Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Drama Romance Others

4.5  

shristi Jat

Drama Romance Others

ಅಪರಿಚಿತ

ಅಪರಿಚಿತ

4 mins
322



ಪದವಿ ಪೂರ್ವ ಕಾಲೇಜಿನ ಪ್ರವೇಶ ಪ್ರಾರಂಭವಾಗಿತ್ತು. ತರುಣ್ ತನ್ನ ಕೆಲ ಸ್ನೇಹಿತರೊಂದಿಗೆ ಇಂಜಿನಿಯರಿಂಗ್ ಪ್ರವೇಶ ಮಾಡಲು ಹೋದನು. ಅಲ್ಲಿ ವಿಪರಿತ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಲು ಕಾಲೇಜಿನ ಆಫೀಸ್ನಲ್ಲಿ ನಿಂತಿದ್ದರು.

ತರುಣ್ ಗೆಳೆಯ ಕಾರ್ತಿಕ್ ಏನೋ ಇಷ್ಟು ಜನ ಇದ್ದಾರೆ ನಮ್ ಸರದಿ ಯಾವಾಗ ಬರುತ್ತೆ. ನಿಖಿಲ್ ಪಕ್ಕ ನಾಳೆನೆ ಅನ್ಸುತ್ತೆ! ನಗಾಡಿದ ಕಾರ್ತಿಕ್, ನಂಗೂ ಹಾಗೆ ಅನ್ಸುತ್ತೆ ತರುಣ್ ಸುಮ್ನಿರ್ರೊ ಹಾಗನ್ಸುತ್ತೆ ಅಷ್ಟೆ ಪ್ರವೇಶ ಆಗ್ತಿದ್ದಂತೆ ಖಾಲಿಯಾಗ್ತಾರೆ ಅಲ್ಲಿವರೆಗೂ ಕಾಯ್ದರಾಯ್ತು ನಮ್ ಸರದಿ ಬರುತ್ತೆ ನಿಖಿಲ್ ಗೋತ್ತು ಕಣೋ ಸುಮ್ನೆ ತಮಾಷೆ ಮಾಡಿದೆ.

ಪ್ರವೇಶಗಳು ಆಗ್ತಿದ್ದಂತೆ ಅರ್ಧದಷ್ಟು ವಿದ್ಯಾರ್ಥಿಗಳು ಖಾಲಿಯಾದರು ಆನ್ ಲೈನ್ ನಲ್ಲಿ ಪ್ರವೇಶಗಳು ನಡೆದ ಕಾರಣ ಕೆಲವೊಮ್ಮೆ ಇಂಟರ್ನೆಟ್ ನ ಸಮಸ್ಯೆಯಿಂದ ನಿಧಾನ ಆಗ್ತಾಯಿತ್ತು.

ಕೊನೆಗೆ ತರುಣ್ ಮತ್ತು ಸ್ನೇಹಿತರ ಸರದಿಯು ಬಂತು ಕಾರ್ತಿಕ್ ಮತ್ತು ನಿಖಿಲ್ ನ ಪ್ರವೇಶವು ಮುಗಿಯಿತು. ತರುಣ್ ನ ಪ್ರವೇಶ ಮಾಡುವಾಗ ಇಂಟರ್ನೆಟ್ ಪೂರ್ತಿ ನಿಧಾನವಾಗಿತ್ತು ಕಾಲೇಜಿನ ವೆಬ್ ಸೈಟ್ ನಲ್ಲಿ ಆಯ್ಕೆಗಳು ಕ್ಲಿಕ್ ಆಗ್ತಾ ಇರಲಿಲ್ಲ.

ಕೊನೆಗೆ ಕಂಪ್ಯೂಟರನ್ನು ರಿಸ್ಟಾರ್ಟ್ ಮಾಡಿದರು ಕ್ಲರ್ಕ್ ಸರ್ ರವರು ಆದರೆ ಈ ಭಾರಿ ವೆಬ್ ಸೈಟ್ ಓಪನ್ ಆಗುತ್ತಿರಲಿಲ್ಲ ಸರ್ ಅವರು ಟೀ ಕುಡಿದು ಬರುವೆ ಇಂಟರ್ನೆಟ್ ಸಮಸ್ಯೆಯಿಂದ ಹೀಗಾಗ್ತಿದೆ ಆಮೇಲೆ ರಿಫ್ರೇಶ್ ಮಾಡ್ತಿನಿ ಅಂತ ಅಲ್ಲಿಂದ ಎದ್ದು ಹೋದರು.

