರಣಾನಂತರದ ಜೀವನ

1 min
171


ಹುಟ್ಟು ಮತ್ತು ಸಾವು ಎರಡು ಪ್ರಕೃತಿಯ ನಿಯಮ ಅವೆರಡರಲ್ಲಿ ಜೀವನ ಅಡಗಿದೆ ಆದರೆ ನಮ್ಮ ದೇಹದಲ್ಲಿ ಜೀವ ಮತ್ತು ಆತ್ಮ ಇದ್ದು ನಮ್ಮ ಅಂಗಾಂಗಳೊಂದಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನ ಮಾಡುವುದನ್ನು ಬದುಕು ಎನ್ನುತ್ತೆವೆ. ಅದೆ ನಮ್ಮ ದೇಹವಿದ್ದು ಅದರಲ್ಲಿ ಆತ್ಮವಿಲ್ಲದ್ದಿದ್ದಲ್ಲಿ ಕ್ರೀಯಾತ್ಮಕವಿಲ್ಲದ ದೇಹವನ್ನು ಮರಣ ಅಂತ ಕರೆಯುತ್ತೇವೆ.

ಸಾವು ನಂತರದಲ್ಲೂ ಜೀವನ ಇರುತ್ತದೆ ಕೆಲವು ಅಧ್ಯಾಯಗಳಲ್ಲಿವೆ ಆದರೆ ಆ ಜೀವನದಲ್ಲಿ ಆತ್ಮ ಅಷ್ಟೆ ಇರುತ್ತದೆ ದೇಹವಿರುವುದಿಲ್ಲ ಆದರೆ ಆತ್ಮಕ್ಕೂ ಕಾಣಿಸುತ್ತದೆ ಕೇಳಿಸುತ್ತದೆ ಒಂದು ವೆಳೆ ಆ ಆತ್ಮ ಒಂದು ಜೀವವಿರುವ ದೇಹದಲ್ಲಿ ಸೇರಿಕೊಂಡರೆ ಅದು ತನ್ನ ಆಸೆಯನ್ನು ಹಾಗೂ ವರ್ತನೆಯನ್ನು ಆ ದೇಹದಿಂದ ವ್ಯಕ್ತಪಡಿಸುತ್ತದೆ.

ಆತ್ಮಗಳು ಸುಳಿದಾಡುತ್ತಿರುತ್ತದೆ ಅದು ಕಾಣುವದಿಲ್ಲ ಎಲ್ಲವನ್ನು ಗ್ರಹಿಸುತ್ತಿರುತ್ತದೆ. ಆತ್ಮಗಳು ಮೋಕ್ಷ ಪಡೆಯಲೆಂದು ಮನುಷ್ಯ ಮರಣ ಹೊಂದಿದ ಮೇಲೆ ಅವರದ್ದೆ ಆದ ಧರ್ಮಗಳ ಪದ್ದತಿ ಪ್ರಕಾರ ಶವವನ್ನು ಸಂಸ್ಕಾರ ಮಾಡಲಾಗುತ್ತದೆ.

ಕೆಲವರು ಹೆಣವನ್ನು ಸುಡುತ್ತಾರೆ ಕೆಲವರು ಹೂಣುತ್ತಾರೆ.

ಸುಟ್ಟಿರುವ ಶವದ ಬೂದಿಯನ್ನು ತೆಗೆದುಕೊಂಡು ನಿರಿನಲ್ಲಿ ಬಿಡುತ್ತಾರೆ.ಎಲ್ಲಾ ವಿಧಿವಿಧಾನಗಳು ಶವಗಳಿಗೆ ಮಾಡುವುದು ಆತ್ಮಕ್ಕೆ ಶಾಂತಿ ಸಿಕ್ಕಿ ಆತ್ಮಗಳು ಮೋಕ್ಷ ಪಡೆಯಲೆಂದು ಹಾಗೂ ಅಹಂ,ಆಸೆ,ಕ್ರೋದತ್ವದಿಂದ ಶಮನ ವಾಗಲೆಂದು.

ಮರಣದ ನಂತರ ಆತ್ಮಗಳು ಭೂತ,ಪ್ರೇತಗಳಾಗಿ ತೊಂದರೆಗಿಡಾಗದೆಯಿರಲಿ ಹಾಗೂ ಆತ್ಮಗಳಿಗೆ ಶಾಂತಿ ಸಿಗಲಿ

ವ್ಯಕ್ತಿ ತನ್ನ ಮರಣದ ನಂತರ ಮತ್ತೊಂದು ಜನ್ಮ ತಾಳುತ್ತಾನೆ ಅದನ್ನೆ ಪುನರ್ಜನ್ಮ ಎಂದು ಹೇಳುತ್ತಾರೆ.

ಅವನ ಪುನರ್ಜನ್ಮ ಮತ್ತೆ ಮಾನವ ರೂಪ ತಾಳುತ್ತಾನೆ ಇಲ್ಲ ಅದು ಅವನ ಪಾಪ ಪುಣ್ಯಗಳ ಮೇಲೆ ಆಧಾರಿತವಾಗಿರುತ್ತದೆ. ಯಾಕೆಂದರೆ ನಮ್ಮ ಆತ್ಮವು ಪರಮಾತ್ಮನೊಂದಿಗೆ ವಿಲಿನಗೊಂಡಿರುತ್ತದೆ. ಮುಂದಿನ ಜನ್ಮ ಮನುಷ್ಯ,ಪ್ರಾಣಿ,ಪಕ್ಷಿಗಳು,ಇನ್ನಿತರ ಯಾವ ಸೃಷ್ಟಿ ತಾಳುತ್ತಾನೆ ಅನ್ನುವುದು ಪರಮಾತ್ಮನ ಶಕ್ತಿಯಿಂದ ನಿರ್ಣಯವಾಗುವುದು.

ಕೆಲ ಅಧ್ಯಾಯಗಳ ಪ್ರಕಾರ ಪುನರ್ಜನ್ಮ ತಾಳುವುದು ಸತ್ಯ ಅದು ಯಾವ ಜೈವಿಕಾಂಶವಾಗಿ ಅನ್ನೊದು ಆತ್ಮದ ಮೇಲೆ ಆಧಾರಿತವಾಗಿರುತ್ತದೆ ವಿಧಿಗಳ ಬರಹವಾಗಿರುತ್ತದೆ.

ತಾಳಿದ್ದಿವಿ ಈ ಜನ್ಮ ಮಾನವ ಜನ್ಮವಿದು ಪುಣ್ಯಜನ್ಮ ಮಾಡೋಣ ಕರ್ಮಗಳು ನೆನೆದು ಮುಂದೆಯಿರುವುದೊಂದು ಪುನರ್ಜನ್ಮ.



Rate this content
Log in

Similar kannada story from Drama