Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Drama Horror Tragedy

4.5  

shristi Jat

Drama Horror Tragedy

ಭಯಾನಕ

ಭಯಾನಕ

4 mins
416


​​​​​​​​​​ಇಳಿ ಸಂಜೆ ಇತ್ತ ಗೆಳತಿಗಾಗಿ ‌ಕಾಯುತ್ತಿರುವ ನವ್ಯ ಪದೆ ಪದೆ ಮನೆಯ ಬಾಗಿಲು ಹೊರಗೆ ಬಂದು ನೋಡುತ್ತಿದ್ದಳು. ರಾತ್ರಿ ಆಗುತ್ತಾ ಬಂತು ಎರಡು ಕೆಲಸ ಆಗುವುದು ಸಂಶಯ ಎಂದು ಗೊಣಗುತ್ತಾ ಸಭಾಂಗಣದ ಸೋಫಾ ಮೇಲೆ ಕೂತಿದ್ದಳು. ನವ್ಯಳಿಗೆ ಯಾರೋ ಕೂದಲು ಎಳೆದಂತಾಯಿತು ತಿರುಗಿ ನೋಡಿದರೆ ಯಾರೂ ಇರಲಿಲ್ಲ ಮತ್ತೆ ತಿರುಗಿ ನೋಡಿದಳು ಬಾಗಿಲು ಹೊರಗೆ ಗೆಳತಿಯ ನೋಡಲು ಸೋಫಾದಿಂದ ಎದ್ದಳು ಎರಡು ಹೆಜ್ಜೆ ಮುಂದೆ ಇಟ್ಟಿದ್ದಳು ಅಷ್ಟರಲ್ಲಿ ಸೋಫಾ ಕೆಳಗಡೆ ಕೂತಿದ್ದ ಪಲ್ಲವಿ ಜೋರಾಗಿ ಕಿರುಚಿದಳು ಬೆದರಿದ ನವ್ಯ ತಿರುಗಿದಾಗ ಅವಳ ಸ್ನೇಹಿತೆಯನ್ನು ಕಂಡಳು ಕತ್ತಲಾಯಿತು ಇದರಲ್ಲಿ ಚೇಷ್ಟೆ ಬೇರೆ ನಿಂಗೆ ಅಂತ ಅವಳನ್ನು ಬೈದಳು.ಪಲ್ಲವಿ ಏನು ಕೆಲಸ ಅಂತಾನೂ ಹೇಳ್ತಿಲ್ಲಾ ನವ್ಯ ಇಲ್ಲ ಕಣೆ ಅಪ್ಪನ ಸ್ನೇಹಿತರೊಬ್ಬರು ಮೋಳಕಾಲು ನೋವಿಗೆ ಆಯುರ್ವೇದದ ಔಷಧಿ ಬಗ್ಗೆ ಹೇಳಿದ್ದಾರಂತೆ ಅಪ್ಪನ ಸ್ನೇಹಿತನ ಫಾರ್ಮ್ ಹೌಸ್ ಊರ್ ಆಚೆಗೆ ಇದೆ ಅಮ್ಮನಿಗೆ ಮೋಳಕಾಲು ನೋವು ಜಾಸ್ತಿ ಆಗಿದೆ ಅದಕ್ಕೆ ಅಪ್ಪನ ಸ್ನೇಹಿತನಿಗೂ ಔಷದಿಯಿಂದ ಕಡಿಮೆ ಆಗಿದೆಯಂತೆ ಅಪ್ಪ 8 ದಿನಗಳ ಕಾಲ ಟ್ರೈನಿಂಗ್ ಹೋಗಿದ್ದಾರೆ ಅಪ್ಪನ ಸ್ನೇಹಿತನದ್ದು ಅದೆ ಊರು ಆದರೆ ಅವರದೊಂದು ಫಾರ್ಮ್ ಹೌಸ್ ನಮ್ಮುರಲ್ಲಿದೆಯಂತೆ ಊರಾಚೆ ಇದೆ ಆವಾಗಾವಾಗ ಇಲ್ಲಿ ಬಂದು ಹೋಗ್ತಿರ್ತಾರಂತೆ ಅದನ್ನು ನೋಡಿಕೋಳ್ಳುವವನ ಜೋತೆ ಔಷಧಿ ಕಳುಹಿಸಿದ್ದಾರೆ ತೆಗೆದುಕೊಂಡು ಬರಬೇಕು ನಡಿ ಹೋಗುವಾ ಎಂದಳು ಅದಕ್ಕೆ ಪಲ್ಲವಿ ಹೌದಾ ಹಾಗಾದರೆ ಹೋಗೊಣ ಪಿ.