Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Tragedy Fantasy Thriller

4.0  

shristi Jat

Tragedy Fantasy Thriller

ಫ್ಯಾಂಟಸಿ

ಫ್ಯಾಂಟಸಿ

2 mins
141


ಗೋಡೆ ನೋಡುತ್ತಾ ಮಲಗಿದ್ದ ವೈಭವ್ ತಲೆಯಲ್ಲಿ ಸಾವಿರಾರು ಗೋಂದಲಗಳು ನೆನ್ನೆ ಕಾಡಲ್ಲಿ ನೋಡಿದ್ದೆಲ್ಲಾ ನಿಜಾನಾ? ತನ್ನನ್ನೇ ತಾನು ಪ್ರಶ್ನಿಸತೋಡಗಿದನು.

ನೆನ್ನೆ ನಡೆದ ಘಟನೆ ಏನೆಂದರೆ ವೈಭವ ಕಾಡು ಸುತ್ತಲು ಹೋಗಿದ್ದ. ಅವನಿಗೆ ಚಿತ್ರ ಬಿಡಿಸುವುದು ಅಂದರೆ ಇಷ್ಟ ಅದರಲ್ಲಿ ಪ್ರಕೃತಿಯ ಚಿತ್ರ ಬಿಡಿಸುವುದು ಅಂದರೆ ಅವನಿಗೆ ತುಂಬಾ ಇಷ್ಟ ಆಗಾಗ ಅವನು ಕಾಡಿಗೆ ಹೋಗುತಿದ್ದ ಅಲ್ಲಿರುವ ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ದೂರದಿಂದ ಅದರ ಚಿತ್ರವನ್ನು ವಿಧ ವಿಧವಾಗಿ ಬಿಡಿಸುತ್ತಿದ್ದ ಕಾಡಿನಲ್ಲಿರುವ ಗಿಡ ಮರಗಳು ಮತ್ತು ಹೂಗಳ ಚಿತ್ರ ಅಲ್ಲದೆ ಮೋಡದ,ಸೂರ್ಯ ಮುಳುಗುವ ಚಿತ್ರಗಳನ್ನು ಬಿಡಿಸುತ್ತಿದ್ದ

ಆದರೆ ವೈಭವಗೆ ಆಕಾಶದ ಚಿತ್ರ ಬಿಡಿಸುವ ಮನಸ್ಸಾಯಿತು ಒಂದು ಕಲ್ಲಿನ ಪಕ್ಕ ಕುಳಿತು ಆಕಾಶದಲ್ಲಿರುವ ಬಿಳಿ ಮೋಡವನ್ನು ಬಿಡಿಸತೋಡಗಿದ ಆದರೆ ಅವನಿಗೆ ಬಿಡಿಸಲಾಗುತ್ತಿರಲಿಲ್ಲ ಯಾಕೆಂದರೆ ಆ ಮೋಡದಲ್ಲಿ ಯಾವುದೋ ಆಕಾರ ಅಡಗಿತ್ತು ಆ ಆಕಾರವನ್ನು ಸರಿಯಾಗಿ ಬಿಡಿಸಲಾಗಲಿಲ್ಲ ಮೋಡದ ಆಕಾರ ಕಲಿಯಲು ತುಂಬಾ ಸಮಯದಿಂದ ಮೋಡವನ್ನೆ ನೋಡತೊಡಗಿದ ಕೊನೆಗೆ ಅದರ ಆಕಾರ ಸ್ವಲ್ಪ ಸ್ವಲ್ಪ ಬಿಡಿಸತೋಡಗಿದ ಅವನ ಧ್ಯಾನ ಮೋಡ ಮತ್ತು ಬಿಳಿಯ ಹಾಳೆಯ ಬೋರ್ಡ್ ಮೇಲೆ ಇತ್ತು ಅದೆ ಆಕಾರದ ಗೆರೆ ಹಾಕುವುದು ಮುಗಿತು 

ಒಮ್ಮೆ ಬೋರ್ಡ್ ನತ್ತ ನೋಡಿದ ಮೋಡದ ಆಕಾರ ಒಂದು ಹೆಣ್ಣಿನ ಆಕಾರದಂತಿತ್ತು ಅದನ್ನು ಪೂರ್ತಿ ಗೋಳಿಸಿ ಅದಕ್ಕೆ ಬಣ್ಣ ತುಂಬಲು ಮುಂದಾದ 

ಕೊನೆಗೆ ಆಕಾರ ಪೂರ್ತಿಗೊಂಡಿತು ಬಣ್ಣ ತುಂಬಲು ಹೋದ ಬಣ್ಣ ಮಾಯ ಆಗತೋಡಗಿತು.

ವೈಭವ್ ಗೆ ಅಚ್ಚರಿಯಾಯಿತು ಮರು ಪ್ರಯತ್ನಿಸಿದ ಆದರೆ ಆಕಾರದ ಮೇಲೆ ಬಣ್ಣನೆ ಕೂಡುತ್ತಿರಲಿಲ್ಲ 

ಬೇರೆ ಬೇರೆ ಬಣ್ಣ ತುಂಬಲು ನೋಡಿದ ಕೊನೆಗೆ ಒಂದು ಬಣ್ಣ ಆಕಾರದೊಳಗೆ ತುಂಬಿತು ಖುಷಿಯಾದ ವೈಭವ್ ಬಣ್ಣಗಳಿಂದ ಆಕಾರವನ್ನು ತುಂಬಾ ಸುಂದರವಾಗಿ ಬಿಡಿಸಿದ.

