Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Non Stop November Edition 3 - Advanced

SEE WINNERS

Share with friends

"ನೀವು ಓದಲು ಬಯಸುವ ಒಂದು ಪುಸ್ತಕವಿದ್ದರೆ, ಆದರೆ ಅದನ್ನು ಇನ್ನೂ ಬರೆಯಲಾಗಿಲ್ಲ ಎಂದಾದರೆ, ಆಗ ಆ ಪುಸ್ತಕವನ್ನು ನೀವು ಬರೆಯಲೇಬೇಕು"

              - ಟೋನಿ ಮಾರಿಸನ್


ನೀವು ಎಂದಾದರೂ ಪುಸ್ತಕವನ್ನು ಓದಿದ್ದೀರಾ ಮತ್ತು ಆ ಪುಸ್ತಕದ ನಿರ್ದಿಷ್ಟ ಥೀಮ್‌ನ ಸುತ್ತ ಇನ್ನಷ್ಟು ಹೆಚ್ಚಿನ ಕಥೆಗಳು ಇರಬೇಕೆಂದು ನೀವು ಬಯಸಿದ್ದೀರಾ? ಆದರೆ ದುರದೃಷ್ಟವಶಾತ್ ನೀವು ಎಂದಿಗೂ ಅಂತಹ ಕಥೆಯನ್ನು ನೋಡಲಿಲ್ಲ. ಅಂದರೆ ಯಾರೂ ಕೂಡ ಅಂತಹ ಪ್ರಯತ್ನ ಮಾಡಲಿಲ್ಲವೇ? ಅಂತಹ ಪ್ರಯತ್ನ ಮಾಡುವ ಆ ಒಬ್ಬರು ನೀವೇ ಯಾಕಾಗಬಾರದು?

ಅದರ ಬಗ್ಗೆ ಯೋಚಿಸಲು ನಿಮಗೆ ಎಂದಿಗೂ ಅವಕಾಶ ಸಿಗಲಿಲ್ಲವೇ?

ಅದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.

ಸರಿ, ಈಗ ನಿಮ್ಮ ಅವಕಾಶ. ಸ್ಟೋರಿಮಿರರ್, ನಾನ್ ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್‌ನ 3ನೇ ಆವೃತ್ತಿಯನ್ನು ಘೋಷಿಸಲು ಹರ್ಷಪಡುತ್ತದೆ . ನಮ್ಮ ಈ ಸವಾಲು ನಿಮ್ಮೊಳಗಿನ ಸೃಜನಶೀಲ ಬರಹಗಾರನನ್ನು ಜಾಗೃತಗೊಳಿಸುವ ಗುರಿ ಹೊಂದಿದೆ.

ನಾನ್-ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ ವಿಭಿನ್ನವಾಗಿದೆ ಮತ್ತು ಈ ಬಾರಿ ಈ ಸ್ಪರ್ಧೆಯು ಮೂರು ವಿಭಿನ್ನ ಹಂತಗಳೊಂದಿಗೆ ದೊಡ್ಡದಾಗಿದೆ.

ನೀವು ಒಂದು, ಎರಡು ಅಥವಾ ಎಲ್ಲಾ ಮೂರು ಹಂತಗಳಲ್ಲೂ ಭಾಗವಹಿಸಬಹುದು.

ಎರಡು ಅಥವಾ ಹೆಚ್ಚಿನ ಹಂತಗಳ ಸವಾಲಿನಲ್ಲಿ ಭಾಗವಹಿಸುವುದು ಮತ್ತು ಪೂರ್ಣಗೊಳಿಸುವುದು, ನಿಮ್ಮನ್ನು ನಮ್ಮ ಮೆಗಾ ಬಹುಮಾನಕ್ಕೆ ಅರ್ಹರನ್ನಾಗಿ ಮಾಡುತ್ತದೆ.

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಆರಂಭಿಕ (Beginner) - http://sm-s.in/TbGvSWf

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಮಧ್ಯಂತರ (Intermediate) - http://sm-s.in/njoMHwF

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಅಡ್ವಾನ್ಸ್ (Advance) - http://sm-s.in/zRS6IM7

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ನಾವು ನಿಮಗೆ 30 ದಿನಗಳ ಕಾಲ 30 ವಿವಿಧ ಪುಸ್ತಕಗಳಿಂದ 30 ಪ್ರಾಂಪ್ಟ್‌ಗಳನ್ನು ಒದಗಿಸುತ್ತಿದ್ದೇವೆ. ನೀವು ಪ್ರತಿದಿನ ಒಂದೊಂದು ಪ್ರಾಂಪ್ಟಿನ ಮೇಲೆ ಬರೆಯಬೇಕು. ನೀವು ಮಾಡಬೇಕಾಗಿರುವುದು ಇಷ್ಟೇ, ಪ್ರತಿ ದಿನ ನಿರ್ದಿಷ್ಟ ಪುಸ್ತಕದಿಂದ ನೀಡಲಾದ ಥೀಮಿಗೆ ಸಂಬಂಧಿಸಿದ ನಿಮ್ಮ ಕಥೆಯನ್ನು ನಮಗೆ ಕಳುಹಿಸುವುದು. ಈ ಥೀಮ್, ದಿನದ ಪುಸ್ತಕದ ಬಗ್ಗೆ ಇರುವುದರಿಂದ, ನಿಮ್ಮ ಕಥೆಯನ್ನು ಯಾವುದೇ ಶೈಲಿ, ಯಾವುದೇ ಪ್ರಬೇಧ, ಅಥವಾ ನೀವು ಇಷ್ಟಪಡುವ ಯಾವುದೇ ಪ್ರಕಾರದಲ್ಲಿ ರಚಿಸಬಹುದು.

