Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Drama Inspirational Others

4  

Shridevi Patil

Drama Inspirational Others

ಆಕೆ, ಯಾರ ಮಗಳು? ಭಾಗ 1.

ಆಕೆ, ಯಾರ ಮಗಳು? ಭಾಗ 1.

2 mins
563


ಬಾಲ್ಯ ವಿವಾಹ ಆಗಿದ್ದ ರತ್ನಮ್ಮ ತನಗಿಂತ ಇಪ್ಪತ್ತಮೂರು ವರ್ಷ ವಯಸ್ಸಿನ ಗಂಡನೊಡನೆ ಸಂಸಾರ ಮಾಡಬೇಕಾಗಿತ್ತು. ಆತನಿಗೆ ಮೂವತ್ತೈದು ವರ್ಷವಾದಾಗ ರತ್ನಮ್ಮನಿಗೆ ಕೇವಲ ಹನ್ನೆರಡು ವರ್ಷ ಅಷ್ಟೇ. ಅಲ್ಲಿ ವಯಸ್ಸಿಗೆ ಬೆಲೆ ಇರಲಿಲ್ಲ. ಕೇವಲ ಮದುವೆ ಎನ್ನುವ ಆ ಪದಕ್ಕೆ ಬೆಲೆಯಿತ್ತೇನೋ ಅನ್ನುವಂತೆ ರತ್ನಮ್ಮನ ಅಪ್ಪ ಅಮ್ಮ ಆಕೆಯನ್ನು ಮದುವೆ ಎನ್ನುವ ಹೆಸರಲ್ಲಿ ಕೃಷ್ಣಪ್ಪನಿಗೆ ಧಾರೆಯೆರೆದು ಕೊಟ್ಟಿದ್ದರು. ಅವನ ಜೊತೆ ಮದುವೆಯಾಯ್ತು ಎನ್ನುವುದರೊಳಗೆ ಶಾಸ್ತ್ರದ ಹೆಸರಲ್ಲೊ ಅಥವಾ ಮದುವೆಯಾಗಿ ಮನೆಯಲ್ಲಿ ತಮ್ಮ ಮಗಳನ್ನು ಹೆಚ್ಚು ದಿನ ಇಟ್ಟುಕೊಂಡರೆ ಸಮಾಜ ಏನೆನ್ನುತ್ತದೆಯೋ ಅನ್ನುವ ಭಯದಲ್ಲೋ ರತ್ನಮ್ಮನನ್ನು ಗಂಡನ ಮನೆಗೆ ಕಳುಹಿಸಿಯೇ ಬಿಟ್ಟರು. ಆಕೆ ಮೈನೆರೆತು ಕೂಡ ಮೂರು ತಿಂಗಳಾಗಿರಲಿಲ್ಲ. ಹಾಗಾದರೆ ಮುಟ್ಟಿನ ಬಗ್ಗೆಯೇ ಅರಿವಿಲ್ಲದಾಕೆಗೆ ಮದುವೆ , ಸಂಸಾರದ ಬಗ್ಗೆ ಇನ್ನೇನು ತಿಳಿದಿರುತ್ತೆ ನೀವೇ ಹೇಳಿ?


ಆಟ ಆಡಬೇಕಾದ ವಯಸ್ಸಲ್ಲಿ ಮದುವೆ ಮಾಡಿ ಕಳುಹಿಸಿ ಅಪ್ಪ ಅಮ್ಮ ಜವಾಬ್ದಾರಿಯಿಂದ ಮುಕ್ತರಾದೆವು ಎಂದುಕೊಳ್ಳುತ್ತಾರೆ. ಆದರೆ ಅಲ್ಲಿ ತಮ್ಮ ಮಗಳ ಹೆಗಲ ಮೇಲೆ ಎಂತಹ ಜವಾಬ್ದಾರಿ ಬೀಳುತ್ತದೆ ಎನ್ನುವ ಸಣ್ಣ ಅರಿವಾದರೂ ರತ್ನಮ್ಮನ ಅಪ್ಪ ಅಮ್ಮನಿಗೆ ಇದ್ದಿದ್ದರೆ ಆವತ್ತು ಮಗಳ ಮದುವೆಯನ್ನು ಆ ವಯಸ್ಸಾದ ಕೃಷ್ಣಪ್ಪನ ಜೊತೆಗೆ ಮಾಡುತ್ತಿರಲಿಲ್ಲ. ಏನೇ ಆದರೂ ಮದುವೆ ಆದ ಮೇಲೆ ಅತ್ತೆ ಮನೆಗೆ ಸೊಸೆಯಾಗಿ ಹೋದ ಮೇಲೆ ಚಿಕ್ಕವರಿರಲಿ , ದೊಡ್ಡವರಿರಲಿ ಸೊಸೆಯಾಗಿ ಮಾಡಬೇಕಾದದ್ದನ್ನು ಮಾಡಲೇಬೇಕಲ್ಲ. ಇಲ್ಲಿಯೂ ಕೂಡ ಆದದ್ದು ಅದೇ.


