Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Classics Inspirational Others

4.5  

shristi Jat

Classics Inspirational Others

ಹಣ

ಹಣ

2 mins
244


ಹಣ ನಮ್ಮ ಜೀವನದ ಕೇಂದ್ರ ಬಿಂದು ಇದ್ದ ಹಾಗೆ ಯಾವ ಹಾದಿ ಹಿಡಿದರು ಇದರ ಸಹಾಯದಿಂದ ದಡ ಸೇರುತ್ತೇವೆ.ಇವತ್ತಿನ ದಿನ ಹಣ ಇಲ್ಲದೆ ಯಾವ ಕೆಲಸ ಆಗುವುದಿಲ್ಲ ನಮ್ಮ ಕಲಿಕೆಯಿಂದಿಡಿದು ಸಾಧನೆ ಮೆಟ್ಟಿಲು ಹತ್ತುವುದಕ್ಕು ಹಣಬೇಕು.

"ಬೇಕೆಮಗೆ ಹಣ ಹಸಿವು ನೀಗಿಸಲು"         

"ಬೇಕೆಮಗೆ ಹಣ ವಸ್ತು ಖರಿದಿಸಲು"         

"ಬೇಕೆಮಗೆ ಹಣ ಬೇಳಕು ಬರಿಸಲು"           

"ಬೇಕೆಮಗೆ ಹಣ ಪ್ರಯಾಣಿಸಲು"             

"ಬೇಕೆಮಗೆ ಹಣ ಗುರಿ ತಲುಪಲು"

ಹಣದಿಂದ ಎಲ್ಲಾ ಕೇಲಸ ಆಗುವುದರಿಂದ ಹಣ ಗಳಿಸುವ ಹಾದಿ ಹುಡಿಕಿರಬೇಕು.ಕೆಲಸ ಯಾವುದೇ ಇರಲಿ ನೀನಗೆ ಆ ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದರೆ ಅದರಿಂದ ಬರುವ ಹಣದ ಜೊತೆಗೆ ನೆಮ್ಮದಿಯೂ ಗಳಿಸುತ್ತಿಯ ಹಣ ಒಂದು ತೀರ ತಲುಪಿಸುವ ದೋಣಿ.ಹಾಳಾಗುವುದಕ್ಕೆ ಸಹಕಾರಿಯಾಗುತ್ತದೆ ಮತ್ತು ಉದ್ದಾರ ಆಗುವುದಕ್ಕೂ ಸಹಕಾರಿಯಾಗುತ್ತದೆ ಆಯ್ಕೆ ನಮಗೆ ಬಿಟ್ಟಿದ್ದು ಹಾಗಂತ ಹಣ ಗಳಿಸುವ ಆಸೆ ಇದ್ದರೆ ತಪ್ಪಲ್ಲ ಎಲ್ಲಿಂದ ಮತ್ತು ಹೇಗೆ ಗಳಿಸುತ್ತಿಯ ಅನ್ನೋದು ಮುಖ್ಯ ಆಗುತ್ತದೆ ಯಾಕೆಂದರೆ ಹಣದ ಆಮಿಷಕ್ಕಾಗಿ ಇವತ್ತಿನ ದಿನ ದರೋಡೆ, ಕೊಲೆ,ವಂಚನೆ,ಸುಲಿಗೆಯಂತಹ ಕೆಟ್ಟ ಕೆಲಸಗಳಿಗೆ ಕೈ ಹಾಕುತಿದ್ದಾರೆ. ಹಾಗೂ ತಂಬಾಕು,ಗುಟ್ಕಾ,ಮಧ್ಯಪಾನ,ಧೂಮಪಾನ, ಗಾಂಜಾ, ಡ್ರಗ್ಸ್ ನಂತಹ ಮಾದಕ ತುಂಬಿದ ಆರೋಗ್ಯ ಹಾನಿಕಾರಕ ವ್ಯವಹಾರಗಳು ಹೆಚ್ಚುತ್ತಿವೆ. ಹಣದ ಅವಶ್ಯಕತೆಯೂ ತುಂಬಾ ಇದೆ ಹಾಗೆ ಗಳಿಸುವ ಅವಕಾಶಗಳು ಅಷ್ಟೆ ಇವೆ ಉದ್ದೇಶವಿದ್ದರೆ ಹಲವಾರು ಕೆಲಸಗಳು ನಿಮಗೋಸ್ಕರ ಮತ್ತು ನಿಮ್ಮ ಜ್ಞಾನಕ್ಕಾಗಿ ಖಾಲಿ ಕೂತಿವೆ.ಯಾವ ಕ್ಷೇತ್ರದಿಂದ ಅದು ನಿಮಗೆ ಬಿಟ್ಟಿದ್ದು ಜನರಿಗೆ ಮತ್ತು ಜಗತ್ತಿಗೆ ಒಳಿತಾಗುವಂತಹ ಕೆಲಸಗಳು ಅಲ್ಲದೆ ಅನೇಕ ವ್ಯವಹಾರಗಳಿವೆ ಉದಾಹರಣೆಗೆ ಕೃಷಿ ಅಭಿವೃದ್ಧಿಯಿಂದ, ಶಿಕ್ಷಣದ ಅಭಿವೃದ್ಧಿಯಿಂದ, ಕೈಗಾರಿಕಾ ಅಭಿವೃದ್ಧಿಯಿಂದ ಮತ್ತು ಆರೋಗ್ಯ ಅಭಿವೃದ್ಧಿ ಇತ್ಯಾದಿ ವಲಯಗಳಿಂದ ನಾವು ಹಣವನ್ನು ಮಾಡಬಹುದು.ಹಣದ ಜೊತೆ ಜನರನ್ನು ಮತ್ತು ಪ್ರಕೃತಿಯನ್ನು ಕಾಪಾಡಬಹುದು.

