Shubha Kamat

Comedy Drama Thriller

4.1  

Shubha Kamat

Comedy Drama Thriller

ಬಯಲಾದ ರಹಸ್ಯ

ಬಯಲಾದ ರಹಸ್ಯ

3 mins
531


ಅದೊಂದು ಸುಂದರವಾದ ಗಿಡ ಮರಗಳಿಂದ ಕೂಡಿದ ಸ್ವಚ್ಚಂದ ಶಾಂತವಾದ ಪ್ರದೇಶ, ಬೆಂಗಳೂರಿನಂತಹ ಜನದಿಟ್ಟ ಊರಿನಲ್ಲೂ ಕಾಣಸಿಗುವ ಕೆಲವೇ ಕೆಲವೂ ಏರಿಯಾಗಳಲ್ಲೊಂದು.

ಅಲ್ಲೊಂದು ಎಂಟು ಮನೆಗಳಿರುವ ಒಂದು ಪುಟ್ಟ ಅಪಾರ್ಟ್ಮೆಂಟ್ "ಪ್ರನವಿ ಎನಕ್ಲೇವ". ಎಲ್ಲರು ಅಲ್ಲಿ ಒಂದೇ ಕುಟುಂಬದವರಂತೆ ಬದುಕುತ್ತಿರುತ್ತಾರೆ.

ಈತ್ತೀಚಿನ ಕೆಲವು ದಿನಗಳಿಂದ ಅಲ್ಲೊಂದು ನಿಗೂಡ ಘಟನೆ ನಡೆಯುತ್ತಿದೆ. ದಿನವೂ ರಾತ್ರಿ ಸುಮಾರು ಎರಡು ಮೂರು ಗಂಟೆ ಸಮಯಕ್ಕೆ ಭಯಾನಕವಾಗಿ ಕಿರುಚಿದ ಸದ್ದೊಂದು ಕೇಳಿಬರುತ್ತಿದೆ.

ಅದೊಂದು ಭಾನುವಾರ ರಾತ್ರಿ ಎಂದಿನಂತೆ ತಿಂಗಳ ಚಟುವಟಕೆಗಳ ವಿಚಾರವಾಗಿ ಮೀಟಿಂಗಲ್ಲಿ ಈ ವಿಷಯದ ಪ್ರಸ್ತಾಪವನ್ನು ಒಬ್ಬರು ತೆಗೆದರು. ಆಗೆಲ್ಲರು ತಮ್ಮ ತಮ್ಮ ಅನುಭವಗಳನ್ನು ಹಂಚಿಕಳ್ಳಲು ಶುರುಮಾಡಿದರು. ಎಲ್ಲರೂ ಕೂಡ ತಮಗೆಲ್ಲರಿಗೂ ಕೇಳಿಸಿತು ಎಂದು ಹೇಳಿದಾಗ ಒಮ್ಮೆ ಎಲ್ಲರ ಗಮನ ಸೆಳೆದ ವಿಷಯ ಎಲ್ಲರನ್ನು ಗಂಭೀರ ಯೋಚನೆಗೆ ದೂಡಿತು. 

ಕೆಲ ಕುಟುಂಬದವರು ಆ ಅಪಾರಟ್ಮೆಂಟಗೆ ಹೊಸಬರಾದರು ಆ ಏರಿಯಾಗೆನು ಹೊಸಬರಾಗಿರಲಿಲ್ಲ. ಹಲವು ವರ್ಷಗಳಿಂದ ನೋಡಿದ ಏರಿಯಾ, ಇತ್ತೀಚಿನ ದಿನಗಳಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಬೆಳೆದ ಏರಿಯಾ, ಮೆಟ್ರೋ ನಿಲ್ದಾಣದ ಬೆಳವಣಿಗೆಯಿಂದಾಗಿ ಕೇವಲ ಐದಾರು ವರ್ಷಗಳಲ್ಲಿ ಬೃಹತ್ತಾಗಿ ಬೆಳೆದರು ಹಲವಾರು ಭಯಾನಕ ರಹಸ್ಯಗಳ ಇತಿಹಾಸವನ್ನು ಹೊಂದಿದೆ. ಕೆಲವರು ಆಗ ಕೆಲವೊಂದು ಸನ್ನಿವೇಶಗಳನ್ನು ನೆನೆದು ಕತೆ ಹೇಳಿದಾಗಲಂತು ಎಲ್ಲರ ಮನಸ್ಸು ಝಲ್ ಎನಿಸಿತು.