ಅಡ್ವಾನ್ಸ್ ಹಂತದ ಪ್ರಾಂಪ್ಟಗಳು :

Prompts for Advance level -

ಭಾಷೆಗಳು :

ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ಮರಾಠಿ, ಓಡಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ.

ನಿಯಮಗಳು :

ಎಲ್ಲ ವಿಷಯಗಳ ಮೇಲಿನ, ಎಲ್ಲ ಸಲ್ಲಿಕೆಗಳು ಮತ್ತು ಸರಾಸರಿ ಆರು ಅಥವಾ ಆರಕ್ಕಿಂತ ಹೆಚ್ಚಿನ ಎಡಿಟೋರಿಯಲ್ ಸ್ಕೋರ್ ಅನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ನೀಡಲಾಗಿರುವ ಥೀಮ್/ಪ್ರಾಂಪ್ಟಗಳಿಗೆ ಮಾತ್ರವೇ ನೀವು ಬರೆಯಬೇಕು.

ಸ್ಪರ್ಧಿಗಳು ತಮ್ಮ ಸ್ವಂತ (ಸ್ವರಚಿತ ) ವಿಷಯ/ಕಥೆಯನ್ನು ಸಲ್ಲಿಸಬೇಕು.

ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯ ಮೂಲಕ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಮಾಡಿದ ಯಾವುದೇ ಸಲ್ಲಿಕೆ ಪ್ರವೇಶಕ್ಕೆ ಅರ್ಹವಾಗಿರುವುದಿಲ್ಲ.

ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.

ನಿಮ್ಮ ಭಾಗವಹಿಸುವಿಕೆಯ ಪ್ರಮಾಣಪತ್ರಗಳು ನಿಮ್ಮ ಪ್ರೊಫೈಲ್‌ನಲ್ಲಿ ಪ್ರಮಾಣಪತ್ರ ವಿಭಾಗದ ಅಡಿಯಲ್ಲಿ ಲಭ್ಯವಿರುತ್ತದೆ.

ಬಹುಮಾನಗಳು :

ಎಲ್ಲ ಸ್ಪರ್ಧಿಗಳಿಗೂ ''ಭಾಗವಹಿಸುವಿಕೆ ಪ್ರಮಾಣಪತ್ರ''ವನ್ನು ನೀಡಲಾಗುತ್ತದೆ.

ವಿಜೇತರಿಗೆ ಟ್ರೋಫಿ ನೀಡಲಾಗುವುದು.

ಎಲ್ಲಾ ವಿಜೇತರಿಗೆ ವಿಜೇತ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಮೆಗಾ ಬಹುಮಾನಗಳು:

ನೀವು ಸರಾಸರಿ ಏಳಕ್ಕಿಂತ ಹೆಚ್ಚಿನ ಎಡಿಟೋರಿಯಲ್ ಸ್ಕೋರಿನೊಂದಿಗೆ, ಮೂರು ಹಂತಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಹಂತಗಳನ್ನು ಪೂರ್ಣಗೊಳಿಸಿದರೆ, ಆಗ ನೀವು ವಿಜೇತ ಟ್ರೋಫಿಯ ಜೊತೆ StoryMirror ನಿಂದ ಉಚಿತ ಪುಸ್ತಕ ಪ್ರಕಾಶನದ ಒಪ್ಪಂದಕ್ಕೆ ಅರ್ಹರಾಗುತ್ತೀರಿ.

ಸಲ್ಲಿಕೆ ಅವಧಿ : 2021ರ ನವೆಂಬರ್ 1ರಿಂದ, 2021ರ ಡಿಸೆಂಬರ್ 5ರವರೆಗೆ.

ಫಲಿತಾಂಶ : ಜನೆವರಿ 20, 2022

ಫೀಡಬ್ಯಾಕ್ ಮತ್ತು ಪ್ರಶ್ನೆಗಳಿಗಾಗಿ :

ಇ -ಮೇಲ್ : neha@storymirror.com

ದೂರವಾಣಿ ಸಂಖ್ಯೆ : 022-49240082 / 9372458287 (ಸೋಮವಾರದಿಂದ ಶನಿವಾರದವರೆಗೆ 10am - 7pm)

ವಾಟ್ಸಾಪ್ : +91 8452804735

ಸೂಚನೆ : ನಾನ್ -ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ ಅನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿದೆ. ನೀವು ಒಂದು, ಎರಡು ಅಥವಾ ಎಲ್ಲಾ ಮೂರು ಹಂತಗಳಲ್ಲೂ ಭಾಗವಹಿಸಬಹುದು.

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಆರಂಭಿಕ (Beginner) - http://sm-s.in/TbGvSWf

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಮಧ್ಯಂತರ (Intermediate) - http://sm-s.in/njoMHwF

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಅಡ್ವಾನ್ಸ್ (Advance) - http://sm-s.in/zRS6IM7