Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#WomenOfToday

SEE WINNERS

Share with friends

ಮಾತೃತ್ವ ಮತ್ತು ವೃತ್ತಿಜೀವನದ ಜುಗಲ್‌ಬಂದಿ, ಕುಟುಂಬದ ಯೋಗಕ್ಷೇಮ ಮತ್ತವಳ ಸ್ವಂತ ಫಿಟ್ನೆಸ್, ಮನೆ ಮತ್ತು ಕಚೇರಿ, ಮತ್ತು ಅದೇ ಸಮಯದಲ್ಲಿ, ಪಿತೃಪ್ರಧಾನ ನಿಯಮಗಳ ವಿರುದ್ಧ ಹೋರಾಡುವುದು, ಹಿಂಜರಿಕೆಯ ಮೂಡಿಸುವ ಪ್ರತಿಕ್ರಿಯೆಗಳು ಮತ್ತು ಉದಾರ ಮನಸ್ಥಿತಿ - ಉಫ್, ಮಹಿಳೆಯ ಜೀವನ ನಿಜಕ್ಕೂ ಕಠಿಣವಾಗಿದೆ. ಮಹಿಳೆಯರು ವೈಯಕ್ತಿಕ ಯಶಸ್ಸು, ವೃತ್ತಿಪರ ಯಶಸ್ಸು ಮತ್ತು ಮಾನಸಿಕ ಶಾಂತಿಯನ್ನು ಸಾಧಿಸಲು ಯಾವುದೇ ಅಡೆತಡೆಗಳಿಗಾಗಿ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದಿಲ್ಲ. ಅವರ ನೈತಿಕ ಶಕ್ತಿಗೆ ಮತ್ತು ಸಾಮರ್ಥ್ಯಕ್ಕೆ, ಪ್ರತಿ ದಿನವೂ ಆಚರಣೆ ಮತ್ತು ಮೆಚ್ಚುಗೆಯ ಅಗತ್ಯವಿದೆ.

ಇಂದ್ರಾ ನೂಯಿ, ಲಕ್ಷ್ಮಿ ಅಗರ್ವಾಲ್, ನೀರ್ಜಾ ಭಾನೋಟ್, ಶಕುಂತಲಾ ದೇವಿ, ಪಿವಿ ಸಿಂಧು ಹೀಗೆ ಸಾವಿರಾರು ಹೆಸರುಗಳು ನಮಗೆ ತಿಳಿದಿವೆ. ಆದಾಗ್ಯೂ, ನಿಮ್ಮ ಸುತ್ತಲೂ, ನಿಮ್ಮ ಪ್ರದೇಶದಲ್ಲಿ, ನಿಮ್ಮ ಕಛೇರಿ/ಶಾಲೆ/ಕಾಲೇಜಿನಲ್ಲಿ ಇಷ್ಟೇ ಅಲ್ಲ, ಸಾವಿರಾರು ಜನರು ತಮ್ಮ ನಿಲುವು, ಅಸ್ತಿತ್ವ ಮತ್ತು ಆಲೋಚನೆಗಳನ್ನು ಸಾಬೀತುಪಡಿಸಲು ಹೋರಾಡುತ್ತಿರುವ ಇಂತಹ ಇನ್ನೂ ಅನೇಕ ಹೆಸರುಗಳು ಇರಬಹುದು. ಈ ಹೇಳಲಾಗದ ಕಥೆಗಳನ್ನು ನಾವೀಗ ಆಚರಿಸೋಣ.

ಸ್ಟೋರಿಮಿರರ್ ಪ್ರಸ್ತುತಪಡಿಸುತ್ತದೆ #WomenOfToday, ಮಹಿಳೆಯರು ಮತ್ತು ಅವರ ಕೊಡುಗೆಯನ್ನು ಸ್ಮರಿಸಲು ಇದೊಂದು ಅದ್ಭುತ ಬರವಣಿಗೆಯ ಸ್ಪರ್ಧೆ.