ಜಿ ಆಂಟಿಗೆ ಇವತ್ತು ರಾತ್ರಿ ಬರೋದು ತಡವಾಗುತ್ತೆ ಅಂತ ಹೇಳಿ ಬಂದಿದೀನಿ ಇಬ್ಬರು ಸ್ಕೂಟಿಯಲ್ಲಿ ಹೋರಟರು ಸ್ವಲ್ಪ ಮುಂದೆ ಹೋದ ಮೇಲೆ ಮಧ್ಯ ಬುಕ್ ಸ್ಟಾಲ್ ಹತ್ತಿರ ನಿಲ್ಲಿಸಿದಳು ಪಲ್ಲವಿ ಯಾಕೆ ಇಲ್ಲಿ ನಿಲ್ಲಿಸಿದಿಯಾ ನವ್ಯಾ ನನಗೆ ಪ್ರೋಜೆಕ್ಟಗೋಸ್ಕರ ಬಿಳಿ ಹಾಳೆ ಮತ್ತು ಫೈಲ್ ಬೇಕಾಗಿತ್ತು ಬರುವಷ್ಟರಲ್ಲಿ ಮುಚ್ಚಿದರೆ ಏನು ಮಾಡಬೇಕು ಇವಾಗ್ಲೆ ತೇಗೆದುಕೊಂಡು ಇಟ್ಕೋಂಡಿರ್ತಿನಿ ಫಾರ್ಮ್ ಹೌಸ್ ದೂರ ಇದೆ ಪಲ್ಲವಿ ಸರಿ ಹಾಗಾದರೆ ಮತ್ತೆ ಸ್ಕೂಟಿ ಹತ್ತಿದರು ಮುಂದೆ ಸಾಗಿದರು ಪಲ್ಲವಿ ಸ್ವಲ್ಪ ವೇಗವಾಗಿ ನಡೆಸು ದೂರ ಅಂತ ಹೇಳ್ತಿಯಾ ನವ್ಯ ಸರಿ ಆಯ್ತು ಹಾಗೆ ನಿನಗೋಂದು ವಿಷಯ ಹೇಳಬೇಕಿತ್ತು ಅದಕ್ಕೆ ಪಲ್ಲವಿ ಹೇಳು ಹಾಗಾದರೆ ನವ್ಯಾ ಹೆದರ್ಬಾರದು ಹಾಗೂ ನಂಗೆ ಬೈಬಾರದು ಸರಿನಾ ಆಯ್ತು ಹೇಳು!! ಅವಳ ಭುಜ ತಟ್ಟಿದಳು ನಾವಿವಾಗ ಹೋಗ್ತಿರೊ ಫಾರ್ಮ್ ಹೌಸ್ ತುಂಬಾ ಹಳೆಯದು ವಾಸ್ತು ಸರಿಯಿಲ್ವಂತೆ ಆತ್ಮಗಳು ಆ ಫಾರ್ಮ್ ಹೌಸ್ ನಲ್ಲಿ ಓಡಾಡ್ತಿರ್ತವಂತೆ ಆದರೆ ನಿಜ ಅಥವಾ ಗಾಳಿಸುದ್ದಿ ಗೋತ್ತಿಲ್ಲ ಅಲ್ಲಿನ ಜನರು ಹೀಗೆಳ್ತಿರ್ತಾರಂತೆ ಫಾರ್ಮ್ ಹೌಸ್ ಅತಿ ಕಡಿಮೆ ಬೆಲೆಗೆ ಅದನ್ನು ಮಾರಾಟಕ್ಕಿಟ್ಟಿರುವ ವಿಷಯ ಕೇಳಿ ನಮ್ಮ ತಂದೆಯ ಸ್ನೇಹಿತ ಅದನ್ನು ಖರಿದಿಸಿದ್ದಾರಂತೆ ಆದರೆ ಅವರು ಖರಿದಿಮಾಡಿದ ಮೇಲೆ ಅವರ ಕುಟುಂಬದವರು ಹೋಗುತ್ತಾ ಬರುತ್ತಾ ಇರ್ತಾರಂತೆ ಕೆಲವು ಸಲ ಅಲ್ಲಿಯೆ ಉಳಿದಿದ್ದಾರಂತೆ ಆದರೆ ಅವರಿಗೆ ಯಾವುದೆ ತೊಂದರೆ ಆಗಿಲ್ವಂತೆ ಅದಕೆ ನಮ್ಮ ತಂದೆಯವರು ಹೋಗುವುದಾದರೆ ಬೆಳಿಗ್ಗೆ ಹೋಗು ಇಲ್ಲಾಂದ್ರೆ ಕತ್ತಲಾಗುವ ಮುಂಚೆ ಹೋಗಿ ಬಾ ಅಂದ್ರು ನಿನ್ನಿಂದ ತಡವಾಯಿತು.