kaveri p u

Abstract Inspirational Others

4  

kaveri p u

Abstract Inspirational Others

ದೂರದರ್ಶನ

ದೂರದರ್ಶನ

1 min
517


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಮಂಗಳಾ ದಿನದಲ್ಲಿ ಬಹಳ ಹೊತ್ತು ದೂರದರ್ಶನ ಅಂದ್ರೆ (tv) ನೋಡುತ್ತಿದ್ದಳು. ಅಪ್ಪಾ, ಅಮ್ಮ ಇಬ್ಬರು ಕೆಲಸಕ್ಕೆ ಹೋಗುವುದರಿಂದ ಮಂಗಳಾಳನ್ನು ಹಗಲು ಹೊತ್ತು ನೋಡಿಕೊಂಡು ಇರಲು ಅವರಿಂದ ಸಾಧ್ಯವಾಗುವುದಿಲ್ಲಾ. ಮಗಳನ್ನು ನೋಡಿಕೊಳ್ಳಲು ಕೆಲಸಕ್ಕೆ ಒಬ್ಬ ಹೆಣ್ಣುಮಗಳನ್ನು ಇಟ್ಟುಕೊಂಡಿದ್ದರು. 


ಮನೆಕೆಲಸದವಳು ಎಷ್ಟೇ ಬಾರಿ ಹೇಳಿದರು ಮಂಗಳಾ ಟಿವಿ ನೋಡುವುದನ್ನು ಬಿಡುತ್ತಿರಲಿಲ್ಲ. ಊಟಾ, ನಿದ್ದೆ ಮಾಡಿದರೂ, ಟಿವಿ ಮಾತ್ರ ಓಡುತ್ತಲೇ ಇರಬೇಕಿತ್ತು. ಟಿವಿ ಆಫ್ ಮಾಡಿದರೆ ಮಂಗಳ ಸಿಕ್ಕಾಪಟ್ಟೆ ಅಳುತ್ತಾ ಕೂರುತಿದ್ದಳು, ಈ ವಿಷಯವನ್ನು ಅವಳ ಅಪ್ಪಾ ಅಮ್ಮನ ಹತ್ತಿರ ಹೇಳಿದರು. ಕೆಲಸದೊತ್ತಡದ ಮಧ್ಯೆ ಅವರು ಅದರ ಬಗ್ಗೆ ಗಮನ ಹರಿಸದೆ ಉಳಿದರು.ಅದನ್ನು ಪಾಲಕರ ನಿರ್ಲಕ್ಷ ಅಂತಾನೂ ಹೇಳಬಹುದು.


ಒಂದು ವರ್ಷದ ಬಳಿಕ ಅವಳ ವರ್ತನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸುಮ್ನೆ ಮಲಗುವುದು ಕಣ್ಣು ನೋವು ಅಂತಾ ಅಳುವುದು ಶುರು ಮಾಡಿದಳು.ಆಗ ಎಚ್ಚೆತ್ತ ಮಂಗಳಾನ ಅಪ್ಪಾ ಅಮ್ಮಾ ವೈದ್ಯರ ಬಳಿ ,ಕರೆದುಕೊಂಡು ಹೋಗಿ ತೋರಿಸಿದರು. ವೈದ್ಯರು ಅವಳನ್ನು ನೋಡಿ ಅವಳಿಗೆ ನೀವೇ ಬೇಕು, ಒಂಟಿತನದಿಂದ ಅವಳು ಡಿಪ್ರೆಷನ್ಗೆ ಹೋಗಿದ್ದಾಳೆ. ನೀವು ಸನಿಹದಲ್ಲೇ ಇರಿಸಿಕೊಂಡು ಇರಿ. ಬೇರೆ ಬೇರೆ ಜಾಗಗಳಿಗೆ ಕರೆದುಕೊಂಡು ಹೋಗಿ, ಟಿವಿ ಮೊಬೈಲ್ಗಳಿಂದ ದೂರವಿಡಿ ಎಂದು ಸಲಹೆ ನೀಡಿದರು. 


ಮಂಗಳಾನ ಪಾಲಕರಿಗೆ ವೈದ್ಯರು ಹೇಳಿದ ಮಾತು ಎದೆಗೆ ಚುಚ್ಚಿದಂತೆ ಭಾಸವಾಯಿತು. ಮಗಳಿಗಾಗಿಯೇ ಅಲ್ವಾ ಇಷ್ಟು ಕಷ್ಟ ಪಡ್ತಿರೋದು, ದುಡ್ಡಿನ ಹಿಂದೆ ಬಿದ್ದು, ಇದ್ದೊಬ್ಬ ಮಗಳ ಬಾಲ್ಯವನ್ನು ಕಡೆಗಣಿಸಿಬಿಟ್ಟೆವಲ್ಲ ಎಂದು ನೊಂದುಕೊಂಡರು. ಹಾಗೆಯೆ ಮಂಗಳಾಳನ್ನು ವೈದ್ಯರ ಸಲಹೆಯಂತೆ ಆಚೆ ಕರೆದೊಯ್ದರು.


ಅಗಾ ಅವಳು ಹುಷಾರಾಗುತ್ತ ಹೋದಳು.


ಕೆಲವು ತಿಂಗಳು ಅವಳ ತಾಯಿ ಅವಳ ಜೊತೆಗೆ ಇದ್ದು, ಊಟ ತಿಂಡಿ ಮಾಡಿಸಿ, ಆಟ ಆಡಿಸಿ ಅಜ್ಜಿ ಊರಿಗೆಲ್ಲಾ ಕರೆದುಕೊಂಡು ಹೋಗಿ ಬಂದರು. ಈಗ ಮಗಳು ಮತ್ತಷ್ಟು ಗುಣಮುಖವಾಗುತ್ತ ಬಂದಳು.  

ಅತಿಯಾದ ದೂರದರ್ಶನ ನೋಡುವುದರಿಂದ ಆರೋಗ್ಯ ಹಾಳಾಗತ್ತೆ, ಹೊರತು ಉಪಯೋಗವಂತು ಅಲ್ಪ ಮಾತ್ರ. 


"ಅತಿಯಾದರೆ ಅಮೃತವು ವಿಷ"







Rate this content
Log in

Similar kannada story from Abstract