ಸೂಚಿಸಲಾಗಿರುವ ಥೀಮ್‌ಗಳು

ನಿಮ್ಮ ಕಥೆಗಳು ಮತ್ತು ಕವನಗಳನ್ನು ನೀವು ಬರೆಯಲು ಕೆಲವು ಥೀಮ್‌ಗಳನ್ನು ಕೆಳಗೆ ನೀಡಲಾಗಿದೆ. ಆದಾಗ್ಯೂ, ನಿಮ್ಮ ಆಯ್ಕೆಯ ಯಾವುದೇ ಥೀಮ್ ಅನ್ನು ಸಹ ನೀವು ಆಯ್ಕೆ ಮಾಡಬಹುದು. ಅಲ್ಲದೆ, ನೀವು ಬರೆಯುವ ಕಥೆ ಅಥವಾ ಕವಿತೆ ಕಾಲ್ಪನಿಕವಾಗಿರಬಹುದು ಮತ್ತು ನಿಜ ಜೀವನದ್ದಾಗಿರಬಹುದು, ಆದರೆ ಅದು ಲೇಖನ ರೂಪದಲ್ಲಿರಬಾರದು.

  • ಅಸಾಮಾನ್ಯ ವೃತ್ತಿಯಲ್ಲಿರುವ ಮಹಿಳೆಯರು - ಪೈಲಟ್‌ಗಳು, ಫೋಟೋಗ್ರಾಫರ್‌ಗಳು, ಸೈನ್ಯ - #ಧೈರ್ಯವಂತಮಹಿಳೆ
  • ಮುಂದಾಳತ್ವ ವಹಿಸಿದ ಪಾತ್ರದಲ್ಲಿರುವ ಮಹಿಳೆಯರು. ಅದು ಮನೆಯಾಗಿರಬಹುದು, ಕಛೇರಿಯಾಗಿರಬಹುದು ಅಥವಾ ಇನ್ನಾವುದೇ ಸ್ಥಳವಾಗಿರಬಹುದು - #ಆಳುವಮಹಿಳೆ
  • ಹೇಗೆ ಒಬ್ಬ ಮಹಿಳೆ ಅಜ್ಜಿ, ತಾಯಿ, ಸಹೋದರಿ, ಹೆಂಡತಿ, ಮಗಳು, ಸೊಸೆ ಮತ್ತು ಇನ್ನೂ ಅನೇಕ ಬಿರುದುಗಳನ್ನು ಸುಲಭವಾಗಿ ಧರಿಸುತ್ತಾಳೆ - #ಏಕಮಹಿಳೆಅನೇಕಬಿರುದುಗಳು
  • ಮಹಿಳೆಯರನ್ನು ಸಮಾನವಾಗಿ ಪರಿಗಣಿಸಲಾಗುತ್ತಿದೆ ಮತ್ತು ಇತರರಿಗಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ- #ತಾರತಮ್ಯವನ್ನುತೊಡೆದುಹಾಕಿ
  • ವೃತ್ತಿ, ಹವ್ಯಾಸ ಮತ್ತು ಮನೆಯ ಜವಾಬ್ದಾರಿಗಳ ನಡುವೆ ಜುಗಲ್‌ಬಂದಿ ನಡೆಸುತ್ತಿರುವ ಮಹಿಳೆಯರು - #ಆಲ್‌ರೌಂಡರ್‌ಮಹಿಳೆ
  • ಕ್ರೀಡೆಯಲ್ಲಿ ಛಾಪು ಮೂಡಿಸುತ್ತಿರುವ ಮಹಿಳೆಯರು - #ಕ್ರೀಡಾಮಹಿಳೆ
  • ಇಂದು ನೀವು ಏನಾಗಿದ್ದೀರಿ ಎಂದು ನಿಮ್ಮನ್ನು ಪ್ರೇರೇಪಿಸಿದ ಮಹಿಳೆಯರು - #ಸ್ಫೂರ್ತಿದಾಯಕಮಹಿಳೆ
  • ಉದ್ಯಮಿಗಳಾಗಿ ಮಹಿಳೆಯರು   - #ರೂಪಿಸಬಲ್ಲಮಹಿಳೆ

