Akshatha S

Drama Romance

1  

Akshatha S

Drama Romance

02 ಸೃಷ್ಟಿ

02 ಸೃಷ್ಟಿ

4 mins
176


ಇಲ್ಲಿಯವರೆಗೆ...


ನಮ್ ಕಥಾ ನಾಯಕಿ ಸೃಷ್ಟಿ, ಅವಳ ಮತ್ತು ಅವಳ ಕುಟುಂಬದ ಪರಿಚಯವಾಯಿತು.


ಮುಂದುವರೆದು...


ಕೊನೆಗೂ ನಮ್ ಹುಡ್ಗಿ ನಮ್ ಓದುಗರನ್ನು ಮೀಟ್ ಮಾಡೋಕೆ ಬಂದ್ಲು.


ಹಾಯ್ ಎವ್ರಿ ಒನ್ ಸಾರಿ ಲೇಟ್ ಆಯ್ತು, ಎಲ್ಲಾ ಇವಳಿಂದಾನೆ 10 ಗಂಟೆಗೆ ಎಳಿಸೋಕೆ ಹೇಳಿದ್ರೇ ಇವಾಗ ಬಂದಿದ್ದಾಳೆ. ಅದಕ್ಕೆ ಲೇಟ್ ಆಗಿದ್ದು ಮತ್ತೊಮ್ಮೆ ಸಾರಿ. ಇನ್ನು ಒಂದು ವಾರದಲ್ಲಿ ಕಾಲೇಜ್ ಶುರು ಆಗುತ್ತೆ ಅವಾಗ ಬೇಗ ಎಳ್ತಿನಿ ರಜೆ ಅಲ್ವ ಲೇಟ್ ಆಯ್ತು😜.


ಪ್ರತಿಲಿಪಿ ಓದುಗರ ಜೊತೆ ಮಾತಾಡಿ ಅಂದಿನ ದಿನ ಮುಗ್ಸಿದ್ರು. ರಾತ್ರಿ ಊಟದ ಸಮಯ ಈ ಸೃಷ್ಟಿ ಸುಮ್ನೆ ಊಟ ಮಾಡಿದ್ರೆ ಪ್ರಳಯ ಗ್ಯಾರಂಟಿ ಅದಕ್ಕೆ ತನ್ನ ಕೆಲಸ ಶುರು ಮಾಡಿದ್ಲು. ಸೃಷ್ಟಿ:- ಅಮ್ಮ ಸಾಂಬಾರ್ ಖಾರ ಇದೆ ಮೊಸರು ಬೇಕು... ಲಕ್ಷ್ಮಿ ಅವರು ಸರಿ ಅಂತ ಹೇಳಿ ಮೊಸರು ಕೊಟ್ರು... ಅಮ್ಮ ಮೊಸರು ಹುಳಿ ಇದೆ ಬೇಡ ಕೆಮ್ಮು ಶುರು ಆಗುತ್ತೆ ತುಪ್ಪ ಕೊಡು ಲಕ್ಷ್ಮಿ ಅವರು ಮೊಸರು ತೆಗೆದು ತುಪ್ಪ ಕೊಟ್ರು ಈ ಸೃಷ್ಟಿ ಅನ್ನ ತುಪ್ಪ ತಿನ್ನೋಕೆ ಶುರು ಮಾಡ್ಬೇಕು ಮತ್ತೆ ಅಮ್ಮಾ... ಅಂತ ರಾಗ ತೆಗ್ದ್ಲು ಲಕ್ಷ್ಮಿ ಯವರು ಮತ್ತೆ ಏನು ಅಂತ ಕೇಳಿದ್ರೆ ಊಟ ಬೇಡ ಅಂತ ಹೇಳಿ ಊಟ ಬಿಟ್ಟು ತಮ್ಮ ರೂಂ ಗೆ ಹೋದ್ಲು. ಅವಳು ಉಪವಾಸ ಇರೋದು ನೋಡಿ ಈ ಮೂರಲ್ಲು ಆತಂಕ ಶುರು ಆಯ್ತು ಏನ್ ಆಯ್ತು ಏನೋ ಅಂತ. ರಾಮ್ ತನ್ನ ಆತಂಕವನ್ನು ತೋರಿಸಿ ಕೊಳ್ಳದೆ ಮೊದಲು ತನ್ನ ಊಟ ಮುಗಿಸಿದ.


