Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Shridevi Patil

Classics Inspirational Others

4  

Shridevi Patil

Classics Inspirational Others

ಇಷ್ಟ ದೇವತೆ ಭಾಗ 10

ಇಷ್ಟ ದೇವತೆ ಭಾಗ 10

2 mins
161



ಈಗ ಗಿರಿಜೆಯಂತೂ ಬಾಲೆಯಿಂದ ಹೆಣ್ಣಾಗಿ ಬದಲಾಗಿದ್ದಳು. ಅವಳ ಈ ಬದಲಾವಣೆಗೆ ಅತ್ತೆ ಕಾರಣವಾದಳೋ , ಗಂಡ ಕಾರಣವಾದನೋ, ಅಥವಾ ಆ ಅವಳ ಪರಿಸ್ಥಿತಿ ಕಾರಣವಾಯಿತೋ ಗೊತ್ತಿಲ್ಲ. ಒಟ್ಟಾರೆಯಾಗಿ ಹೆಣ್ಣಾಗಿ, ಅದೂ ಜವಾಬ್ದಾರಿಯುತ ಹೆಣ್ಣಾಗಿ ತನ್ನ ಕೆಲಸದಲ್ಲಿ ತೊಡಗಿದ್ದಳು. ಸಮೀಪದಲ್ಲೇ ತವರು ಇದ್ದರೂ ಸಹ ಅತ್ತೆ ಕಳಿಸಲು ಯೋಚಿಸುತ್ತಿದ್ದಳು. ಗಿರಿಜೆ ಬಂದಾಗಿನಿಂದ ಅತ್ತೆ ಕೆಲಸದಿಂದ ನಿವೃತ್ತಿ ಪಡೆದಿದ್ದಳು. ಅವಳು ತವರಿಗೆ ಏನಾದರೂ ಹೋದರೆ ಕೆಲಸ ಮಾಡುವರ್ಯಾರು ಅಂತ ಕಳಿಸುತ್ತಿರಸಲಿಲ್ಲ.


ಅವಳೂ ಕೂಡ ಊರಿಗೆ ಹೋಗಿ ಬರುವೆ ಅಂತಾ ಒಮ್ಮೆಯೂ ಕೇಳಿರಲಿಲ್ಲ..


ಅಂದು ಕಾಗದವೊಂದು ಅಂದ್ರೆ ಟಪಾಲು ಬಂದಿತ್ತು. ಗಿರಿಜೆಯ ಅಜ್ಜನ ಟಪಾಲು ಆಗಿತ್ತದು. ಬರುವ ವಾರ ನಾನು , ನಿಮ್ಮ ಅಪ್ಪ , ನಿಮ್ಮ ಅವ್ವ ಮೂರು ಜನ ನಿನ್ನನ್ನು ನೋಡಲು ಬರುತ್ತಿದ್ದೇವೆ ಅಂತಾ ಇತ್ತು ಅದರಲ್ಲಿ.. ಅವಳು ತುಂಬಾ ಖುಷಿಯಾದಳು. ಮುಂದಿನ ವಾರ ಯಾವಾಗ ಆಗುತ್ತದೆಯೋ ಅಂತ ಕಾಯುತ್ತಿದ್ದಳು.

ಅತ್ತೆಗೆ ಅವಳ ಸಂತಸ ಕಂಡು ಖುಷಿಯಾಯಿತು. ಅತ್ತೆ ಒಳ್ಳೆಯವಳೇ ಆದರೆ ತುಸು ನಾನು ಎನ್ನುವುದು ಹೆಚ್ಚಿತ್ತು. ಖಡಕ್ ದ್ವನಿ ಬೇರೆ,ಗಿರಿಜೆಗೆ ಭಯ ಬೀಳಲು ಅಷ್ಟು ಸಾಕು...


ಹೀಗೆ ಅವತ್ತು ಅವಳ ಅಜ್ಜ ಅಪ್ಪ ಅವ್ವ ಬರುತ್ತಿರುವ ದಿನವಾಗಿತ್ತು. ಬೆಳಿಗ್ಗೆ ಬೇಗ ಎದ್ದವಳೇ ತನ್ನೆಲ್ಲ ಕೆಲಸಗಳನ್ನು ಮುಗಿಸಿ ,ಅತ್ತೆ ಹೇಳಿದಂತೆ ಅಡುಗೆ ಮಾಡಿಟ್ಟು ಕಾಯುತ ಕುಳಿತಳು. ಹೊರಗೆ ಎತ್ತಿನ ಗಾಡಿ ಶಬ್ದ ಕೇಳಿ ಸೊಯ್ಯ ಅಂತ ಓಡಿದಳು. ಅತ್ತೆ ಮಾತು ನೆನಪಾಗಿ ಹಿಂದೆ ಸರಿದಳು.ಆಗ ಅತ್ತೆ ನೀರು ಕೊಡು ಕಾಲಿಗೆ ಎಂದಾಗ ಅದರ ನೆಪದಲ್ಲಿ ಹೊರ ನಡೆದಳು.