ನಿಯಮಗಳು:

  1. ಸ್ಪರ್ಧಿಗಳು, ನೀಡಲಾದ ಥೀಮ್‌ಗಳು ಅಥವಾ ಮಹಿಳೆಯರಿಗೆ ಸಂಬಂಧಿಸಿದ ಥೀಮ್‌ಗಳಲ್ಲಿ ಕಥೆಗಳು ಮತ್ತು ಕವಿತೆಗಳನ್ನು ಸಲ್ಲಿಸಬಹುದು.
  2. ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವಿತೆ) ಸಲ್ಲಿಸಬಹುದು.
  3. ಸ್ಪರ್ಧಿಗಳು ತಮ್ಮ ಮೂಲ ಬರಹವನ್ನು ಸಲ್ಲಿಸಬೇಕು. ಸಲ್ಲಿಸಲ್ಪಡುವ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
  4. ಪದಗಳ ಮಿತಿ ಇಲ್ಲ.
  5. ಸ್ಪರ್ಧಿಗಳಿಗೆ ಯಾವುದೇ ಭಾಗವಹಿಸುವಿಕೆಯ ಶುಲ್ಕಗಳಿಲ್ಲ.
  6. ಟ್ಯಾಗ್ ವಿಭಾಗದಲ್ಲಿ ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು ತಪ್ಪದೇ, ಖಡ್ಡಾಯವಾಗಿ ಸೇರಿಸಿ.

ವಿಭಾಗಗಳು:

ಕಥೆ

ಕವಿತೆ

ಉಲ್ಲೇಖಗಳು (ಕೋಟ್ಸ್ )

ಆಡಿಯೋ

ಭಾಷೆಗಳು:

ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ಬರಹವನ್ನು ಸಲ್ಲಿಸಬಹುದು.

ಬಹುಮಾನಗಳು:

  • ಕಥೆ, ಕವಿತೆ ಅಥವಾ ಆಡಿಯೊ ವಿಭಾಗದ ಅಡಿಯಲ್ಲಿ 10 ಕ್ಕಿಂತ ಹೆಚ್ಚಿನ ಬರಹವನ್ನು ಸಲ್ಲಿಸುವ ಅಥವಾ 20 ಕ್ಕಿಂತ ಹೆಚ್ಚು ಉಲ್ಲೇಖಗಳನ್ನು ಸಲ್ಲಿಸುವ ಎಲ್ಲ ಸ್ಪರ್ಧಿಗಳು ₹150 ಮೌಲ್ಯದ SM ಶಾಪ್ ವೋಚರ್‌ಗಳನ್ನು ಸ್ವೀಕರಿಸುತ್ತಾರೆ.
  • ಕಥೆ ಮತ್ತು ಕವಿತೆ ವಿಭಾಗದಲ್ಲಿ ಎಲ್ಲಾ ಭಾಷೆಗಳ ಟಾಪ್ 20 ನಮೂದುಗಳನ್ನು, ಸ್ಟೋರಿಮಿರರ್‌ನ ಇ-ಬುಕ್‌ನಲ್ಲಿ ಪ್ರಕಟಿಸಲಾಗುತ್ತದೆ.
  • ವಿಜೇತರು ಮೆಚ್ಚುಗೆಯ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ.
  • ಎಲ್ಲ ಸ್ಪರ್ಧಿಗಳು ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.

ಸಲ್ಲಿಕೆ ಹಂತ - ಮಾರ್ಚ್ 05-20, 2022

ಫಲಿತಾಂಶದ ಘೋಷಣೆ: ಏಪ್ರಿಲ್ 07, 2022

ಸಂಪರ್ಕಿಸಿ:

ಇ-ಮೇಲ್neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49243888

ವಾಟ್ಸಾಪ್ : +91 84528 04735