Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Abstract Romance Others

4  

Vijaya Bharathi

Abstract Romance Others

ಓ ಇನಿಯ

ಓ ಇನಿಯ

3 mins
252


ಅಭಯ್ ತನ್ನ ಮಡದಿ ಅಹನಾಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಅವಕಾಶಕ್ಕಾಗಿ ಅನೇಕ ಬಾರಿ ಪ್ರಯತ್ನ ಪಟ್ಟು ಸೋತು ಹೋಗಿದ್ದ. ಮದುವೆಯ ದಿನ ತಾನು ಮಾಡಿಕೊಂಡ ಒಂದೇ ಒಂದು ಎಡವಟ್ಟಿನಿಂದ ಅಹನಾಳ ಮನಸ್ಸು ಒಡೆದು ಹೋಗಿ, ಅವರಿಬ್ಬರ ನಡುವೆ ದಾಂಪತ್ಯದ ಸಂಬಂಧ ಏರ್ಪಡಲೇ ಇಲ್ಲ. ಅದೊಂದು ಒಪ್ಪಂದದ ಮದುವೆ ಎಂದು ಮದುವೆಯ ರಾತ್ರಿಯೇ ಇಬ್ಬರೂ ತೀರ್ಮಾನಿಸಿ ಬಿಟ್ಟಿದ್ದರು. ಅಭಯ್ ,ತನ್ನ ತಾಯಿಯ ಕೊನೆಯ ಆಸೆಯಂತೆ ,ಅವರ ಅಣ್ಣನ ಮಗಳು ಅಹನಾಳನ್ನು ತರಾತುರಿಯಲ್ಲಿ ಮದುವೆಯಾಗಿದ್ದ. ಅವನ ಮನಸ್ಸಿನಲ್ಲಿ ಅವನು ಪ್ರೀತಿಸಿದ್ದ ಮಧು ಹಾಗೆಯೇ ಉಳಿದು ಬಿಟ್ಟಳು. ಇನ್ನೂ ಡಿಗ್ರಿ ಓದುತ್ತಿದ್ದ ಅಹನಾ ತನ್ನ ತಂದೆಯ ಮಾತಿಗೆ ಬೆಲೆಕೊಟ್ಟು, ತನ್ನ ಸೋದರತ್ತೆಯ ಕೊನೆಯ ಆಸೆಯಂತೆ, ಅಭಯ್ ನನ್ನು ಮದುವೆಯಾಗಬೇಕಾಯಿತು. ಮದುವೆಯ ನಂತರವೂ ಅವಳ ಓದನ್ನು ಮುಂದುವರಿಸಲು ಅಭಯ್ ಒಪ್ಪಿದ. ಅಂತೂ ಇಂತೂ ಸಾಯುವವರ ಕೊನೆಯ ಆಸೆಯಂತೆ ಅಭಯ್ ಮತ್ತು ಅಹನಾರ ಮದುವೆ ನಡೆದು ಹೋಯಿತು. ಸೋದರತ್ತೆ ಯ ಮಗನೇ ಆಗಿರುವ ಅಭಯ್ ನೊಂದಿಗೆ ಹೊಂದಿಕೊಂಡು ಹೋಗುವುದು ಕಷ್ಟವಾಗಲಾರದು ಎಂಬ ಭರವಸೆಯೊಂದಿಗೆ ಮದುವೆ ಮಾಡಿಕೊಂಡ ಅಹನಾಗೆ ಮದುವೆಯ ದಿನ ಮೊದಲ ರಾತ್ರಿಯೇ ಅಭಯ್ ನ ಪ್ರೇಯಸಿಯ ಬಗ್ಗೆ ವಿಷಯ ತಿಳಿದುಹೋಗಿ ಅವಳ ಮನಸ್ಸು ಅಭಯ್ ನಿಂದ ದೂರ ಸರಿಯಿತು.