ನಂತರ ತಂಗಿಯ ಹಸಿವಿಗೆ ಮುಕ್ತಾಯ ಆಡಲು ತಾನೇ ಊಟದ ತಟ್ಟೆ ತಗೆದು ಕೊಂಡು ಅವಳ ರೂಂ ಗೆ ಹೋದ ಅಲ್ಲಿ ಅವಳು ಬುಕ್ ನಲ್ಲಿ ಮುಗುಳುಗಿ ಹೋಗಿದ್ದಳು. ಅವಳು ಎಷ್ಟು ತರ್ಲೆ ಮಾಡಿದ್ರು ಕೆಲವೊಂದು ಬಾರಿ ಅವಳ ಅಣ್ಣ ಊಟ ಮಾಡ್ಸ್ಲಿ ಅಂತ ಊಟ ಬಿಟ್ಟು ಬಂದಿದ್ದು, ನೇರವಾಗಿ ಕೇಳಿದ್ರೇ ಬೈದ್ರೇ ಅನ್ನೋ ಭಯ ಅದಕ್ಕೆ ಅವಳು ಈ ಡ್ರಾಮ ಮಾಡಿದ್ದು. ಇದನ್ನು ಅರಿಯದ ಮೂವರು ಆತಂಕ ಪಟ್ಟಿದ್ದರು. ಅಣ್ಣ ರೂಂ ಗೆ ಬಂದಿದ್ದನ್ನು ಗಮನಿಸದೆ ಪುಸ್ತಕದಲ್ಲಿ ಮುಗುಳುಗಿದ್ದಳು. ರಾಮ್ ಬಂದು ಊಟ ಮಾಡು ಅಂತ ಹೇಳಿದಾಗಲೂ ಊಟ ಮಾಡಲಿಲ್ಲ ಅವನೇ ಬಲವಂತದಿಂದ ಊಟ ಮಾಡಿಸಿ ಹೋದ. ರಾಮ್ ಹೊರಗೆ ಹೋದ ತಕ್ಷಣ ತನ್ನ ಆಸೆ ಈಡೇರಿದ ಖುಷಿಗೆ ಎರಡು ಸ್ಟೇಪ್ ಕೂಡ 💃🏻💃🏻💃🏻 ಹಾಕಿದ್ಲು.


********************************


ನಮ್ ಹೀರೋ ಟೈಂನ ಫಾಲೋ ಮಾಡಲ್ಲ ಟೈಂ ಇವನನ್ನು ಫಾಲೋ ಮಾಡುತ್ತೆ. ಮಾತು ಕಡಿಮೆ ಕೆಲಸ ಅಧಿಕ ಎನ್ನುವ ಗುಣ ನಿದ್ದೆಗೂ ಇವನಿಗೂ ಸ್ವಲ್ಪ ದೂರನೇ 5 ಗಂಟೆಗೆ ಅಲರಾಂ ಫಿಕ್ಸ್ ಮಾಡಿದ್ರೇ 4.55 ಕ್ಕೆ ಏಳುವ ವ್ಯಕ್ತಿ ಟೈಂಗೆ ಟೈಂ ಬಗ್ಗೆ ಉಪನ್ಯಾಸ ನೀಡ್ತಾನೆ ಏನ್ ಮಾಡೋದು ಗಡಿಯಾರಕ್ಕೆ ಕಿವಿ ಇಲ್ಲ.


