Ashwini k

Classics

2  

Ashwini k

Classics

ಅಜ್ಜಿಯ ನೆನಪಲ್ಲಿ

ಅಜ್ಜಿಯ ನೆನಪಲ್ಲಿ

1 min
302


ಅಂದು ಶನಿವಾರ ರಾತ್ರಿ ಎಲ್ಲರೂ ಖುಷಿಯಾಗಿ ಪರಸ್ಪರ ತಮಾಷೆ ಮಾತುಗಳನ್ನಾಡುತ್ತಾ ನಾಳೆ ಕೆಲಸಕ್ಕೆ ರಜೆ ತಾನೇ ಸ್ವಲ್ಪ ಹೊತ್ತಾಗಿ ಎದ್ದರೂ ಪರವಾಗಿಲ್ಲ ಎಂದು ಕೊಳ್ಳುತ್ತಾ ಚಾಪೆ ಹಿಡಿದರು.


ಮುಂಜಾನೆ ನಾಲ್ಕು ಗಂಟೆಯಾಗುವಷ್ಟರಲ್ಲಿ ಫೋನ್ ಟ್ರೀನ್ ಟ್ರೀನ್ ಎಂದು ಕೂಗುತ್ತಿತು.ಆದರೆ ಮನೆಯಲ್ಲೆಲ್ಲರೂ ನಿದ್ರಾದೇವಿಯನ್ನಪ್ಪಿಕೊಂಡಿದ್ದರಿಂದ ಯಾರಿಗೂ ಎಚ್ಚರವಾಗಲಿಲ್ಲ. ಪುನಃ ಫೋನ್ ಗೋಳಿಡುತ್ತಿತು. ಸಡನ್ನಾಗಿ ಪುಟ್ಟಿ ಎಚೆತ್ತು "ಅರೆ ಯಾರು ಇಷ್ಟೋತಿಗೆ ಫೋನ್ ಮಾಡುತ್ತಿದ್ದಾರೆ!" ಎಂದು ಪುಟ್ಟಿ ಗಾಬರಿಗೊಂಡಳು. "ಅರೆ ಅಣ್ಣನದ್ದು ಫೋನ್, ಇದ್ಯಾಕೆ ಈ ಹೊತ್ತಲ್ಲಿ ಕರೆ ಮಾಡುತ್ತಿದ್ದಾನೆ?" ಎಂದುಕೊಳ್ಳುತ್ತಾ ಪುಟ್ಟಿ ಮಾತನಾಡಿಸಿದಳು.


ತಕ್ಷಣ ಪುಟ್ಟಿ ಸ್ಥಬ್ಧಳಾಗಿ ಬಿಟ್ಟಳು. ಆಡಳು ಮಾತೇ ಬರುತಿಲ್ಲ, ಮನಸೆಲ್ಲಾ ದುಃಖ ಆವರಿಸಿತ್ತು. ಕಣ್ಣೀರು ಇಳಿದು ನೆಲವನ್ನು ಚುಂಬಿಸುತ್ತಿದ್ದವು .


ವಿಷಯ ಬೇರೇನೂ ಆಗಿರಲಿಲ್ಲ ತನ್ನ ಅಜ್ಜಿ ಪರಲೋಕ ಸೇರಿದರು. ಪುಟ್ಟಿ ಬೇಗನೆ ಅಮ್ಮ,ಅಪ್ಪ ಎಲ್ಲರನ್ನೂ ಎಬ್ಬಿಸಿ ವಿಷಯ ತಿಳಿಸಿದಳು. ಅಮ್ಮ ಗೋಳೆಂದು ಅತ್ತೇ ಬಿಟ್ಟಳು. ಕೂಡಲೇ ಅಜ್ಜಿ ಮನೆಗೆ ತೆರಳಿದರು. ಬರುವ ದಾರಿಯಲ್ಲಿ ಪುಟ್ಟಿಯ ಮನಸ್ಸು ಅಜ್ಜಿಯ ನೆನಪುಗಳನ್ನು ಜೋಡಿಸುತ್ತಿದ್ದವು. ನೆನ್ನೆ ತಾನೇ ತನ್ನಲ್ಲಿ ಮಾತನಾಡಿಸಿದ ಅಜ್ಜಿ. ನಿನ್ನನ್ನು ಇನ್ಯಾವಾಗ ನೋಡಲಿ ಮಗ ಎಂದು ಹೇಳುತ್ತಿರುವ ಅಜ್ಜಿ ಅವಳ ಕಣ್ಮುಂದೆ ನಿಂತಿರುವ ಹಾಗೆ ಭಾಸವಾಗುತ್ತಿತ್ತು. ಅಜ್ಜಿ ಹೇಳಿದಂತಹ ನೀತಿಬೋಧಕ ಕತೆಗಳು, ಅಜ್ಜಿಯೊಂದಿಗೆ ಆಟವಾಡುತ್ತಿದ್ದ ಆ ಸವಿ ನೆನಪುಗಳು. ಇವೆಲ್ಲಾ ಮಾಸಿಹೋಗುತ್ತಿರುವ ಹಾಗೆ. ನೆನಪುಗಳೆಲ್ಲಾ ಈ ಒಂದು ಕ್ಷಣದಲ್ಲಿ ಕೊನೆಗೂಳ್ಳುವುದು ಎಂಬ ದುಃಖವು ಪುಟ್ಟಿಯ ಮನಸ್ಸನ್ನು ಚಂಚಲಗೊಳಿಸಿತು. ವಾತಾವರಣವಿಡೀ ಸ್ಥಭ್ದವಾಗಿತ್ತು. ಊಧುಬತ್ತಿ ಗಂಧ ವಾಯುವಿನಲ್ಲಿ ವಿಲೀನಗೊಂಡಿತ್ತು. ಅಜ್ಜಿಯನ್ನು ಚಾವಡಿಯಲ್ಲಿ ಮಲಗಿಸಿದ್ದರು. ಆ ದೃಶ್ಯವನ್ನು ಕಂಡಾಗ ಪುಟ್ಟಿಯ ಕಂಬನಿ ಧರ ಧರನೆ ನೆಲಕ್ಕಿಳಿಯಿತು. ಅಮ್ಮ ಗೋಳೆಂದು ಅಳತೊಡಗಿದರು.ಎಲ್ಲರೂ ಅಮ್ಮನನ್ನು ಸಮಾಧಾನ ಪಡಿಸಿದರು.


ಪುಟ್ಟಿಗೆ ಅಜ್ಜಿ ಇನ್ನೂ ಮಲಗಿದ್ದಾರೆ ಎಂದೇ ಭಾಸವಾಗುತ್ತಿತ್ತು. ಮನಸ್ಸು ಸಮಾಧಾನಪಡು ಎಂದು ಪಿಸುಗುಟ್ಟುತ್ತಿತ್ತು.

ಮನುಷ್ಯನಾಗಿ ಹುಟ್ಟಿದರೆ ಒಂದಲ್ಲ ಒಂದು ದಿನ ಇಹಲೋಕ ತ್ಯಜಿಸಲೇ ಬೇಕು. ಕಾಲ ನಿಯಮವದು.ಎನ್ನುತ ಪುಟ್ಟಿ ತನ್ನನ್ನು ತಾನೇ ಸಮಾಧಾನಪಡಿಸಿಕೊಂಡಳು.


Rate this content
Log in

Similar kannada story from Classics