ಅಹನಾ ಮೊದಲ ರಾತ್ರಿ ಗಂಡನ ಬಳಿಗೆ ಬರುವ ಸಮಯಕ್ಕೆ ಸರಿಯಾಗಿ ಅಭಯ್ ತನ್ನ ಪ್ರೇಯಸಿಯೊಂದಿಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಅಹನಾಳಿಗೆ ಮನಸ್ಸು ಮುರಿದು ಹೋಗಿ,ಆ ಕ್ಷಣದಲ್ಲಿ ತಾನು ಹೆಸರಿಗಷ್ಟೇ ಅವನ ಮಡದಿ ಎಂದು ನಿರ್ಧರಿಸಿ ಬಿಟ್ಟಳು. ಅಂದು ರಾತ್ರಿಯೇ ಇಬ್ಬರೂ ಒಂದು ತೀರ್ಮಾನಕ್ಕೆ ಬಂದರು. ತಾವು ಹೊರಗಿನವರ ದೃಷ್ಟಿಯಲ್ಲಿ ಮಾತ್ರ ಗಂಡ ಹೆಂಡತಿಯರಾಗಿ ಉಳಿದು, ಅಹನಾಳ ವಿದ್ಯಾಭ್ಯಾಸ ಮುಗಿದು ಅವಳಿಗೆ ಉದ್ಯೋಗ ಸಿಗುವವರೆಗೂ ಒಬ್ಬರಿಗೊಬ್ಬರು ಜೊತೆಯಾಗಿದ್ದು ನಂತರ ವಿಚ್ಛೇದನ ಪಡೆದು ಅವರವರ ದಾರಿ ನೋಡಿಕೊಳ್ಳುವುದೆಂದು ತೀರ್ಮಾನಿಸಿದರು. ನಂತರ ಮನೆಯವರೆದುರು ಗಂಡ ಹೆಂಡತಿಯರಂತೆ ನಾಟಕವಾಡಲು ಪ್ರಾರಂಭಿಸಿದರು. ಅಹನಾ ತನ್ನ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಳು. ಅಭಯ್ ನ ಮನೆಯಿಂದಲೇ ಕಾಲೇಜ್ ಗೆ ಹೋಗುತ್ತಿದ್ದಳು.

ಹೇಗೋ ಅಹನಾಳಿಗೆ ಡೈವೋರ್ಸ್ ನೀಡಿ, ಬಿಡುಗಡೆ ಹೊಂದಿ ಮತ್ತೆ ತನ್ನ ಪ್ರೇಮಿ ಮಧುವಿನೊಂದಿಗೆ ವಿವಾಹ ಮಾಡಿಕೊಳ್ಳುವುದೆಂದು ಯೋಚಿಸುತ್ತಾ ಕನಸು ಕಾಣುತ್ತಿದ್ದ ಅಭಯ್ಗೆ, ಮಧುವಿಗೆ ಮದುವೆ ಗೊತ್ತಾಯಿತೆಂದು ವಿಷಯ ತಿಳಿದಾಗ ಭ್ರಮನಿರಸನವಾಯಿತು.

ಅತ್ತ ಮಧುವಿನ ಮನೆಯಲ್ಲಿ ಮದುವೆಯ ಏರ್ಪಾಡುಗಳು ತ್ವರಿತಗತಿಯಲ್ಲಿ ಸಾಗುತ್ತಿತ್ತು. ತನ್ನ ಪ್ರೇಯಸಿಯು ಇನ್ನೊಬ್ಬರ ಮಡದಿಯಾಗುತ್ತಿರುವುದನ್ನು ಕಣ್ಣಾರೆ ಕಂಡ ಅಭಯ್ ಗೆ ಇತ್ತ ಹೆಂಡತಿಯ ಪ್ರೀತಿಯೂ ಇಲ್ಲದೆ ,ಅತ್ತ ಪ್ರೇಯಸಿಯ ಪ್ರೀತಿಯೂ ದಕ್ಕದೇ  ಎಡಬಿಡಂಗಿ ಸ್ಥಿತಿ ಗೆ ಬಂದು, ಮಾನಸಿಕವಾಗಿ ಕುಗ್ಗುತ್ತಾ ಬಂದ.