ಇತ್ತ ಸ್ನೇಹಿತರು ಸರಿ ಕಣೋ ಅಲ್ಲಿವರೆಗೆ ನಾವು ಕ್ಯಾಂಟಿನ್ ಗೆ ಹೋದರಾಯ್ತು. ಮತ್ತೆ ಬರುವ ತರುಣ್ ಇಲ್ಲ ನೀವು ಬೇಕಾದ್ರೆ ಹೋಗಿರಿ ನಾನ್ ಪ್ರವೇಶದ ಕೆಲಸ ಮುಗಿಸಿಕೊಂಡು ಬರ್ತಿನಿ ಸ್ನೇಹಿತರು ಅಲ್ಲಿಂದ ಹೋದರು.

ತರುಣ್ ನ ಜೊತೆ ಒಂದು ಹುಡುಗಿಯ ಪ್ರವೇಶ ಬಾಕಿ ಇತ್ತು ಅವಳ ಹೆಸರು ಬಿಂದು ಇಬ್ಬರು ಸರ್ ಬರುವುದನ್ನೆ ಕಾಯುತ್ತಿದ್ದರು ಅರ್ಧ ಗಂಟೆ ಆದರು ಸರ್ ಬಂದಿರ್ಲಿಲ್ಲ ರೂಮ್ ನಿಂದ ಒಳಗೆ ಹೋರಗೆ ತಿರುಗಾಡುತ್ತಿದ್ದ ತರುಣ್ ತನ್ನ ಪ್ರವೇಶ ಮಾಡುವ ಗುಂಗಿನಲ್ಲಿಯೆ ಇದ್ದ ಬಿಂದು ಸಹ ಕೊನೆಗೆ ಸರ್ ಬಂದರು ಮತ್ತೆ ರಿಫ್ರೆಶ್ ಮಾಡಿದರು ಹಾಗೂ ಬರಲಿಲ್ಲ ತಾಳದ ತರುಣ್ ಸರ್ ನನ್ ಮೋಬೈಲ್ ನಿಂದ ಕನೆಕ್ಟ್ ಮಾಡ್ಕೊಂಡು ಮಾಡಿ ಎಂದ ಸರ್ ಸರಿ ಅಂದ್ರು ಕನೆಕ್ಟ್ ಮಾಡಿ ಮಾಡತೊಡಗಿದರು ಇತ್ತ ಬಿಂದುನ ನೋಡಿದ ಸರ್ ನನ್ನದು ಮುಗಿದ ನಂತರ ಇವರದ್ದು ಮಾಡಿ ನನ್ನ ಮೋಬೈಲ್ ಡಿಸ್ಕನೆಕ್ಟ್ ಮಾಡಬೇಡಿ ಬಿಂದು ಹೌದು ಸರ್ ನನ್ನದು ಅವರದ್ದೆ ಉಪಯೋಗಿಸಿಕೊಂಡು ಮಾಡಿ ಕ್ಲರ್ಕ್ ಸರ್ ಸರಿ ಆಯ್ತು ಅವಳದು ಪ್ರವೇಶ ಮುಗಿತು ಬಿಂದು ಥ್ಯಾಂಕ್ಸ್ ತರುಣ್ ಸರಿ ಪರವಾಗಿಲ್ಲ ಅಲ್ಲಿಂದ ಹೋರಟರು.