ನಮ್ ಹೀರೋ ಕುಟುಂಬಕ್ಕೆ ಬರೋಣ‌ ತಂದೆ ಸೂರ್ಯ, ತುಳಸಿ ಗ್ರೂಪ್ ಆಪ್ ಕಂಪನಿಯ ಮಾಲಿಕರು, ಇವರ ಸಮಯಪ್ರಜ್ಞೆ ಕೆಲಸದಲ್ಲಿನ ಆಸಕ್ತಿಯೆ ಇವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವಂತೆ ಮಾಡಿರುವುದು. ಜೊತೆಗೆ ಸ್ನೇಹ ಮಯಿ ವ್ಯಕ್ತಿತ್ವ ಹೊಂದಿರುವರು. ತಾಯಿ ಗಾಯಿತ್ರಿ ಇವರು ಗೃಹಿಣಿ. ಇವರು ಯಾವುದೇ ರೀತಿಯ ವ್ಯವಹಾರಗಳಲ್ಲಿ ಭಾಗವಾಗದೇ ಕೇವಲ ಮನೆ ಮಕ್ಕಳಿಗೆ ತಮ್ಮ ಜೀವನ ಮೀಸಲಿಟ್ಟವರು. ಇವಾರ ಮೊದಲ ಸಂತಾನವೇ ನಮ್ಮ ನಾಯಕ ಸಾರ್ಥಕ್, ಹೆಸರಿಗೆ ತಕ್ಕಂತ ವ್ಯಕ್ತಿತ್ವ ಉಳ್ಳ ವ್ಯಕ್ತಿ ಸಾರ್ಥಕತೆಗೆ ಮತ್ತೊಂದು ಹೆಸರೇ ಈ ಸಾರ್ಥಕ್.


ಯಾವುದೇ ಹೀರೋಗಿಂತ ಕಡಿಮೆ ಇಲ್ಲ ಈ ಹೀರೋ 6 ಅಡಿ ಎತ್ತರ ಯೋಗ, ಧ್ಯಾನಗಳ ಮೂಲಕ ಸಧೃಢ ಕಾಯ ಹೊಂದಿರುವ ಹಾಲ್ಗೆನ್ನೆಯ ಮುಗುಳ್ನಗೆಯ ಚೆಲುವ ಹುಡುಗಿಯರು ಮನಕದ್ದ ಚೋರ ಚಿತ್ತ ಚೋರ ಈ ಸಾರ್ಥಕ್. ಜೊತೆಗೆ ಫೋಟ್ರೋಗ್ರಫಿಯಲ್ಲೂ ಅತಿಯಾದ ಆಸಕ್ತಿ ನಿಸರ್ಗ ಪ್ರಿಯಾ ನಿಸರ್ಗವನ್ನು ಸೆರೆಯುವುದು ಇವನ ಅತಿಪ್ರಿಯ ಕೆಲಸ.


ಇವರ ಮುದ್ದು ಮನೆಯ ಮಗಳು ಸೂರ್ಯ- ಗಾಯಿತ್ರಿ ರವರ ಎರಡನೇ ಸಂತಾನ ಸಾನ್ವಿ. ಮಾತಿನ ಮಲ್ಲಿ ಸಾರ್ಥಕ್ ನ ಮುದ್ದಿನ ತಂಗಿ, ಅಣ್ಣನೇ ಪ್ರಪಂಚ. ಚೈತನ್ಯದ ಚಿಲುಮೆ, ಸಹಜ ಸುಂದರಿ.


ಇದು ನಮ್ಮ ಸಾರ್ಥಕ್ ಕುಟುಂಬದ ಪರಿಚಯ.


ಸಾರ್ಥಕ್


ಲಂಡನ್ ನ ಕೆಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಎಂ.ಬಿ.ಎ ಮುಗಿಸಿ ವಾಪಸ್ ಇಂಡಿಯಾಕ್ಕೆ ಬರೋ ಖುಷಿಯಲ್ಲಿದ್ದಾನೆ, ಅವನ ಖುಷಿಗೆ ಎರಡು ಮೂಲ ಕಾರಣಗಳಿವೆ.


ಒಂದು ತಂದೆಯ ಜವಾಬ್ದಾರಿಯನ್ನು ಕಡಿಮೆ ಮಾಡಿ ಆ ಜವಾಬ್ದಾರಿಗಳನ್ನು ತಾನು ನಿರ್ವಹಿಸಲು.


ಎರಡನೇಯದು...


