Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Inspirational Others

3  

Pushpa Prasad

Inspirational Others

ಅಪ್ಪ

ಅಪ್ಪ

1 min
2


ಕೈ ಹಿಡಿದು ಕೊನೆವರೆಗೂ
ನಡೆಸುವ ಜೀವವೆ ನೀ ತಂದೆ


ಎಲ್ಲವೂ ಕೂಡ ಬರಿ ಸೊನ್ನೆ
ನಿನ್ನೊಲವಿನ ಪ್ರೀತಿ ಮುಂದೆ!!

ನಿನ್ನ ಹೆಗಲ ಮೇಲೆ ಏರಿ ಕುಳಿತರೆ

ಈ ಲೋಕವೆಲ್ಲಾ ಕಾಣುವುದು


ನಿನ್ನ ಬೆರಳ ಹಿಡಿದು ಹೆಜ್ಜೆಯಿಡಲು
ಸನ್ಮಾರ್ಗವೇ ತೋರುವುದು!!

ಅಪ್ಪ ಜೀವಮಾನದ ನಿನ್ನ ಸಾಧನೆಗೆ
ನನ್ನ ತಲೆ ಬಾಗುವುದೆಂದೂ
ನೀ ಹೇಳಿ ಕೊಟ್ಟ ಗುರಿಯ ಕಡೆಗೆ
ನನ್ನ ಹೆಜ್ಜೆ ಎಂದೆಂದಿಗೂ!!


ಬದುಕಿನ

ವಿಶ್ವಾಸಕೆ
ಮಹತ್ತರವಾದ ಹೆಸರೇ ನೀನು


ನಿನ್ನನು ಅಪ್ಪನಾಗಿ ಪಡೆಯಲು
ನಾನೇ ಬಹಳ ಧನ್ಯಳು!!

ಸರಿಸಾಟಿಯಿಲ್ಲ ನಿನ್ನ ಪರಿಶ್ರಮಕೆ
ಈ ಭೂಮಿ ಆ ಬಾನು
ನಿನ್ನ ಬೆವರಿನ ಕಾಯಕಕ್ಕೆ
ಎಂದೆಂದು ನಮಿಸುವೆ ನಾನು!!

✍️ ಪುಷ್ಪ ಪ್ರಸಾದ್ ಉಡುಪಿ 


Rate this content
Log in

Similar kannada poem from Inspirational