ತರುಣ್ ಕ್ಯಾಂಟಿನ್ ಬಳಿ ಹೋದ ತನ್ನ ಸ್ನೇಹಿತರೋಡನೆ ಮನೆಗೆ ಹೋಗಲು ಟೀ ಕುಡ್ದಿರೆನ್ರೊ ಹೇಗಿದೆ ಕ್ಯಾಂಟಿನ್ ಟೀ ನಿಖಿಲ್ ದಿನಾಲೂ ಕುಡಿಬಹುದು ಪರ್ವಾಗಿಲ್ಲ ಕ್ಯಾಂಟಿನ್ ಅವರೊಂದಿಗೆ ಪರಿಚಯ ಮಾಡಿಕೊಂಡರು.

ಕಾಲೇಜ್ ನಲ್ಲಿ ಕ್ಲಾಸಸ್ ಶುರುವಾಗತೊಡಗಿದವು ಎಲ್ಲಾ ವಿದ್ಯಾರ್ಥಿಗಳು ಕ್ಲಾಸ್ ಗಳಿಗೆ ಬರತೊಡಗಿದರು.ಎರಡು ಮೂರು ದಿನಗಳ ಕಾಲ ಕ್ಲಾಸಸ್ ನಡಿಯಿತ್ತೊ ಇಲ್ವೊ ಒಬ್ಬರಿಗೊಬ್ಬರ ಪರಿಚಯ ನಡೆದಿತ್ತು ಒಂದು ದಿನ ಸಿನಿಯರ್ಸ ಹೊಸದಾಗಿ ಪ್ರವೇಶ ಪಡೆದಿರುವದಕ್ಕಾಗಿ ನಿಮಗಾಗಿ ವೇಲ್ ಕಮ್(ಸ್ವಾಗತದ) ಪಾರ್ಟಿ ಇಡ್ತಾಯಿದ್ದಿವಿ ಎಂದು ಕ್ಲಾಸಲ್ಲಿ ಬಂದು ಹೇಳಿದರು.

ಮತ್ತೆ ಮರುದಿನ ಸಿನಿಯರ್ಸ ಕ್ಲಾಸ್ ಗೆ ಬಂದು ಪಾರ್ಟಿಯ ದಿನಾಂಕ ಮತ್ತು ಜಾಗ ಹೇಳಿ ಹೋದರು. ತರುಣ್ ತನ್ನ ಗೆಳೆಯರೊಂದಿಗೆ ಪಾರ್ಟಿಗೋಸ್ಕರ ಡ್ರೆಸ್ ಕೊಡ್ ಏನಾದ್ರೂ ಕೋಡ್ತಾರಾಂತ ನಿಖಿಲ್ ನಮಗೆನಕ್ ಇರುತ್ತೆ ಇದ್ರೆ ಸಿನಿಯರ್ಸ್ ಗೆ ಇರುತ್ತೆ

ಪಾರ್ಟಿ ದಿನ ಬಂದೆ ಬಿಟ್ಟಿತು ಬಗೆಬಗೆಯ ಬಟ್ಟೆಗಳನ್ನು ಹಾಕಿಕೊಂಡು ಎಲ್ಲರೂ ಪಾರ್ಟಿಗೆ ಬಂದಿದ್ದರು ಜೂನಿಯರ್ಸನ ಗುಂಪಿನ ಬಳಿ ಬಂದು ಒಬ್ಬ ಸಿನಿಯರ್ ಇಲ್ಲಿ ಸ್ಟೇಪ್ಸ್ ಹತ್ತಿ ಮೇಲಗಡೆ ಫ್ಲೋರ್ ನಲ್ಲಿ ನಿಂತುಕೊಳ್ಳಿ ಎಲ್ಲರು ನಾನ್ ಮತ್ತೆ ಐದು ನೀಮಿಷ ಬಿಟ್ಟು ಬಂದು ನಿಮ್ಮನ್ನು ಕರೆಯುತ್ತೆನೆ.

