Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 7

ಇಷ್ಟ ದೇವತೆ ಭಾಗ 7

2 mins
219



ದೇವತೆ ತರಹ ಇರುವ ಹುಡುಗಿ , ನಮ್ಮ ಮನೆಗೆ ಮಹಾಲಕ್ಷ್ಮಿಯಾಗಿ , ಸೊಸೆಯಾಗಿ ಬಂದರೆ ಬಹಳ ಖುಷಿಯಾಗುತ್ತದೆ ಅಂತ ಪಟೇಲರು ಸಂತಸದಿಂದ ಹೇಳಿದಾಗ ಎಲ್ಲರೂ ಮಂದಹಾಸ ಬೀರಿ ತಮಗೂ ಒಪ್ಪಿಗೆ ಆಗಿದೆಯೆಂದು ತಿಳಿಸಿದರು.


ಈಗಿನ ಕಾಲದ ಹಾಗೆ ಹಿಂದಿನ ಕಾಲದಲ್ಲಿ ಹುಡುಗಾ ಹುಡುಗಿ ಮದ್ವೆಗೆ ಮೊದಲೇ ಮಾತಾಡೋದಾಗಲಿ , ಹೊರಗಡೆ ಅಡ್ಡಾಡುವುದಾಗಲೀ , ಏನೂ ಮಾಡುವಂತೆ ಇರಲಿಲ್ಲ. ಹಾಗಾಗಿ ಗಿರಿಜೆಗೂ , ಮದುವೆ ಆಗುವ ಹುಡುಗ ಶಂಭುಗೂ ಬೆಟ್ಟಿ ಆಗಲಿಲ್ಲ. ಬರಿ ಒಮ್ಮೆ ನೋಡಿದ್ದಷ್ಟೇ.


ನೋಡಿ ಹೋಗಿದ್ದು ಆಯ್ತು, ಒಪ್ಪಿಗೆ ಕೊಟ್ಟಿದ್ದು ಆಯ್ತು, ಮತ್ತೊಮ್ಮೆ ಬಂದು ಹಣ್ಣು ಕಾಯಿ ಇಟ್ಟು ಹುಡುಗಿ ತಮ್ಮವಳೆಂದು ಮಾಡಿಕೊಂಡಿದ್ದೂ ಆಯ್ತು. ಇನ್ನೆನಿದ್ದರೂ ಮದುವೆನೆ ಅಂತಾ ಮಾತಾಡಿಕೊಂಡರು.


ಮದುವೆ ಅಂದಮೇಲೆ ಓಡಾಟಗಳು ಶುರು ಆದವು. ಅವೆಲ್ಲ ಶುರು ಆಗುತ್ತಿದ್ದಂತೆ ಗಿರಿಜಮ್ಮಳ ಚೇಷ್ಟೆ, ನಗು , ಎಲ್ಲವೂ ಕಮ್ಮಿಯಾಗತೊಡಗಿತು. ಭಯ, ತನ್ನವರು ಎಲ್ಲರನ್ನೂ ಬಿಟ್ಟು ಹೋಗಬೇಕಲ್ಲ ಎನ್ನುವ ಸಂಕಟ ಎಲ್ಲವೂ ಸೇರಿ ಗಿರಿಜೆಯ ಬಾಯಿಯನ್ನು ಮಾತಾಡದಂತೆ ಕಟ್ಟಿಹಾಕಿದ್ದವು.


ಮದುವೆ ಸಮೀಪ ಬರುತ್ತಿದ್ದಂತೆ ಬಂಧು ಬಳಗದವರೆಲ್ಲ ಬರ ತೊಡಗಿದರು.. ಮನೆ ಗಿಜಿ ಗಿಜಿ ಅನ್ನುವಂತಾಯಿತು. ಮತ್ತೆ ಮದುವೆ ಮನೆ ಅಂದ್ರೆ ಇಷ್ಟು ಗದ್ದಲ ಇರಲೇಬೇಕಲ್ಲ..



ಸೋದರತ್ತೆಯರು, ಅಕ್ಕಂದಿರು, ಎಲ್ಲರೂ ಬಂದರು. ಸಮಯ ಸಿಕ್ಕಗೆಲ್ಲ ಅವರೆಲ್ಲ ಗಿರಿಜೇಯ ಕಾಲೆಳೆಯುತ್ತಿದ್ದರು.. ಒಮ್ಮೊಮ್ಮೆ ನಗುತ್ತಿದ್ದ ಗಿರಿಜೆ ಒಮ್ಮೊಮ್ಮೆ ಏನೂ ಭಾವನೆಯನ್ನು ವ್ಯಕ್ತಪಡಿಸುತ್ತಿರಲಿಲ್ಲ...