ಹರುಷ ತಾಳದೆ ಹುಚ್ಚೆ ಹಿಡಿದರೆ

ಮೊದಲ ನೋಟಕೆ ಹೃದಯ ನಿಂತರೆ

ಏನು ಮಾಡಲಿ ನಾನೇನು ಮಾಡಲಿ

ನ ನ ನ ನನ್ನ ನೋಡುತ ನೀನು ನಕ್ಕರೆ

ಆಗೋ ಖುಷಿಯಲ್ಲಿ ಉಸಿರೇ ಹೋದರೆ

ಏನು ಮಾಡಲಿ ನಾನೇನು ಮಾಡಲಿ

ಈ ಹೆದರಿಕೆ ಹಿತವನೆ ಕೊಡುತಿದೆ

ಆ ಮಿಲನಕೆ ಮುನ್ನುಡಿ ಬರೆದಿದೆ

ಬಂದೆ ಬಂದೆ ನಾನು ಇನ್ನೇನು

I am the floor ನೀನೆ ನನ್ನ love

You're my cheese everybody freeze

I am the floor ನೀನೆ ನನ್ನ love

You're my cheesie bubblie bee

I am the floor ನೀನೆ ನನ್ನ love

You're my cheese everybody freeze

I am the floor ನೀನೆ ನನ್ನ love

You're my cheesie bubblie bee


ತನ್ನ ಮನದ ದೇವತೆಯನ್ನು ಕಾಣಲು ಅವಳ ಜೊತೆ ಬಾಳುವ ಅವಕಾಶ ಪಡೆಯುವ ಖುಷಿಯಿಂದ ಇಂಡಿಯಾಕ್ಕೆ ವಾಪಸ್ ಬರುವನಿದ್ದಾನೆ.


ಒಂದು ಶುಭ ಶುಕ್ರವಾರ ತುಳಸಿ ನಿವಾಸ ಮುಂಜಾನೆಯ ಸಂದರ್ಭದಲ್ಲಿ ನವವಧುವಿನಂತೆ ಅಲಂಕೃತಗೊಂಡು ಅರಮನೆಯ ವೈಭೋಗವನ್ನು ತುಂಬಿಕೊಂಡು ನೋಡುವವರ ಕಣ್ಮನ ಸಳೆಯುವಂತೆ ಸಜ್ಜಾಗಿತ್ತು. ಮನೆಯ ಎಲ್ಲಾ ಬಂಧುಗಳು ಇವರ ಸಂತೋಷದಲ್ಲಿ ಭಾಗಿಯಾಗಿದ್ದರು. ಇವರ ಈ ಸಂತೋಷಕ್ಕೆ ಮೂಲ ಕಾರಣ ಸಾರ್ಥಕ್, ಇವನು ಇಂಡಿಯಾಗೆ ಬರುವುದೆ ಇವರ ಈ ಸಂತೋಷಕ್ಕೆ ಕಾರಣವಾಗಿದೆ.


ಇವನ ಸ್ವಾಗತ ಇವನ ಎಲ್ಲ ಕುಟುಂಬದವರು ಆಗಮಿಸಿದ್ದರು. ಆದರು ಒಂದು ಕುಟುಂಬ ಮಾತ್ರ ಬಂದಿರಲಿಲ್ಲ, ಯಾವುದು ಅಂತ ಜಾಸ್ತಿ ಯೋಚನೆ ಮಾಡಬೇಡಿ ನಾನೇ ಹೇಳ್ತಿನಿ, ಆ ಕುಟುಂಬ ಅವನ ಮನದ ದೇವತೆಯ ಕುಟುಂಬ ಕಾರಣ ಇಷ್ಟೆ‌ ಅವರು ಬರುವುದನ್ನು ಅವನೇ ತಡೆದಿದ್ದ. ನೇರವಾಗಿ ಅವನೇ ಅವಳನ್ನು ಭೇಟಿಯಾಗಲು, ಆ ಕುಟುಂಬದ ಎಲ್ಲರಿಗೂ ಇವನು ಬರುವುದು ತಿಳಿದಿತ್ತು ಆದರೆ ಅವನ ರಾಜಕುಮಾರಿಗೆ ಮಾತ್ರ ತಿಳಿದಿರಲಿಲ್ಲ ಎಲ್ಲರೂ ಇವನ ಮನೆಗೆ ಬಂದ್ರೇ ಎಲ್ಲಿ ಗೊತ್ತಾಗುತ್ತೊ ಸರ್ಪ್ರೈಜ್ ಹಾಳಾಗುತ್ತೋ ಅನ್ನೋ ಕಾರಣಕ್ಕೆ ಈ ಕುಟುಂಬದವರು ಆಗಮಿಸಿರಲಿಲ್ಲ.