ಒಂದು ವೇಳೆ ನೀನು ಗಳಿಸಿದ್ದೆ ಆದಲ್ಲಿ ಅದನ್ನು ಹೇಗೆ ಖರ್ಚು ಮಾಡ್ತಿಯ ಅನ್ನೋದು ಮುಖ್ಯ ಆಗುತ್ತದೆ ಯಾಕೆಂದರೆ ನೀನು ಗಳಿಸಿದ್ದು ನಿನ್ನ ಸ್ವಂತಿಕೆಗೆ ಬಳಸು ಇಲ್ಲ ಹೆಚ್ಚಾದಲ್ಲಿ ದಾನಮಾಡು ಜನರ ಕಷ್ಟ ನೀಗಿಸಲು ಹಾಗೂ ಅವರು ಅಭಿವೃದ್ಧಿ ಹೊಂದಲು ಹೋರತು ಜನ ಮತ್ತು ಜಗತ್ತು ಹಾಳು ಹಾಳುಮಾಡುವುದಕ್ಕಲ್ಲ.

ಜಗತ್ತು ಭೂಮಿ ಮೇಲೆ ಅಲ್ಲ ಹಣದ ಮೇಲೆ ನಿಂತಿದೆ ಅಂದರೆ ತಪ್ಪಲ್ಲ ಯಾಕೆಂದರೆ ನಾವು ತಿನ್ನುವ ಆಹಾರಕ್ಕಾಗಿ ಹಣಬೇಕು,ನಾವು ತೊಡುವ ಬಟ್ಟೆಗೆ ಹಣಬೇಕು ಮತ್ತು ಓಡಾಡಲು ಹಣಬೇಕು.

ಎಷ್ಟೋ ಜನರ ಬದುಕು ಹಣವಿಲ್ಲದೆ ಅವರ ಪ್ರತಿಭೆ ಗುರುತಿಸಿಕ್ಕಾಗದೆ ಮುಚ್ಚಿ ಹೋಗಿವೆ.ಬಡತನ ಬೆಗೆಯಿಂದ ಶಿಕ್ಷಣ ಕಲಿಯುದು ಅಸಾಧ್ಯವಾಗಿದೆ.

"ಹಣಕ್ಕಿರುವ ಬೆಲೆ ಮನುಷ್ಯನಿಗಿಲ್ಲ" ಇತ್ತಿಚಿನ ವಾಡಿಕೆ ನಿಜವಾಗುತ್ತಿದೆ ಏಕೆಂದರೆ ಮನುಷ್ಯ ಕಂಡು ಹಿಡಿದು ಚಾಲನೆಗೆ ತಂದ ವಸ್ತು ಮನುಷ್ಯನಿಗೆ ಬೆಲೆ ಸಿಗದೆ ರೀತಿಗೆ ಮಾರ್ಪಡಿಸುತಿದ್ದಾರೆ.

ಹಣವನ್ನು ವ್ಯಾಮೋಹದ ಜಾಲಿಯನ್ನಾಗಿ ಮಾಡಿಕೋಂಡಿರುವುದೆ ಹೆಚ್ಚು ಏನನ್ನಾದರು ಖರಿದಿಸುವ ಶಕ್ತಿ ಇದರಲ್ಲಿದೆಯಂದು. ಹಣದ ವ್ಯಾಮೋಹ ಹೆಚ್ಚುವುದರ ಜೊತೆಗೆ ಹಣ ಸುಲಿಗೆ ಮಾಡುವ ದುರ್ವ್ಯವಹಾರಗಳು ಹೆಚ್ಚುತ್ತಿವೆ.

ಹಣದ ವ್ಯಾಮೋಹ ಕಲೆಯಿಂದ, ಪ್ರತಿಭೆಯಿಂದ,ಶ್ರಮದಿಂದ, ದುಡಿಮೆಯಿಂದ ಬರುವ ವ್ಯಾಮೋಹವಾಗಿ ಪರಿವರ್ತನೆಗೋಳ್ಳಬೇಕು.


 


Rate this content
Log in

Similar kannada story from Classics