ಇತ್ತೀಚೆಗೆ ಹೆಂಡತಿಯ ಮೇಲೆ ನಿಧಾನವಾಗಿ ಅವನ ಮನಸ್ಸು ತಿರುಗಿ, ಅವಳನ್ನು ಪ್ರೀತಿಸಲು ಪ್ರಾರಂಭಿಸಿದ. ಆದರೆ ಅವನು ಮನಸ್ಸಿನೊಳಗೇ ಇದ್ದ ಪ್ರೀತಿ ಯನ್ನು ಅಹನಾಳಿಗೆ ಹೇಳಿಕೊಳ್ಳಬೇಕೆಂದು ಬೇಕಾದಷ್ಟು ಪ್ರಯತ್ನ ಪಟ್ಟ. ನೇರವಾಗಿ "ನಾನು ನಿನ್ನನ್ನು ಪ್ರೀತಿಸುತ್ತೇನೆ"(ಐ ಲವ್ ಯು) ಎಂದು ಹೇಳಿ ಬಿಡಬೇಕೆಂದು ಕೊಂಡಾಗಲೆಲ್ಲಾ ಯಾವುದಾದರೊಂದು ಅಡ್ಡಿ ತಡೆಯುತ್ತಿತ್ತು. ಅಹನಾ ತನ್ನ ಓದಿನ ಕಡೆಗೆ ಗಮನ ಹರಿಸಿ, ಇವನ ಕಡೆ ಗಮನ ಕೊಡುತ್ತಿರುತ್ತಿರಲಿಲ್ಲ. ತನ್ನ ಗಂಡನ ಹೃದಯದಲ್ಲಿ ಬೇರೆಯವರಿಗೆ ಸ್ಥಾನವಿದ್ದ ಮೇಲೆ ತನಗಲ್ಲಿ ಸ್ಥಾನವಿಲ್ಲ ಎಂದು ಬಲವಾಗಿ ತಿಳಿದಿದ್ದ ಅಹನಾ ,ಅವಳ ಪಾಡಿಗೆ ಅವಳು ಇವನಿಂದ ದೂರವಾಗಿಯೇ ಉಳಿದಳು.


ಅತ್ತ ಪ್ರೇಯಸಿ,ಇತ್ತ ಹೆಂಡತಿ ಇಬ್ಬರಿಂದಲೂ ತಿರಸ್ಕೃತನಾದ ಅಭಯ್, ಎಲ್ಲರಿಂದಲೂ ದೂರವಾಗಿ,

ಯಾರಿಗೂ ತಿಳಿಸದೆ ದೂರದ ದೆಹಲಿಗೆ ವರ್ಗಾವಣೆ ಮಾಡಿಸಿಕೊಂಡು ಒಂಟಿಯಾಗಿ ಹೊರಟು ಬಿಟ್ಟನು.

ಅಭಯ್ ತನ್ನಿಂದ ದೂರವಾಗಿ ದೆಹಲಿಗೆ ವರ್ಗಾವಣೆ ಮಾಡಿಸಿಕೊಂಡು ಹೊರಟುಬಿಟ್ಟ ವಿಷಯ ತಿಳಿದ ಅಹನಾಗೆ ತುಂಬಾ ಬೇಸರವಾಗತೊಡಗಿತು.ಅವರಿಬ್ಬರ ನಡುವೆ ಗಂಡ ಹೆಂಡಿರ ಯಾವುದೇ ಸಂಬಂಧ ವಿರದಿದ್ದರೂ, ಇಬ್ಬರೂ ಒಬ್ಬರಿಗೊಬ್ಬರು ಗೆಳೆಯರಂತೆ ಇದ್ದು, ಏನಾದರೊಂದು ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು.ಹೀಗಾಗಿ ಅಭಯ್ ನ ಅನುಪಸ್ಥಿತಿ ಅಹನಾಗೆ ಬೇಸರ ತರಿಸಿತ್ತು.

ಅವಳಿಗೆ ಪ್ರತಿಕ್ಷಣವೂ ಅಭಯ್ ನ ನೆನಪಾಗುತ್ತಲೇ ಇತ್ತು.ತನ್ನ ಜೊತೆಗಾರನಿಗಾಗಿ ಅವಳು ಹಂಬಲಿಸುತ್ತಿದ್ದಳು.

"ಹೋದೆಯಾ ದೂರ ಓ ಜೊತೆಗಾರ" ಅವಳ ಕಿವಿಯಲ್ಲಿ ಗುಂಗಾನ ಮಾಡುತ್ತಿತ್ತು.

ಅಭಯ್ ಗೆ ಫೋನ್ ಮಾಡಿದರೆ ಅವನು ರಿಸೀವ್ ಮಾಡುತ್ತಲೇ ಇರಲಿಲ್ಲ. ಮೆಸೇಜ್ಗೆ ಉತ್ತರಿಸುತ್ತಿರಲಿಲ್ಲ.

ಅಹನಾ ಗಂಡನ ಅನುಪಸ್ಥಿತಿಯಲ್ಲಿ ಖಿನ್ನತೆಯಿಂದ ಬಳಲುತ್ತಿರುವುದನ್ನು ನೋಡಿದ ಅಹನಾಳ ತಂದೆ ತಾಯಿ ಇಬ್ಬರೂ ಅಳಿಯನನ್ನು ಹುಡುಕಿಕೊಂಡು ದೆಹಲಿಗೆ ಹೋಗಿ, ಮಗಳು ಅವನಿಗಾಗಿ ಹಂಬಲಿಸಿ ಖಿನ್ನತೆಯಿಂದ ಬಳಲುತ್ತಿರುವುದನ್ನು ತಿಳಿಸಿದಾಗ, ಅಭಯ್ ಗೆ ಅಹನಾಳನ್ನು ನೋಡಬೇಕೆನಿಸಿ, ಆಫೀಸಿಗೆ ರಜ ಹಾಕಿ, ತನ್ನ ಅತ್ತೆ ಮಾವನ ಜೊತೆ ಬೆಂಗಳೂರಿಗೆ ಹೊರಟನು.


ಅಭಯ್ ತನ್ನನ್ನು ಹುಡುಕಿಕೊಂಡು ಬರುವುದಿಲ್ಲವೆಂದು ಬಲವಾಗಿ ನಂಬಿದ್ದ ಅಹನಾಳಿಗೆ , ಅವನು ತನ್ನ ಅಪ್ಪ ಅಮ್ಮನ ಜೊತೆ ಮನೆಗೆ ಮರಳಿದಾಗ , ಅವನನ್ನು ನೋಡಿ ಅವಳ ಮನಸ್ಸಿನಲ್ಲಿ ನೂರು ರಾಗಗಳು ಆಲಾಪಿಸಿದವು. ಮುಖ ರಾಗರಂಜಿತವಾಯಿತು. ಖುಷಿಯಿಂದ ನೂರು ಭಾವಗಳು ಅವಳ ಮುಖದಲ್ಲಿ ಅರಳಿದವು.


ಅಂದು ರಾತ್ರಿ ಎಂದಿನಂತೆ ಅಭಯ್ ಸೋಫಾದ ಮೇಲೆ ಮಲಗುವುದಕ್ಕೆ ಹೋದಾಗ, ಅಹನಾ ಅವನನ್ನು ತಡೆದು ಮಂಚದಲ್ಲಿ ಮಲಗಿಕೊಳ್ಳುವಂತೆ ಹೇಳಿದಾಗ, ಅಭಯ್ ನ ಹೃದಯದಲ್ಲಿ ಅಹನಾಳ ಬಗ್ಗೆ ಪ್ರೇಮ ಲಹರಿಗಳೆದ್ದವು. ಕಡೆಗೆ ಮದುವೆಯಾಗಿ ಒಂದು ವರ್ಷ ದ ಮೇಲಾದರೂ ತನ್ನೊಳಗಿನ ಒಲವನ್ನು ಅಹನಾಳಿಗೆ ತಿಳಿಸುವ ಅವಕಾಶವಾಯಿತಲ್ಲಾ ಎಂದು ಮನದಲ್ಲೇ ಖುಷಿಪಟ್ಟು, ಅವಳೊಂದಿಗೆ ಮನಬಿಚ್ಚಿ ಮಾತನಾಡಿ ತನ್ನ ಮನದ ಪ್ರೀತಿಯನ್ನು ಹೇಳಿಕೊಂಡರೆ, ಅಹನಾ ಅವನನ್ನು ಬಿಟ್ಟು ಬದುಕುವುದು ತುಂಬಾ ಕಷ್ಟವೆಂದು ಹೇಳಿಕೊಂಡಳು. ಇಬ್ಬರ ನಡುವೆ ಇದ್ದ ದೂರ ಕಡಿಮೆಯಾಗಿ ಇಬ್ಬರೂ ಹತ್ತಿರ ವಾದರು. ಇಬ್ಬರ ಮನಗಳೂ ತಿಳಿಗೊಳವಾಯಿತು. ಅದರಲ್ಲಿ ಅವರಿಬ್ಬರೂ ವಿಹರಿಸಿದರು. ಇಬ್ಬರ ದೇಹ ಮನಸ್ಸುಗಳೂ ಬೆರತವು.



Rate this content
Log in

Similar kannada story from Abstract