Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Children Stories Classics Inspirational

4.5  

shristi Jat

Children Stories Classics Inspirational

ಮಕ್ಕಳು

ಮಕ್ಕಳು

2 mins
232


ಮಕ್ಕಳೆಂದರೆ ಮುಗ್ಧ ಮನಸ್ಸಿನ ಎಲ್ಲರ ಪ್ರೀತಿಯ ಪಾತ್ರಗಳು ಮಕ್ಕಳ್ಳಿದ್ದರೆ ಮನೆಯಲ್ಲಿನ ಕಳೆ ಯಾಕೆಂದರೆ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ ನಾವು ಏನು ಕಲಿಸುತ್ತೇವೆ ಅದನ್ನೆ ಕಲಿಯುತ್ತಾರೆ.ನಾವು ಎಂತಹ ವಾತಾವರಣ ದಲ್ಲಿರುಸುತ್ತಿವೋ ಅದೆ ಅವರ ಮೇಲೆ ಪರಿಣಾಮ ಬೀರುತ್ತದೆ.

ಮಕ್ಕಳ ಮನಸ್ಸು ತುಂಬಾ ಮುಗ್ಧವಾಗಿರುತ್ತದೆ ಅವರ ನಗು ನಿಷ್ಕಲ್ಮಶವಾಗಿರುತ್ತದೆ.ಮಕ್ಕಳು ಬೆಳೆಯುವಾಗ 

"ಅವರು ಅಂಬೆಗಾಲಲ್ಲಿ ನಡೆಯುವದು ನೋಡಲು ಚಂದ."

"ಅವರು ತೋದಲು ನುಡಿಯು ಕೇಳಲು ಚಂದ"

"ಅವರು ಚೇಷ್ಟೆಗಳನ್ನು ಮಾಡುವುದು ಚಂದ"

ಒಬ್ಬರನ್ನು ನೋಡಿ ನಮಗೆ ಅಕ್ಕರೆ ಬರುವುದೆಂದರೆ ಅದು ಮಕ್ಕಳಿಂದ ಮಕ್ಕಳು ಎಲ್ಲರಿಗೂ ಮುದ್ದಾಗಿರುತ್ತಾರೆ.

"ಇಂದಿನ ಮಕ್ಕಳೆ ನಾಳಿನ ಪ್ರಜೆಗಳು" ಅದಕ್ಕೆ ನಮ್ಮ ಮಾಜಿ ಪ್ರಧಾನಿಗಳಾಗಿರ್ತಂಕ್ಕಂತ ಜವಾಹರ್ ಲಾಲ್ ನೆಹರು ರವರು ಮಕ್ಕಳ ಮೇಲಿನ ಪ್ರೀತಿಗಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಮಾಡಿದ್ದಾರೆ.

ನವೆಂಬರ್ 14 ರಂದು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತೇವೆ.

ನಾವೆಲ್ಲರು ಅವರನ್ನು ಚಾಚಾಜೀ ಅಂತ ಪ್ರೀತಿಯಿಂದ ಕರೆಯುತ್ತೇವೆ.

ಮಕ್ಕಳ ಬುದ್ಧಿ ಶಕ್ತಿ ತುಂಬಾ ಸುಕ್ಷ್ಮವಾಗಿರುತ್ತದೆ ಸಸಿ ನೆಟ್ಟಿದ ಹಾಗೆ ನಾವು ಏನು ಬಿತ್ತುತ್ತೇವೆ ಅದೆ ಫಸಲು ಕೋಡುತ್ತದೆ.ಹಾಗೆಯೆ ನಾವು ಅವರು ಬೆಳೆಯುವಾಗ ಅವರಿಗೆ ಏನು ಕಲಿಸುತ್ತಿವೊ ಅದೆ ಅವರು ಭವಿಷ್ಯತ್ತಿನಲ್ಲಾಗುವರು.

ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಒಳ್ಳೆಯ ವಾತಾವರಣದಲ್ಲಿರಿಸಬೇಕು ಅವರ ಶಿಕ್ಷಣಕ್ಕಾಗಿ ಒತ್ತು ಕೊಡಬೇಕು ಅವರ ಕಲೆಗಳಿಗೆ ಒತ್ತು ಕೊಡಬೇಕು. ಅವರ ಇಚ್ಚಾಶಕ್ತಿಯ ಮೇರೆಗೆ ಅದು ಶಿಕ್ಷಣ ಆಗಿರಲಿ ಅಥವಾ ಅವರ ಕಲೆಯಾಗಿರಲಿ ಅದರದ್ದೇ ಆದ ಬೋಧನೆಯ ತರಗತಿಗೆ ಸೇರಿಸಬೇಕು.

ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಅದರ ಯೋಜನೆಗಳನ್ನು ಈಗಲೆ ಹಾಕಿಕೊಂಡಿರಬೇಕು ಮುಂದೆ ಅವರ ಭವಿಷ್ಯಕ್ಕೆ ಸಹಾಯ ಆಗುತ್ತದೆ.

ಯಾರು ಯಾವಾಗ ಯಾವ ಕ್ಷೇತ್ರದಲ್ಲಿ ಮುಂದೆ ಬರುತ್ತಾರೆ ಗೋತ್ತಾಗಲ್ಲ ಅವರ ವ್ಯಕ್ತಿತ್ವ ವಿಕಸನದ ಮೇಲೆ ಹೋಗುತ್ತದೆ ಆದರೆ ಅವರ ಉತ್ತಮ ಭವಿಷ್ಯಕ್ಕಾಗಿ ಇರುವ ಇಚ್ಚಾಶಕ್ತಿಗೆ ಅದು ಯಾವಾಗ ಬಂದರು ಬೆಂಬಲ ನೀಡಿ ಪ್ರೋತ್ಸಾಹಿಸಿಬೇಕು.

ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮನೆಯಲ್ಲಿಯೆ ಮಾರ್ಗದರ್ಶನ ಮಾಡುತ್ತಿರಬೇಕು.ಎಲ್ಲವನ್ನು ಶಾಲಾಕಾಲೇಜುಗಳಲ್ಲಿ ಅದರ ಬಗ್ಗೆ ಹೇಳುವುದಕ್ಕಾಗಲ್ಲ ಒಂದು ವೇಳೆ ಹೇಳಿದರು ಅವರು ಪಾಲಿಸುವುದು ಬಹಳ ಕಡಿಮೆ ಆದ ಕಾರಣ ಮನೆಯಲ್ಲಿಯೂ ಮಕ್ಕಳಿಗೆ ಅದರ ಬಗ್ಗೆ ಸಲಹೆ ಮಾಡುತ್ತಿರಬೇಕು.

"ಇಂದಿನ ಮಕ್ಕಳೆ ನಾಳೆಯ ನಾಡ ಕಟ್ಟುವವರು" ಮುಂದೆ ಅವರು ವಕೀಲ, ವೈದ್ಯ, ಇಂಜಿನಿಯರ್, ದೇಶ ಕಾಪಾಡುವ ಸೈನಿಕ ಆಗುತ್ತಾನೋ ಅಥವಾ ನೃತ್ಯ,ಹಾಡು, ಚಿತ್ರಕಲೆಯಲ್ಲಿ ಮುಂದೆ ಬರುತ್ತಾನೋ ಇವುಗಳ ಹೋರತು ಇನ್ನೇನೊ ಸಾಧಿಸಬಹುದು.

ಅವರ ಒಳ್ಳೆಯ ಉದ್ದೇಶವಿರುವ ಗುರಿಗಳಿಗೆ ಸಹಕರಿಸಬೇಕು.

ಮಕ್ಕಳನ್ನು ಕೆಟ್ಟದಾರಿಗೆ ಎಳೆಯುವರಿಂದ ದೂರವಿಡಬೇಕು.ಯಾವುದೆ ಆಮಿಷಕ್ಕೆ ಒಳಗಾಗದ ರೀತಿಯಲ್ಲಿ ನೋಡಿಕೊಳ್ಳಬೇಕು.



Rate this content
Log in