ರತ್ನಮ್ಮನ ಗಂಡನ ಮನೆಯಲ್ಲಿ ಅತ್ತೆ ಮಾವ ಇದ್ದರು . ಒಬ್ಬಳು ಗಂಡ ಬಿಟ್ಟು ಬಂದ ತನ್ನ ಗಂಡನ ಸೋದರತ್ತೆ ಇದ್ದಳು. ಅತ್ತೆ ಮಾವನಿಗೆ ವಯಸ್ಸಾಗಿತ್ತು. ಕುಳಿತಲ್ಲಿಯೇ ಮಾವನ ಪ್ರತಿಯೊಂದು ಕೆಲಸವನ್ನು ಮಾಡಬೇಕಾಗಿತ್ತು. ಇಲ್ಲಿಯವರೆಗೂ ಆಕೆಯ ಅತ್ತೆಗೆ ಮಾಡಿ ಮಾಡಿ ಸುಸ್ತಾಗಿತ್ತೋ ಏನೋ , ರತ್ನಮ್ಮ ಮದುವೆಯಾಗಿ ಮನೆಗೆ ಬಂದ ದಿನದಿಂದ ಎಲ್ಲ ಕೆಲಸಗಳೂ ಆಕೆಯ ಪಾಲಿಗೆ ಇದ್ದವು. ಆ ಮಾವನ ಚಾಕರಿಯನ್ನು ಆಕೆಯೇ ಮಾಡಬೇಕಾಗಿತ್ತು. ಗಂಡನ ಸೋದರತ್ತೆಯ ದರಬಾರು ಬೇರೆ. ಪಾಪ ರತ್ನಮ್ಮ ಏನನ್ನು ಅನ್ನದೇ ಎಲ್ಲವನ್ನು ಮಾಡಿಕೊಂಡು ಹೋಗುತ್ತಿದ್ದಳು.


ಒಮ್ಮೊಮ್ಮೆ ಅತ್ತೆ ಬಾಯಿಗೆ ಬಂದಂತೆ ಬೈಯುತ್ತಿದ್ದಳು. ಅಡುಗೆ ಮಾಡಲು ಬರುವುದಿಲ್ಲವೆಂದು ತಿವಿದು ಏನೇನೋ ಅನ್ನುತ್ತಿದ್ದಳು. ಆದರೂ ರತ್ನಮ್ಮ ತನ್ನ ತಂದೆ ತಾಯಿಗೆ ಏನೊಂದು ವಿಷಯವನ್ನೂ ಹೇಳುತ್ತಿರಲಿಲ್ಲ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಅಕ್ಕ ತಂಗಿಯರೂ ಇರಲಿಲ್ಲ , ತನ್ನ ಸಹಾಯಕ್ಕೆ ಅಂತ ಒಡಹುಟ್ಟಿದ ಅಣ್ಣ ತಮ್ಮಂದಿರು ಸಹ ಇರಲಿಲ್ಲ. ಒಬ್ಬಳೇ ಮಗಳು. ಯಾರಿಗೆ ಹೇಳಿಕೊಳ್ಳಬೇಕು ತನ್ನ ನೋವನ್ನು. ಗಂಡನೋ ವಿಚಿತ್ರ ಸ್ವಭಾವದ ಪ್ರಾಣಿಯಂತೆ ಇದ್ದನು. ತನ್ನ ಚಪಲ ತೀರಿದರೆ ಸಾಕೆನ್ನುವ ಹೊಲಸು ಮನಸ್ಸುಳ್ಳವನು. ಅವಳು ತನ್ನ ಹೆಂಡತಿ ಎಂದು ಆಕೆಯ ಬೇಕು ಬೇಡಗಳನ್ನು ಒಮ್ಮೆಯಾದರೂ ಕೇಳಿದವನಲ್ಲ. ಆಕೆಯ ಮನಸ್ಥಿತಿಯನ್ನು ಒಮ್ಮೆಯೂ ಅರ್ಥೈಸಿಕೊಳ್ಳಲು ಪ್ರಯತ್ನಿಸಿದವನೂ ಅಲ್ಲ. ಹಗಲೆಲ್ಲ ಹೊಲದ ಕೆಲಸ , ಬಂದ ಮೇಲೆ ಅಮ್ಮನ ಜೊತೆ ಮಾತು , ರಾತ್ರಿಯಾದರೆ ಮಂಚ ಮಂಚದ ಮೇಲೆ ಹೆಂಡತಿ ಬೇಕೇ ಬೇಕು , ಇಷ್ಟೇ ಆತನ ದಿನಚರಿ. ಕೇವಲ ರತ್ನಮ್ಮ ಆತನಿಗೆ ತನ್ನ ಚಟ ನೀಗಿಸಿಕೊಳ್ಳಲು ಮಾತ್ರ ಬೇಕಿತ್ತು .


ಪಾಪ ರತ್ನಮ್ಮನ ಕಷ್ಟ ಕೇಳುವವರಿಲ್ಲದೆ , ಕೇವಲ ಒಂದು ಜೀತದ ಆಳಿನ ತರಹ ಕೆಲಸ ಮಾಡಿಕೊಂಡು ಇರಬೇಕಾದ ಅನಿವಾರ್ಯತೆ ಆಕೆಗಿತ್ತು. ಅಪ್ಪ ಅಮ್ಮ ತಮ್ಮ ಬಡತನದ ಸಮಸ್ಯೆಯಲ್ಲಿ ಮಗಳ ಬಗ್ಗೆ ಯೋಚಿಸುವುದೇ ಕಷ್ಟವಾಗಿತ್ತು. ಅವಳು ಆರಾಮಾಗಿದ್ದಾಳೆ ಬಿಡು ಎನ್ನುವ ನಂಬಿಕೆಯಲ್ಲಿ ತಾವಾಯಿತು ,ತಮ್ಮ ಕೆಲಸವಾಯಿತು ಅಂತ ಇದ್ದರು. ಅವಳಾದರೂ ಏನನ್ನೂ ಹೇಳುತ್ತಿರಲಿಲ್ಲ. ಹೀಗಾಗಿ ಮಗಳು ಚೆನ್ನಾಗಿದ್ದಾಳೆಂದು ತಿಳಿದಿದ್ದರು.


ಮುಂದುವರೆಯುತ್ತದೆ....


Rate this content
Log in

Similar kannada story from Drama