ಜನ ದಿಟ್ಟನೆ ಇಲ್ಲದ ಅಲ್ಲೊಂದು ಇಲ್ಲೊಂದು ಮನೆಗಳಿರುವ ಖಾಲಿ ಸೈಟ್ ಗಳಿಂದ ತುಂಬಿದ ಏರಿಯಾ ರೌಡಿಶೀಟರ್ ಗಳಿಗೆ ಸುಪಾರಿ ಮರ್ಡರ್ ಮಾಡುವ ಅಡ್ದ ಆಗಿತ್ತಂತೆ. ಹಾಗೆಯೇ ಒಂದೆರಡು ಕತೆ ಕೇಳಿದ ಎಲ್ಲರಿಗೂ ಈ ಸದ್ದೇನೆಂದು ಕಂಡುಹಿಡಿಯುವುದು ಅನಿವಾರ್ಯ ಎನಿಸಿತು. ಹೀಗೆಯೇ ಎಲ್ಲರೂ ಇಂದು ರಾತ್ರಿ ಇದನ್ನು ಕಂಡುಹಿಡಿಯಲೆeಬೇಕೆಂದು ನಿರ್ಧರಿಸಿ ಮನೆಗೆ ತೆರಳಿದರು.

ಅಂದು ರಾತ್ರಿ ಸುಮಾರು ಎರಡು ಗಂಟೆಗೆ ಸುಮಾರಾಗಿ ಮತ್ತೆ ಅದೇ ಭಯಾನಕ ಕೂಗು ಕೇಳಿಬರುತ್ತೆ. ಸುಮಾರಾಗಿ ಐದು ನಿಮಿಷಗಳ ಕಾಲ ಕೇಳಿಬರುತ್ತೆ, ಬೀದಿಯ ತುದಿಯಿಂದ ಕೊನೆವರೆಗೂ ಕೇಳುತ್ತೆ ಅದೇ ಕೂಗು, ಎಲ್ಲಾ ಮನೆಯವರು ಬೇಸ್ಮೆಂಟಲ್ಲಿ ಒಟ್ಟು ಸೇರಿ ಯೋಜನೆ ಹಾಕುತ್ತಾರೆ ಗೇಟ್ ಓಪನ್ ಮಾಡುವ ಮುನ್ನ ಎಲ್ಲಾ ಕಡೆಗಳಿಂದಲೂ ಚೆಕ್ ಮಾಡುತ್ತಾರೆ ಯಾರಾದ್ರೂ ಕಾಣುತ್ತಿದ್ದಾರ ಅಂತಾ, ಯಾವುದು ಗಾಡಿಯಾಗಲಿ ಜನರ ಸುಳಿವಾಗಲಿ ಏನು ಕಾಣುವುದಿಲ್ಲ, ಬೀದಿಯ ತುದಿ ಮತ್ತು ಕೊನೆಯನ್ನು ಸರಿಯಾಗಿ ಪರಿಶೀಲಿಸಿ ಖಾತ್ರಿ ಆದಮೇಲೆ ಗೇಟ್ ಬೀಗ ತೆಗೆದು ರೋಡ್ ನ್ನು ಪರಿಶೀಲಿಸುತ್ತಾರೆ, ಬೀದಿಯ ಕೊನೆವರೆಗೂ ನಿಷಬ್ದ ಬಿಟ್ಟು ಬೇರೇನೂ ಕಾಣುವುದಿಲ್ಲ ಆಗ ಇಬ್ಬರು ಬೀದಿ ಕೊನೆಗೆ ಇಬ್ಬರು ಬೀದಿ ತುದಿಗೆ ತೆರಳುತ್ತಾರೆ ನೋಡಲು, ಸ್ವಲ್ಪ ಸಮಯದ ನಂತರ ಬೀದಿಯ ಕೊನೆಯಿಂದ ಕೆಲವು ನಾಯಿಗಳು ಗುಂಪಾಗಿ ಬರುತ್ತಿರುತ್ತವೆ. ಎಲ್ಲವನ್ನೂ ಪರಿಶೀಲಿಸಿದರು ಏನು ಸುಳಿವು ಸಿಗದ ಕಾರಣ ನಾಳೆ ಮತ್ತೇನಾದರೂ ಕೇಳಿದರೆ ನೋಡೋಣವೆಂದುಕೊಂಡು ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳುತ್ತಾರೆ. 

