Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Ranjitha M

Drama Inspirational Children

4  

Ranjitha M

Drama Inspirational Children

ಈ ಹುಚ್ಚು ಮಳೆಯೆಂದರೆ..!?

ಈ ಹುಚ್ಚು ಮಳೆಯೆಂದರೆ..!?

1 min
272


ಅರಳಿತೊಂದು ಮೊಗ್ಗು ಹೂವಾಗಿ

ಮಳೆಯಲಿ ನೆನೆಯುತಲೆ ನಸುನಕ್ಕು

ತರುಲತೆಗಳಿಗು ಹಿಗ್ಗು ಈ ಹುಚ್ಚು ಮಳೆಯಂದರೆ!!


ಮಾಮರದ ಕೋಗಿಲೆ ಹಾಡೊಂದ ಹಾಡಿತು

ಮನಸುಬಿಚ್ಚಿ ನವಿಲೊಂದು ಕುಣಿಯಿತು

ಪ್ರಾಣಿಪಕ್ಷಿಗು ಪ್ರೇಮ ಈ ಹುಚ್ಚು ಮಳೆಯೆಂದರೆ!!


ಗದ್ದೆಯೊಳಗೆ ನೆಟ್ಟಿ ಮಾಡುವ ಅಜ್ಜಿ

ಜನಪದ ಗೀತೆಯ ಕಟ್ಟಿ ಗುನುಗಿದಳು

ಕೃಷಿಕರಿಗು ಖುಷಿ ಈ ಹುಚ್ಚು ಮಳೆಯೆಂದರೆ!!


ಶಾಲೆಗೆ ರಜ ಮಜವೆಂದು ಮಕ್ಕಳು ನಲಿದರು

ಮೈ ಚಂಡಿ ಆಗುವವರೆಗು ಕೆಸರಲಿ ಬಿದ್ದು ಹೊರಳಿದರು

ಚಿಣ್ಣರಿಗು ಸಂಭ್ರಮ ಈ ಹುಚ್ಚು ಮಳೆಯೆಂದರೆ!!


ಹಾಗೆ ಬಂದು ಹೀಗೆ ಹೋಗುವ ನೆಂಟನಲ್ಲ ಈ ಮಳೆ

ಆರುತಿಂಗಳುಗಳ ಕಾಲ ಇರಲೆಂದೆ ಬಂದ ಖಾಯಂ ಅತಿಥಿ

ಮೌನಿಗಳಿಗು ಮನಸಿಗುಲ್ಲಾಸ ಈ ಹುಚ್ಚು ಮಳೆಯೆಂದರೆ.


Rate this content
Log in

Similar kannada poem from Drama