Vijaya Bharathi

Classics Inspirational Others

3  

Vijaya Bharathi

Classics Inspirational Others

ಆಪ್ತಮಿತ್ರ

ಆಪ್ತಮಿತ್ರ

1 min
336


ಸ್ಟೋರಿ ಮಿರರ್ ನಾನ್ ಸ್ಟಾಪ್ ನವಂಬರ್ (ಬೆಗಿನ್ನೆರ್) 


ಕಥೆ (1)

ವಿಷಯ : ಸ್ನೇಹಿತ


ಒಂದು ವಾರದಿಂದ ಕಿಡ್ನಿ ದಾನಿಗಳಿಗಾಗಿ ಕಾಯುತ್ತಿದ್ದ ಮಂಜುವಿಗೆ ಇನ್ನೂ ಯಾರೂ ಸಿಕ್ಕಿರಲಿಲ್ಲ. ಅವನ ಹತ್ತಿರ ಹೇರಳವಾಗಿ ಧನವಿದ್ದರೂ ದಾನಿಗಳು ಸಿಗದೆ ವೈದ್ಯರು ಸಹ ಕೈಚೆಲ್ಲಿದ್ದರು. ತನ್ನ ಪ್ರಾಣಸಖನ ಈ ಪರಿಸ್ಥಿತಿಯನ್ನು ನೋಡುತ್ತಿದ್ದ ಗಿರೀಶ್ ತನ್ನ ಒಂದು ಕಿಡ್ನಿ ಕೊಡಲು ಸಿದ್ಧನಾಗಿದ್ದರೂ, ಅವನ ಮನೆಯಲ್ಲಿ ಅವನ ಹೆಂಡತಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ಹೆಂಡತಿಯನ್ನು ಒಪ್ಪಿಸಲು ಗಿರೀಶ್ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದಾಗ, ಅವನು ಒಂದು ನಿರ್ಧಾರಕ್ಕೆ ಬಂದ. 

ನಲ್ವತ್ತು ವಯಸ್ಸಿನ ತನ್ನ ಸಮವಯಸ್ಕನಾಗಿರುವ ತನ್ನ ಗೆಳೆಯ ಮಂಜುವನ್ನು ಹೇಗಾದರೂ ಉಳಿಸಿಕೊಳ್ಳಲು ಧೃಡವಾಗಿ ನಿರ್ಧರಿಸಿದ ಗಿರೀಶ್, ತಾನು ಕೆಲಸದ ದಿನಗಳು ಆಫೀಸ್ ಮೇಲೆ ಪರಸ್ಥಳಕ್ಕೆ ಹೋಗುವುದಾಗಿ ತಿಳಿಸಿ, ಮನೆಯಿಂದ ಹೋಟೆಲ್ನಲ್ಲಿ ಉಳಿದುಕೊಂಡ. 

ಆ ನಂತರ ಮಂಜುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ ಹೋಗಿ, ತನ್ನ ಕಿಡ್ನಿ ಒಂದನ್ನು ದಾನ ಮಾಡಿ, ತನ್ನ ಆಪ್ತಮಿತ್ರನನ್ನು ಉಳಿಸಿಕೊಂಡ. ತನಗಾಗಿ ಇಷ್ಟು ದೊಡ್ಡ ತ್ಯಾಗ ಮಾಡಿದ ತನ್ನ ಗೆಳೆಯನ ಉಪಕಾರವನ್ನು ನೆನೆದು ಮಂಜುವಿನ ಮನ ಮೂಕವಿಸ್ಮಿತವಾಯಿತು.


Rate this content
Log in

Similar kannada story from Classics