ಎಲ್ಲಾ ಮೇಲಿನ ಫ್ಲೋರ್ ಗೆ ಹೋದರು ಹುಡುಗರು ಮತ್ತು ಹುಡುಗಿಯರು ಗುಸು ಗುಸು ಮಾತುಗಳು ನಡೆದವು ಏನಕ್ಕೆ ಇಲ್ಲಿ ನಿಲ್ಲಿಸಿದ್ದಾರೆ ಎಂದು ಸ್ವಲ್ಪ ಸಮಯದ ನಂತರ ಸೀನಿಯರ್ ಬಂದು ಎಲ್ಲಾ ಇಲ್ಲಿ ಕೇಳಿಪಾ ಇಲ್ಲಿಂದ ಕೆಳಗೆ ಪೆರ್(ಜೋಡಿ)ಯಾಗಿ ಬರಬೇಕು ಒಂದು ಹುಡುಗ ಮತ್ತು ಒಂದು ಹುಡುಗಿ ಜೊತೆಯಾಗಿ ಸ್ಟೇಪ್ಸ ಇಳಿಯಬೇಕು ಒಂದು ಜೋಡಿ ಮುಗಿದ ನಂತರ ಇನ್ನೊಂದು ಜೂನಿಯರ್ಸ್ ಎಲ್ಲರಿಗೆ ಆಶ್ಚರ್ಯವಾಯಿತು ನಮಗಾಗಲ್ಲ ನಾವು ಬರಲ್ಲ ಸಿನಿಯರ್ ಅಯ್ಯೊ ಇದು ಜಸ್ಟ್ ಫಾರ್ ಫನ್ ನಾವು ಕೈ ಹಿಡಿದುಕೊಂಡು ಜೊಡಿಯಾಗಿ ಬಂದಿದ್ವಿ ಗೋತ್ತಾ ಎಷ್ಟು ನಾಚ್ಕೋಳ್ಳುತ್ತಿದ್ದಿರಾ ನೀಮಗೆ ಯಾರ ಜೊತೆ ಬರಬೇಕನ್ಸುತ್ತೆ ಅವರೊಂದಿಗೆ ಬನ್ನಿ ಆದರೂ ಅವನ ಮಾತು ಯಾರು ಕೇಳದೆ ತಮ್ಮಲ್ಲಿಗಯೆ ಗೊಣಗುತ್ತಿದ್ದರು.

ಯಾರು ಬರದನ್ನು ನೋಡಿ ಇನ್ನೋಬ್ಬ ಸಿನಿಯರ್ ಮೇಲೆ ಬಂದ ವಿಷಯ ತಿಳಿದು ಇದ್ರಲ್ಲೇನಿದೆ ಬೇಗ ಬೇಗ ಬನ್ನಿ ಕಾರ್ಯಕ್ರಮಗಳು ತುಂಬಾ ಇವೆ ನಿಮಗೆ ಅಷ್ಟು ನಾಚಿಕೆ ಆದರೆ ಈಗ ಮೋದಲು ನಿಂತಿರುವ ಹುಡುಗ ಮತ್ತು ಹೋದರು ನಿಂತಿರುವ ಹುಡುಗಿ ಹೀಗೆ ಜೊಡಿಯಾಗಿ ಇಳಿರಿ ಬೇಗ ಅಂದು ಕೆಳಗೆ ಹೋದನು ಒಬ್ಬೊಬ್ಬರಾಗಿ ಜೊಡಿಯಾಗಿ ಇಳಿಯತೊಡಗಿದರು.ನಿಖಿಲ್ ಬಾ ತರುಣ್ ಹೋದರಾಯ್ತು ತರುಣ್ ನೀನೊಗಿರು ಕೊನೆಯಲ್ಲಿ ಬರುವೆ ನಿಖಿಲ್ ಇಳಿದನು ಆದರೆ ತರುಣ್ ಬಿಂದು ಇಳಿಯುವದನ್ನೆ ನೋಡುತ್ತಿದ್ದ ಅವಳ ಜೊಡಿಯಾಗಿ ಇಳಿಯಲು ಅವಳು ಕೊನೆಯಲ್ಲಿ ನಿಂತಿದ್ದಳು.