ಎರಡು ದಿನಗಳ ಹಿಂದೆ


ಸಾರ್ಥಕ್:- ಹಲೋ ರಾಜಕುಮಾರಿ.


ರಾಜಕುಮಾರಿ:- ಹಲೋ ಮಿಸ್ಟರ್, ರಾಜಕುಮಾರ್ ಸಾರ್ಥಕ್ ರವರೆ ತಮ್ಮ ಓದು ಮುಗಿತು ತಾನೇ ಅಲ್ಲೇ ಇನ್ನು ಏನ್ ಮಾಡ್ತಾ ಇದಿಯಾ ಯಾವಾಗ ಬರ್ತಿಯಾ?


ಸಾರ್ಥಕ್:- ಇಂಡಿಯಾಕ್ಕೆ ಬರೋ ಮನಸು ಇಲ್ಲ ಕಣೇ.


ರಾಜಕುಮಾರಿ:- ಯಾಕೋ ಅಲ್ಲೇ ಯಾವ್ದಾದ್ರೂ ಬಿಳಿ ಜಿರ್ಲೇನಾ ಗಂಟ್ ಹಾಕೊಂಡಿದಿಯಾ ಹೇಗೆ 😀?


ಸಾರ್ಥಕ್:- 🙄 ಆ ಕರ್ಮ ನನಗಿಲ್ಲ ನಾನ್ ಮದ್ವೆ ಆದ್ರೆ ಭಾರತ ನಾರಿ ಅದರಲ್ಲು ಕನ್ನಡದ ಹುಡುಗಿನಾ ತಿಳಿತಾ?


ರಾಜಕುಮಾರಿ:- ಮತ್ತೆ ಯಾಕೆ ಇನ್ನು ಅಲ್ಲೇ ಇರೋದು.


ಸಾರ್ಥಕ್:- ಇಲ್ಲೆ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಕೆಲಸ ಸಿಕ್ಕಿದೆ ಎರಡು ವರ್ಷ ಕೆಲಸ ಮಾಡಿ ಆಮೇಲೆ ಅಲ್ಲಿಗೆ ಬರ್ತಿನಿ.


ರಾಜಕುಮಾರಿ:- ಇಲ್ಲೆ ಬಂದು ಆ ಕೆಲ್ಸ ಮಾಡು ಅಲ್ಲೇ ಮಾಡ್ಬೇಕಾ 😔


ಸಾರ್ಥಕ್:- ಹ್ಮ್ ಕಣೋ ಟಾಪ್ ಕಂಪನಿ ಇಲ್ಲಿ ಕೆಲಸ ಮಾಡಿ ಬಂದ್ರೆ ಅದರ ಅನುಭವದ ಮೇಲೆ ಅಪ್ಪನ ಕಂಪನಿನ ಅಭಿವೃದ್ಧಿ ಮಾಡ್ಬಹುದಲ್ವ ಅದಕ್ಕೆ.


ರಾಜಕುಮಾರಿ:- ಇದೇ ನಿನ್ನ ಕೊನೆ ನಿರ್ಧಾರನ.


ಸಾರ್ಥಕ್:- ಹ್ಮ್


ರಾಜಕುಮಾರಿ:- ಸರಿ ಯಾವಾಗಾದ್ರು ಬಾ ಬಾಯ್.


ಸಾರ್ಥಕ್:- ಸರಿ ಬಾಯ್


ಅವಳ ಬೇಜಾರ್ ನೋಡಿ ಮಾತು ಮುಂದುವರೆಸಿದ್ರೆ ಸರ್ಪೈಜ್ ಆಳುತ್ತೆ ಅಂತ ಅಲ್ಲಿಗೆ ಅವರ ಮಾತು ಕತೆಗೆ ಅಂತ್ಯ ಹಾಡಿದ.


ಮುಂದುವರೆಯುವುದು...



Rate this content
Log in

Similar kannada story from Drama