Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Winter Writing Contest

SEE WINNERS

Share with friends

ಸ್ಟೋರಿಮಿರರ್‌ನ 'ಚಳಿಗಾಲದ ಬರವಣಿಗೆ ಸ್ಪರ್ಧೆ' (Winter Writing Contest) ಗೆ ಸುಸ್ವಾಗತ! ನಿಮ್ಮ ಸೃಜನಶೀಲ ಯೋಚನಾಲಹರಿ ತೆರೆದುಕೊಳ್ಳುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಚಳಿಗಾಲವು ಮ್ಯಾಜಿಕ್‌ನಿಂದ ತುಂಬಿರುತ್ತದೆ ಮತ್ತು ನಿಮ್ಮ ಕಥೆಗಳು ಈ ವಿಶೇಷ ಋತುವಿನ ಹಲವಾರು ಅಂಶಗಳನ್ನು, ಅಕ್ಷರಗಳ ರೂಪದಲ್ಲಿ ಸೆರೆಹಿಡಿಯುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ.


ಥೀಮ್‌ಗಳು:

ಚಳಿಗಾಲದ ಪಿಸುಮಾತುಗಳು: ಚಳಿಗಾಲದ ಶಾಂತ ಕ್ಷಣಗಳ ಬಗ್ಗೆ ಬರೆಯಲು ನಿಮಗಿದು ಅವಕಾಶ. ಬಹುಶಃ ಇದು ಹಿಮಪಾತದ ನಾಜೂಕಾದ ಶಬ್ದವಾಗಿರಬಹುದು ಅಥವಾ ತಂಪಾದ ರಾತ್ರಿಯ ನಿಶ್ಯಬ್ಧತೆಯಾಗಿರಹುದು. ಚಳಿಗಾಲದ ಪುಳಕವನ್ನು ನಿಮ್ಮ ಬರಹಗಳಲ್ಲಿ ನಮಗೆ ತೋರಿಸಿ.

ಫ್ರಾಸ್ಟಿ ಫ್ಯಾಂಟಸಿಯಾ: ಮೋಡಿಮಾಡುವ ಚಳಿಗಾಲವನ್ನು ಮತ್ತು ಅದ್ಭುತವಾದ ಕಲ್ಪನಾಲೋಕವನ್ನು ಕಲ್ಪಿಸಿಕೊಳ್ಳಿ. ವಿಶೇಷ ಶಕ್ತಿಗಳೊಂದಿಗೆ ಹಿಮದ ತುಂಡುಗಳು ಮಾತನಾಡುವಂತಹ ಮಾಂತ್ರಿಕ ಅಂಶಗಳಿರುವ ಕಥೆಯನ್ನು ಬರೆಯಿರಿ. ಫ್ಯಾಂಟಸಿ ಚಳಿಗಾಲದ ಜಗತ್ತಿನತ್ತ ನಮ್ಮನ್ನು ಕರೆದೊಯ್ಯಿರಿ!

ಫೈರ್‌ಸೈಡ್ ಕ್ರಾನಿಕಲ್ಸ್: ಪ್ರಕೃತಿಯ ನಡುವೆ ಬೆಂಕಿಯ ಸುತ್ತ ನಡೆಯುವ ಹೃದಯಸ್ಪರ್ಶಿ ಕಥೆಗಳನ್ನು ಹಂಚಿಕೊಳ್ಳಿ. ಇದು ಫ್ಯಾಮಿಲಿ ಗ್ಯಾದರಿಂಗ್, ಸ್ನೇಹಿತರ ಭೇಟಿ-ಹರಟೆ ಅಥವಾ ಲಾಟೀನಿನ ಬೆಳಕಿನ ಬಗ್ಗೆಯಾಗಿರಬಹುದು. ನಿಮ್ಮ ಕಥೆಗಳು ನಮ್ಮ ಮುಖದಲ್ಲಿ ನಗು ತರಿಸಲಿ.

ವಿಂಟರ್ ವಾಂಡರ್ಲಸ್ಟ್: ಚಳಿಗಾಲದಲ್ಲಿ ಹೊರಜಗತ್ತನ್ನು ಅನ್ವೇಷಿಸಿ. ಹಿಮಭರಿತ ಪರ್ವತಗಳನ್ನೇರುವ ಸಾಹಸಗಳನ್ನು ಅಥವಾ ಹೆಪ್ಪುಗಟ್ಟಿದ ಸರೋವರಗಳ ಸೌಂದರ್ಯವನ್ನು ವಿವರಿಸಿ. ಒಂದು ನಿರ್ದಿಷ್ಟ ಭೂಪ್ರದೇಶ/ನೆಲವು ನಿಮ್ಮ ಚಳಿಗಾಲದ ನಿಮ್ಮ ಕಥೆಯ ಭಾಗವಾಗಿರಲಿ. ಅಂತಹ ಬರಹಗಳನ್ನು ಓದಲು ನಾವು ಉತ್ಸುಕರಾಗಿದ್ದೇವೆ.