ಹೀಗೆ ಎಲ್ಲಾ ಇಳಿದರು ಹುಡುಗರ ಸಾಲು ಮತ್ತು ಹುಡುಗಿಯರ ಸಾಲುಗಳನ್ನು ತರುಣ್ ಎಣಿಕೆ ಮಾಡುತ್ತಿದ್ದ ಬಿಂದು ನಿಂತಿರುವ ನಂಬರನಲ್ಲೆ ನಿಂತರೆ ಜೊಡಿಯಾಗ ಬಹುದೆಂದು ಬಿಂದು ಬೇಗ ಹೋದರಾಯ್ತೆಂದು ನಿಂತು ಜಾಗ ಬಿಟ್ಟು ಮುಂದೆ ಹೋದಳು ಅದನ್ನು ಕಂಡು ತರುಣ್ ಕೂಡ ಮುಂದೆ ಹೋದನು ಅವಳ ಜೊಡಿಯಾದನು ಇಳಿಯುವಾಗ ಕೆಳಗೆ ನೋಡಿದರೆ ಸಿನಿಯರ್ಸ್ ಜೊಡಿಯ ಫೋಟೊವನ್ನು ತೆಗೆಯುತ್ತಿದ್ದರು ಬಿಂದು ಬೇಗನೆ ಕೆಳಗಿದುಬಿಟ್ಟಳು ಎಲ್ಲಾ ಫಂಕ್ಶನ್ ಹಾಲ್ ಒಳಗಡೆ ಹೋದರು ಸುಂದರವಾಗಿ ಅಲಂಕಾರಗೊಂಡಿತು.

ಎಲ್ಲರ ಹೆಸರನ್ನು ಒಬ್ಬೊಬ್ಬರಾಗಿ ಕೂತಿರುವ ಜಾಗದಿಂದಲೆ ಹೇಳುವುದಾಗಿ ಹೇಳಿದರು.

ಸಿನಿಯರ್ಸ್ ಎಲ್ಲರು ತಮ್ಮ ಬಗ್ಗೆ ಪರಿಚಯಿಸಿಕೊಂಡರು ನಂತರ ಚೀಟಿಗಳನ್ನು ಬರೆದು ಒಂದು ಬೌಲ್ ನಲ್ಲಿಟ್ಟಿದ್ದರು ಜೂನಿಯರ್ಸ್ ಅದರಲ್ಲಿ ಏನಿರುತ್ತೆ ಅದು ಮಾಡಬೇಕಿತ್ತು ಒಬ್ಬರಿಗೆ ಸಿನಿಯರ್ ಡೆಟಿಂಗ್ ಮಾಡುವ ನಾಟಕ ಇನ್ನೊಬ್ಬರಿಗೆ ಸಿನಯರ್ ಗೋಸ್ಕರ ರೊಮ್ಯಾಂಟಿಕ್ ಹಾಡು ಹಾಡಬೇಕು ಇಲ್ಲ ಎರಡು ಸ್ಟೆಪ್ಸ್ ಸಿನಿಯರೊಂದಿಗೆ ಡಾನ್ಸ್ ಮಾಡಬೇಕು ಚಿಟ್ಟಿಗಳಲ್ಲಿ ಹೀಗೆಲ್ಲಾ ಬರೆದು ಮನೊರಂಜನೆ ಸಿನಿಯರ್ಸ ಎಲ್ಲಾ ಮಜಾ ತಗೊಳ್ತಾಯಿದ್ದರು.ಬಿಂದುಗೆ ಸಿನಿಯರ್ ಯಾರಾದರೊಬ್ಬ ಹುಡುಗನನ್ನು ಹೊಗಳಬೇಕು ಅಂತ ಬಂದಿತ್ತು ಅವಳು ಹೊಗಳಿದರು.

ಹಾಗೂ ಯಾರಿಗೆ ಯಾವುದರಲ್ಲಿ ಪ್ರತಿಭೆ ಕಲೆ ತೋರಿಸುವವರು ವೇದಿಕೆ ಮೇಲೆ ಬಂದು ಪ್ರದರ್ಶನ ಮಾಡಬಹುದು ಎಂದು ಸಿನಿಯರ್ಸ್ ಜೂನಿಯರ್ಸ್ ಗೆ ಹೇಳಿದರು ತರುಣ್ ಮತ್ತು ನಿಖಿಲ್ ಗೆ ಡಾನ್ಸ್ ಇಷ್ಟ ಇತ್ತು ಚೇನ್ನಾಗಿ ಡಾನ್ಸ್ ಮಾಡುತಿದ್ದರು.