ದೊಡ್ಡ ಅತ್ತೆ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸಿ , ಕಮಲವ್ವನನ್ನು ಕರೆದು ಕೇಳಿಯೇ ಬಿಟ್ಟಳು.


ನಮ್ಮ ಗಿರಜಮ್ಮ ಯಾಕ್ ಸಪ್ಪಗ ಅದಾಳ.. ಏನಾಗೇತಿ ಕಮಲವ್ವ?


ಎನಿಲ್ರಿ ಚಿಗವ್ವ, ಸ್ವಲ್ಪ ಹೆದರ್ಯಾಳ ಅನಸ್ತತಿ ಅಷ್ಟ. ಅವರತ್ತಿ ಆಗಕಿ ಸ್ವಲ್ಪ ಖಡಕ್ಕಾಗಿಯೇ ಅದಾರ್ರಿ, ಅದಲದ ನಮ್ಮನ್ನೆಲ್ಲ ಬಿಟ್ಟು ಹೋಗಬೇಕಲ್ಲ ಅಂತ ಬೇಜಾರು ಅಕಿಗೆ, ಅಷ್ಟ ಬಿಡ್ರಿ ಮತ್ತೇನು ಇಲ್ರಿ.


ಹೌದನು, ಸರಿ ತಗೊ ನಾನು ಬುದ್ದಿ ಹೇಳ್ತಾ ಈ ನನ್ನ ಸೊಸಿಗೆ.


ಆತ್ರಿ ಚಿಗವ್ವ ನಾ ಅರಬಿ ತೋಳಿಬೇಕು ಹೊಕ್ಕನ್ರಿ


ಆತವಾ ನಿ ಮಾಡ್ ಹೋಗು. ನಾ ಗಿರಜಮ್ಮನ ಕಡೆ ಮಾತಾಡ್ತನಿ..


( ಗಿರಜಮ್ಮ ಕೋಣ್ಯಾಗ ಒಬ್ಬಕಿ ಕುಂತಿದ್ದು ನೋಡಿ ಅವಳ ದೊಡ್ಡತ್ತೆ ಹೋದಳು )


ಸೊಸೆ ಜೊತೆ ಮಾತಿಗಿಳಿದು, ಒಂದಿಷ್ಟು ಬುದ್ದಿ ಮಾತು ಹೇಳಿ, ಮುಖದ ಮೇಲೆ ನಗು ಬರುವಂತೆ ಮಾಡಿದಳು. ಗಂಡನ ಮನೆ ಅಂದ್ರೆ ಅದೇನೋ ನರಕ ಅಲ್ಲ, ಅಲ್ಲಿನೂ ಮನುಷ್ಯರ ಇರ್ತಾರ, ನಿನ್ನ ಪ್ರೀತಿ ಮಾಡೋ ಗಂಡ ಇರ್ತಾನಾ, ಯಾಕ ಹೆದರಿಕೆ ನಾವಿಲ್ಲನು ಹಂಗ. ಬರ್ತಾ ಬರ್ತಾ ರೂಢಿ ಆಕ್ಕತಿ ಅಂತ ಹೇಳಿದಳು. ಸ್ವಲ್ಪ ಧೈರ್ಯ ಬಂತು ಅತ್ತಿ ಅಂತ ನಕ್ಕೊಂತ ಹೇಳಿದಳು ಗಿರಜಮ್ಮ..


ಅಷ್ಟರಲ್ಲಿ ಮದುವೆ ದಿನ ಸಮೀಪಿಸೆ ಬಿಟ್ಟಿತ್ತು.

ಇವತ್ತು ಅರಿಶಿನ ಹಚ್ಕೊಂಡು ಮದುಮಗಳಾಗಿ ನಾನು ಹೋಗಬೇಕಲ್ಲ ಅಂತ ಗಿರಿಜೆ ಮನಸ್ಸಲ್ಲಿ ಅಂದುಕೊಳ್ಳುತ್ತ ಅವ್ವನ ಕಡೆ ನೋಡಿದಾಗ ತಾಯಿ ಹೃದಯ ಆಶೀರ್ವಾದ ಮಾಡಿ, ಮಗಳ ಅಂದ ಕಂಡು ತಾಯಿ ಜೀವ ಖುಷಿ ಪಟ್ಟಿತ್ತು.


ಎಲ್ಲರ ಆಶೀರ್ವಾದ ಪಡೆದು ಗಿರಿಜೆ ಮದುಮಗಳಾಗಿ , ವರನ ಮನೆಗೆ ಹೊರಟಳು...


ಗಿರಿಜಮ್ಮ ಮತ್ತು ಶಂಭು ಇವರ ಮದುವೆಯನ್ನು ಮುಂದಿನ ಭಾಗದಲ್ಲಿ ನೋಡೋಣ....


Rate this content
Log in

Similar kannada story from Classics