ಅಜ್ಜನಿಗೆ ನಮಸ್ಕರಿಸಿ ನೀರು ಕೊಟ್ಟು ಅವ್ವನನ್ನು ಒಳ ಕರೆದು ನಡೆದಳು. ಮಗಳ ನಡತೆ ಕಂಡು ಅವ್ವನ ಮನಸ್ಸು ಖುಷಿಯಿಂದ ಕುಣಿಯಿತು. ಇವಳು ಅವಳೇನಾ? ಅನ್ನುವಷ್ಟು ಬದಲಾಗಿದ್ದಳು ಅವಳು. ಚಾ ಮಾಡಿ ತಂದು ಕೊಟ್ಟು, ಊಟ ಸಿದ್ಧವಿರುವುದರಿಂದ ಎಲ್ಲರಿಗೂ ಎಲೆ ಇಟ್ಟು ನೀರು ತುಂಬಿ ಇಟ್ಟು ಊಟಕ್ಕೆ ಕರೆದಳು. ಆಗ ಅಜ್ಜ ಗಿರಿಜಮ್ಮ ನಿಂದಾ ಈವತ್ತು ಅಡುಗೆ ಅಂದಾಗ ಹೌದಜ್ಜ ಅತ್ತೆವ್ವನ್ನ ಕೇಳಿ ಮಾಡಿನಿ ಅಂದಳು. ಕಮಲವ್ವನ ಸಂತೋಷಕ್ಕೆ ಪಾರವೇ ಇರಲಿಲ್ಲ.


ಹೀಗೆ ಸಂತೋಷದಿಂದ ದಿನ ಮುಗಿಯಲು ಬಂದಾಗ ಅವರು ಹೊರಡುತ್ತೇವೆ ಎಂದರು ,ಆಗ ಗಿರಿಜೆಗೆ ದುಃಖ ಆಯಿತು. ಆದರೇನು ಮಾಡುವುದು ಸುಮ್ಮನಿರಲೇಬೇಕಲ್ಲ.


ಅವ್ವ ಅಪ್ಪ ಅಜ್ಜ ಹೋದಮೇಲೆ ಅವಳು ತನ್ನ ಕೆಲಸದಲ್ಲಿ ನಿರತಳಾದಳು. ಹಾಗೂ ಹೀಗೂ ನಾಲ್ಕು ತಿಂಗಳು ಕಳೆಯುವುದರಲ್ಲಿ ಅವಳು ತಾಯಿಯಾಗುತ್ತಿರುವುದು ತಿಳಿಯಿತು. ಎಲ್ಲರೂ ಖುಷಿ ಪಟ್ಟರು. ಆಗೇನು ಆಸ್ಪತ್ರೆ ಇಲ್ಲ ಎಂತಾದೂ ಇಲ್ಲ, ವಾಂತಿಯಾಗಲಿ,ಏನೇ ಆಗಲಿ, ಎಲ್ಲದಕ್ಕೂ ಮನೆಯೇ ಆಸ್ಪತ್ರೆ ಆಗ.


ಹೀಗೆ ಸೀಮಂತ ,ಅದೂ ಇದೂ ಎಲ್ಲದೂ ಮುಗಿದು ಒಂದು ಹೆಣ್ಣು ಮಗಳಿಗೆ ಜನ್ಮ ಕೊಟ್ಟಳು. ಅತ್ತೆ ಮಾವನಿಗೆ ಗಂಡು ಮೊಮ್ಮಗ ಬೇಕಾಗಿತ್ತು. ಶಂಭು ಏನು ಹೇಳುತ್ತಿರಲಿಲ್ಲ. ಗಿರಿಜೆಗೆ ಗಂಡ, ಅತೆ ಮಾವನಿಗೆ ಮಗನಾಗಿದ್ದನೆ ಹೊರತು ಒಂದು ಮಾತನ್ನು ಆಡುತ್ತಿರಲಿಲ್ಲ. ಗಂಡು ಹೆತ್ತಿದ್ದರೆ ಅದರ ಸಡಗರವೇ ಬೇರೆ ಇರ್ತಿತ್ತು ಅಂತ ಅತ್ತೆ ಹೇಳಿದ್ದನ್ನು ಕೇಳಿ ಅವಳು, ಬೇಜಾರಾಗಿ, ಮಗುವಿಗೆ ಕಂದಾ ಯಾರಿದ್ದರೂ ಇಲ್ಲದಿದ್ದರೂ ನಾನಿರುವೆ ಅಂತ ಮುತ್ತು ಇಟ್ಟು ಮಗುವನ್ನಪ್ಪಿ ಮಲಗಿದಳು. ನಾನು ಕೂಡ ಹೆಣ್ಣೇ, ಸೊಸೆಯಾಗಿ ಬೇಕಾದ ಹೆಣ್ಣು ಇವರಿಗೆ ಮೊಮ್ಮಗಳಾಗಿ ಏಕೆ ಬೇಡ ಅಂತ ಗಿರಿಜೆಯ ತಲೆಯಲ್ಲಿ ಈ ವಿಷಯ ಓಡುತ್ತಲಿತ್ತು. ಆದರೆ ಏನು ಮಾಡಲಿಕ್ಕಾಗದು, ಸುಮ್ಮನಿರಲೇಬೇಕಾಗಿತ್ತು..


ಗಿರಿಜೆ ಅವಳ ಮಗುವಿನೊಡಗೂಡಿ ತನ್ನ ಮನೆಗೆ ಬಂದಿದ್ದನ್ನು ಮುಂದಿನ ಭಾಗದಲ್ಲಿ ನೋಡೋಣ....



Rate this content
Log in

Similar kannada story from Classics