ಅವರಿಬ್ಬರು ವೇದಿಕೆ ಬಳಿ ಬಂದು ಡಾನ್ಸ್ ಮಾಡಿದರು.ಅಲ್ಲದೆ ಸಿನಿಯರ್ ಒಬ್ಬಳನ್ನು ಕೊನೆಯಲ್ಲಿ ತಮ್ಮ ಜೊತೆಗೆ ಡಾನ್ಸ್ ಮಾಡಿಸಿದರು.

ಸಿನಿಯರ್ಸ್ ಕೆಲ ಬಾಯ್ಸ್ ಡಾನ್ಸ್ ಮಾಡಿದರು.ಕೆಲವರು ಜೊಡಿ ಡಾನ್ಸ್ ಮಾಡಿದರು ಕೊನೆಯಲ್ಲಿ ಜೂನಿಯರ್ಸ್ ಮತ್ತು ಸಿನಿಯರ್ಸ ಸೇರಿ ಡಾನ್ಸ್ ಮಾಡಿದರು ಬಿಂದು ಗೆ ಡಾನ್ಸ್ ಬರುತಿತ್ತು ಆದರೆ ಪ್ರತ್ಯೇಕವಾಗಿ ಮಾಡಲಿಲ್ಲ ಎಲ್ಲರೊಟ್ಟಿಗೆ ಮಾಡಿದಳು.ಕೋನೆಗೆ ಎಲ್ಲಾ ಶಿಕ್ಷಕವೃಂದವರಿಗೆ ಕರೆಸಿ ಸನ್ಮಾನ ಮಾಡಿದರು.

ಮರುದಿನ ಕಾಲೇಜಿನಲ್ಲಿ ಲೈಬ್ರರಿ ಕಾರ್ಡ್ ಮಾಡಿಸಿಕೊಂಡು ಪುಸ್ತಕಗಳನ್ನು ತೆಗೆದುಕೊಳ್ಳುವುದರ ಬಗ್ಗೆ ದಿನ ಕಳದೊಯ್ತು ತರುಣ್ ಕಾರ್ಡ್ ಮಾಡಿಕೊಂಡ ಆದರೆ ಬಿಂದುವಿನಳದ್ದು ಇನ್ನು ಆಗಿರಲಿಲ್ಲ ಬಿಂದುವಿನ ಗೆಳತಿ ತರುಣ್ ನ ಗೆಳೆಯ ನಿಖಿಲ್ ಗೆ ತುಂಬಾ ಆತ್ಮಿಯವಾಗಿದ್ದಳು ಹಾಗಾಗಿ ತರುಣ್ ಬಿಂದುವಿನ ಬಗ್ಗೆ ಅವಳಿಂದ ತಿಳಕೊಳ್ಳತ್ತಿದ್ದ ಒಂದು ದಿನ ಕಾಲೇಜ್ ನಲ್ಲಿ ಡಾನ್ಸ್ ಸ್ಪರ್ಧೆ ಇರುತ್ತದೆ ಆಗ ಬಿಂದು ಸೇರಿಕೊಳ್ಳುತ್ತಾರೆ ವಿಷಯ ತಿಳಿದ ತರುಣ್ ಕೂಡ ಸೇರುತ್ತಾನೆ ಇಬ್ಬರಿಗೆ ಅಲ್ಲಿಂದ ಪ್ರೀತಿ ಶುರುವಾಗಿತ್ತು ಹೀಗೆ ದಿನಗಳು ಕಳೆಯುತ್ತಾ ತರುಣ್ ನೋಟ್ಸ್, ಪುಸ್ತಕ ಬೇಕಾದಗೆಲ್ಲಾ ಸಹಾಯ ಮಾಡುತಿದ್ದ ಅವಳು ಅಷ್ಟು ಓದಿನಲ್ಲಿ ಜಾಣೆ ಇರಲಿಲ್ಲ ಅವನು ಹೇಳಿಕೋಡುತಿದ್ದ ಕೊನೆಗೆ ಒಂದು ಸೇಮಿಸ್ಟರ್ನ ಫಲಿತಾಂಶ ಬಂತು ಅವನದ್ದು ಡಿಸ್ಟಿಂಕ್ಷನ್ ಇವಳದ್ದು ಫರ್ಸ್ಟ್ ಕ್ಲಾಸ್ ಆಗಿತ್ತು.