ಹೀಗೆಯೇ ಕೆಲವು ದಿನಗಳು ಮತ್ತೆ ಮತ್ತೆ ಕೇಳುವ ಶಬ್ದದಿಂದ ಬೇಸರಗೊಂಡ ಅಲ್ಲಿಯ ವಾಸಿಗರು ಒಂದು ರಹಸ್ಯ ಬಯಲು ಮಾಡುವ ಮಾದ್ಯಮದ ತಂಡಕ್ಕೆ ಮಾಹಿತಿ ನೀಡುತ್ತಾರೆ. ಅದಾಗಿ ಎರಡು ದಿನಗಳಲ್ಲಿ ಆ ಮಾದ್ಯಮದ ತಂಡ ರಾತ್ರಿ ಕ್ಯಾಂಪ್ ಹಾಕುವ ನಿಟ್ಟಿನಲ್ಲಿ ಎಲ್ಲಾ ತಯಾರಿಗಳನ್ನು ನಡೆಸುತ್ತಾರೆ.

ಎಲ್ಲಾ ತಯರಿಗಳೊಂದಿಗೆ ತಂಡವು ರಾತ್ರಿ 12 ಗಂಟೆಯಿಂದ ಹೊಂಚು ಹಾಕಿ ಕಾಯುತ್ತಾರೆ ಅದೇ ಬಿಲ್ದಿಂಗಿನ ಬೇಸ್ಮೆಂಟ್ ನಲ್ಲಿ. ನಿಶ್ಯಬ್ಧ ವಾದ ವಾತಾವರಣ ಜೋರಾಗಿ ತಂಪಾದ ಗಾಳಿ ಬೀಸುತ್ತಿದೆ. ಸುಮಾರು ಎರಡು ಗಂಟೆಯ ಸಮಯಕ್ಕೆ ಅಪಾರ್ಟ್ಮೆಂಟ್ ನ ಎದುರುಗಡೆಯ ಖಾಲಿ ಜಾಗದಲ್ಲಿ ಮಲಗಿದ್ದ ಬೀದಿನಾಯಿಗಳ ಗುಂಪೊಂದು ಅಚಾನಕ್ಕಾಗಿ ಎದ್ದು ಕುಳಿತು ಏನೋ ಚುರುಕಾಗಿ ಬೀದಿಯ ತುದಿಯನ್ನು ನೋಡಿ ಎದ್ದುಕುತಿರುವುದು ಕಂಡು ಬರುತ್ತದೆ, 1 ಗಂಟೆಯಿಂದಲೆ ರೆಡಿಯಾಗಿ ಕೂತಿರುವ ಮಾದ್ಯಮದ ತಂಡ ತಮ್ಮ ಕ್ಯಾಮೆರಾಗಳನ್ನು ಬೀದಿಯ ತುದಿ ಕಡೆಗೆ ತಿರುಗಿಸಿ ತಾವು ಅಡಗಿ ಕೊಳ್ಳುತ್ತಾರೆ ರಹಸ್ಯವನ್ನು ಭೇದಿಸಲು.