ಪಲ್ಲವಿ ಜೋರಾಗಿ ನಗತೋಡಗಿದಳು ಇದನ್ನೆಲ್ಲಾ ನಂಬ್ತಿಯಾ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಳು ನವ್ಯ ಇಲ್ಲಿ ಏನು ಬೇಕು ನಿನಗೆ ಪಲ್ಲವಿ ಪ್ರಶ್ನಿಸಿದಳು? ಅಯ್ಯೋ ಟಯರ್ ಪಂಚರ್ ಕಣೆ ಅದಕ್ಕೆ ಮುಂದೆ ಹೋಗ್ತಿಲ್ಲಾ ಹೌದಾ ಹೀಗೆನು ಮಾಡೋದು ಇಷ್ಟು ಮಧ್ಯ ದಾರಿಯಲ್ಲಿ ಪಂಚರಾಗಿದೆ ಬೇರೆ ಗಾಡಿಗಳು ಬರ್ತಿಲ್ಲ ಬೇಸರದಿಂದ ಕೇಳಿದಳು ಪಲ್ಲವಿ ಅರ್ರೇ ಇರು ಒಂದು ನೀಮಿಷ ನನ್ನತ್ತರ ಸ್ಟೆಪ್ನಿ ಟಯರ್ ಇದೆ ಬದಲಾಯಿಸ್ತಿನಿ ಇರು ಎಂದು ಸ್ಕೂಟಿ ಡಿಕ್ಕಿಯಿಂದ ಬೇರೆ ಟಯರ್ ತೇಗೆದಳು ನವ್ಯ ಪಲ್ಲವಿ ಭೇಷ್ ತುಂಬಾ ಜಾಣೆ ನೀನು ನಾನೆನಾದ್ರು ಸಹಾಯ ಮಾಡ್ಲಾ ನವ್ಯ ಬೇಡ ಎಲ್ಲಾ ಇದೆ ಒಬ್ಬಳೆ ಮಾಡ್ತಿನಿ ಟಯರ್ ಬದಲಾಯಿಸಿದರು ಮತ್ತೆ ಪಯಣ ಸಾಗಿತ್ತು ಫಾರ್ಮ್ ಹೌಸ್ ನತ್ತ ತುಂಬಾ ಹೊತ್ತಿನಿಂದ ನವ್ಯ ಒಬ್ಬಳೆ ಮಾತಾಡುತಿದ್ದಳು ಪಲ್ಲವಿಯಿಂದ ಯಾವುದೇ ಪ್ರತಿಕ್ರಿಯೆ ಬರ್ತಿರ್ಲಿಲ್ಲ ನವ್ಯಳ ಬೆನ್ನು ತರಚಿದಂತಾಯಿತು ಸ್ಕೂಟಿ ನಿಲ್ಲಿಸಿದಳು ಏನಾಯ್ತು ಪಲ್ಲವಿ ಯಾಕೆ ಏನು ಮಾತಾಡ್ತಾಯಿಲ್ಲ ಮತ್ತೆ ಜೋರಾಗಿ ನಕ್ಕಳು ಪಲ್ಲವಿ ಸುಮ್ನೆ ನೀನು ಆತ್ಮಗಳ ಬಗ್ಗೆ ಹೇಳಿದೆಯಲಾ ಸ್ವಲ್ಪ ಭಯಪಡಿಸುವದಕ್ಕಾಗಿ ನೀನು ಇದಿಯಾ ಅಂತ ನವ್ಯ ಮತ್ತೆ ಸ್ಕೂಟಿ ಹತ್ತಿದರು ಇನ್ನೆನು ಹತ್ತಿರ ಇದ್ದರು ಒಳ್ಳೆ ಪಿರಾಮಿಡ್ ತರ ಇದೆ ಅದೆ ಏನೆ ಫಾರ್ಮ್ ಹೌಸ್ ಅಂತ ಕೇಳಿದಳು ಪಲ್ಲವಿ ನವ್ಯ ಇರಬಹುದು ನೋಡೊಣ ಬಾ ಒಳಗಡೆ ಹೋದರು ಗೆಟ್ ಬಾಗಿಲು ತೆಗೆದು ಒಳಗಡೆ ಹೋದರು ಫಾರ್ಮ್ ಹೌಸ್ ನಲ್ಲಿ ಯಾರು ಇರಲಿಲ್ಲ ಕತ್ತಲು ಕವಿದಿತ್ತು ಒಂದು ದೀಪ ಇರಲಿಲ್ಲ ಹೋರಗಡೆಯಿಂದ ನವ್ಯ ರಾಜಶೇಖರ ಅಂಕಲ್ ಅಂತ ಕೂಗಿದಳು ಯಾರು ಹೋರಗಡೆ ಬರಲಿಲ್ಲ ನವ್ಯ ಮತ್ತು ಪಲ್ಲವಿ ಇಬ್ಬರು ಕೂಗಿದರು ಯಾರು ರಲಿಲ್ಲ ನವ್ಯ ಮೋಬೈಲ್ ನಂಬರ್ ಇತ್ತು ಕರೆ ಮಾಡಿದಳು ಯಾವುದೇ ಪ್ರತಿಕ್ರಿಯೆ ಬರ್ಲಿಲ್ಲ ನವ್ಯ ಬಾಗಿಲು ತಟ್ಟಿದಳು ಇದ್ದಕ್ಕಿದ್ದಂತೆ ದೀಪಗಳು ಉರಿದವು ಬಾಗಿಲು ತೆಗೆದು ಒಬ್ಬ ವ್ಯಕ್ತಿ ಹೋರಗಡೆ ಬಂದು ವಿಚಾರಿಸಿದ ನವ್ಯ ತನ್ನ ಬಗ್ಗೆ ಮತ್ತು ತನ್ನ ಗೆಳತಿಯ ಬಗ್ಗೆ ಪರಿಚಯಿಸಿದಳು ಔಷದಿಗೋಸ್ಕರ ಬಂದಿರುವುದಾಗಿ ತಿಳಿಸಿದರು ರಾಜಶೇಖರ ಅಂಕಲ್ ಅವರನ್ನು ಒಳಗೆ ಕರೆದನು.ಹೌದು ಕೆಲಸದ ಮೇರೆಗೆ ನಮ್ಮ ಯಜಮಾನ್ರರವರ ಊರಿಗೆ ಹೋಗಿದ್ದೆ ಅವರು ಔಷಧಿಯನ್ನು ನನ್ನೋಡನೆ ಕಳುಹಿಸಿದ್ದಾರೆ ಕೂತ್ಕೋಳ್ಳಿ ಕುಡಿಯಲು ನೀರು ತೇಗೆದುಕೊಂಡು ಬರುತ್ತೇನೆ ಎಂದು ಒಳಗಡೆ ಹೋದರು ಸಭಾಂಗಣವನ್ನು ಕೂತಲ್ಲಿಯೆ ನವ್ಯ ಕಣ್ಣಾಡಿಸುತಿದ್ದಳು ಅಲ್ಲಿ ಒಂದು ಮೂರ್ತಿಯನ್ನು ಕಂಡಳು ಎಷ್ಟು ಚೆನ್ನಾಗಿದೆಯೆಲಾ ಅಂತ ಪಲ್ಲವಿಯನ್ನು ಕೇಳಿದಳು ಪಲ್ಲವಿ ಹೂಂ ಅಂದಳು ಅಂಕಲ್ ಒಳಗಡೆ ಹೋಗಿ ತುಂಬಾ ಹೊತ್ತಾದರು ಹೋರಗೆ ಬರಲಿಲ್ಲ ಸ್ವಲ್ಪ ಹೊತ್ತು ನೋಡಿದರು ಒಳಗಡೆಯಿಂದ ಏನೋ ವಸ್ತು ಕೆಳಗಡೆ ಬಿದ್ದ ಹಾಗೆ ಜೋರಾಗಿ ಶಬ್ಬ ಬಂತು ಇಬ್ಬರು ತುಂಬಾ ಭಯ ಪಟ್ಟರು ಮೆಲ್ಲಗೆ ಅಂಕಲ್ ನ ಕೂಗಿದಳು ನವ್ಯ ಆದರೆ ಹೋರಗಡೆ ಬರದ ಕಾರಣ ಪಲ್ಲವಿಗೆ ಸ್ವಲ್ಪ ಕೋಣೆಯೊಳಗೆ ಹೋಗಿ ಕರೆಯಲು ಹೇಳಿದಳು