ಮತ್ತೆ ಕಾಲೇಜ್ ಅಲ್ಲದೆ ಹೋರಗಡೆ ಸುತ್ತಾಡಲು ಹೋಗುತ್ತಿದ್ದರು.ತರುಣ್ ಮನೆಯವರಿಗು ಗೋತ್ತಾಗಿತ್ತು ಆದರೆ ಬಿಂದುವಿನ ಮನೆಯವರಿಗೆ ಗೋತ್ತಿರಲಿಲ್ಲ.

ಹೀಗೆ ಮತ್ತೊಂದು ಸೇಮಿಸ್ಟರ್ ಮುಗಿಯಿತು.ಫಲಿತಾಂಶವು ಬಂತು ಈ ಭಾರಿ ಇಬ್ಬರದು ಡಿಸ್ಟಿಂಕ್ಷನ್ ಫಲಿತಾಂಶ ಬಂದಿತ್ತು ಯಾಕೆಂದರೆ ತರುಣ್ ಬಿಂದುಗೆ ಕಠಿಣ ಅನಿಸಿದ್ದನ್ನು ಹೇಳಿಕೋಡುತಿದ್ದ ನೋಟ್ಸ್ ಮಾಡಿಕೊಡುತಿದ್ದ ಇನ್ನೆನು ಎರಡನೆ ವರುಷ ಬರುವಷ್ಟರಲ್ಲಿ ಬಿಂದುವಿನ ಅಪ್ಪನಿಗೆ ಬೇರೆ ಊರಿಗೆ ಟ್ರಾನ್ಸ್ಫರ್ ಆಗಿತ್ತು ಅವಳೂ ಕೂಡ ಆ ಕಾಲೇಜಿನಿಂದ ಟ್ರಾನ್ಸ್ಫರ್ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೊದಳು ಈ ವಿಷಯವನ್ನು ತರುಣ್ ಗೆ ಹೇಳಿದಳು ಬೇಸತ್ತ ತರುಣ್ ಗೆ ಏನು ಹೇಳಬೇಕು ಗೋತ್ತಾಗಲಿಲ್ಲ.

ಅವಳಿಗಾಗಿ ಒಂದು ಉಡುಗೊರೆ ತಂದಿದ್ದ ಅದೆನಂದರೆ ಗಡಿಯಾರವೊಳಗೊಂಡಿರುವ ಪೆನ್ನು ಒಂದು ಗಂಟೆಗೆ ಒಂದು ಬಾರಿ ಶಬ್ದ ಮಾಡುತ್ತಿತ್ತು.ಅವನ ನೆನಪಿನ ಕಾಣಿಕೆ ತೆಗೆದುಕೊಂಡಳು.

ಪ್ರೀತಿ ವಿಷಯ ಹೇಗೆ ನಮ್ಮ ಮನೆಯವರಿಗೆ ಅಭ್ಯಂತರವಿಲ್ಲ ಎಂದು ಕೇಳಿದ ಅದಕ್ಕೆ ಅವಳು ನಮ್ಮ ಮನೆಯವರಿಗೆ ಒಪ್ಪಿಸಿ ನಿನ್ನನ್ನ ಮದುವೆ ಆಗುವ ಉಡುಗೊರೆ ಕೊಡುವೆ ಓದು ಮುಗಿಯಲಿ ಎಂದು ಹೇಳಿ ಹೋದಳು.

ಅಲ್ಲಿಯವರೆಗು ಭೇಟಿಯಾಗಲು ನಿರಾಕರಿಸುವೆ ಹೀಗೆ ಇವರ ಪರಿಚಯ ಪ್ರೀತಿ ಆಯಿತು ಮತ್ತೆ ಅಪರಚಿತರಾದರೂ.


 


Rate this content
Log in

Similar kannada story from Drama