ಬೀದಿಯ ತುದಿಯಿಂದ ಒಂದು ಸೋತು ಸೋಣಕಲಾದ ನಾಯಿಯೊಂದು ಬರುವುದು ಕಾಣುತ್ತದೆ, ಇಲ್ಲಿ ಬೀದಿನಾಯಿಗಳು ಫುಲ್ ಅಟ್ಯಾಕ್ ಮೋಡಲ್ಲಿ ಕುತಿರುವುದನ್ನು ಗಮನಿಸಿದ ತಂಡ ಬೀದಿಯ ತುದಿಯನ್ನು ಫುಲ್ ಫೋಕಸ್ ಮಾಡಿ ಕುಳಿತಿರುತ್ತಾರೆ. ಆ ವಿಕಾರವಾದ ನಾಯಿಯು ಎಲ್ಲಾ ಮನೆಗಳ ಬಾಗಿಲಲ್ಲಿ ಏನಾದರೂ ತಿನ್ನಲು ಸಿಗುವುದೆಂದು ಹುಡುಕುತ್ತಾ ಮುಂದೆ ಮುಂದೆ ಬರುತ್ತಿದೆ. ಅದೊಂದನ್ನು ಬಿಟ್ಟು ಬೇರೇನೂ ಕಾಣಸಿಗುತ್ತಿಲ್ಲ ತಂಡಕ್ಕೆ, ಕಾತುರದಿಂದ ಕಾಯುತ್ತಿರುವ ತಂಡ ಒಂದುಕಡೆಯಾದರೆ, ಇನ್ನೊಂದೆಡೆ ಗುಂಪಾಗಿ ಏನೋ ಚರ್ಚೆ ನಡೆಸುತ್ತಿವೆ ಬೀದಿ ನಾಯಿಗಳು.

ಹಾಗೆಯೇ ಮುಂದೆ ಬಂದ ವಿಕಾರ ನಾಯಿಯು ಈ ಅಪಾರ್ಟ್ಮೆಂಟ್ ಕಡೆಗೆ ಬಂದಿದೆ, ಕೂಡಲೇ ಗುಂಪು ನಾಯಿಗಳು ಈ ವಿಕಾರವಾದ ನಾಯಿಯ ಮೇಲೆ ಹಲ್ಲೆ ಮಾಡಿವೆ ಆಗ ನಾಯಿಯು ಕೂಗಿದಾಗ ಎಲ್ಲರೂ ವಿಸ್ಮಯ ಗೊಂಡಿದ್ದಾರೆ. ಆ ನಾಯಿಯ ಕೂಗು ಹೇಗಿದೆ ಎಂದರೆ ಯಾವುದೋ ಮನುಷ್ಯನ ಕುತ್ತಿಗೆ ಹಿಚುಕಿದ ಹಾಗೆ ಕೆಟ್ಟದಾಗಿ ಕೂಗುತ್ತಿತ್ತು, ಎಲ್ಲಾ ನಾಯಿಗಳು ಸೇರಿ ಅದನ್ನು ಬೀದಿಯ ಕೊನೆವರೆಗೂ ಅಟ್ಟಿಸಿಕೊಂಡು ಹೋಗಿವೆ. ದೃಶ್ಯ ಕಂಡ ಮಾಧ್ಯಮ ತಂಡ ಸಪ್ಪೆ ಮುಖ ಹಾಕಿಕೊಂಡು ಮನೆಯವರನ್ನು ನೋಡಿದಾಗ ಆದ ಕಸವಿಸ ಅಸಿಷ್ಟಲ್ಲ. 

ಈ ನಾಯಿಯು ದಿನವೂ ಅದೇ ಸಮಯಕ್ಕೆ ತಿನ್ನಲು ಹುಡುಕಿಕೊಂಡು ಬರುತ್ತಿದೆ, ನಾಯಿಗಳಿಗೆ ಹೆದರಿ ಕಿರುಚಿ ಓದಿಹೋಗುತ್ತಿದೆ. ಎಲ್ಲಾ ದೃಶ್ಯಾವಳಿಗಳನ್ನು ಕಂಡ ವಾಸಿಗರೂ ತಮ್ಮ ನಿದ್ದೆ ಹಾಳುಮಾಡಿದ ಯೋಚನೆಗಳನ್ನು ನೆನೆದು ನಕ್ಕಿ ಸುಮ್ಮನಾದರು.



Rate this content
Log in

Similar kannada story from Comedy