ಅದಕ್ಕೆ ಪಲ್ಲವಿ ಇಬ್ಬರು ಒಳಗಡೆ ಹೋಗಿ ಕರೆದರಾಯ್ತು ನನಗೂ ಭಯ ಆಗ್ತಿದೆ ಅಂತ ಹೇಳಿದಳು ಸರಿ ಅಂತ ಇಬ್ಬರು ಕೋಣೆಯೊಳಗೆ ಹೋದರು ಅಂಕಲ್ ಇರಲಿಲ್ಲ ಇಬ್ಬರಿಗೆ ಅಚ್ಚರಿಯಾಯ್ತು ಮತ್ತೆ ಇಬ್ಬರು ಸೆರಿ ಅವರನ್ನು ಕೂಗಿದರು ಯಾವುದೇ ಶಬ್ದ ಬರಲಿಲ್ಲ ಭಯಪಡುತ್ತಾ ಒಂದೊಂದಾಗಿ ಎಲ್ಲಾ ಕೊಣೆಗಳಿಗೆ ಹೋಗಿ ನೋಡಿದರು ಕಾಣದಕ್ಕಾಗಿ ಸಭಾಂಗಣದಲ್ಲಿ ಕೂತರು ಇದ್ದಕ್ಕಿದ್ದಂತೆ ದೀಪಗಳು ಬಂದಾದವು ಭಯ ಇಬ್ಬರಲ್ಲಿ ಜಾಸ್ತಿ ಆಗತೋಡಗಿತು ಬಾಗಿಲು ತೆಗೆದು ಹೋರಗಡೆ ಬಂದರು ಒಂಚೂರು ಬೇಳಕಿರಲಿಲ್ಲ ಮೋಬೈಲ್ ನ ಸಹಾಯದಿಂದ ಸ್ವಲ್ಪ ಬೇಳಕಾಗಿತ್ತು ಕಗ್ಗತ್ತಲಿನ ವಾತಾವರಣ ಕಂಡು ಇಬ್ಬರ ಮೈ ಬೆವರಿತು ನವ್ಯಳ ತಲೆಯಲ್ಲಿ ಹಲವಾರು ಯೋಚನೆಗಳು ಮನೆಗೆ ಹೋದರಾಯ್ತು ಅಂತ ಸ್ಕೂಟಿ ಕಡೆ ಬೇಳಕಾಕಿದಳು ಗೆಳತಿ ಪಲ್ಲವಿಗೆ ಕರೆದಳು ಮನೆಗೆ ಹೋಗೋಣ ಬಾ ಯಾಕೊ ಜಾಗ ಸರಿ ಅನ್ಸುತ್ತಿಲ್ಲ ಸ್ಕೂಟಿ ಹತ್ತಿ ಶುರುಮಾಡಿದಳು ಆದರೆ ಅವಳ ಹಿಂದೆ ಪಲ್ಲವಿ ಬಂದಿರಲಿಲ್ಲ ನವ್ಯ ಅವಳನ್ನು ಕೂಗಿದಳು ಆದರೆ ಪಲ್ಲವಿ ಅಲ್ಲೆ ನಿಂತಿದ್ದಳು ಅವಳನ್ನು ಕರೆತರಲು ಹತ್ತಿರ ಹೋದಳು ಯಾಕೆ ಇಲ್ಲೆ ನಿಂತಿದಿಯಾ ಬಾ ಹೋಗೋಣ ಮನೆಗೆ ಬೇಗ ಅಂದಳು ಪಲ್ಲವಿ ಹೂಂ ಅಂದಳು ಮತ್ತೆ ಅಲ್ಲೆ ನಿಂತಳು ನವ್ಯಳು ಪಲ್ಲವಿಯ ಕೈ ಹಿಡಿದುಕೊಂಡು ಮುಂದೆ ಹೋದಳು ಆದರೆ ಅವಳ ಕೈ ಹಿಡಿಯಲು ಆಗುತ್ತಿರಲಿಲ್ಲ ಅಷ್ಟು ಒರಟಾಗಿತ್ತು ಯಾಕೆ ನಿನ್ನ ಕೈ ಇಷ್ಟು ಒರಟಾಗಿದೆ ಅಂತ ಹಿಂತಿರುಗಿ ನೋಡಿದಾಗ ಅವಳನ್ನು ಕಂಡು ಮೂರ್ಚೆಹೋಗಿ ಬಿದ್ದಳು


Rate this content
Log in

Similar kannada story from Drama