ವಿಚಾರಶೀಲ ಸೀಸನ್: ಚಳಿಗಾಲದ ಚಿಂತನಶೀಲ, ವಿಚಾರಶೀಲ ವಿಷಯವನ್ನು ನಿಮ್ಮ ಕಥೆಯಲ್ಲಿ ಹೆಣೆಯಿರಿ. ಈ ಋತುವಿನಲ್ಲಿ ಯಾರಾದರೂ ತಮ್ಮ ಜೀವನ, ತಮ್ಮ ಪ್ರೀತಿ ಅಥವಾ ವೈಯಕ್ತಿಕ ಬೆಳವಣಿಗೆಯ ಬಗ್ಗೆ ಯೋಚಿಸುತ್ತಿರಬಹುದು, ಇದನ್ನೇ ನಿಮ್ಮ ಕಥೆಯ ಜೀವಾಳವನ್ನಾಗಿಸಿ. ಚಳಿಗಾಲದ ಚಿಂತನಶೀಲ ಕ್ಷಣಗಳನ್ನು ಅಕ್ಷರಗಳಲ್ಲಿ ಸೆರೆಹಿಡಿಯಿರಿ.


ನಿಮ್ಮ ಆಲೋಚನೆಗಳನ್ನು ಪ್ರತಿಬಿಂಬಿಸುವ ಥೀಮ್ ಅನ್ನು ಆಯ್ಕೆ ಮಾಡಲು ಹಿಂಜರಿಯಬೇಡಿ ಅಥವಾ ನಿಮ್ಮ ಕಥೆಯನ್ನು ನಿಜವಾಗಿಯೂ ವಿಶೇಷವಾಗಿಸಲು ವಿಭಿನ್ನ ಥೀಮ್‌ಗಳ ಆಲೋಚನೆಗಳನ್ನು ಸೇರಿಸಿ, ಒಂದು ಸುಂದರ ಕಥೆಯನ್ನು ಹೆಣೆಯಿರಿ. ನಿಮ್ಮ ಕಲ್ಪನೆಯು ಮೋಜಿನಿಂದ ಕೂಡಿರಲಿ. ನಿಮ್ಮ ಚಳಿಗಾಲದ ವಂಡರ್‌ಲ್ಯಾಂಡ್ ಕಥೆಗಳನ್ನು ಬರೆಯುತ್ತ, ಆನಂದಿಸಿ! ಶುಭವಾಗಲಿ!




ಬಹುಮಾನಗಳು:

  • ಪ್ರತಿ ಭಾಷೆ ಮತ್ತು ವರ್ಗದಲ್ಲಿ ಟಾಪ್ 10 ಕಥೆ ಮತ್ತು ಕವಿತೆ ಮತ್ತು ರೂ.150 ಮೌಲ್ಯದ ಸ್ಟೋರಿಮಿರರ್ ರಿಯಾಯಿತಿ ವೋಚರ್ ಮತ್ತು ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತದೆ. ಗೆಲ್ಲಲು ಪರಿಗಣಿಸಲಾದ ನಿಯತಾಂಕಗಳು ನಮ್ಮ ಸಂಪಾದಕೀಯ ತಂಡದ ಸಂಪಾದಕೀಯ ಸ್ಕೋರ್ಗಳಾಗಿವೆ.
  • ಟಾಪ್ 4 ಕಥೆಗಳು ಮತ್ತು ಕವಿತೆಗಳು ನಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಆಗುತ್ತವೆ
  • ಎಲ್ಲಾ ಭಾಗವಹಿಸುವವರು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.


ಸಲ್ಲಿಕೆ ಹಂತ - ಜನವರಿ 08, 2024, ಜನವರಿ 31, 2024

ಫಲಿತಾಂಶದ ಘೋಷಣೆ: ಫೆಬ್ರವರಿ 28 2024

ಸಂಪರ್ಕ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287

ವಾಟ್ಸ್ ಅಪ್ - 8452804735