Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Drama Classics Inspirational

3  

shristi Jat

Drama Classics Inspirational

ಚಲನಚಿತ್ರ

ಚಲನಚಿತ್ರ

1 min
152


ಹಿಂದಿನ ದಿನಗಳಲ್ಲಿ ಕಿರು ನಾಟಕ ಮಾಡುತಿದ್ದರು. ಊರಿನ ಜಾತ್ರೆಗಳಲ್ಲಿ ಒಂದು ದಿನದ ಜನರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಇನ್ನೂ ಕೆಲವು ಹಳ್ಳಿಗಳಲ್ಲಿ ನಾಟಕ ಮಾಡುವುದನ್ನು ಹೆಳಿಕೊಡುವ ಮೇಷ್ಟ್ರನ ಹುಡುಕಿ ಊರಿನ ಜನರೆ ನಾಟಕ ಮಾಡುತಿದ್ದರು ಈಗಲೂ ಸಹ ಮಾಡುತ್ತಾರೆ ಕೆಲವು ಕಡೆ ಮೇಷ್ಟ್ರು ಊರಿನ ಜನರಿಗೆ ಅವರಿಗೆ ಒಪ್ಪುವ ಪಾತ್ರ ಕೊಟ್ಟು ಡೈಲಾಗ್(ಸಂಭಾಷಣೆ) ಬರೆದು ಕೊಟ್ಟು ಕಂಠಪಾಠ ಮಾಡಲು ಹೆಳುತಿದ್ದರು. ಬಯಲಾಟ ಇದನ್ನು ದೊಡ್ಡಾಟ ಅಂತಾನೂ ಕರೆಯುತ್ತಾರೆ ಯಾಕೆಂದರೆ ಈ ನಾಟಕ ೧೦ ಗಂಟೆ ಮೇಲೆ ತೆಗೆದುಕೊಳ್ಳುತ್ತದೆ. ಊರಿನ ಜನ ೬ತಿಂಗಳಿಗಿಂತ ಮೊದಲೆ ಕಥಾ ಸಂಭಾಷಣೆಯ ಅಭ್ಯಾಸ ಮಾಡುತ್ತಿರುತ್ತಾರೆ.ಇದರಲ್ಲಿ ಹೆಚ್ಚಾಗಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತ ಆಧಾರವಾಗಿಟ್ಟುಕೊಂಡು ನಾಟಕ ಮಾಡುವರು. ರಾತ್ರಿಯಿಡೀ ಕೂತು ಜನರು ಆಸಕ್ತಿಯಿಂದ ನೋಡುವರು. ಸಣ್ಣಾಟ ಎಂದರೆ ಇದೊಂದು ಜಾನಪದ ಕುಣಿತ ವಾಗಿದೆ.ಇನ್ನು ಯಕ್ಷಗಾನ ,ರಂಗಭೂಮಿ ನಾಟಕ ಇತ್ಯಾದಿ ಇವೆಲ್ಲವು ಸೆರಿ ಇಂದು ಚಲನಚಿತ್ರಗಳಾಗಿ ರೂಪುಗೊಂಡಿವೆ."ನಾಟಕ" ಒಂದು ದೊಡ್ಡ ಕಲೆ "ಚಲನಚಿತ್ರಗಳು ಮನೋರಂಜನೆ ಕೊಡುವುದಲ್ಲದೆ ಮನುಷ್ಯನ ಮೇಲೆ ತುಂಬಾ ಪರಿಣಾಮ ಬೀರುತ್ತವೆ." ಎಷ್ಟೋ ಸಿನಿಮಾಗಳು ಜನರಿಗೆ ಸ್ಪೂರ್ತಿ ಮತ್ತು ಪ್ರೇರಕವಾಗಿವೆ ಚಲನಚಿತ್ರಗಳು ವಾಸ್ತವಿಕ ಘಟನೆಗಳು ಮತ್ತು ಭೌತಿಕ ಘಟನೆಗಳ ಮೇಲೆ ಮಾಡುವುದಲ್ಲದೆ ಜನರಲ್ಲಿ ಸಾಧನೆಗಳನ್ನು ಮಾಡುವ ಭಾವನೆ ಮೂಡಿಸವಂತಾಗಿರುತ್ತವೆ.ಯಾಕೆಂದರೆ ಸಿನಿಮಾ ನೋಡುವಾಗ ನಮ್ಮ ಏಕಾಗ್ರತೆ ಜಾಸ್ತಿ ಇರುತ್ತದೆ ಉದಾಹರಣೆಗೆ ನಾವು ಪುಸ್ತಕ ಓದಿ ತಿಳಿದುಕೋಳ್ಳವುದಕ್ಕೆ ಸ್ವಲ್ಪ ಸಮಯ ಜಾಸ್ತಿ ತೆಗೆದುಕೊಳ್ಳುತ್ತದೆ.ಅದೆ ವಿಷಯವನ್ನು ನಾವು ವಿಡಿಯೋ ಅಥವಾ ಪ್ರೋಜೆಕ್ಟರ್ ಮುಖಾಂತರ ನೋಡಿದರೆ ಬೇಗ ಅರ್ಥ ಮಾಡಿಕೊಳ್ಳುತ್ತೆವೆ.ಚಲನಚಿತ್ರಗಳು ಎಲ್ಲಾ ಕ್ಷೇತ್ರಗಳ ಬಗ್ಗೆ ಸುಂದರವಾಗಿ ನಿರ್ಮಾಣ ಮಾಡುತ್ತಾರೆ.ರಾಜಕೀಯ, ಸೈನಿಕರ, ರೈತರ ಮತ್ತು ಶಿಕ್ಷಣ ಹಾಗೂ ಕ್ರೀಡಾ ವಿಜೆತರ ಇತ್ಯಾದಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಲನಚಿತ್ರಗಳು ತುಂಬಾ ಇವೆ ಇನ್ನು ಮಾಡಬೇಕು ಚಲನಚಿತ್ರಗಳಲ್ಲಿ ಮೂಡಿಬರುವ ಒಳ್ಳೆಯದನ್ನು ತೆಗೆದುಕೊಂಡು ಕೆಟ್ಟದನ್ನು ಜನರು ಮನೋರಂಜನೆಯಾಗಿ ತೆಗೆದುಕೊಳ್ಳಬೇಕು.ನಾಟಕ ಒಂದು ಕಲೆ ಒಂದು ವೃತ್ತಿ ಎಲ್ಲಾ ಕ್ಷೇತ್ರಗಳಲ್ಲೂ ಇದೊಂದು         

  "ಚಲನಚಿತ್ರಗಳು ಜನರ ದೃಷ್ಟಿಕೋನ ಬದಲಾಯಿಸುತ್ತದೆ" ನಮ್ಮ ಜೀವನದ ನೋವು ಮತ್ತು ಕಷ್ಟಗಳನ್ನು ಕಡಿಮೆ ಮಾಡುತ್ತದೆ. ಅದಕ್ಕೆ ಜನರು ಇದನ್ನು ಅನುಸರಿಸುತ್ತಾರೆ.


Rate this content
Log in

Similar kannada story from Drama