ಅವನ ಚಿತ್ರ ಒಂದು ಅಪ್ಸರೆಯ ಚಿತ್ರವಾಗಿತ್ತು ಅವನಿಗೆ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ ಅಷ್ಟು ಸುಂದರವಾಗಿತ್ತು ಅರ್ಧಗಂಟೆ ಅದನ್ನೆ ನೋಡುತ್ತಾ ಕುಳಿತುಕೊಂಡ ಇದನ್ನು ನಾನು ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಈ ಚಿತ್ರವನ್ನೆ ಪ್ರದರ್ಶಿಸುವೆ ಮೊದಲು ಬರುವುದು ನಾನೆ ಅಂತ ಖುಷಿಪಟ್ಟ 

ವೈಭವ್ ಮನೆಗೆ ಹೋಗಲು ಎಲ್ಲಾ ಚಿತ್ರ ಕಲೆಯ ಸಾಮಾನುಗಳನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಸಜ್ಜಾದ ಬಿಡಿಸಿರುವ ಚಿತ್ರ ಕೈಯಲ್ಲಿ ಹಿಡಿದುಕೊಂಡು ಹೋದರಾಯಿತು ಎಂದುಕೊಂಡು ಚಿತ್ರವನ್ನು ನೋಡಿದರೆ ಚಿತ್ರ ಮಾಯವಾಗಿತ್ತು ಬಿಳಿಯ ಹಾಳೆಯ ಬೋರ್ಡ ಅಷ್ಟೇ ಇತ್ತು ತಬ್ಬಿಬ್ಬಾದ ವೈಭವ ಬಿಡಿಸಿದ್ದು ಹೇಗೆ ಅಳಿಸಿತು ಎಲ್ಲಿ ಹೋಯಿತು ಅಂತ ಅಕ್ಕ ಪಕ್ಕ ನೋಡಿದ 

ಬೋರ್ಡ್ ಹಿಂದೆ ತುಂಬಾ ಬೆಳಕು ಅವನ ಕಣ್ಣು ಕುಕ್ಕುತ್ತಿತ್ತು ಅದನ್ನ ನೋಡಿದ ಮೇಲೆ ವೈಭವ್ ಬೆರಗುಗೊಂಡ ತಾನು ಬಿಡಿಸಿರುವ ಚಿತ್ರ ಒಂದು ಹೆಣ್ಣಾಗಿ ರೂಪತಾಳಿತ್ತು ಬಾಯಲ್ಲಿ ಮಾತು ಬರುತ್ತಿರಲಿಲ್ಲ ಅದರೊಂದಿಗೆ ಮಾತಾಡಲು ಪ್ರಯತ್ನಿಸಿದ ಆದರೆ ಅದು ಮಾತಾಡುತ್ತಿರಲಿಲ್ಲ ಹೋಗಲಿ ಅಂತ ಅದನ್ನು ಮುಟ್ಟಿದ ಆದರೆ ಅದು ಇವನ ಕೈಗೆ ಹತ್ತುತ್ತಿರಲಿಲ್ಲ ಎಷ್ಟು ಮುಟ್ಟಿದರೂ ಸ್ಪರ್ಶ ಆಗುತ್ತಿರಲಿಲ್ಲ ಬೆಸಗೊಂಡು ವೈಭವ್ ಸುಮ್ಮನೆ ನಿಂತಿದ್ದ.

ರೂಪ ತಾಳಿದ್ದ ಹೆಣ್ಣು ಅವನ ಹತ್ತಿರ ಬಂದು ಅವನ ಕೈಯನ್ನು ಹಿಡಿದು ಕೈ ಕುಲುಕಿತು ಆವಾಗ ವೈಭವ್ ಗೆ ಸ್ಪರ್ಶ ಆಯಿತು ಮತ್ತೆ ಅದರ ಜೊತೆ ಮಾತನಾಡಲು ಪ್ರಯತ್ನಿಸಿದ ಅದು ಏನು ಉತ್ತರಿಸಲಿಲ್ಲ

ಹೋಗಲಿ ಸ್ಪರ್ಶ ಆಗುತ್ತಿದೆಯಲ್ಲ ಮನೆಗೆ ಕರೆದುಕೊಂಡು ಹೋದರಾಯಿತು ಅಂತ ಅದರ ಕೈಯನ್ನು ಹಿಡಿದ ಆದರೆ ಮತ್ತೆ ಸ್ಪರ್ಶ ಆಗುತ್ತಿರಲಿಲ್ಲ  ಸ್ವಲ್ಪ ಸಮಯದ ನಂತರ ಅದು ಮಾಯವಾಯಿತು. 

"ಚಿಂತಿತಗೊಂಡ ವೈಭವ್ ಗೆ ಅದು ಮಾಯೆಯೊ ಇಲ್ಲ ಚಾಯೆಯೊ ತಿಳಿಯಲಾಗಲಿಲ್ಲ"

 

 

 


Rate this content
Log in

Similar kannada story from Tragedy